ರಾಜ್ಯ ಸರ್ಕಾರದಿಂದ ಅನ್ನಭಾಗ್ಯ ಯೋಜನೆಯಡಿ(Annabhagya Yojana) 5 ಕೆಜಿ ಹೆಚ್ಚುವರಿಯಾಗಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತದೆ ಎಂದು ಈ ಹಿಂದೆ ತಿಳಿಸಲಾಗಿತ್ತು ಅದರೆ ಪಡಿತರ ಚೀಟಿದಾರರಿಗೆ ಅಗತ್ಯವಿರುವಷ್ಟು ಅಕ್ಕಿ ಲಭ್ಯವಿಲ್ಲದ ಕಾರಣ ಇಷ್ಟು ದಿನ ಹೆಚ್ಚುವರಿ 5 ಕೆಜಿ ಅಕ್ಕಿಯ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ಜನವರಿ-2025 ರ ವರೆಗೆ ವಿತರಣೆ ಮಾಡಲಾಗಿದ್ದು ಫೆಬ್ರವರಿ-2025 ರಿಂದ ಅಕ್ಕಿಯನ್ನು ವಿತರಣೆ ಮಾಡಲು ಸರ್ಕಾರ ಮುಂದಾಗಿದೆ.
ಅನ್ನಭಾಗ್ಯ ಯೋಜನೆಯಡಿ(Annabhagya Yojane News) ಸಮರ್ಪಕವಾಗಿ ಸರಿಯಾದ ಸಮಯಕ್ಕೆ ಹಣ ಫಲಾನುಭವಿಗಳ ಖಾತೆಗೆ ಜಮಾ ಅಗುತ್ತಿಲ್ಲ ಎನ್ನುವ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ಇದ್ದು ಇದಕ್ಕೆ ಪರಿಹಾರವನ್ನು ಒದಗಿಸಲು ರಾಜ್ಯ ಸರಕಾರದಿಂದ(Karnataka State Government) ನೂತನ ಕ್ರಮವನ್ನು ಜಾರಿಗೆ ತರಲು ಮುಂದಾಗಿದ್ದು ಹಣದ ಬದಲು ಇನ್ನು ಮುಂದೆ ಹೆಚ್ಚುವರಿ ಅಕ್ಕಿಯನ್ನೇ ವಿತರಣೆ ಮಾಡಲು ಆಹಾರ ಇಲಾಖೆ ಸೂಕ್ತ ಕ್ರಮಗಳ ತೆಗೆದುಕೊಂಡಿದೆ.
ಸೂಕ್ತ ದಾಸ್ತಾನು ಇಲ್ಲದ ಕಾರಣ ಕೇಂದ್ರ ಸರಕಾರವು(Government of india) ಮೊದಲು ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ರಾಜ್ಯ ಸರಕಾರಕ್ಕೆ ಮಾರಾಟ ಮಾಡಲು ಒಪ್ಪಿಗೆ ನೀಡಿರಲ್ಲಿಲ ಆದರೆ ಈಗ ಅಕ್ಕಿ ಲಭ್ಯವಿರುವ ಕಾರಣ ಇನ್ನು ಮುಂದೆ ಕೇಂದ್ರವು ಹೆಚ್ಚುವರಿ ಅಕ್ಕಿಯನ್ನು ರಾಜ್ಯ ಸರಕಾರಕ್ಕೆ ನೀಡಲು ಒಪ್ಪಿಗೆ ಸೂಚಿಸಿರುವುದರಿಂದ ಸರಕಾರದಿಂದ ಇನ್ನು ಮುಂದೆ ಅಕ್ಕಿಯನೇ ರೇಶನ್ ಕಾರ್ಡದಾರರಿಗೆ ವಿತರಣೆ ಮಾಡಲು ಕ್ರಮ ಕೈಗೊಂಡಿದೆ.
Annabhagya Yojane-ಕುಟುಂಬ ಸದಸ್ಯರಿಗೆ ತಲಾ 15 ಕೆ.ಜಿ. ಅಕ್ಕಿ ವಿತರಣೆ:
ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿ ಬದಲು ಜನವರಿ-2025 ತಿಂಗಳವರೆಗೆ ಹಣವನ್ನು ನೀಡಲಾಗುತ್ತಿತ್ತು ಅದರೆ ಈಗ ಫೆಬ್ರವರಿ-2025 ರಿಂದ ಹಣದ ಬದಲು ಅಕ್ಕಿಯನ್ನು ವಿತರಣೆ ಮಾಡಲು ಸರಕಾರ ಮುಂದಾಗಿದೆ.
ಇದರಂತೆ ಮಾರ್ಚ-2025 ತಿಂಗಳಿನಲ್ಲಿ ಪ್ರತಿ ಸದಸ್ಯರಿಗೆ ಫೆಬ್ರವರಿ-2025 ರ ತಿಂಗಳ ಹೆಚ್ಚುವರಿ 5 ಕೆಜಿ ಅಕ್ಕಿ ಸೇರಿ ಪ್ರತಿ ಸದಸ್ಯರಿಗೆ 15 ಕೆ.ಜಿ. ಅಕ್ಕಿಯನ್ನು ವಿತರಣೆ ಮಾಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ. ಎಚ್. ಮುನಿಯಪ್ಪ ಅವರು ಮಾಹಿತಿ ತಿಳಿಸಿದ್ದಾರೆ.
ಅನ್ನಭಾಗ್ಯ ಯೋಜನೆಯಡಿ ಈ ತಿಂಗಳಿಂದ ಪ್ರತಿ ಫಲಾನುಭವಿಗೆ 10 ಕೆ.ಜಿ. ಅಕ್ಕಿಯನ್ನು ನೀಡುವುದರೊಂದಿಗೆ ಫೆಬ್ರವರಿ ತಿಂಗಳ 5 ಕೆ.ಜಿ. ಅಕ್ಕಿಯನ್ನು ಸೇರಿಸಿ, ಈ ತಿಂಗಳು 15 ಕೆ.ಜಿ. ಅಕ್ಕಿ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ. ಎಚ್. ಮುನಿಯಪ್ಪ(K H Muniyappa) ಅವರು ತಿಳಿಸಿದ್ದಾರೆ.
ರಾಜ್ಯ ಸರಕಾರದ ಮಹಾತ್ಮಾಾಂಕ್ಷೆ ಐದು ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಪ್ರತಿ ಸದಸ್ಯರಿಗೆ ರು.170 ರಂತೆ ಡಿಬಿಟಿ ಮೂಲಕ ಪಾವತಿಸಲಾಗುತ್ತಿರುತ್ತದೆ. ಫೆ.2025ರ ಮಾಹೆಯಿಂದ ಪ್ರತಿ ಸದಸ್ಯರಿಗೆ ರು.170 ರ ಡಿಬಿಟಿ ಹಣ ಬದಲಾಗಿ 5 ಕೆ.ಜೆ.ಅಕ್ಕಿಯನ್ನು ಕೆ.ಜೆ. ವಿತರಿಸಲು ತೀರ್ಮಾನಿಸಲಾಗಿರುತ್ತದೆ.
Annabhagya Scheme-ರೇಶನ್ ಕಾರ್ಡ ಸದಸ್ಯರ ಆಧಾರದ ಮೇಲೆ ಅಕ್ಕಿ ವಿತರಣೆ:
ಮಾರ್ಚ-2025ರ ತಿಂಗಳ ಆಹಾರಧಾನ್ಯವು ಈಗಾಗಲೇ ಬಿಡುಗಡೆಯಾಗಿದ್ದು ಹಾಗೂ ಫೆಬ್ರವರ್- 2025ರ ಮಾಹೆಯ ಆಹಾರಧಾನ್ಯ ಸೇರಿ ಮಾರ್ಚ-2025ರ ಮಾಹೆಯಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯರಿಗೆ 15 ಕೆ.ಜಿ.ಅಕ್ಕಿ ಹಾಗೂ ಅಂತ್ಯೋದಯ ಎಎವೈ ಪಡಿತರ ಚೀಟಿದಾರರಿಗೆ ಈ ಕೆಳಗಿನಂತೆ ಅಕ್ಕಿಯನ್ನು ವಿತರಣೆ ಮಾಡಲಾಗುತ್ತದೆ ಎಂದು ಅಧಿಕೃತ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
1 ರಿಂದ 3 ಸದಸ್ಯರಿಗೆ- 35 ಕೆ.ಜಿ.ಅಕ್ಕಿ
4 ಸದಸ್ಯರಿಗೆ 45 ಕೆ.ಜಿ.ಅಕ್ಕಿ,
5 ಸದಸ್ಯರಿಗೆ 65 ಕೆ.ಜಿ. ಅಕ್ಕಿ.
6 ಸದಸ್ಯರಿಗೆ 85 ಕೆ.ಜಿ.ಅಕ್ಕಿ,
7 ಸದಸ್ಯರಿಗೆ 105 ಕೆ.ಜಿ.ಅಕ್ಕಿ,
8 ಸದಸ್ಯರಿಗೆ 125 ಕೆ.ಜಿ.ಅಕ್ಕಿ,
9 ಸದಸ್ಯರಿಗೆ 145 ಕೆ.ಜಿ.ಅಕ್ಕಿ ಹಾಗೂ
10 ಸದಸ್ಯರಿಗೆ 165 ಕೆ.ಜಿ ಅಕ್ಕಿ ಮುಂದುವರೆದು
10ಕ್ಕಿಂತ ಮೇಲ್ಪಟ್ಟ ಪಡಿತರ ಚೀಟಿಗೆ ಇದೇ ಅನುಪಾತದಂತೆ ಅಕ್ಕಿ ವಿತರಣೆ ಮಾಡಲಾಗುತ್ತದೆ ಎಂದು ಆಹಾರ, ನಾಗುಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
Annabhagya Grants-ಅಕ್ಕಿ ವಿತರಣೆ ಮಾಡಿದರೆ ಸರಕಾರಕ್ಕೆ ಅನುದಾನದಲ್ಲಿ ಉಳಿತಾಯ:
ಅನ್ನಭಾಗ್ಯ ಯೋಜನೆಯಡಿ ನೇರ ನಗದು ವರ್ಗಾವಣೆ ಮೂಲಕ ಹಣದ ಬದಲು ಪಡಿತರ ಚೀಟಿದಾರರಿಗೆ ಅಕ್ಕಿಯನ್ನು ವಿವರಣೆ ಮಾಡುವುದರಿಂದ ರಾಜ್ಯ ಸರಕಾರಕ್ಕೆ ಪ್ರತಿ ತಿಂಗಳು ತಗಲು ಒಟ್ಟು ವೆಚ್ಚದಲ್ಲಿ ಉಳಿತಾಯ ಮಾಡಲು ಸಾಧ್ಯವಾಗುತ್ತದೆ.
Ahara Ilake Website- ಆಹಾರ ಇಲಾಖೆ ವೆಬ್ಸೈಟ್- CLICK HERE