Job Fair: ಬೆಂಗಳೂರಿನಲ್ಲಿ ಜನವರಿ 7 & 8ರಂದು ಉದ್ಯೋಗ ಮೇಳ; ನೋಂದಣಿ ಮಾಡಿಕೊಳ್ಳೋದೇಗೆ ತಿಳಿಯಿರಿ

Job Fair: ಬೆಂಗಳೂರಿನಲ್ಲಿ ಜನವರಿ 7 & 8ರಂದು ಉದ್ಯೋಗ ಮೇಳ; ನೋಂದಣಿ ಮಾಡಿಕೊಳ್ಳೋದೇಗೆ ತಿಳಿಯಿರಿ

Job Fair: ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು 2025ರ ಜನವರಿ 7 ಹಾಗೂ 8ರಂದು ಬೆಂಗಳೂರಿನಲ್ಲಿ ಉದ್ಯೋಗ ಮೇಳವನ್ನು ಆಯೋಜನೆ ಮಾಡಿದೆ. ಹಾಗಾದರೆ ಆಸಕ್ತರು ತರಬೇಕಾದ ಪ್ರಮುಖ ದಾಖಲೆಗಳು ಯಾವುವು ಹಾಗೂ ಹಾಗೂ ನೋಂದಣಿ ಮಾಡಿಕೊಳ್ಳುವುದೇಗೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ವಿದ್ಯಾರ್ಹತೆ, ಕೌಶಲ್ಯಕ್ಕೆ ಅನುಗುಣವಾಗಿ ಉದ್ಯೋಗ ಸಿಗಬೇಕು ಎಂದು ಹುಡುಕಾಟದಲ್ಲಿರುವವರಿಗೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಗುಡ್‌ ನ್ಯೂಸ್‌ ನೀಡಿದೆ. ಈ ನಿಗಮವು 2025ನೇ ಸಾಲಿನ ಮೊದಲ ಉದ್ಯೋಗ ಮೇಳವನ್ನು ಬೆಂಗಳೂರಿನಲ್ಲಿ ಆಯೋಜನೆ ಮಾಡಿದೆ. ಜನವರಿ 7 ಮತ್ತು 8ರಂದು ನಗರದ ಶಾಂತಿನಗರದಲ್ಲಿರುವ ಆಸ್ಟಿನ್‌ ಟೌನ್‌ನ ನಂದನ್‌ ಫುಟ್‌ಬಾಲ್‌ ಮೈದಾನದಲ್ಲಿ ಉದ್ಯೋಗ ಮೇಳ ನಡೆಯಲಿದೆ.

Job Fair in Bengaluru on January 7 and 8 2025 know details

ಈ ಉದ್ಯೋಗ ಮೇಳದಲ್ಲಿ ಬೆಂಗಳೂರಿನ ದೊಡ್ಡ ದೊಡ್ಡ ಕಂಪನಿಗಳು ಭಾಗಿಯಾಗಲಿವೆ. ಮೇಳದಲ್ಲಿ ಆರಂಭಿಕ ಹಂತದ ಮಾಹಿತಿ ಸಂಗ್ರಹ, ಅಭ್ಯರ್ಥಿಗಳ ಕೌಶಲ, ಜ್ಞಾನ, ಅನುಭವ ಆಧರಿಸಿ ನಂತರ ಉದ್ಯೋಗ ನೀಡಲಿವೆ. ಆಸಕ್ತರು ನೋಂದಣಿ ಮಾಡಿಸಿಕೊಳ್ಳಲು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಅವಕಾಶ ಕಲ್ಪಿಸಿದೆ. 2025ರ ಜನವರಿ 7 ಮತ್ತು 8 ಎರಡು ದಿನವೂ ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರಗೆ ಉದ್ಯೋಗ ಮೇಳ ನಡೆಯಲಿದೆ. ಶಾಂತಿನಗರ ಶಾಸಕ ಎನ್‌.ಎ.ಹ್ಯಾರಿಸ್‌ ಅವರ ನೇತೃತ್ವದಲ್ಲಿಯೇ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

2008ರಲ್ಲಿ ಸ್ಥಾಪಿಸಲಾದ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಕರ್ನಾಟಕ ಸರ್ಕಾರದ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಆಶ್ರಯದಲ್ಲಿ, ವಾರ್ಷಿಕವಾಗಿ 60,000ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಅಲ್ಪಾವಧಿಯ ವೃತ್ತಿಪರ ತರಬೇತಿಯನ್ನ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ್ ಯೋಜನೆ (PMKKY) ಮತ್ತು ಕೌಶಲ್ಯ ಅಭಿವೃದ್ಧಿಗೆ ರಾಜ್ಯದ ಪ್ರಮುಖ ಯೋಜನೆಯಾದ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ (CMKKY) ಅಡಿಯಲ್ಲಿ ನೀಡಲಾಗುತ್ತಿದೆ.

 

ರಾಜ್ಯದಾದ್ಯಂತ 800ಕ್ಕೂ ಹೆಚ್ಚು ಮಾನ್ಯತೆ ಪಡೆದಿರುವ ತರಬೇತಿ ಕೇಂದ್ರಗಳ ಮೂಲಕ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಆಟೋಮೋಟಿವ್, ಐಟಿ-ಐಟಿ.ಇ.ಎಸ್, ಲಾಜಿಸ್ಟಿಕ್ಸ್, ಅಪಾರೆಲ್ ಮತ್ತು ಎಲೆಕ್ಟ್ರಾನಿಕ್ಸ್ ಸೇರಿದಂತೆ ಹಲವಾರು ವಲಯಗಳಲ್ಲಿ ಕೌಶಲ್ಯ ತರಬೇತಿಯನ್ನು ನೀಡುತ್ತಿದೆ. ಜೊತೆಗೆ ರಾಜ್ಯಾದ್ಯಂತ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಕ್ಷೇತ್ರಗಳಲ್ಲಿ ವಿಶೇಷ ಯೋಜನೆಗಳನ್ನು ವಿನ್ಯಾಸಗೊಳಿಸಿ ಅನುಷ್ಠಾನಗೊಳಿಸುತ್ತದೆ. ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕಛೇರಿಗಳ ಮೂಲಕ ಈ ಕಾರ್ಯಕ್ರಮಗಳಿಗೆ ಒತ್ತು ನೀಡಿ ಮೇಲ್ವಿಚಾರಣೆ ಮಾಡುತ್ತಿದೆ.

ಇನ್ನು ಮಾನ್ಯತೆ ಪಡೆದ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ ಕೇಂದ್ರಗಳಲ್ಲಿ ಉದ್ಯಮಗಳ ಬೇಡಿಕೆಗನುಗುಣವಾಗಿ ತರಬೇತಿ ಕೊಲಾಗುತ್ತದೆ. ತರಬೇತಿಯ ಬಳಿಕ ಮೌಲ್ಯಮಾಪನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಕೆ.ಎಸ್.ಡಿ.ಸಿ.ಯು ಈ ಯೋಜನೆಯಡಿಯಲ್ಲಿ ಅಭ್ಯರ್ಥಿಗಳಿಗೆ ತರಬೇತಿಯ ನಂತರ ಉದ್ಯೋಗಾವಕಾಶವನ್ನು ಒದಗಿಸುತ್ತಿದೆ.

ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸ್ಪರ್ಧಿಸಲು ಕರ್ನಾಟಕದ ಜನತೆಯನ್ನು ಸಿದ್ಧಗೊಳಿಸಲು ವಿಶ್ವದ ಉದ್ಯಮ, ಶೈಕ್ಷಣಿಕ ಮತ್ತು ಇತರೆ ಸಾರ್ವಜನಿಕ ಸಂಸ್ಥೆಗಳೊoದಿಗೆ ಕೈ ಜೋಡಿಸಿ ರಾಜ್ಯದ ಕೌಶಲ್ಯ ಕೊರತೆಯ ಅಂತರವನ್ನು ಕಡಿಮೆ ಮಾಡಲು ಅಲ್ಪಾವಧಿಯ ವೃತ್ತಿಪರ ತರಬೇತಿ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೆ.ಎಸ್.ಡಿ.ಸಿ. ನೀಡುತ್ತಿದೆ.

ಯಾರೆಲ್ಲ ನೋಂದಣಿ ಮಾಡಿಕೊಳ್ಳಬಹದು?: ಉದ್ಯೋಗ ಮೇಳಗಳನ್ನು ಅವರವರ ಕೌಶಲದ ಆಧಾರದ ಮೇಲೆ ನಡೆಸಲಾಗುತ್ತದೆ. ಉದ್ಯೋಗ ಮೇಳದಲ್ಲಿ ವಿವಿಧ ಪದವೀಧರರು, ಡಿಪ್ಲೊಮಾ, ಐಟಿಐ ಶಿಕ್ಷಣ ಪಡೆದವರು ಇತರೆ ಪದವಿ ಮುಗಿಸಿದವರು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ, ಉದ್ಯೋಗದಾತರೂ ಕೂಡ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

https://udyogamela.skillconnect.kaushalkar.com/BENGALURUURBAN/CandidateRegistration/2024-25 ಲಿಂಕ್‌ ಕ್ಲಿಕ್‌ ಮಾಡಿ ಉದ್ಯೋಗ ಮೇಳಕ್ಕೆ ನೋಂದಣಿ ಮಾಡಿಸಿಕೊಳ್ಳಬಹುದು. ಉದ್ಯೋಗ ಮೇಳಕ್ಕಾಗಿ ಅಭ್ಯರ್ಥಿಗಳ ನೋಂದಣಿ ನಮೂನೆಯನ್ನು ನೀಡಲಾಗಿದೆ. ಅಲ್ಲಿ ನಿಮ್ಮ ವಿವರಗಳನ್ನು ಸಲ್ಲಿಸಬೇಕು. ಉದ್ಯೋಗ ಮೇಳ ಕುರಿತು ಹೆಚ್ಚಿನ ಮಾಹಿತಿಗಾಗಿ 1800 599 9918 ವಿಸ್ತರಣಾ ಸಂಖ್ಯೆ(5)ಗೆ ಸಂಪರ್ಕಿಸಿ ಅಥವಾ udyogamela.ksdc@karnataka.gov.in ಗೆ ಇಮೇಲ್‌ಗೆ ಮಾಹಿತಿ ನೀಡಿ ವಿವರಗಳನ್ನು ಪಡೆಯಬಹುದಾಗಿದೆ.

Post a Comment

Previous Post Next Post

Top Post Ad

CLOSE ADS
CLOSE ADS
×