ಕಾನ್ಫಿಡೆನ್ಸ್ ಪೆಟ್ರೋಲಿಯಂ ಇಂಡಿಯಾ ಲಿಮಿಟೆಡ್ ಸಂಸ್ಥೆಯ “ಗೋಗ್ಯಾಸ್” ವಿತರಣಾ ಡೀಲರ್ ಶಿಪ್ ಅನ್ನು(Go Gas dealership application) ನೀಡಲು ರಾಜ್ಯದ್ಯಾದಂತ ಆಸ್ತಕರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಗ್ಯಾಸ್ ಉದ್ಯಮದಲ್ಲಿ ವ್ಯವಹಾರವನ್ನು ಆರಂಭಿಸಿ ಉತ್ತಮ ಆದಾಯವನ್ನು ಗಳಿಸಲು ಆಸಕ್ತಿಯನ್ನು ಹೊಂದಿರುವವರು ಈ ಸುವರ್ಣವಕಾಶವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಗೋಗ್ಯಾಸ್ ಏಜೆನ್ಸಿಗಳು ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿ ಇದ್ದು ಈ ಉದ್ದಿಮೆಯನ್ನು ವಿಸ್ತರಣೆ ಮಾಡಲು ಕಂಪನಿಯು ಪ್ರಸ್ತುತ ಡೀಲರ್ ಶಿಪ್ ವಿಸ್ತರಣೆಗೆ ಮುಂದಾಗಿದೆ.
ಈಗಾಗಲೇ ಗೋಗ್ಯಾಸ್ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಹೋಟೆಲ್, ರೆಸ್ಟೋರೆಂಟ್,ಕೆಫೆ, ಮತ್ತು ಮನೆಗಳಿಗೆ 425 ಕೆಜಿ ತೂಕದ ಸಿಲಿಂಡರ್ ಅನ್ನು ಬಳಕೆ ಮಾಡಿ ತಡೆರಹಿತ ಗ್ಯಾಸ್ ಪೂರೈಕೆಯನ್ನು ಮಾಡುತ್ತಿದ್ದು ಇದರ ಜೊತೆಯಲ್ಲಿ 3 ಹೈ ಪ್ರೆಶರ್ ಸಿಲಿಂಡರ್ ಉತ್ಪಾದನಾ ಘಟಕ 270ಕ್ಕೂ ಅಧಿಕ ಆಟೋ ಎಲ್ ಪಿ ಜಿ ಕೇಂದ್ರ, ಬೆಂಗಳೂರಿನಲ್ಲಿ 40ಕ್ಕೂ ಅಧಿಕ ಸಿ ಎನ್ ಜಿ ಕೇಂದ್ರಗಳನ್ನು ಸಹ ಹೊಂದಿದ್ದು 2200ಕ್ಕೂ ಅಧಿಕ ಗೋಗ್ಯಾಸ್ ಡೀಲರ್ ಗಳನ್ನು ರಾಜ್ಯದಲ್ಲಿ ಈ ಕಂಪನಿಯು ಹೊಂದಿರುತ್ತದೆ.
How to apply for Go Gas agency-ಗೋ ಗ್ಯಾಸ್ ಡೀಲರ್ ಶಿಪ್ ಎಂದರೇನು?
ಗೋ ಗ್ಯಾಸ್ ಒಂದು ಗ್ಯಾಸ್ ವಿತರಣಾ ಕಂಪನಿಯಾಗಿದ್ದು, ಇದು ಗೃಹೋಪಯೋಗಿ ಮತ್ತು ವಾಣಿಜ್ಯ ಬಳಕೆಗೆ LPG ಸಿಲಿಂಡರ್‌ಗಳನ್ನು ಪೂರೈಕೆ ಮಾಡುತ್ತದೆ. ಡೀಲರ್ ಶಿಪ್ ಪಡೆಯುವುದರಿಂದ, ನೀವು ನಿರ್ದಿಷ್ಟ ಪ್ರದೇಶದಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನು ವಿತರಿಸುವ ಜವಾಬ್ದಾರಿಯನ್ನು ಹೊಂದುತ್ತೀರಿ. ಇದು ನಿಮಗೆ ನಿರಂತರವಾಗಿ ಸ್ಥಿರ ಆದಾಯವನ್ನು ನೀಡುತ್ತದೆ.
Go Gas Dealership Online Application-ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಅರ್ಜಿದಾರರು ಗೋ ಗ್ಯಾಸ್ ಸಂಸ್ಥೆಯ ಅಧಿಕೃತ ಜಾಲತಾಣವನ್ನು ನೇರವಾಗಿ ಭೇಟಿ ಮಾಡಿ ಅಗತ್ಯ ವಿವರವನ್ನು ಭರ್ತಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್- Apply Now
Go Gas Dealership Documents-ಅಗತ್ಯವಿರುವ ಡಾಕ್ಯುಮೆಂಟ್‌ಗಳು:
ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ
ಪಾನ್ ಕಾರ್ಡ್ ಪ್ರತಿ
ವಿದ್ಯಾಭ್ಯಾಸ ಪ್ರಮಾಣ ಪತ್ರ
ಜಾಗದ ದಾಖಲೆಗಳು / ಲೀಸ್ ಡೀಡ್
ಬ್ಯಾಂಕ್ ಖಾತೆ ವಿವರಗಳು
ಅರ್ಜಿದಾರರ ಪೋಟೋ
Go Gas dealership eligibility-ಡೀಲರ್‌ಶಿಪ್ ಪಡೆಯಲು ಅರ್ಹತೆಗಳು:
ಅರ್ಜಿದಾರ ಅಭ್ಯರ್ಥಿಯು ಭಾರತದ ಖಾಯಂ ನಿವಾಸಿಯಾಗಿರಬೇಕು.
ಅರ್ಜಿದಾರರಿಗೆ ಕನಿಷ್ಠ 21 ವರ್ಷ ವಯಸ್ಸು ಭರ್ತಿಯಾಗಿರಬೇಕು.
ಅರ್ಜಿದಾರರು ಕನಿಷ್ಠ 10ನೇ ತರಗತಿ ಪಾಸ್ ಆಗಿರಬೇಕು.
ಗ್ಯಾಸ್ ಏಜೆನ್ಸಿ ಆರಂಭಿಸಲು ಅವಶ್ಯವಿರುವ ಜಾಗವನ್ನು ಹೊಂದಿರಬೇಕು ಅಥವಾ ಬಾಡಿಗೆ ರೂಪದಲ್ಲಿ ಪಡೆಯಲು ಸಿದ್ದರಿರಬೇಕು.
ಈಗಾಗಲೇ ಇತರ ಯಾವುದೇ ಇಂಧನ ವಿತರಕ ಸಂಸ್ಥೆಯೊಂದಿಗೆ ಒಪ್ಪಂದವನ್ನು ಮಾಡಿಕೊಂಡವರಿಗೆ ಅವಕಾಶವಿರುವುದಿಲ್ಲ.
Go Gas franchise details-ಡೀಲರ್ ಶಿಪ್ ಪ್ರಯೋಜನಗಳು:
ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಗ್ಯಾಸ್ ಸಿಲಿಂಡರ್ ಬಳಕೆದಾರರ ಸಂಖ್ಯೆಯು ಏರಿಕೆಯಾಗುತ್ತಿದ್ದು ಈ ಕ್ಷೇತ್ರದಲ್ಲಿ ಉತ್ತಮ ಆದಾಯವನ್ನು ಡೀಲರ್ ಶಿಪ್ ಪಡೆಯುವುದರ ಮೂಲಕ ಪಡೆಯಬಹುದಾಗಿದೆ.
ಸ್ಥಳೀಯವಾಗಿ ಒಂದಿಷ್ಟು ಜನರಿಗೆ ಉದ್ಯೋಗವನ್ನು ನೀಡಲು ಸಹಕಾರಿಯಾಗಿದೆ.
ಸ್ಥಿರ ಆದಾಯವನ್ನು ನೀಡುವ ಉದ್ದಿಮೆಯಲ್ಲಿ ಈ ಕ್ಷೇತ್ರವು ಮುಂಚೂಣಿಯಲ್ಲಿದೆ.