LICಯ ಹೊಸ ಯೋಜನೆ; ಒಮ್ಮೆ ಹೂಡಿಕೆ ಮಾಡಿದರೆ, ಜೀವನಪೂರ್ತಿ ಪ್ರತಿ ತಿಂಗಳು ₹10 ಸಾವಿರ ಆದಾಯ
MrJazsohanisharma

LICಯ ಹೊಸ ಯೋಜನೆ; ಒಮ್ಮೆ ಹೂಡಿಕೆ ಮಾಡಿದರೆ, ಜೀವನಪೂರ್ತಿ ಪ್ರತಿ ತಿಂಗಳು ₹10 ಸಾವಿರ ಆದಾಯ

LIC Annuity Plan: ನೀವು ಪ್ರತಿ ತಿಂಗಳು ಸ್ಥಿರ ಆದಾಯ ನೀಡುವ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುತ್ತೀರಾ? ಹಾಗಿದ್ದರೆ, ಎಲ್‌ಐಸಿಯು ನಿಮಗಾಗಿ 'ನ್ಯೂ ಜೀವನ್ ಶಾಂತಿ ಪಾಲಿಸಿ'ಯನ್ನು ಪರಿಚಯಿಸಿದೆ. ಈ ಯೋಜನೆಯು ನಿಮಗೆ ಮಾಸಿಕ ಆದಾಯದ ಜೊತೆಗೆ ವಿಮಾ ರಕ್ಷಣೆಯನ್ನೂ ಒದಗಿಸುತ್ತದೆ. ಈ ಯೋಜನೆಯಲ್ಲಿ ನೀವು ಒಮ್ಮೆ ಪ್ರೀಮಿಯಂ ಪಾವತಿಸಿದರೆ, ಜೀವನಪೂರ್ತಿ ಪ್ರತಿ ತಿಂಗಳೂ ₹10,000 ದವರೆಗೆ ಆದಾಯ ಪಡೆಯಬಹುದು.

ಪ್ರತಿ ತಿಂಗಳು ಸ್ಥಿರ ಆದಾಯ ಪಡೆಯಲು ವಿವಿಧ ರೀತಿಯ ಹೂಡಿಕೆಗಳು ಲಭ್ಯವಿದೆ. 

ಆದರೆ, ಭಾರತೀಯ ಜೀವ ವಿಮಾ ನಿಗಮ (LIC) ಪರಿಚಯಿಸಿರುವ ಈ ಹೊಸ ಪಾಲಿಸಿಯಲ್ಲಿ ವಿಮಾ ರಕ್ಷಣೆ ಜೊತೆಗೆ ಪ್ರತಿ ತಿಂಗಳೂ ಪಿಂಚಣಿ ರೂಪದಲ್ಲಿ ಸ್ಥಿರ ಆದಾಯ ಪಡೆಯಬಹುದು. 'ಎಲ್‌ಐಸಿ ನ್ಯೂ ಜೀವನ್‌ ಶಾಂತಿ ಪಾಲಿಸಿ' (LIC New Jeevan Shanti Policy) ಪಾಲಿಸಿಯು ವರ್ಷಾಸನ ಯೋಜನೆಯಾಗಿದ್ದು, ಪ್ರತಿ ತಿಂಗಳೂ ನಿಯಮಿತ ಆದಾಯ ಪಡೆಯಲು ಬಯಸುವವರಿಗೆ ಅತ್ಯುತ್ತಮ ಯೋಜನೆಯಾಗಿದೆ.

ಈ ಪಾಲಿಸಿಯಲ್ಲಿ ಪ್ರತಿ ತಿಂಗಳೂ ನಿಮ್ಮ ಕೈಗೆ ಹಣ ಸಿಗುವ ಜೊತೆಗೆ, ವಿಮಾ ರಕ್ಷಣೆಯೂ ಸಿಗುತ್ತದೆ. ಆದರೆ, ನಿಮಗೆ ಸಿಗುವ ಪಿಂಚಣಿ ಹಣವು, ನೀವು ಮಾಡುವ ಠೇವಣಿಯನ್ನು ಅವಲಂಬಿಸಿರುತ್ತದೆ. ಒಂದು ವೇಳೆ ನೀವು ಪ್ರತಿ ತಿಂಗಳು ₹10,000 ಪಿಂಚಣಿ ಪಡೆಯಬೇಕೆಂದರೆ, ಎಷ್ಟು ಠೇವಣಿ ಮಾಡಬೇಕೆಂಬ ಮಾಹಿತಿ ಇಲ್ಲಿದೆ.

ವರ್ಷಾಶನ ಪ್ರಯೋಜನಗಳಿಗಾಗಿ ಎಲ್ಐಸಿ ನ್ಯೂ ಜೀವನ್ ಶಾಂತಿ ಪಾಲಿಸಿಯನ್ನು ಆರಂಭಿಸಿದೆ. ಈ ಪಾಲಿಸಿಯಲ್ಲಿ ನೀವು ಒಮ್ಮೆ ಮಾತ್ರ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಇದರ ನಂತರದ ವರ್ಷದಿಂದಲೇ ಮಾಸಿಕ ಪಿಂಚಣಿ ನೀಡಲಾಗುವುದು. ಈ ಯೋಜನೆಯು ಮಾಸಿಕ ಪಾವತಿಗಳ ಜೊತೆಗೆ ವಿಮಾ ರಕ್ಷಣೆನಯನ್ನೂ ಒದಗಿಸುತ್ತದೆ. ಈ ಯೋಜನೆಯ ಮೂಲಕ ವಿವಿಧ ರೀತಿಯ ವರ್ಷಾಶನ ಆಯ್ಕೆಗಳು ಲಭ್ಯವಿದೆ.

ತಮ್ಮ ಆರ್ಥಿಕ ಅಗತ್ಯಗಳಿಗೆ ಅನುಗುಣವಾಗಿ ಪಿಂಚಣಿ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ನೀವು 1 ರಿಂದ 12 ವರ್ಷಗಳವರೆಗೆ ವರ್ಷಾಶನ ಮುಂದೂಡಲ್ಪಟ್ಟ ಆಯ್ಕೆಯನ್ನು ಆಯ್ಕೆ ಮಾಡಬಹುದು. ಅಂದರೆ, ಪಾಲಿಸಿ ಖರೀದಿಸಿದ 1 ವರ್ಷದ ನಂತೆರದಿಂದಲೇ ಪಿಂಚಣಿ ಪಡೆಯಬಹುದು. ಅಥವಾ 1ರಿಂದ 12 ವರ್ಷದವರೆಗೆ ಪಿಂಚಣಿ ಪಡೆಯುವ ಅವಧಿಯನ್ನು ಮುಂದೂಡಬಹುದು. ಉದಾಹರಣೆಗೆ, ನೀವು ಪಾಲಿಸಿ ಖರೀದಿಸಿ 6 ವರ್ಷದ ನಂತರ ಪಿಂಚಣಿ ಪಡೆಯುವ ಆಯ್ಕೆಯನ್ನು ಆರಿಸಿಕೊಳ್ಳಬಹುದು.

ಎಲ್ಐಸಿ ನಿಮಗೆ ಪ್ರತಿ ತಿಂಗಳಿಗೆ, 3 ತಿಂಗಳಿಗೊಮ್ಮೆ, 6 ತಿಂಳಿಗೊಮ್ಮೆ ಮತ್ತು ಒಂದು ವರ್ಷಕ್ಕಕೊಮ್ಮೆ ಪಿಂಚಣಿ ಹಣ ಪಡೆಯುವ ಆಯ್ಕೆ ನೀಡುತ್ತದೆ. ನಿಮಗೆ ಸೂಕ್ತವಾದದ್ದನ್ನು ನೀವು ಆರಿಸಿಕೊಳ್ಳಬಹುದು. ಈ ಯೋಜನೆಯಲ್ಲಿ ಕನಿಷ್ಠ ಠೇವಣಿ ₹1.5 ಲಕ್ಷ ಇದೆ. ಗರಿಷ್ಠ ಠೇವಣಿಗೆ ಯಾವುದೇ ಮಿತಿಯಿಲ್ಲ. ನೀವು ಯಾವುದೇ ಮೊತ್ತವನ್ನು ಹೂಡಿಕೆ ಮಾಡಬಹುದು. ನೀವು ಪಡೆಯುವ ಪಿಂಚಣಿಯ ಮೊತ್ತ, ನೀವು ಮಾಡುವ ಠೇವಣಿಯನ್ನು ಆಧರಿಸಿರುತ್ತದೆ. ಮುಂದೂಡಲ್ಪಟ್ಟ ವರ್ಷಾಶನವು ಎರಡು ಆಯ್ಕೆಗಳನ್ನು ಹೊಂದಿದೆ. ಸಿಂಗಲ್‌ ಲೈಫ್‌ ಮತ್ತು ಜಾಯಿಂಟ್‌ ಲೈಫ್‌ ಎಂಬ ಎರಡು ಆಯ್ಕೆಗಳಿವೆ. ಒಮ್ಮೆ ಆಯ್ಕೆ ಮಾಡಿದರೆ, ಮತ್ತೆ ಬದಲಿಸಲು ಸಾಧ್ಯವಿಲ್ಲ. ಈ ಪಾಲಿಸಿದಾರರು ಜೀವಂತವಾಗಿರುವವರೆಗೆ ಮಾಸಿಕ ಪಿಂಚಣಿ ಪಡೆಯುತ್ತಾರೆ. ಪಾಲಿಸಿದಾರ ಮರಣ ಹೊಂದಿದಲ್ಲಿ, ಹೂಡಿಕೆ ಮಾಡಿದ ಮೊತ್ತವನ್ನು ನಾಮಿನಿಗೆ ನೀಡಲಾಗುತ್ತದೆ. ಈ ಪಾಲಿಸಿಯನ್ನು ತೆಗೆದುಕೊಳ್ಳಲು ಯಾವುದೇ ವೈದ್ಯಕೀಯ ಪರೀಕ್ಷೆಗಳ ಅಗತ್ಯವಿಲ್ಲ. 30 ರಿಂದ 70 ವರ್ಷದೊಳಗಿನ ಯಾರಾದರೂ ಈ ಪಾಲಿಸಿಯನ್ನು ತೆಗೆದುಕೊಳ್ಳಬಹುದು.

ಮಾಸಿಕ ₹10,000 ಪಿಂಚಣಿ ಪಡೆಯಲು ಎಷ್ಟು ಠೇವಣಿ ಮಾಡಬೇಕು?

35 ವರ್ಷದ ವ್ಯಕ್ತಿಯೊಬ್ಬರು ಎಲ್‌ಐಸಿಯ ಹೊಸ ಜೀವನ್ ಶಾಂತಿ ಯೋಜನೆಯನ್ನು ತೆಗೆದುಕೊಂಡಿದ್ದಾನೆಂದು ಭಾವಿಸೋಣ. ನೀವು ಒಮ್ಮೆಗೆ ₹10 ಲಕ್ಷ ಪಾವತಿಸಿ, ಸಿಂಗಲ್ ಲೈಫ್ ಆಯ್ಕೆಯನ್ನು ಆರಿಸಿಕೊಳ್ಳಿ. ಮುಂದೂಡಲ್ಪಟ್ಟ ಅವಧಿಯನ್ನು 10 ವರ್ಷಗಳಾಗಿ ಆಯ್ಕೆ ಮಾಡಬೇಕು. ಇದರರ್ಥ, ಪಾಲಿಸಿಯನ್ನು ಖರೀದಿಸಿದ 11ನೇ ವರ್ಷದಿಂದ ವಾರ್ಷಿಕ ₹1.20 ಲಕ್ಷ ಪಿಂಚಣಿ ಪಡೆಯಬಹುದು. ಪ್ರತಿ ತಿಂಗಳು ₹10,000 ಸಿಗುತ್ತದೆ. ಒಂದು ವೇಳೆ ನೀವು ಈ ಪಾಲಿಸಿಯಲ್ಲಿ ₹ 25 ಲಕ್ಷ ಠೇವಣಿ ಇಟ್ಟರೆ, ವಾರ್ಷಿಕ ₹3 ಲಕ್ಷ ಪಿಂಚಣಿ ಪಡೆಯಬಹುದು. ಅಂದರೆ, ಪ್ರತಿ ತಿಂಗಳಿಗೆ ₹25 ಸಾವಿರ ಆದಾಯ ಸಿಗುತ್ತದೆ.

ಪಾಲಿಸಿದಾರ ಮರಣ ಹೊಂದಿದಲ್ಲಿ, ಹೂಡಿಕೆ ಮಾಡಿದ ಮೊತ್ತವನ್ನು ನಾಮಿನಿಗೆ ನೀಡಲಾಗುತ್ತದೆ. ಈ ಪಾಲಿಸಿಯನ್ನು ತೆಗೆದುಕೊಳ್ಳಲು ಯಾವುದೇ ವೈದ್ಯಕೀಯ ಪರೀಕ್ಷೆಗಳ ಅಗತ್ಯವಿಲ್ಲ. 30 ರಿಂದ 70 ವರ್ಷದೊಳಗಿನ ಯಾರಾದರೂ ಈ ಪಾಲಿಸಿಯನ್ನು ತೆಗೆದುಕೊಳ್ಳಬಹುದು.


Post a Comment

Previous Post Next Post

Top Post Ad

CLOSE ADS
CLOSE ADS
×