ಭಾರತದಲ್ಲಿಯೇ ನೆಲೆಗೊಂಡಿರುವ ಈ ಜಾಗಗಳಲ್ಲಿ ಭಾರತೀಯರಿಗೆ ನೋ ಎಂಟ್ರಿ,ಭಾರತೀಯರಿಗೆ ಪ್ರವೇಶ ನಿರಾಕರಿಸಿರುವ ಆ ಪ್ರಮುಖ ಐದು ಸ್ಥಳಗಳು ಯಾವುವು?ಭಾರತೀಯರಿಗೆ ನೋ ಎಂಟ್ರಿ ಎನ್ನುವ ಹೋಟೆಲ್ ಒಂದು ಬೆಂಗಳೂರಿನಲ್ಲೂ ಇತ್ತು.
ಹಿಂದೊಂದು ಕಾಲವಿತ್ತು. ಅದು ಬ್ರಿಟಿಷರು ಆಳುತ್ತಿದ್ದ ಸಮಯ, ಕೆಲವು ಪ್ರದೇಶಗಳಲ್ಲಿ ಅವರು ಬೋರ್ಡ್ಗಳನ್ನು ಹಾಕುತ್ತಿದ್ದರು. ಭಾರತೀಯರಿಗೆ ಹಾಗೂ ನಾಯಿಗಳಿಗೆ ಪ್ರವೇಶವಿಲ್ಲ ಎಂದು. ನಮ್ಮ ದೇಶದಲ್ಲಿಯೇ ವ್ಯಾಪಾರಕ್ಕಾಗಿ ಬಂದು ನಮ್ಮನ್ನೇ ಒಡೆದು ಆಳಿ ನಮಗೆ ಕೆಲವು ಪ್ರದೇಶಗಳಿಗೆ ಪ್ರವೇಶವಿಲ್ಲ ಎಂದು ಬೋರ್ಡ್ ಹಾಕುವ ಮಟ್ಟಕ್ಕೆ ಅವರ ಸಾಮ್ರಾಜ್ಯದ ಉದ್ಧಟತನ ಒಂದು ಕಾಲಕ್ಕೆ ಬೆಳೆದಿತ್ತು. ಭಾರತವೀಗ ಸ್ವತಂತ್ರ ದೇಶ. ಸ್ವಾತಂತ್ರ್ಯ ದೊರಕಿ 76 ವರ್ಷಗಳೇ ಕಳೆದಿವೆ. ಆದರೂ ಕೂಡ ಇಂದಿಗೂ ಕೆಲವು ಪ್ರದೇಶಗಳಲ್ಲಿ, ಕೆಲವು ಜಾಗಗಳಲ್ಲಿ ಅದು ಭಾರತದಲ್ಲಿಯೇ ಇರುವ ಕೆಲವು ಜಾಗಗಳಿಗೆ ಇಂದಿಗೂ ಕೂಡ ಪ್ರವೇಶವಿಲ್ಲ ಯಾವುವು ಆ ಜಾಗಗಳು ಅಂತ ನೋಡುವುದಾದ್ರೆ.
ಇದೆ ತರಹದ ನೇಮಕಾತಿ,ವಿದ್ಯಾರ್ಥಿವೇತನ,ಕೇಂದ್ರ/ರಾಜ್ಯ ಯೋಜನೆಗಳಿಗಾಗಿ ನಮ್ಮ ಟೆಲಿಗ್ರಾಮ ಚಾನಲ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇಂದು ಜಗತ್ತಿನಲ್ಲಿ ದೇಶ ವಿದೇಶ ಸುತ್ತವ ಹುಚ್ಚು ಹೆಚ್ಚಾಗಿದೆ. ಪ್ರತಿ ದಿನ ಪ್ರವಾಸಿ ತಾಣವಾಗಲಿ ಪ್ರಸಿದ್ಧಿ ತಾಣವಾಗಲಿ ಅಲ್ಲಿ ಪ್ರವಾಸಿಗರು ಅಲೆಮಾರಿಗಳು ಸೇರುತ್ತಾರೆ. ಅದರಲ್ಲೂ ಈ ವಿಷಯದಲ್ಲಿ ನಮಗೆ ಭಾರತೀಯರೇ ಅಧಿಕವಾಗಿ ದೊರಕುವುದು. ಆದರೆ ಭಾರತದಲ್ಲಿ ಕೆಲವೊಂದಿಷ್ಟು ಜಾಗಗಳಿವೆ ಅಲ್ಲಿ ಭಾರತೀಯರಿಗೆ ಪ್ರವೇಶ ಸಿಗುವುದಿಲ್ಲ.
1. ರೆಡ್ ಲಾಲಿಪಾಪ್ ಹಾಸ್ಟೆಲ್ ಚೆನ್ನೈ: ಚೆನ್ನೈನಲ್ಲಿರುವ ರೆಡ್ ಲಾಲಿಪಾಪ್ ಹಾಸ್ಟೇಲ್ನಲ್ಲಿ ಯಾವುದೇ ಭಾರತೀಯರಿಗೆ ಇಲ್ಲಿ ಪ್ರವೇಶವಿಲ್ಲ. ಅವರು ಸ್ಟ್ರಿಕ್ಟ್ ನೋ ಇಂಡಿಯನ್ ಪಾಲಿಸಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇಲ್ಲಿ ಕೇವಲ ವಿದೇಶಿ ಪಾಸ್ಪೋರ್ಟ್ ಇದ್ದವರಿಗೆ ಮಾತ್ರ ಪ್ರವೇಶ ಸಿಗುತ್ತದೆ. ಭಾರತೀಯರಾದವರು ವಿದೇಶಿ ಪಾಸ್ಪೋರ್ಟ್ ಹೊಂದಿದ್ದರು ಕೂಡ ಅವರಿಗೆ ಇಲ್ಲಿ ಪ್ರವೇಶ ನಿರಾಕರಿಸಲಾಗುತ್ತದೆ.
2. ಸಾಕುರಾ ರಾಯಕೋನ್ ರೆಸ್ಟೋರೆಂಟ್: ಅಹ್ಮದಾಬಾದ್ನ ಅತ್ಯಂತ ಪ್ರಸಿದ್ಧ ಸಾಕುರಾ ರಾಯಕೋನ್ ರೆಸ್ಟೊರೆಂಟ್ನಲ್ಲಿಯೂ ಕೂಡ ಭಾರತೀಯರಿಗೆ ಪ್ರವೇಶವಿಲ್ಲ. ಇಲ್ಲಿ ಜಪಾನೀಸ್ ಫುಡ್ ಸೇವೆಯನ್ನು ಒದಗಿಸಲಾಗುತ್ತದೆ. ಹೀಗಾಗಿ ಕೇವಲ ಜಪಾನಿಯರಿಗೆ ಮಾತ್ರ ಇಲ್ಲಿ ಪ್ರವೇಶವಿದೆ. ಇನ್ನೂ ಅಚ್ಚರಿಯಂದ್ರೆ ಈ ಹೋಟೆಲ್ನ ಮಾಲೀಕ ಭಾರತೀಯನೇ ಆಗಿದ್ದಾನೆ. ಆದರೂ ಕೂಡ ಇಲ್ಲಿ ಭಾರತೀಯ ಪ್ರಜೆಗಳಿಗೆ ಎಂಟ್ರಿಯಿಲ್ಲ. ಒಂದು ವರದಿಯ ಪ್ರಕಾರ ಈ ಹಿಂದೆ ಭಾರತೀಯರು ಈ ರೆಸ್ಟೋರೆಂಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಈಶಾನ್ಯ ಭಾಗದ ವೇಟರ್ಸ್ಗಳನ್ನು ಲೇವಡಿ ಮಾಡಿ ನಗುತ್ತಿದ್ದರಂತೆ. ಅವರನ್ನು ಚೇಷ್ಟೇ ಮಾಡಿ ವಿಕೃತ ಆನಂದ ಪಡೆಯುತ್ತಿದ್ದರಂತೆ ಹೀಗಾಗಿಯೇ ಇಲ್ಲಿ ಭಾರತೀಯರಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ.
3. ಫ್ರೀ ಕಸೋಲ್ ಕೆಫೆ: ಹಿಮಾಚಲ ಪ್ರದೇಶದಲ್ಲಿರುವ ಫ್ರೀ ಕಸೋಲ್ ಕೆಫೆಯಲ್ಲಿಯೂ ಕೂಡ ಭಾರತೀಯರಿಗೆ ನೋ ಎಂಟ್ರಿ ಎಂಬ ಬೋರ್ಡ್ ಹಾಕಲಾಗಿದೆ. ಆದರೆ ಈ ಆರೋಪವನ್ನು ಈ ಕೆಫೆಯ ಮಾಲೀಕ ಅಲ್ಲಗಳೆಯುತ್ತಾರೆ. ಈ ಹಿಂದೆ ನಾವು ಭಾರತೀಯರಿಗೆ ಇಲ್ಲಿ ಪ್ರವೇಶ ನೀಡಿದ್ದೇವು ಆದ್ರೆ ಇಲ್ಲಿಗೆ ಬರುವ ವಿದೇಶಿ ಮಹಿಳೆಯರ ಜೊತೆ ಅವರು ಅಸಭ್ಯವಾಗಿ ವರ್ತಿಸಿದ್ದರಿಂದ ಅವರ ಪ್ರವೇಶವನ್ನು ನಿರಾಕರಿಸಲಾಯ್ತು ಎಂಬ ಕಾರಣವನ್ನು ಹೇಳುತ್ತಾರೆ.
4. ಫಾರೆನರ್ಸ್ ಬೀಚ್ ಗೋವಾ: ಗೋವಾ ಎಂದ ಕೂಡಲೇ ನಮಗೆ ವಿದೇಶಿ ಪ್ರವಾಸಿಗರ ನೆನಪೇ ಆಗುತ್ತದೆ. ಭಾರತೀಯರ ನೆಚ್ಚಿನ ಪ್ರವಾಸಿ ತಾಣಗಳಲ್ಲಿ ಗೋವಾ ಕೂಡ ಒಂದು. ಆದ್ರೆ ಗೋವಾದ ಎಲ್ಲಾ ಬೀಚ್ಗಳಲ್ಲಿ ಭಾರತೀಯರಿಗೆ ಪ್ರವೇಶವಿಲ್ಲ. ಕೆಲವು ಬೀಚ್ಗಳಲ್ಲಿ ಮಾತ್ರ ಪ್ರವೇಶವಿದೆ. ಕಾರಣ ಅಲ್ಲಿ ವಿದೇಶಿಗರು ಬಿಂದಾಸ್ ಆಗಿ ಎಂಜಾಯ್ ಮಾಡಲು ಬಿಡುತ್ತಾರೆ. ಬಿಕನಿ ಹಾಗೂ ವಿವಸ್ತ್ರ ಸ್ಥಿತಿಯಲ್ಲಿಯೂ ಕೂಡ ಅಲೆದಾಡಲು ಅವರಿಗೆ ಅನುಮತಿ ಇದೆ. ಹೀಗಾಗಿ ಅವರೊಂದಿಗೆ ಭಾರತೀಯರು ಬೇರೆ ರೀತಿ ವರ್ತಿಸಬಾರದು ಎಂಬ ಕಾರಣಕ್ಕೆ ಕೆಲವು ಬೀಚ್ಗಳಲ್ಲಿ ಭಾರತೀಯರಿಗೆ ನಿಷೇಧವಿದೆ. ಕಾರಣ ಈ ಹಿಂದೆ ಇಂತಹ ಘಟನೆಗಳು ನಡೆದ ಉದಾಹರಣೆಗಳು ಇವೆ.
5. ಯುಎನ್ಒ ಇನ್ ಹೋಟೆಲ್ ಬೆಂಗಳೂರು: ನಮ್ಮದೇ ಬೆಂಗಳೂರಿನಲ್ಲಿರುವ ಯುಎನ್ಒ ಇನ್ ಹೋಟೆಲ್ಗೆ ಭಾರತೀಯರಿಗೆ ಹಿಂದೊಮ್ಮೆ ಪ್ರವೇಶವಿರಲಿಲ್ಲ. ಇಲ್ಲಿ ಕೇವಲ ಜಪಾನಿ ಪ್ರಜೆಗಳಿಗೆ ಮಾತ್ರ ಬರಲು ಅವಕಾಶ ನೀಡಲಾಗುತ್ತಿತ್ತು. ಕೊನೆಗೆ ಸರ್ಕಾರ ಹೋಟೆಲ್ ಹೇರಿದ್ದ ನಿಷೇಧವನ್ನೇ ನಿಷೇಧ ಮಾಡಿತು. ಸದ್ಯ ಈ ಹೋಟೆಲ್ನ್ನು ಓಯೋ ಖರೀದಿ ಮಾಡಿದ್ದು. ಈಗ ಭಾರತೀಯರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.