'ಕುಸುಮ್ ಬಿ' ಯೋಜನೆ ರೈತರು ಸೋಲಾರ್‌ ಪಂಪ್‌ ಅಳವಡಿಸಲು ಸಬ್ಸಿಡಿ, ವಿವರ

'ಕುಸುಮ್ ಬಿ' ಯೋಜನೆ ರೈತರು ಸೋಲಾರ್‌ ಪಂಪ್‌ ಅಳವಡಿಸಲು ಸಬ್ಸಿಡಿ, ವಿವರ

ಕರ್ನಾಟಕ ಸರ್ಕಾರ ಸೌರಶಕ್ತಿ ಬಳಕೆ ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ರೈತರು ಸೋಲಾರ್ ಪಂಪ್‌ಸೆಟ್ ಅಳವಡಿಕೆ ಮಾಡಿಕೊಳ್ಳಲು 'ಕುಸುಮ್ ಬಿ' ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ರೈತರು ಸಬ್ಸಿಡಿ ದರದಲ್ಲಿ ಸೋಲಾರ್ ಪಂಪ್‌ಸೆಟ್ ಅಳವಡಿಕೆ ಮಾಡಿಕೊಳ್ಳಬಹುದು. ಇದರಿಂದಾಗಿ ಸಂಪ್ರದಾಯಿಕ ವಿದ್ಯುತ್ ಮೇಲಿನ ಅವಲಂಬನೆ ಕಡಿಮೆಯಾಗಲಿದೆ.

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ 'ಕುಸುಮ್ ಬಿ' ಯೋಜನೆಯ ಕುರಿತು ಮಾಹಿತಿ ನೀಡಿದೆ. ನೋಂದಣಿ ಹೇಗೆ? ಎಂದು ಮಾಹಿತಿ ನೀಡಿದೆ. ನೋಂದಣಿ ವೇಳೆ ರೈತರಿಗೆ ಸಮಸ್ಯೆ ಉಂಟಾದರೆ ಅದನ್ನು ಪರಿಹಾರ ಮಾಡಲು ಸಹಾಯವಾಣಿಯನ್ನು ಸಹ ಆರಂಭಿಸಿದೆ.

ರಾಜ್ಯ ಸರ್ಕಾರದಿಂದ ರೈತರಿಗೆ ಹಗಲು ವೇಳೆಯಲ್ಲಿ ನೀರಾವರಿ ಸೌಕರ್ಯವನ್ನು ಒದಗಿಸುವ ಮಹತ್ವಾಕಾಂಕ್ಷಿ ಸೋಲಾರ್ ಪಂಪ್‌ಸೆಟ್ ಯೋಜನೆ 'ಕುಸುಮ್ ಬಿ' ಆಗಿದೆ.

ರೈತರಿಗೆ ಸೋಲಾರ್ ಪಂಪ್‌ಸೆಟ್‌; ಸರ್ಕಾರದ ಮಹತ್ವದ ಆದೇಶ  ಕುಸುಮ್-ಬಿ ಯೋಜನೆ

* ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್ ಅವಲಂಬನೆಯನ್ನು ಕಡಿಮೆ ಮಾಡಿ, ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಲು ಕುಸುಮ್-ಬಿ ಯೋಜನೆ ರೂಪಿಸಲಾಗಿದೆ.

* ಕೃಷಿ ಕ್ಷೇತ್ರವನ್ನು ಲಾಭದಾಯಕವಾಗಿಸಲು, ಸೌರಶಕ್ತಿ ಬಳಕೆಯ ಉತ್ತೇಜನಕ್ಕೆ ಸರ್ಕಾರದಿಂದ ಶೇ 80ರಷ್ಟು ಹೆಚ್ಚಿನ ಸಹಾಯಧನ ನೀಡಲಾಗುತ್ತಿದೆ.

* ಕುಸುಮ್-ಬಿ ಯೋಜನೆಯಡಿ ಜಾಲ ಮುಕ್ತ ಸೌರ ಕೃಷಿ ಪಂಪ್‌ಸೆಟ್ ಅಳವಡಿಸಲು ಒತ್ತು ನೀಡಿ ರಾಜ್ಯ ಸರ್ಕಾರವು ಸಬ್ಸಿಡಿ ಮೊತ್ತವನ್ನು ಶೇ 30 ರಿಂದ ಶೇ 50ಕ್ಕೆ ಹೆಚ್ಚಿಸಿದೆ.

* ಕುಸುಮ್-ಬಿ ಯೋಜನೆಯಡಿ ರೈತರಿಗೆ ಸೌರ ಫಲಕಗಳು, ಸಬ್‌ಮರ್ಸಿಬಲ್/ ಸರ್ಫೇಸ್ ಡಿಸಿ ಪಂಪ್‌ಗಳು, ಮೌಂಟಿಂಗ್ ಸ್ಟ್ರಕ್ಚರ್, ಪ್ಯಾನಲ್ ಬೋರ್ಡ್, ಪೈಪ್ ಮತ್ತು ಕೇಬಲ್ ಸರಬರಾಜು ಮಾಡಲಾಗುತ್ತದೆ.

PM Surya Ghar Scheme: ಮನೆ ಮೇಲೆ ಸೋಲಾರ್ ಅಳವಡಿಕೆ, ಬೆಸ್ಕಾಂ ಕೊಡುವ ಸಬ್ಸಿಡಿ ಎಷ್ಟು? ಅರ್ಜಿ ಸಲ್ಲಿಸಿ

* ಸೌರ ಪಂಪ್‌ಸೆಟ್‌ಗಳ ಸ್ಥಾಪನೆ ಸುಲಭವಾಗಿದ್ದು, ದೀರ್ಘಕಾಲ ಬಾಳಿಕೆ ಬರುವ ಕಾರಣದಿಂದ ಗ್ರಾಮೀಣ ಪ್ರದೇಶಗಳಲ್ಲೂ ಸೌರ ತಂತ್ರಜ್ಞಾನ ಹೆಚ್ಚು ಜನಪ್ರಿಯವಾಗುತ್ತಿದೆ.

* ಸೌರ ಪಂಪ್‌ಸೆಟ್ ಬಳಕೆಯಿಂದ ಸುಮಾರು 8 ಗಂಟೆಗಳ ಕಾಲ ಹಗಲಿನ ವೇಳೆಯಲ್ಲಿ ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಪೂರೈಕೆಯಾಗಲಿದೆ.

* ಕೃಷಿ ಭೂಮಿಯಲ್ಲಿ ಅಳವಡಿಸಲಾಗುವ ಸೋಲಾರ್ ಪಂಪ್‌ಗಳನ್ನು 5 ವರ್ಷಗಳ ಕಾಲ ಪೂರೈಕೆದಾರರೇ ಉಚಿತವಾಗಿ ನಿರ್ವಹಣೆ ಮಾಡಲಿದ್ದಾರೆ.

* ರೈತ ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುತ್ತದೆ.

* ಅನಧಿಕೃತ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವ (UNIP) ಯೋಜನೆಯಡಿ ರೂ. 50 ಗಿಂತ ಹೆಚ್ಚಿನ ಮೊತ್ತವನ್ನು ಪಾವತಿಸಿ ರೈತರು ಅರ್ಜಿ ನೋಂದಾಯಿಸಿದ್ದರೆ, ಇಂಥವರ ನೀರಾವರಿ ಪಂಪ್‌ಸೆಟ್‌ಗೆ ಮೊದಲ ಆದ್ಯತೆಯನ್ನು ನೀಡಲಾಗುವುದು.

ಸೋಲಾರ್ ಪಂಪ್‌ಸೆಟ್ ಅಳವಡಿಸಲು ರಾಜ್ಯ ಸರ್ಕಾರದ ಸಹಾಯಧನ, ಕೇಂದ್ರ ಸರ್ಕಾರದ ಸಹಾಯಧನ ಹಾಗೂ ರೈತ ಫಲಾನುಭವಿಗಳ ವಂತಿಗೆಯ ವಿವರಗಳು. ನೋಂದಣಿಗಾಗಿ ರೈತರು ತಮ್ಮ ಆಧಾರ್, ಆರ್‌ಟಿಸಿ ಮತ್ತು ಬ್ಯಾಂಕ್ ವಿವರಗಳೊಂದಿಗೆ ಆನ್‌ಲೈನ್‌ ಪೋರ್ಟಲ್ https://souramitra.com ಮೂಲಕ ನೋಂದಾಯಿಸಿಕೊಳ್ಳಬಹುದು.

ರೈತರ ನೋಂದಣಿ ಸಮಸ್ಯೆ ಪರಿಹರಿಸಲು ಕ್ರೆಡಲ್‌ನಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದ್ದು ದೂರವಾಣಿ ಸಂಖ್ಯೆ 080-22202100 ಸಂಪರ್ಕಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಸಂಪರ್ಕಿಸಿ, ದೂರವಾಣಿ ಸಂಖ್ಯೆ 0836-2222535. hescom@gmail.com

Post a Comment

Previous Post Next Post

Top Post Ad

CLOSE ADS
CLOSE ADS
×