ಸಾರಿಗೆ ಇಲಾಖೆಯಡಿ ಬರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯು ನಗರದಲ್ಲಿ ಲಕ್ಷಾಂತರ ನಾಗರಿಕರಿಗೆ ಪ್ರತಿದಿನವೂ ಸಾರಿಗೆ ಸೇವೆ ಒದಗಿಸುತ್ತಿರುವ ಪ್ರಮುಖ ಸಾರ್ವಜನಿಕ ಸಾರಿಗೆ ಸಂಸ್ಥೆಯಾಗಿದ್ದು, ಅದರಲ್ಲೂ ವಿದ್ಯಾರ್ಥಿಗಳ ಪಯಣ ಸುಗಮವಾಗಲು ಮತ್ತು ಅವರು ಸುರಕ್ಷಿತವಾಗಿ ಶಾಲೆ, ಕಾಲೇಜುಗಳಿಗೆ ಪ್ರಯಾಣಕ್ಕೆ ನೆರವಾಗುತ್ತಿದ್ದು, ಬಿಎಂಟಿಸಿ ಸಂಸ್ಥೆಯು ಪ್ರತಿ ವರ್ಷದಂತೆ(BMTC Pass 2025) 2025-26ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ಬಸ್ ಪಾಸ್ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಬಸ್ ಪಾಸ್‌ಗಳು ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ನಿರಂತರ ಪ್ರಯಾಣ(Student Bus Pass) ಮಾಡುವ ಸೌಲಭ್ಯವನ್ನು ನೀಡುತ್ತವೆ. ಹಾಗೂ ಈ ಯೋಜನೆಯು ಶಿಕ್ಷಣಕ್ಕಾಗಿ ಪ್ರಯಾಣ ಮಾಡುವ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ಒದಗಿಸುವ ಮತ್ತು ವಿದ್ಯಾರ್ಥಿಗಳು ತಮ್ಮ ದಿನನಿತ್ಯದ ಪ್ರಯಾಣದ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಲು ಸಹಾಯಕಾರಿಯಾಗಿದೆ.
2025-26ನೇ ಶೈಕ್ಷಣಿಕ ವರ್ಷಕ್ಕಾಗಿ ವಿದ್ಯಾರ್ಥಿ ಬಸ್ ಪಾಸ್‌ಗಳಿಗೆ(Bus Pass Application) ಅರ್ಜಿ ಆಹ್ವಾನಿಸಿದ್ದು, ಪ್ರಸ್ತುತ ಈ ಲೇಖದಲ್ಲಿ ಪಾಸ್‌ಗಾಗಿ ಅರ್ಜಿ ಸಲ್ಲಿಸುವ ಆನ್‌ಲೈನ್ ಮತ್ತು ಆಫ್‌ಲೈನ್ ಪ್ರಕ್ರಿಯೆ, ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು, ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲೆಗಳೇನು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಇನ್ನೂ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.
Bus Pass Benifits-ವಿದ್ಯಾರ್ಥಿ ಬಸ್ ಪಾಸ್‌ನ ಪ್ರಯೋಜನಗಳು:
1) ಉಚಿತ ಅಥವಾ ರಿಯಾಯಿತಿ ದರದ ಪಾಸ್‌ಗಳು ವಿದ್ಯಾರ್ಥಿಗಳಿಗೆ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುತ್ತವೆ.
2) BMTC/KSRTC ಬಸ್‌ಗಳಲ್ಲಿ ವಿದ್ಯಾರ್ಥಿಗಳು ಸುಲಭವಾಗಿ ಪ್ರಯಾಣಿಸಬಹುದು.
3) ಪಾಸ್ ಹೊಂದಿರುವ ವಿದ್ಯಾರ್ಥಿಗಳು ಪ್ರತಿದಿನ ಟಿಕೆಟ್ ತೆಗೆದುಕೊಳ್ಳುವ ಅಗತ್ಯವಿಲ್ಲ.
Who can Apply- ಬಸ್ ಪಾಸ್ ಅನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಲು ಅರ್ಹರು?
ವಿದ್ಯಾರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ಶಾಲೆ, ಕಾಲೇಜು, ವೃತ್ತಿಪರ, ತಾಂತ್ರಿಕ, ವೈದ್ಯಕೀಯ,ಪಿಎಚ್‌ಡಿ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
Documents requied-ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲಾತಿಗಳು?
- ವಿದ್ಯಾರ್ಥಿಯ ಆಧಾರ್ ಕಾರ್ಡ್/Aadhar card
- ಶಾಲೆ/ಕಾಲೇಜು ಗುರುತಿನ ಚೀಟಿ/Identity card
- ವಿದ್ಯಾರ್ಥಿ ಫೋಟೋ/Photocopy
- ಜಾತಿ ಪ್ರಮಾಣಪತ್ರ/Cast certificate(ಆನ್ವಯಿಸಿದ್ದಲ್ಲಿ ಮಾತ್ರ)
- ಮೊಬೈಲ್ ನಂಬರ್/Mobile Number
BUS Pass Online Application-ಆನ್ಲೈನ್ ನಲ್ಲಿ ಬಸ್ ಪಾಸ್ ಪಡೆಯಲು ಅರ್ಜಿಯನ್ನು ಸಲ್ಲಿಸುವ ವಿಧಾನ:
ವಿದ್ಯಾರ್ಥಿಗಳು BMTC ಬಸ್ ಪಾಸ್‌ಗಾಗಿ ಅರ್ಜಿಯನ್ನು ಸಲ್ಲಿಸಲು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವಿಧಾನಗಳಲ್ಲಿಯು ಅವಕಾಶವಿರುತ್ತದೆ. ವಿದ್ಯಾರ್ಥಿಗಳಿಗೆ ಕಾಲೇಜು ಅಥವಾ ಬಿಎಂಟಿಸಿ ಕೇಂದ್ರಗಳಿಗೆ ಭೇಟಿ ನೀಡದೆ ಆನ್ ಲೈನ್ ಮೂಲಕವೇ ಈ ಕೆಳಗಿನ ಹಂತಗಳನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಬಹುದು:
Step-1: ವಿದ್ಯಾರ್ಥಿಗಳು ಮೊದಲಿಗೆ ಇಲ್ಲಿ ಕ್ಲಿಕ್ Apply Now ಮಾಡಿ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶ ಮಾಡಬೇಕು.
Step-2: ನಂತರ ಇಲ್ಲಿ ಲಾಗಿನ್ ವಿಭಾಗದಲ್ಲಿ ಈಗಾಗಲೇ ನೋಂದಣಿಯನ್ನು ಮಾಡಿಕೊಂಡಿರುವ ಬಳಕೆದಾರರು ತಮ್ಮ ಮೊಬೈಲ್ ನಂಬರ್/ಇಮೇಲ್ ಅನ್ನು ಹಾಕಿ Get OTP ಬಟನ್ ಮೇಲೆ ಕ್ಲಿಕ್ ಮಾಡಿ
ಒಟಿಪಿ ಪಡೆದಿ ಅದನ್ನು ನಮೂದಿಸಿ ಕೆಳಗೆ ಕಾಣುವ ಕ್ಯಾಪ್ಚ್ ಕೋಡ್ ಹಾಕಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅಗಬೇಕು.
Step-3: ನಂತರ ಈ ಪೇಜ್ ನಲ್ಲಿ "Bus pass" ಎಂದು ಸರ್ಚ ಮಾಡಿದರೆ ಅರ್ಜಿ ನಮೂನೆ ಕಾಣಿಸುತ್ತದೆ ಇಲ್ಲಿ Apply ಆಯ್ಕೆಯ ಮೇಲೆ ಕ್ಲಿಕ್ ಮಾಡಿ ವಿದ್ಯಾರ್ಥಿಗಳು ಅಗತ್ಯ ವಿವರ ಮತ್ತು ದಾಖಲಾತಿಗಳನ್ನುಅಪ್ಲೋಡ್ ಮಾಡಿ ಕೊನೆಯಲ್ಲಿ "Submit" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
ವಿಶೇಷ ಸೂಚನೆ: ಇದೆ ಮಾದರಿಯಲ್ಲಿ KSRTC ಬಸ್ ಪಾಸ್(KSRTC Bus Pass) ಅನ್ನು ಸಹ ಪಡೆಯಲು ವಿದ್ಯಾರ್ಥಿಗಳು ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
for more information- ಹೆಚ್ಚಿನ ಮಾಹಿತಿಗಾಗಿ :
Helpline-ಸಹಾಯಾವಾಣಿ- 080–22483777 BMTC Website-ಬಿಎಂಟಿಸಿ ಅಧಿಕೃತ ವೆಬ್ಸೈಟ್- Click here Sevasindhu Portal- ಸೇವಾ ಸಿಂಧು ಪೋರ್ಟಲ್- Apply Now
