ಹಕ್ಕಿಗಳ ಹಿಂಡುʼVʼ ಆಕಾರದಲ್ಲಿಯೇ ಹಾರುವುದೇಕೆ ಗೊತ್ತಾ? ಇದರ ಹಿಂದಿನ ಇಂಟರೆಸ್ಟಿಂಗ್‌ ಸಂಗತಿ ತಿಳಿಯಿರಿ

ಹಕ್ಕಿಗಳ ಹಿಂಡು ʼVʼ ಆಕಾರದಲ್ಲಿಯೇ ಹಾರುವುದೇಕೆ ಗೊತ್ತಾ? ಇದರ ಹಿಂದಿನ ಇಂಟರೆಸ್ಟಿಂಗ್‌ ಸಂಗತಿ ತಿಳಿಯಿರಿ,ಹೆಚ್ಚಾಗಿ ಬೆಳಗ್ಗೆ ಮತ್ತು ಸಂಜೆ ಹೊತ್ತಲ್ಲಿ ಆಗಸದಲ್ಲಿ ಹಕ್ಕಿಗಳ ಹಿಂಡು V ಶೇಪ್‌ನಲ್ಲಿ ಒಂದು ಹಕ್ಕಿಯ ಹಿಂದೆ ಒಂದರಂತೆ ಸಾಲಾಗಿ ಹಾರುವುದನ್ನು ನೋಡಿರುತ್ತೀರಿ ಅಲ್ವಾ. ಪಕ್ಷಿಗಳ ಹಿಂಡು ಹೀಗೆ ಸರತಿ ಸಾಲಿನಲ್ಲಿ ಶಿಸ್ತುಬದ್ಧವಾಗಿ ಹಾರುತ್ತಾ ಹೋಗುತ್ತಿರುವುದನ್ನು ನೋಡುವುದೇ ಒಂದು ಚೆಂದ. ಅಷ್ಟಕ್ಕೂ ಈ ಹಕ್ಕಿಗಳು ಏಕೆ ಹೀಗೆ ವಿ ಆಕಾರದಲ್ಲಿಯೇ ಹಾರುತ್ತವೆ ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ಇದರ ಹಿಂದೆಯೂ ಒಂದು ವೈಜ್ಞಾನಿಕ ಕಾರಣವಿದೆಯಂತೆ. ಅದು ಏನೆಂಬುದನ್ನು ನೋಡೋಣ ಬನ್ನಿ.



ಸಂಶೋಧಕರು ಹಕ್ಕಿಗಳು V ಆಕಾರದಲ್ಲಿ ಏಕೆ ಹಾರುತ್ತವೆ ಎಂಬುದರ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. ವಿ ಆಕಾರದಲ್ಲಿ ಹಾರುವುದರಿಂದ ಹಕ್ಕಿಗಳ ಹಿಂಡಿಗೆ ಸುಲಭವಾಗಿ ಹಾರಲು ಸಾಧ್ಯವಾಗುತ್ತದೆ. ಜೊತೆಗೆ ಅವುಗಳು ಹಾರಾಡುವಾಗ ಪರಸ್ಪರ ಡಿಕ್ಕಿ ಹೊಡೆಯುವುದಿಲ್ಲ.

ಪಕ್ಷಿಗಳು ವಿ ಆಕಾರದಲ್ಲಿ ಹಾರುವುದರಿಂದ ಅವುಗಳು ತಮ್ಮ ವಿರುದ್ಧ ದಿಕ್ಕಿನಿಂದ ಬರುವ ಗಾಳಿಯನ್ನು ಭೇದಿಸಿ ಸುಲಭವಾಗಿ ಹಾರಾಡುತ್ತವೆ. ಅಂದರೆ ಮುಂದೆ ಇರುವ ಹಕ್ಕಿ ತನ್ನ ಹಿಂದೆ ಇರುವ ಹಕ್ಕಿಗಳಿಗೆ ಗಾಳಿಯ ಪ್ರತಿರೋಧವನ್ನು ಕಡಿಮೆಗೊಳಿಸುತ್ತದೆ. ಇದು ಹಕ್ಕಿಗಳಿಗೆ ಸುಲಭವಾಗಿ ಹಾರಲು ಅನುವು ಮಾಡಿಕೊಡುತ್ತದೆ.

ಪ್ರತಿಯೊಂದು ಪಕ್ಷಿಗಳ ಹಿಂಡಿನಲ್ಲಿಯೂ ಒಬ್ಬ ನಾಯಕ ಹಕ್ಕಿ ಇದ್ದು, ಅದು ಉಳಿದವುಗಳನ್ನು ಮುನ್ನಡೆಸುತ್ತದೆ. ಹಾರುವಾಗ, ನಾಯಕ V ಆಕಾರದಲ್ಲಿ ಮುಂಭಾಗದಲ್ಲಿದ್ದರೆ, ಉಳಿದ ಪಕ್ಷಿಗಳು ನಾಯಕನ ಹಿಂದೆಯೇ ಸಾಲಾಗಿ ಹಾರುತ್ತವೆ. ಹೀಗೆ ಹಾರುವಾಗ ಒಂದು ಹಕ್ಕಿ ದಣಿದಾಗ ಇನ್ನೊಂದು ಹಕ್ಕಿ ತಂಡವನ್ನು ಮುನ್ನಡೆಸುತ್ತವೆ. ಹೀಗೆ ಮಾಡುವುದರಿಂದ ಅವುಗಳ ಶಕ್ತಿ ವ್ಯರ್ಥವಾಗುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಹೆಚ್ಚಿನವರು ಹಕ್ಕಿಗಳು ಸ್ಪರ್ಧೆಯಿಂದ ಹೀಗೆ ಹಾರುತ್ತವೆ ಎಂದುಕೊಳ್ಳುತ್ತಾರೆ. ಆದರೆ ಹಕ್ಕಿಗಳು ಹಾರಾಡಲು ಸುಲಭವಾಗುತ್ತದೆ ಎಂಬ ಕಾರಣಕ್ಕೆ ಹೀಗೆ ವಿ ಶೇಪ್‌ನಲ್ಲಿ ಹಾರುತ್ತವೆ. ಜೊತೆಗೆ ಹೀಗೆ ಹಾರುವಾಗ ತಂಡವನ್ನು ಮುನ್ನಡೆಸುವ ಹಕ್ಕಿ ದಣಿದಾಗ ಇನ್ನೊಂದು ಹಕ್ಕಿ ಅದರ ಜವಾಬ್ದಾರಿಯನ್ನು ವಹಿಸುತ್ತದೆ. ಇದರಿಂದ ಹಕ್ಕಿಗಳ ಶಕ್ತಿಯೂ ಕೂಡಾ ವ್ಯರ್ಥವಾಗುವುದಿಲ್ಲ.

ಹೆಚ್ಚಾಗಿ ವಲಸೆ ಹಕ್ಕಿಗಳು ದೀರ್ಘ ವಲಸೆಯ ಸಂದರ್ಭದಲ್ಲಿ ಅಂದರೆ ದೂರದ ಸ್ಥಳಕ್ಕೆ ಹೋಗುವ ಸಂದರ್ಭದಲ್ಲಿ ಹಾರಾಟದ ವೇಳೆ ತಮ್ಮ ಶಕ್ತಿಯನ್ನು ಉಳಿಸಲು, ತಮ್ಮ ಗುಂಪಿನ ನಡುವೆ ಸಂಪರ್ಕವನ್ನು ಕಾಪಾಡಿಕೊಳ್ಳಲು ಮತ್ತು ಹಾರಾಟದ ವೇಳೆ ಪರಸ್ಪರ ಡಿಕ್ಕಿಯಾಗುವುದನ್ನು ತಡೆದು ಸರಾಗವಾಗಿ ಹಾರಲು ಹಕ್ಕಿಗಳು ವಿ ಆಕಾರದಲ್ಲಿ ಹಾರುವ ವಿಧಾನವನ್ನು ಅನುಸರಿಸುತ್ತವೆ.



Previous Post Next Post