Mobile canteen subsidy-ಫಾಸ್ಟ್ ಫುಡ್ ವಾಹನ ಖರೀದಿಗೆ ₹5 ಲಕ್ಷದ ವರೆಗೆ ಸಬ್ಸಿಡಿ ಪಡೆಯಲು ಅರ್ಜಿ ಅಹ್ವಾನ
MrJazsohanisharma

Mobile canteen subsidy-ಫಾಸ್ಟ್ ಫುಡ್ ವಾಹನ ಖರೀದಿಗೆ ₹5 ಲಕ್ಷದ ವರೆಗೆ ಸಬ್ಸಿಡಿ ಪಡೆಯಲು ಅರ್ಜಿ ಅಹ್ವಾನ

Mobile Canteen Subsidy:-ರಾಜ್ಯ ಸರ್ಕಾರದಡಿ ಕಾರ್ಯನಿರ್ವಹಿಸುವ ಪ್ರವಾಸೋದ್ಯಮ ಇಲಾಖೆಯಿಂದ ವಿಶೇಷ ಘಟಕ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಒಂದು ತಿಂಗಳ ತರಬೇತಿ ಸಹಿತ ಮೊಬೈಲ್ ಕ್ಯಾಂಟಿನ್ ಮೂಲಕ ಪಾಸ್ಟ್ ಪುಡ್ ಕ್ಷೇತ್ರದಲ್ಲಿ ಸ್ವಂತ ಉದ್ದಿಮೆಯನ್ನು(How to start mobile canteen with government subsidy) ಆರಂಭಿಸಲು ವಾಹನ ಖರೀದಿಗೆ ಸಬ್ಸಿಡಿಯನ್ನು ಪಡೆಯಲು ಅರ್ಹ ಅರ್ಜಿದಾರರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಮೊಬೈಲ್ ಕ್ಯಾಂಟಿನ್ ಖರೀದಿಗೆ ಸಹಾಯಧನವನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?(mobile canteen with government subsidy) ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲಾತಿಗಳು ಯಾವುವು? ಇನ್ನಿತರೆ ಸಂಪೂರ್ಣ ವಿವರವನ್ನು ಇಲ್ಲಿ ಪ್ರಕಟಿಸಲಾಗಿದೆ.ಇದೆ ತರಹದ ನೇಮಕಾತಿ,ವಿದ್ಯಾರ್ಥಿವೇತನ,ಕೇಂದ್ರ/ರಾಜ್ಯ ಯೋಜನೆಗಳಿಗಾಗಿ ನಮ್ಮ ಟೆಲಿಗ್ರಾಮ ಚಾನಲ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸ್ವಂತ ಉದ್ದಿಮೆಯನ್ನು ಆರಂಭಿಸಬೇಕು ಎನ್ನುವ ಕನಸನ್ನು ಹೊಂದಿರುವ ಯುವಕ/ಯುವತಿಯರಿಗೆ ಆರ್ಥಿಕವಾಗಿ(Mobile Canteen Business) ನೆರವು ನೀಡುವ ದೇಸೆಯಲ್ಲಿ ಸರ್ಕಾರದಿಂದ ಹಲವು ಸಬ್ಸಿಡಿ ಆಧಾರಿತ ಯೋಜನೆಗಳು ಪ್ರಸ್ತುತ ಜಾರಿಯಲ್ಲಿದು ಇವುಗಳಲ್ಲಿ ಈ ಯೋಜನೆಯು ಸಹ ಒಂದಾಗಿದ್ದು ಇದರ ಕುರಿತು ಒಂದಿಷ್ಟು ವಿವರವಾದ ಮಾಹಿತಿ ಈ ಕೆಳಗಿನಂತಿದೆ.

Mobile Canteen Subsidy-ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಅರ್ಹತೆಗಳು:

ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಅಭ್ಯರ್ಥಿಯು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ವರ್ಗದವರಾಗಿರಬೇಕು.

ಅಭ್ಯರ್ಥಿಯು ಕನಿಷ್ಠ 10ನೇ ತರಗತಿಯನ್ನು ಉತ್ತೀರ್ಣರಾಗಿರಬೇಕು.

ಅಭ್ಯರ್ಥಿಯ ವಯಸ್ಸು 20 ರಿಂದ 45ರ ಒಳಗಿರಬೇಕು.

ಅಭ್ಯರ್ಥಿಗೆ ಲಘು ವಾಹನ ಚಲಾಯಿಸಲು ಬರುವುದರ ಜೊತೆಗೆ ಅಧಿಕೃತ ಚಾಲನಾ ಪರವಾನಗಿ ಯನ್ನು ಹೊಂದಿರುವುದು ಕಡ್ಡಾಯವಾಗಿದೆ.

ಅರ್ಜಿದಾರರು ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ವಾರ್ಷಿಕ ಆದಾಯವು ₹2.0 ಲಕ್ಷದ ಒಳಗಿರಬೇಕು ಗ್ರಾಮೀಣ ಭಾಗದಲ್ಲಿ ವಾಸವಾಗಿದ್ದಲ್ಲಿ ₹1.5 ಲಕ್ಷದ ಒಳಗಿರಬೇಕು.

ಅರ್ಜಿದಾರರ ಕುಟುಂಬದ ಸದಸ್ಯರಲ್ಲಿ ಯಾರು ಸಹ ಸರ್ಕಾರದಡಿ ಬರುವ ಕಚೇರಿ ಮತ್ತು ನಿಗಮಗಳಲ್ಲಿ ಖಾಯಂ ಹುದ್ದೆಯಲ್ಲಿರಬಾರದು.

Mobile Canteen Subsidy Documents-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:

ಅಭ್ಯರ್ಥಿ ಆಧಾರ್ ಕಾರ್ಡ ಪ್ರತಿ

ಪೋಟೋ

ಜಾತಿ ಹಾಗೂ ಆದಾಯ ಪ್ರಮಾಣ ಪತ್ರ

ನಾಲ್ಕು ಚಕ್ರದ ವಾಹನ ಚಾಲನಾ ಪರವಾನಗಿ ಪತ್ರ.

10 ನೇ ತರಗತಿ ಅಂಕಪಟ್ಟಿ.

ಬ್ಯಾಂಕ್ ಪಾಸ್ ಬುಕ್

ರೇಶನ್ ಕಾರ್ಡ ಪ್ರತಿ

50/- ರೂ ಬಾಂಡ್ ಪೇಪರ್

Last Date For Mobile Canteen Subsidy-ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ:

ಆಸಕ್ತ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು 15 ಎಪ್ರಿಲ್ 2025 ರ ಒಳಗಾಗಿ ಪ್ರವಾಸೋದ್ಯಮ ಇಲಾಖೆ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ದಾಖಲಾಗಳನ್ನು ಸಲ್ಲಿಸಿ ಅರ್ಜಿಯನ್ನು ಸಲ್ಲಿಸಬೇಕು.

Tourism Department Subsidy Schemes-ಅರ್ಜಿಯನ್ನು ಯಾವೆಲ್ಲ ಜಿಲ್ಲೆಗಳಲ್ಲಿ ಆಹ್ವಾನಿಸಲಾಗಿದೆ?

ಅನುದಾನ ಲಭ್ಯತೆಯ ಆಧಾರದ ಮೇಲೆ ರಾಜ್ಯದ ಕೆಲವು ಆಯ್ದ ಜಿಲ್ಲೆಗಳಲ್ಲಿ ಮಾತ್ರ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಈ ಕುರಿತು ಮಾಹಿತಿಯನ್ನು ಪಡೆಯಲು ನಿಮ್ಮ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಕಚೇರಿಯನ್ನು ಭೇಟಿ ಮಾಡಬೇಕು.

PMEGP Yojana-ಈ ಯೋಜನೆಯಡಿ ಸಹ ಅರ್ಜಿ ಸಲ್ಲಿಸಿ ಸಬ್ಸಿಡಿ ಪಡೆಯಬಹುದು:

ಸ್ವಂತ ಉದ್ದಿಮೆಯನ್ನು ಆರಂಭಿಸಲು ಆಸಕ್ತಿಯಿರುವ ಅಭ್ಯರ್ಥಿಗಳು ಕೇಂದ್ರ ಸರ್ಕಾರದ PMEGP ಯೋಜನೆಯಡಿ ಸಹ ಅರ್ಜಿ ಸಲ್ಲಿಸಲು ಶೇ 36% ವರೆಗೆ ಸಬ್ಸಿಡಿಯನ್ನು ಪಡೆಯಲು ಅವಕಾಶವಿರುತ್ತದೆ.

PMEGP Official Website-ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ- Click here

Post a Comment

Previous Post Next Post

Top Post Ad

CLOSE ADS
CLOSE ADS
×