Kisan ID Card-ಪಿಎಂ ಕಿಸಾನ್ ಹಣ ಪಡೆಯಲು ನೂತನ ಐಡಿ ಕಾರ್ಡ! ಇಲ್ಲಿದೆ ಸಂಪೂರ್ಣ ವಿವರ

Kisan ID Card-ಪಿಎಂ ಕಿಸಾನ್ ಹಣ ಪಡೆಯಲು ನೂತನ ಐಡಿ ಕಾರ್ಡ! ಇಲ್ಲಿದೆ ಸಂಪೂರ್ಣ ವಿವರ

pm kisan ID Card-ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಹಣ ಪಡೆಯಲು ಹಾಗೂ ಹೊಸದಾಗಿ ಅರ್ಜಿಯನ್ನು ಸಲ್ಲಿಸಲು ಕೇಂದ್ರ ಸರಕಾರವು ಹೊಸ ಕಿಸಾನ್ ಪೆಹಚಾನ್ ಕಾರ್ಡ(Kisan ID Card) ಅನ್ನು ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ.

ಇದಕ್ಕೆ ಕಿಸಾನ್ ಪೆಹಚಾನ್ ಕಾರ್ಡ(Kisan ID Card) ಎಂದು ಹೆಸರನ್ನು ಸೂಚಿಸಲಾಗಿದ್ದು ಪ್ರಯೋಗಿಕವಾಗಿ ಕೆಲವು ರಾಜ್ಯಗಳಲ್ಲಿ ಮಾತ್ರ ಪ್ರಸ್ತುತ ಜಾರಿಗೆ ತರಲಾಗಿದೆ, ಇನ್ನು ಮುಂದು ಹೊಸದಾಗಿ ಪಿಎಂ ಕಿಸಾನ್ ಯೋಜನೆಯಡಿ ಅರ್ಥಿಕ ನೆರವು ಪಡೆಯಲು ಅರ್ಜಿ ಸಲ್ಲಿಸಲಿ ಈ ಐಡಿಯನ್ನು ಹೊಂದಿರಬೇಕು.

ಪ್ರಸ್ತುತ ಪ್ರತಿ ತಿಂಗಳು ಲಕ್ಷಕ್ಕೂ ಅಧಿಕ ಅರ್ಜಿಗಳು ಪಿಎಂ ಕಿಸಾನ್ ಯೋಜನೆಯಡಿ(PM-Kisan) ನೋಂದಣಿಯನ್ನು ಮಾಡಿಕೊಳ್ಳುತ್ತಿದ್ದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಈ ಯೋಜನೆಯ ಹಣ ಪಡೆಯುವುದನ್ನು ತಪ್ಪಿಸಲು ಈ ಹೊಸ ನಿಯಮವನ್ನು ಕೇಂದ್ರ ಸರಕಾರವು ಪ್ರಯೋಗಿಕವಾಗಿ ಪ್ರಥಮ ಹಂತದಲ್ಲಿ ದೇಶದ ಕೆಲವು ಆಯ್ದ ರಾಜ್ಯಗಳಲ್ಲಿ ಜಾರಿಗೆ ತಂದಿದ್ದು ಮುಂದಿನ ದಿನಗಳಲ್ಲಿ ದೇಶಾದ್ಯಂತ ವಿಸ್ತರಣೆ ಮಾಡುವ ಯೋಜನೆಯನ್ನು ಹಾಕಿಕೊಂಡಿದೆ.

PM-Kisan ID Card-ಏಕೆ ಈ ಕ್ರಮ ಜಾರಿಗೆ ತರಲಾಗಿದೆ:

ಒಂದು ಅಂಕಿ-ಅಂಶಗಳ ಪ್ರಕಾರ ಕೆಲವು ರಾಜ್ಯಗಳಲ್ಲಿ ಅನದಿಕೃತವಾಗಿ ರೈತರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಿಎಂ ಕಿಸಾನ್ ಯೋಜನೆಯಡಿ ಹಣ ಪಡೆಯುವವರ ಸಂಖ್ಯೆ ಗಣನೀಯವಾಗಿ ದಿನೇ ದಿನೇ ಏರಿಕೆಯಾಗುತ್ತಿರುವುದನ್ನು ಗಮನಿಸಿರುವ ಕೇಂದ್ರವು ಈ ನಿಯಮ ಜಾರಿ ಮಾಡುವುದರ ಮೂಲಕ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ಪಡೆಯುವವರಿಗೆ ಕಡಿವಾಣ ಹಾಕುವ ಯೋಜನೆಯನ್ನು ರೂಪಿಸಿಕೊಂಡಿದೆ.

ಕಿಸಾನ್ ಪೆಹಚಾನ್ ಕಾರ್ಡ(Kisan ID Card) ಹೇಗಿರಲಿದೆ:

ಇದು ಸಂಪೂರ್ಣ ಆಧಾರ್ ಕಾರ್ಡ ರೀತಿಯಲ್ಲೇ ಡಿಜಿಟಲ್ ಮಾದರಿಯ ಕಾರ್ಡ ಇದಾಗಿದ್ದು ಇದರಲ್ಲಿ ರೈತರ ಜಮೀನಿನ ವಿವರ ಮತ್ತು ವೈಯಕ್ತಿಕ ವಿವರವನ್ನು ದಾಖಲಿಸಿರಲಾಗುತ್ತದೆ ಇದರಿಂದ ನೈಜ ರೈತರನ್ನು ಗುರುತಿಸಲು ಈ ಕಾರ್ಡನ ದತ್ತಾಂಶ ಸರಕಾರಕ್ಕೆ ನೆರವು ನೀಡಲಿದೆ.

Digital Agriculture Mission Yojana-ಪ್ರಯೋಗಿಕವಾಗಿ 10 ರಾಜ್ಯಗಳಲ್ಲಿ ಜಾರಿ:

ಪ್ರಥಮ ಹಂತದಲ್ಲಿ ಈ ನಿಯಮವನ್ನು ದೇಶದ 10 ರಾಜ್ಯಗಳಲ್ಲಿ ಕೇಂದ್ರದಿಂದ ಜಾರಿಗೆ ತರಲಾಗಿದ್ದು ಇವುಗಳ ಪಟ್ಟಿ ಹೀಗಿದೆ: ಆಂಧ್ರಪ್ರದೇಶ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ಉತ್ತರ ಪ್ರದೇಶ. ಈ ರಾಜ್ಯಗಳು ದೇಶದ ಪಿಎಂ-ಕಿಸಾನ್ ಫಲಾನುಭವಿಗಳಲ್ಲಿ 84% ಕ್ಕಿಂತ ಹೆಚ್ಚು ಪಾಲನ್ನು ಹೊಂದಿದ್ದು ಅಧಿಕ ರೈತರನ್ನು ಈ ರಾಜ್ಯಗಳು ಹೊಂದಿವೆ.

Karnataka-ನಮ್ಮ ರಾಜ್ಯದಲ್ಲಿ ಜಾರಿಯಲ್ಲಿಲ್ಲ:

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ(Kisan samma nidhi) ನಮ್ಮ ರಾಜ್ಯದಲ್ಲಿ ಅರ್ಥಿಕ ನೆರವು ಪಡೆಯುತ್ತಿರುವ ಫಲಾನುಭವಿ ರೈತರು ಈ ಹೊಸ ನಿಯಮದ ಕುರಿತು ಗೊಂದಲ ಪಡುವ ಅವಶ್ಯಕತೆ ಇರುವುದಿಲ್ಲ ಏಕೆಂದರೆ ಪ್ರಸ್ತುತ ಈ ಹೊಸ ನಿಯಮವು ನಮ್ಮ ರಾಜ್ಯಕ್ಕೆ ಅನ್ವಯಿಸುವುದಿಲ್ಲ.

Digital Agriculture Mission-ಕಿಸಾನ್ ಐಡಿ ಮತ್ತು ಡಿಜಿಟಲ್ ಕೃಷಿ ಮಿಷನ್

ಕಿಸಾನ್ ಪೆಹಚಾನ್ ಪತ್ರವು ಆಧಾರ್‌ನಂತಹ ವಿಶಿಷ್ಟ ಡಿಜಿಟಲ್ ಗುರುತಾಗಿದ್ದು, ಇದನ್ನು ರಾಜ್ಯದ ಭೂ ದಾಖಲೆ ವ್ಯವಸ್ಥೆಗೆ ಲಿಂಕ್ ಮಾಡಲಾಗುತ್ತದೆ. ಇದು ರೈತರ ಜನಸಂಖ್ಯಾ ಮಾಹಿತಿ, ಬೆಳೆದ ಬೆಳೆಗಳು ಮತ್ತು ಭೂ ಮಾಲೀಕತ್ವದ ಮಾಹಿತಿಯನ್ನು ಡಿಜಿಟಲ್ ಮಾದರಿಯಲ್ಲಿ ಸಂಗ್ರಹಣೆ ಮಾಡಲಾಗುತ್ತದೆ. ಈ ಡೇಟಾವನ್ನು ಕೇಂದ್ರ ಸರ್ಕಾರದ ಡಿಜಿಟಲ್ ಕೃಷಿ ಮಿಷನ್‌ನ ಭಾಗವಾಗಿರುವ ರೈತ ನೋಂದಣಿಯಲ್ಲಿ ಸಂಗ್ರಹಿಸಲಾಗುತ್ತದೆ.

ಡಿಜಿಟಲ್ ಕೃಷಿ ಮಿಷನ್ ಯೋಜನೆಯಡಿಯಲ್ಲಿ ಕೃಷಿ ಕ್ಷೇತ್ರದಲ್ಲಿ ಡಿಜಿಟಲ್ ಮೂಲಸೌಕರ್ಯವನ್ನು ಒದಗಿಸಲು ಕೇಂದ್ರ ಸರಕಾರವು ಈ ಯೋಜನೆಯನ್ನು ಜಾರಿಗೆ ತಂದಿದ್ದು, ಮಾರ್ಚ್ 2025 ರ ಒಳಗಾಗಿ 6 ಕೋಟಿ ರೈತರಿಗೆ ಈ ಗುರುತಿನ ಚೀಟಿಗಳನ್ನು ವಿತರಣೆ ಮಾಡುವ ಗುರಿಯನ್ನು ಹಾಕಿಕೊಂಡಿದೆ.

ಪಿ ಎಂ ಕಿಸಾನ್ ಯೋಜನೆ ವೆಬ್ಸೈಟ್-Click here

Post a Comment

Previous Post Next Post

Top Post Ad

CLOSE ADS
CLOSE ADS
×