Shakti Scheme: ಶೀಘ್ರದಲ್ಲೇ ಫಲಾನುಭವಿಗಳ ಕೈ ಸೇರಲಿದೆ ಸ್ಮಾರ್ಟ್ ಕಾರ್ಡ್

Shakti Scheme: ಶೀಘ್ರದಲ್ಲೇ ಫಲಾನುಭವಿಗಳ ಕೈ ಸೇರಲಿದೆ ಸ್ಮಾರ್ಟ್ ಕಾರ್ಡ್

ಪ್ರಸ್ತುತ ಕಂಡಕ್ಟರ್‌ಗಳು ಶೂನ್ಯ ಟಿಕೆಟ್‌ಗಳನ್ನು ನೀಡುವ ಮೊದಲು ಮಹಿಳೆಯರು ಗುರುತಿನ ಚೀಟಿ ತೋರಿಸುವುದು ಕಡ್ಡಾಯ ಮಾಡಲಾಗಿದೆ. ಸ್ಮಾರ್ಟ್ ಕಾರ್ಡ್‌ ವಿತರಿಸಿದರೆ, ಗುರುತಿನ ಚೀಟಿಗಳ ಪರಿಶೀಲಿಸುವ ಅಗತ್ಯವಿರುವುದಿಲ್ಲ. ಸರ್ಕಾರವು ಶೀಘ್ರದಲ್ಲೇ ಕಾರ್ಡ್‌ಗಳನ್ನು ವಿತರಿಸಲಿದೆ.ಶಕ್ತಿ ಯೋಜನೆಯನ್ನು ಸರಳೀಕರಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಶೀಘ್ರದಲ್ಲೇ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಿದೆ.

ಯೋಜನೆಯು ರಾಜ್ಯದ ಮಹಿಳೆಯರಿಗೆ ಮಾತ್ರ ಅನ್ವಯಿಸುವುದರಿಂದ, ಮಹಿಳೆಯರು ತಮ್ಮ ಸ್ಥಳೀಯ ವಿಳಾಸಗಳನ್ನು ಹೊಂದಿರುವ ಗುರುತಿನ ಚೀಟಿಯನ್ನು ಹಾಜರುಪಡಿಸಬೇಕಾಗುತ್ತದೆ. ಪರಿಶೀಲನೆಯ ನಂತರ, ಕಂಡಕ್ಟರ್‌ಗಳು ಶೂನ್ಯ ಟಿಕೆಟ್‌ಗಳನ್ನು ನೀಡುತ್ತಿದ್ದಾರೆ. ಈ ಪರಿಶೀಲನೆಗೆ ಸಾಕಷ್ಟು ಸಮಯ ಬೇಕಾಗುತ್ತಿದೆ ಎಂದು ಹಲವು ದೂರುಗಳು ಬಂದಿದ್ದವು.

ಅಲ್ಲದೆ, ಮಹಿಳಾ ಪ್ರಯಾಣಿಕರು ಮತ್ತು ಕಂಡಕ್ಟರ್‌ಗಳ ನಡುವೆ ಘರ್ಷಣೆಗಳೂ ಕೂಡ ನಡೆಯುತ್ತಿವ್ದು, ಕರ್ನಾಟಕದ ನಿವಾಸಿಗಳಲ್ಲದ ಮಹಿಳೆಯರೂ ಕೂಡ ಉಚಿತ ಯೋಜನೆ ಪಡೆಯಲು ಪ್ರಯತ್ನ ನಡೆಸಿದ ನಿದರ್ಶನಗಳು ಕಂಡು ಬಂದಿವೆ.

ಬಸ್ ಮುಂದಿನ ಹಂತಕ್ಕೆ ಪ್ರವೇಶಿಸುವ ಮೊದಲು ಕಂಡಕ್ಟರ್‌ಗಳು ಎಲ್ಲಾ ಪ್ರಯಾಣಿಕರಿಗೆ ಟಿಕೆಟ್‌ಗಳನ್ನು ನೀಡಬೇಕಾಗಿದೆ. ಪೀಕ್ ಅವರ್‌ಗಳಲ್ಲಿ ದಾಖಲೆಗಳ ಪರಿಶೀಲಿಸಿ ಟಿಕೆಟ್ ನೀಡುವುದು ನಿರ್ವಾಹಕರಿಗೆ ಕಷ್ಟವಾಗುತ್ತಿದೆ ಹಾಗೂ ಇದಕ್ಕಾಗಿ ವಾಹವಗಳನ್ನು ಕೆಲವು ನಿಮಿಷಗಳ ಕಾಲ ನಿಲ್ಲಿಸುವ ಅನಿವಾರ್ಯತೆ ಎದುರಾಗುತ್ತಿದೆ. ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸಿದರೆ ಇದು ನಿರ್ವಾಹಕರ ಕೆಲಸವನ್ನು ಸುಲಭವಾಗಿಸುತ್ತದೆ. ಅಲ್ಲದೆ, ಒಟ್ಟು ಫಲಾನುಭವಿಗಳ ಬಗ್ಗೆ ಸ್ಪಷ್ಟ ಚಿತ್ರಣ ಕೂಡ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.

ಜೂನ್ 11, 2023 ರಿಂದ, ಶಕ್ತಿ ಯೋಜನೆ ಪ್ರಾರಂಭವಾಗಿದ್ದು, ಕಳೆದ ವರ್ಷ ಡಿಸೆಂಬರ್‌ವರೆಗೆ ಯೋಜನೆಯಡಿಯಲ್ಲಿ 356 ಕೋಟಿ ಮಹಿಳೆಯರು ಸರ್ಕಾರಿ ಬಸ್ ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಇದರ ಟಿಕೆಟ್ ಮೌಲ್ಯ 8,598 ಕೋಟಿ ರೂ. ಆಗಿದೆ.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಶಕ್ತಿ ಯೋಜನೆಗೆ ಮಹಿಳೆಯರಿಂದ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಯೋಜನೆಯೊಂದಿಗೆ ಮಹಿಳಾ ಸವಾರರಷ್ಟೇ ಅಲ್ಲ, ಎಲ್ಲಾ ನಾಲ್ಕು ಬಸ್ ನಿಗಮಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮತ್ತು ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ (ಬಿಎಂಟಿಸಿ)ಗಳಲ್ಲು ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಕಂಡಕ್ಟರ್‌ಗಳು ಶೂನ್ಯ ಟಿಕೆಟ್‌ಗಳನ್ನು ನೀಡುವ ಮೊದಲು ಮಹಿಳೆಯರು ಗುರುತಿನ ಚೀಟಿ ತೋರಿಸುವುದು ಕಡ್ಡಾಯ ಮಾಡಲಾಗಿದೆ. ಸ್ಮಾರ್ಟ್ ಕಾರ್ಡ್‌ ವಿತರಿಸಿದರೆ, ಗುರುತಿನ ಚೀಟಿಗಳ ಪರಿಶೀಲಿಸುವ ಅಗತ್ಯವಿರುವುದಿಲ್ಲ. ಸರ್ಕಾರವು ಶೀಘ್ರದಲ್ಲೇ ಕಾರ್ಡ್‌ಗಳನ್ನು ವಿತರಿಸಲಿದೆ ಎಂದು ತಿಳಿಸಿದ್ದಾರೆ.

Post a Comment

Previous Post Next Post

Top Post Ad

CLOSE ADS
CLOSE ADS
×