ದಾವಣಗೆರೆಯಲ್ಲಿ ಶಿಕ್ಷಕ ಹುದ್ದೆಯ ಕೆಲಸ ಹುಡುತ್ತಿರುವ ಅಭ್ಯರ್ಥಿಗಳಿಗೆ ಪ್ರಮುಖವಾದ ಮಾಹಿತಿಯೊಂದಿದೆ. ಕೊಂಡಜ್ಜಿಯಲ್ಲಿರುವ ಪೊಲೀಸ್ ಪಬ್ಲಿಕ್ ಶಾಲೆಗೆ ನುರಿತ ಸ್ನಾತಕೋತ್ತರ ಹಾಗೂ ಸ್ನಾತಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳ ಜೊತೆಗೆ ಅರ್ಜಿಗಳನ್ನು ಸಲ್ಲಿಸಬಹುದು.
ಈ ಕುರಿತು ಎಸ್ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ. ಈ ಶಾಲೆಯನ್ನು ಕರ್ನಾಟಕ ರಾಜ್ಯ ಪೊಲೀಸ್ ಕಲ್ಯಾಣ, ಶಿಕ್ಷಣ ಟ್ರಸ್ಟ್, ಪೂರ್ವ ವಲಯ ದಾವಣಗೆರೆ ಇವರಿಂದ ಪೊಲೀಸ್ ಪಬ್ಲಿಕ್ ಸ್ಕೂಲ್ ಸಿಬಿಎಸ್‍ಇ ಪಠ್ಯಕ್ರಮದ ಶಾಲೆಯಾಗಿ ನಡೆಸಲಾಗುತ್ತಿದೆ. ಇಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ಮಕ್ಕಳು ಹಾಗೂ ಇತರೆ ಸಾರ್ವಜನಿಕ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ.
ಈ ಶಾಲೆಗೆ ಅಗತ್ಯವಿರುವ ಪಿಜಿಟಿ ಇಂಗ್ಲೀಷ್ ಶಿಕ್ಷಕರ 1 ಹುದ್ದೆಗೆ ಎಂಎ.ಬಿ.ಇಡಿ, ಪಿಜಿಟಿ ಗಣಿತ ಶಿಕ್ಷಕರ 1 ಹುದ್ದೆಗೆ ಎಂ.ಎಸ್ಸಿ, ಬಿ.ಇಡಿ, ಪಿಜಿಟಿ ವಿಜ್ಞಾನ ಶಿಕ್ಷಕರ 2 ಹುದ್ದೆಗಳಿಗೆ ಎಂಎಸ್ಸಿ, ಬಿಇಡಿ ಸಿಬಿಝಡ್, ಟಿಜಿಟಿ ಸಮಾಜ ವಿಜ್ಞಾನ 1 ಹುದ್ದೆಗೆ ಎಂ.ಎ. ಬಿ.ಇಡಿ, ಕನ್ನಡ ಪಿಜಿಟಿ 1 ಹುದ್ದೆಗೆ ಎಂಎ, ಬಿ.ಇಡಿ, ಹಿಂದಿ 2 ಹುದ್ದೆ ಬಿ.ಎ, ಎಂ.ಎ ಬಿ.ಇಡಿ, ದೈಹಿಕ ಶಿಕ್ಷಕ 1 ಹುದ್ದೆ ಬಿಪಿಇಡಿ, ಎಂ.ಪಿ.ಇಡಿ, ಕಂಪ್ಯೂಟರ್ ಸೈನ್ಸ್ 1 ಬಿಸಿಎ, ಬಿ.ಟೆಕ್ ಪದವಿ, ಬಿ.ಎಸ್ಸಿ ಕಂಪ್ಯೂಟರ್ ವಿದ್ಯಾರ್ಹತೆ ಪಡೆದಿರುವ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಕರ್ನಾಟಕ ಬಜೆಟ್ 2025: ಉದ್ಯೋಗ ವಲಯಕ್ಕೆ ಸಿಕ್ಕ ಭರವಸೆಗಳು
ಕಚೇರಿ ಸಿಬ್ಬಂದಿ 1 ಹುದ್ದೆಗೆ ಯಾವುದೇ ಪದವಿ ಜೊತೆಗೆ ಕಂಪ್ಯೂಟರ್ ತರಬೇತಿ ಹೊಂದಿರುವ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ. ಈ ಹುದ್ದೆಗಳಿಗೆ ಇಂಗ್ಲೀಷ್ ಜ್ಞಾನವುಳ್ಳವರಾಗಿದ್ದು ಸಂವಹನ ಹಾಗೂ ಬರವಣಿಗೆಯಲ್ಲಿ ಉತ್ತಮ ಕೌಶಲ್ಯತೆ ಹೊಂದಿರಬೇಕು.
ನೇಮಕಾತಿ ನಿಯಮಗಳ ಅನ್ವಯ ವೇತನ ಜೊತೆಗೆ ಇಪಿಎಫ್, ಇಎಸ್‍ಐ ಸೌಲಭ್ಯವಿರುತ್ತದೆ. ಆಸಕ್ತರು ತಮ್ಮ ಸ್ವವಿವರದ ದಾಖಲೆಗಳನ್ನು ಪೊಲೀಸ್ ಪಬ್ಲಿಕ್ ಸ್ಕೂಲ್, ಕೊಂಡಜ್ಜಿಗೆ ಸಲ್ಲಿಸಬಹುದು. ಅಥವಾ ಇ-ಮೇಲ್ ವಿಳಾಸ pprsdavanagere@ksp.gov.in ಕಳಿಸಬಹುದು. ಹೆಚ್ಚಿನ ಮಾಹಿತಿಗೆ ಕರೆ ಮಾಡಿ 9164633833, 9743936234.
ಉದ್ಯೋಗ ಮೇಳ: ದಾವಣಗೆರೆಯಲ್ಲಿ ಮಾರ್ಚ್ 15ರಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. 50ಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗಲಿದ್ದು, ಸುಮಾರು 5000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ಜಿಲ್ಲಾಡಳಿತ ಹೇಳಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೌಶಲ್ಯಾಭಿವೃದ್ದಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹದಡಿ ರಸ್ತೆಯ ಸರ್ಕಾರಿ ಐಟಿಐ ಕಾಲೇಜು ಆವರಣ ಹಾಗೂ ಬಿಐಇಟಿ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ.
ಜಿಲ್ಲೆಯ ನಿರುದ್ಯೋಗಿ ಯುವಕ/ ಯುವತಿಯರಿಗೆ ಈ ಉದ್ಯೋಗ ಮೇಳ ಸಹಾಯಕವಾಗಲಿದೆ. ಮೇಳದಲ್ಲಿ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಕಂಪನಿಗಳು ಭಾಗವಹಿಸುತ್ತಿವೆ.
ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು 1000ಕ್ಕೂ ಹೆಚ್ಚಿನ ಯುವಕ, ಯುವತಿಯರು ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಸಿದ್ದಾರೆ. ನೋಂದಣಿ ಮಾಡಿಸದ ಅಭ್ಯರ್ಥಿಗಳು ಎಲ್ಲಾ ದಾಖಲೆಗಳೊಂದಿಗೆ ನೇರವಾಗಿಯೂ ಭಾಗವಹಿಸಲೂ ಅವಕಾಶವನ್ನು ನೀಡಲಾಗಿದೆ.