ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಂದಾಗಿರುವಂತಹ ಬಿಲ್ ಗೇಟ್ಸ್ ಅವರು ಜೀವನದಲ್ಲಿ(Money Tips) ಸಾಧನೆ ಮಾಡಲು ಬೇಕಾಗಿರುವಂತಹ ಕೆಲವು ಟಿಪ್ಸ್ ಗಳನ್ನು ನೀಡಿದ್ದು ಇದರಿಂದ ನೀವು ಕೂಡ ಜೀವನದಲ್ಲಿ ಏನಾದರು ಸಾಧನೆ ಮಾಡಲು ಸಹಾಯವಾಗಬಹುದು.
ಬಿಲ್ ಗೇಟ್ಸ್ ಅವರು ಕೇವಲ ತಮ್ಮ ಆರ್ಥಿಕ ಸಂಪತ್ತಿಗೆ ಮಾತ್ರವಲ್ಲದೆ(Finance tips and tricks) ತಮ್ಮ ಸರಳ ಜೀವನ ಶೈಲಿಗೆ ಹಾಗೂ ಲೋಕೋಪಕಾರಿಗೆ ಪ್ರಖ್ಯಾತರಾಗಿದ್ದಾರೆ. ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಸಾಫ್ಟ್ ವೇರ್ ಕಂಪನಿ ಹೊಂದಿರುವ ಬಿಲ್ ಗೇಟ್ಸ್ ಇವರ ಕೆಲವು ಅಭ್ಯಾಸಗಳನ್ನು ಅಥವಾ ಅವರ ಕೆಲವು ಜೀವನಶೈಲಿ ಪಾಠಗಳನ್ನು ನೀವು ಕೂಡ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಏನಾದರು ಸಾದಿಸಲು ಸಹಾಯವಾಗಬಹುದು.
ಇದೆ ತರಹದ ನೇಮಕಾತಿ,ವಿದ್ಯಾರ್ಥಿವೇತನ,ಕೇಂದ್ರ/ರಾಜ್ಯ ಯೋಜನೆಗಳಿಗಾಗಿ ನಮ್ಮ ಟೆಲಿಗ್ರಾಮ ಚಾನಲ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
Success tips by Bill Gates-ಬಿಲ್ ಗೇಟ್ಸ್ ಅವರ ಸಲಹೆಗಳು:
ಬಿಲ್ ಗೇಟ್ಸ್ ಅವರ ಈ ಕೆಲವು ಅಭ್ಯಾಸಗಳನ್ನು(how to make money) ಅಥವಾ ಸಲಹೆಗಳನ್ನು ನಾವು ಪಾಲಿಸುವುದರಿಂದ ಜೀವನದಲ್ಲಿ ಸಾಧನೆ ಮಾಡಲು ಸಹಾಯವಾಗುತ್ತದೆ. ಈ ಕೆಲವು ಸಲಹೆಗಳು ಇಲ್ಲಿವೆ.
1) ಓದುವ ಹವ್ಯಾಸ
2) ಹಳೆಯ ತಪ್ಪುಗಳಿಂದ ಕಲಿಯುವುದು
3) ಜೀವನದಲ್ಲಿ ಸ್ಪಷ್ಟ ಗುರಿಗಳನ್ನು ಹೊಂದಿರುವುದು
4) ಸಜ್ಜನರ ಸಹವಾಸ ಮಾಡುವುದು
5) ಸರಳ ಅರ್ಥಪೂರ್ಣ ಜೀವನವನ್ನು ನಡೆಸುವುದು
6) ಸ್ಥಿರವಾಗಿ ಪ್ರತಿ ದಿನ ಕೆಲಸ ನಿರ್ವಹಿಸುವುದು.
1) ಓದುವ ಹವ್ಯಾಸ:
ಹೌದು, ಬಿಲ್ ಗೇಟ್ಸ್ ಅವರು ಒಬ್ಬ ಉತ್ತಮ ಓದುಗರಾಗಿದ್ದಾರೆ. ಇತ್ತೀಚಿಗೆ ಅವರು ತಮ್ಮ ಅಧಿಕೃತ ಬ್ಲಾಗ್ ನಲ್ಲಿ ಆಗಾಗ ವಿವಿಧ ಪುಸ್ತಕದ ವಿಮರ್ಶೆಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಹೆಚ್ಚು ಪುಸ್ತಕಗಳನ್ನು ಓದುವುದರಿಂದ ನೀವು ಹೆಚ್ಚು ಜ್ಞಾನವನ್ನು ಪಡೆದುಕೊಳ್ಳಬಹುದು. ಇದರಿಂದ ನಿಮ್ಮ ಯೋಚನಾ ಶಕ್ತಿ ಹೆಚ್ಚುತ್ತದೆ ಮತ್ತು ಸಾಮಾಜಿಕ ಜ್ಞಾನವನ್ನು ಕೂಡ ನೀವು ಪಡೆಯಬಹುದು. ಪುಸ್ತಕ ಓದುವುದರ ಕುರಿತು ಬಿಲ್ ಗೇಟ್ಸ್ ಬಗ್ಗೆ ಹೇಳುವುದಾದರೆ, ಇವರು ವರ್ಷಕ್ಕೆ ಸುಮಾರು 50 ಪುಸ್ತಕಗಳನ್ನು ಓದುತ್ತಾರಂತೆ.
2) ಹಳೆಯ ತಪ್ಪುಗಳಿಂದ ಕಲಿಯುವುದು:
ಬಿಲ್ ಗೇಟ್ಸ್ ಅವರು ಹೇಳುವ ಪ್ರಕಾರ, ನಾವು ನಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು ಹಾಗೂ ಅದರಿಂದ ಕಲಿಯಬೇಕು. ಅದು ನಮ್ಮನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡುತ್ತದೆ ಹಾಗೂ ಮುಂದೆ ಸರಿ ದಾರಿಯಲ್ಲಿ ಹೋಗಲು ಸಹಾಯ ಮಾಡುತ್ತದೆ. ಪ್ರತಿಯೊಬ್ಬರು ತಪ್ಪು ಮಾಡುವುದು ಸಹಜ. ಆದರೆ ಆ ತಪ್ಪನ್ನು ಪುನಃ ಮಾಡದಿರುವುದು ಜಾಣರ ಲಕ್ಷಣ. ಅಷ್ಟೇ ಅಲ್ಲದೆ ನಮ್ಮ ಹಳೆಯ ತಪ್ಪಿನಿಂದ ನಾವು ಏನು ಸರಿ ಮಾಡಿಕೊಳ್ಳಬೇಕು ಎಂಬುದನ್ನು ಯೋಚಿಸಿ ಅಳವಡಿಸಿಕೊಳ್ಳಿಸಬೇಕು.
3) ಜೀವನದಲ್ಲಿ ಸ್ಪಷ್ಟ ಗುರಿಗಳನ್ನು ಹೊಂದಿರುವುದು:
ಬಿಲ್ ಗೇಟ್ಸ್ ಅವರ ಕಠಿಣ ಪರಿಶ್ರಮ, ಗಮನ ಮತ್ತು ಸ್ಥಿತಿಸ್ಥಾಪಕತ್ವದ ಗುಣಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕು. ಜೀವನದಲ್ಲಿ ಸ್ಪಷ್ಟ ಗುರಿಗಳನ್ನು ಹೊಂದಿರುವುದು : ಬಿಲ್ ಗೇಟ್ಸ್ ಅವರು ತಮ್ಮ ಮೈಕ್ರೋಸಾಫ್ಟ್ ಕಂಪನಿ ಬಗ್ಗೆ ಸ್ಪಷ್ಟವಾದ ಗುರಿ ಹೊಂದಿದ್ದರು ಹಾಗೂ ಅದಕ್ಕೆ ಬೇಕಾಗಿರುವ ಕಾರ್ಯತಂತ್ರವನ್ನು ಕಷ್ಟ ಪಟ್ಟು ಸರಿಯಾದ ಮಾರ್ಗದಲ್ಲಿ ಕೆಲಸ ನಿರ್ವಹಿಸಬೇಕು.
4) ಸಜ್ಜನರ ಸಹವಾಸ ಮಾಡುವುದು :
ಹೌದು, ನಾವು ಜೀವನದಲ್ಲಿ ಯಾರ ಸಹಾಯಸ ಮಾಡುತ್ತೇವೆ ಎಂಬುದು ಬಹು ಮುಖ್ಯ ಪಾತ್ರವಹಿಸುತ್ತದೆ. ಆದ್ದರಿಂದ ನಾವು ಜೀವನದ ಗುರಿ ಕಡೆಗೆ, ಯಶಸ್ಸಿನ ಬಗ್ಗೆ ಸದಾ ಚಿಂತಿಸುವ ಮತ್ತು ಒಳ್ಳೆಯ ಆಲೋಚನೆ ಹೊಂದಿರುವ ಜಾಣರ ಜೊತೆ ಸಹಾಯ ಮಾಡುವುದು ಅವಶ್ಯಕ.
5) ಸರಳ ಅರ್ಥಪೂರ್ಣ ಜೀವನವನ್ನು ನಡೆಸುವುದು:
ಸರಳ ಜೀವನ ಹಾಗೂ ಉನ್ನತ ಚಿಂತನೆ ಬಿಲ್ ಗೇಟ್ಸ್ ಅವರ ಗುಣವಾಗಿದೆ. ನೀವು ನೋಡಿರುವ ಹಾಗೆ ಕೋಟ್ಯಧಿಪತಿಗಳಾದ ಸ್ಟೀವ್ ಜಾಬ್ಸ್, ಮಾರ್ಕ್ ಜುಕರ್ಬರ್ಗ್ ಅಥವಾ ಬಿಲ್ ಗೇಟ್ಸ್ರಂತವರು ಸರಳ ಉಡುಗೆ ಹಾಕುವುದು ಸಾಮಾನ್ಯ. ಸರಳ ಜೀವನ ನಡೆಸುವುದು ಕೂಡ ನಮ್ಮ ಯಶಸನ್ನು ತಂದುಕೊಡುತ್ತದೆ.
6) ಸ್ಥಿರವಾಗಿ ಪ್ರತಿ ದಿನ ಕೆಲಸ ನಿರ್ವಹಿಸುವುದು:
ಜೀವನದಲ್ಲಿ ಅತೀ ಮುಖ್ಯವಾಗಿ ಅಳವಡಿಸಿಕೊಳ್ಳುವ ಹವ್ಯಾಸದಲ್ಲಿ ಇದು ಸಹ ಒಂದಾಗಿದೆ ಏಕೆಂದರೆ ಪ್ರತಿ ನಾವು ಸ್ಥಿರವಾಗಿ ತಪ್ಪದೇ ನಮ್ಮ ವೃತ್ತಿ ಜೀವನದ ಕೆಲಸವನ್ನು ಮಾಡಿಕೊಂಡು ಹೋಗಬೇಕು ಒಂದು ದಿನ ಸರಿಯಾಗಿ ಕೆಲಸ ಮಾಡಿ ಮರು ದಿನ ಕೆಲಸವನ್ನೇ ಮಾಡದೇ ಇರುವ ಹಾಗೆ ಮಾಡಬಾರದು ಪ್ರತಿ ದಿನ ಇಂತಿಷ್ಟು ಸಮಯ ಎಂದು ನಿಗದಿಪಡಿಸಿಕೊಂಡು ಆ ದಿನದ ಕೆಲಸಗಳನ್ನು ಮಾಡಿ ಮುಗಿಸಬೇಕು.
7) ಹಣ ಗಳಿಸುವುದರ ಜೊತೆಗೆ ಉಳಿಸಿಕೊಳ್ಳುವ ಹವ್ಯಾಸ ನಿಮಗಿರಲಿ(money saving tips):
ನಾವುಗಳು ಹಣವನ್ನು ಗಳಿಸುವುದರ ಕಡೆಗೆ ಎಷ್ಟು ಗಮನ ಕೊಡುತ್ತೆವೋ ಅದರೆ ಜೊತೆಗೆ ಹಣವನ್ನು ಉಳಿಸುವುದರ ಕಡೆಗೂ ಅಷ್ಟೇ ಗಮನವನ್ನು ಕೋಡಬೇಕು ಅರ್ಥಿಕವಾಗಿ ಸದೃಡರಾಗಲು ಈ ಹವ್ಯಾಸವು ಅತೀ ಮುಖ್ಯವಾಗಿದೆ.
8) ಆದಾಯಕ್ಕೆ ತಕ್ಕಂತೆ ಇರಲಿ ಖರ್ಚು:
ನಿಮಗೆ ಪ್ರತಿ ತಿಂಗಳು ಬರುವ ಆದಾಯ ಇದಕ್ಕೆ ಅನುಗುಣವಾಗಿ ನಿಮ್ಮ ಖರ್ಚು ಈ ಮಿತಿಯ ಒಳಗಡೆಯೇ ಇರುವ ಹಾಗೆ ಮುಂಚಿತವಾಗಿ ಯೋಜನೆಯನ್ನು ರೂಪಿಸಿಕೊಳ್ಳಿ ಅನಗತ್ಯ ವೆಚ್ಚವನ್ನು ಕಡಿತಗೊಳಿಸಿ ಅಗತ್ಯವಿರುವ ವಸ್ತುಗಳ ಖರೀದಿಗೆ ಮಾತ್ರ ಹಣವನ್ನು ಖರ್ಚು ಮಾಡುವುದನ್ನು ರೂಡಿಸಿಕೊಳ್ಳಬೇಕು.