KSOU Admission-ಮನೆಯಲ್ಲೇ ಕುಳಿತು ಓದಿ ಡಿಗ್ರಿ ಸೇರಿದಂತೆ ವಿವಿಧ ಪದವಿಗಳನ್ನು ಪಡೆಯಲು ಅವಕಾಶ

KSOU Admission-ಮನೆಯಲ್ಲೇ ಕುಳಿತು ಓದಿ ಡಿಗ್ರಿ ಸೇರಿದಂತೆ ವಿವಿಧ ಪದವಿಗಳನ್ನು ಪಡೆಯಲು ಅವಕಾಶ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ(KSOU) ದಿಂದ 2024-25 ನೇ ಸಾಲಿನ ಜನವರಿ ಆವೃತ್ತಿಯಲ್ಲಿನ ವಿವಿದ ಪದವಿಗಳಿಗೆ ಅರ್ಹ(Karnataka open University) ಅಭ್ಯಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪ್ರಸ್ತುತ ದಿನಗಳಲ್ಲಿ ವಿದ್ಯಾಭ್ಯಾಸಕ್ಕೆ ಬಹುತೇಕ ಎಲ್ಲಾ ವರ್ಗದ ಜನರು ಹೆಚ್ಚು ಗಮನವನ್ನು ಕೊಡುತ್ತಾರೆ(Open University) ಈ ನಿಟ್ಟಿನಲ್ಲಿ ಕೆಲವು ವೈಯಕ್ತಿಕ ಕಾರಣಗಳಿಂದ ದಿನನಿತ್ಯ ಶಾಲೆಗ ಹೋಗಿ ಕಲಿಯಲು ಸಾಧ್ಯವಾಗದೇ ಇರುವವರು ಈ ಪ್ರವೇಶಾತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಮನೆಯಲ್ಲಿ ಕುಳಿತು ಅಭ್ಯಾಸ ಮಾಡಿ ಪರೀಕ್ಷೆಯನ್ನು(Karnataka open University Admission) ಬರೆದು ವಿವಿಧ ಬಗ್ಗೆಯ ಪದವಿಗಳನ್ನು ಪಡೆಯಲು ಸಾಧ್ಯವಿದ್ದು ಈ ಕುರಿತು ಒಂದಿಷ್ಟು ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಕಟನೆ ವಿವರವನ್ನು ಈ ಕೆಳಗೆ ಪ್ರಕಟಿಸಲಾಗಿದೆ.

Karnataka open University-ಯಾವೆಲ್ಲ ಪದವಿಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ?

  • ಬಿ.ಎ(BA)
  • ಬಿ.ಕಾಂ(Bcom)
  • ಬಿ.ಬಿ.ಎ(BBA)
  • ಬಿ.ಇಡಿ
  • ಬಿ.ಎಸ್.ಡಬ್ಲ್ಯೂ(BSW)
  • ಬಿ.ಲಿಬ್.ಐ.ಎಸ್ ಸಿ(BLIS)
  • ಬಿ.ಎಸ್.ಸಿ(BSC)
  • ಬಿ.ಸಿ.ಎ(BCA)
  • ಎಂ.ಎ(MA)
  • ಎಂ.ಎಸ್.ಡಬ್ಲ್ಯೂ(MSW)
  • ಎಂ.ಬಿ.ಎ(MBA)
  • ಎಂ.ಕಾಂ(Mcom)
  • ಎಂ.ಸಿ.ಎ(MCA)
  • ಎಂ.ಎಲ್.ಸಿ(MLC)

ಇದಲ್ಲದೇ ಪಿಜಿ ಸರ್ಟಿಫಿಕೇಟ್ ಕಾರ್ಯಕ್ರಮಗಳು, ಡಿಪ್ಲೋಮಾ ಶಿಕ್ಷಣ, ಆರು ತಿಂಗಳ ಸರ್ಟಿಫಿಕೇಟ್ ಕಾರ್ಯಕ್ರಮಗಳಿಗೂ ಸಹ ಅರ್ಜಿಯನ್ನು ಆಹ್ವಾನಿಸಲಾಗಿದೆ.

KSOU ವಿಶ್ವವಿದ್ಯಾನಿಲಯದ ಸೌಕರ್ಯಗಳು:

  • ವಿಶಾಲ ಅತ್ಯಾಧಿನಿಕ ಹಾಗೂ ಹಸಿರುಮಯ ಕ್ಯಾಂಪಸ್
  • ಆಧುನಿಕ ಐಶಿಟಿ ತಂತ್ರಜ್ನಾನ ಬೆಂಬಲಿತ ಬೋಧನಾ ಸೌಲಭ್ಯಗಳು.
  • ಅನುಭವಿ ಹಾಗೂ ನುರಿತ ಬೋಧನಾ ಸಿಬ್ಬಂದಿ
  • ಸುಸರ್ಜಿತ ಪ್ರಯೋಗಾಲಯಗಳು.
  • ಸುಸರ್ಜಿತ ಗ್ರಂಥಾಲಯ ಹಾಗೂ ಇಂಟರ್ನೆಟ್ ಸೌಲಭ್ಯಗಳು.
  • ಪ್ರಾದೇಶಿಕ ಕೇಂದ್ರಗಳು ಹಾಗೂ ಕಲಿಕಾರ್ಥಿ ಸಹಾಯ ಕೇಂದ್ರಗಳನ್ನೊಳಗೊಂಡ ಸೇವಾ ವ್ಯವಸ್ಥೆ.
  • ವೃತ್ತಿ ಸಂಬಂಧಿತ ಸಲಹೆ ಹಾಗೂ ನೇಮಕಾತಿಯಲ್ಲಿ ನೆರವು ನೀಡಲಾಗುತ್ತದೆ ಎಂದು ವಿವಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

UGC Certified University- ಯು.ಜಿ.ಸಿ ಯಿಂದ ಮಾನ್ಯತೆಯನ್ನು ಪಡೆದಿರುತ್ತದೆ:

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ(KSOU) ದಿಂದ ಪಡೆಯುವ ಎಲ್ಲಾ ಪದವಿಗಳಿಗೆ ಕೇಂದ್ರ ಸರಕಾರದ ಅಧಿಕೃತ ಯು ಜಿ ಸಿ(UGC) ಮಾನ್ಯತೆಯನ್ನು ಹೊಂದಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Online Application KSOU Admission-2025: ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ:

ಆಸಕ್ತ ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ಮೂಲಕವೇ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

Step-1: ಪ್ರಥಮದಲ್ಲಿ Online Application For KSOU Admission ಇಲ್ಲಿ ಕ್ಲಿಕ್ ಮಾಡಿ ಅಧಿಕೃತ KSOU ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿದ ಬಳಿಕ ಮೊದಲ ಬಾರಿಗೆ ಈ ವೆಬ್ಸೈಟ್ ಪ್ರವೇಶ ಮಾಡುತ್ತಿರುವವರು ಈ ಪೇಜ್ ನಲ್ಲಿ ಕಾಣುವ “Click here for New Registration” ಬಟನ್ ಮೇಲೆ ಕ್ಲಿಕ್ ಮಾಡಿ ಬಳಕೆದಾರ ಐಡಿ ಮತ್ತು ಪಾಸ್ವರ್ಡ ಅನ್ನು ರಚನೆ ಮಾಡಿಕೊಳ್ಳಬೇಕು.

Step-3: ಇದಾದ ಬಳಿಕ Login ಪೇಜ್ ಭೇಟಿ ಮಾಡಿ User Name ಮತ್ತು Password ಅನ್ನು ನಮೂದಿಸಿ Security Code ಅನ್ನು ನಮೂದಿಸಿ Login ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅಗಬೇಕು.

Step-4: ಲಾಗಿನ್ ಅದ ಬಳಿಕ ಇಲ್ಲಿ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಈ ಪೇಜ್ ನಲ್ಲಿ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Required Documents For KSOU Admission-ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲಾತಿಗಳು:

1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ

2) ಪೋಟೋ

3) ಅಂಕಪಟ್ಟಿ

4) ಸಹಿ ಮಾಡಿದ ಪ್ರತಿ

5) ಮೊಬೈಲ್ ನಂಬರ್

KSOU Admission Fee-ಎಷ್ಟು ಶುಲ್ಕವನ್ನು ಪಾವತಿ ಮಾಡಬೇಕು?

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ(KSOU)ದ ಅಧಿಕೃತ ಜಾಲತಾಣದಲ್ಲಿ ಪದವಿವಾರು ನಿಗದಿಪಡಿಸಿರುವ ಶುಲ್ಕದ ವಿವರವಾದ ಮಾಹಿತಿಯ ಕೈಪಿಡಿಯನ್ನು ಪ್ರಕಟಿಸಲಾಗಿದ್ದು ಈ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳು ಈ ಕೆಳಗೆ ವೆಬ್ಸೈಟ್ ಲಿಂಕ್ ನೀಡಲಾಗಿದೆ.

Important links 

  • KSOU Admission Fee-ಶೈಕ್ಷಣಿಕ ಪದವಿವಾರು ಶುಲ್ಕದ ವಿವರವನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ- Download Now
  • KSOU Admission Copy-ಅಧಿಕೃತ ಪ್ರಕಟಣೆ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳುಲು ಇಲ್ಲಿ ಕ್ಲಿಕ್ ಮಾಡಿ- Download Now
  • ಸಹಾಯವಾಣಿ/Helpline- 8690544544

Post a Comment

Previous Post Next Post

Top Post Ad

CLOSE ADS
CLOSE ADS
×