ರಾಜ್ಯ ಸರಕಾರದಿಂದ ಕೊಳವೆ ಬಾವಿ(borewell) ಕೊರೆಸುವುದರ ಮಾರ್ಗಸೂಚಿ ಕುರಿತು ಮಹತ್ವದ ಬದಲಾವಣೆ ಜಾರಿಗೆ ಅನುಮೋದನೆಯನ್ನು ನೀಡಿದ್ದು, ಕರ್ನಾಟಕ ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ ತಿದ್ದುಪಡಿ ಅಧಿನಿಯಮಕ್ಕೆ ಅಧಿಕೃತವಾಗಿ ಅನುಮೋದನೆಯನ್ನು ನೀಡಿದೆ.
ಈ ತಿದ್ದುಪಡಿ ಅಧಿನಿಯಮದ ಪ್ರಕಾರ ಇನ್ನು ಮುಂದೆ ರಾಜ್ಯದ ಯಾವುದೇ ಭಾಗದಲ್ಲಿ ಬೋರ್ ವೆಲ್ ಕೊರೆಸಲು ಸ್ಥಳೀಯ ಪ್ರಾಧಿಕಾರಗಳ ಅನುಮತಿ ಪಡೆಯುವುದನ್ನು (Permission for drilling borewell) ಕಡ್ಡಾಯಗೊಳಿಸಲಾಗಿದೆ.
ಕರ್ನಾಟಕ ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ ತಿದ್ದುಪಡಿ ಅಧಿನಿಯಮದಲ್ಲಿ ಯಾವೆಲ್ಲ ಅಂಶಗಳನ್ನು ಉಲ್ಲೇಖಿಸಲಾಗಿದೆ ಎನ್ನುವ ಮಾಹಿತಿಯನ್ನು ಹಾಗೂ ಅಧಿಕೃತ ಅಧಿನಿಯಮದ ಪ್ರತಿಗಳನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.
Borewell Permission News-ಬೋರ್ ವೆಲ್ ಕೊರೆಸಲು ಸ್ಥಳೀಯ ಪ್ರಾಧಿಕಾರಗಳ ಅನುಮತಿ ಕಡ್ಡಾಯ ತಪ್ಪಿದ್ದಲ್ಲಿ ದಂಡ:
ಕರ್ನಾಟಕ ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ ತಿದ್ದುಪಡಿ ಅಧಿನಿಯಮ ಸಂಕ್ಷೀಪ್ತ ವಿವರ ಹೀಗಿದೆ:
ಅಂತರ್ಜಲ ಪ್ರಾಧಿಕಾರ ಅಥವಾ ಜಿಲ್ಲಾ ಅಂತರ್ಜಲ ಸಮಿತಿಯಿಂದ ಅನುಮತಿ ಪಡೆದ ಮೇಲೆ ಭೂ ಮಾಲೀಕ ಅಥವಾ ಅನುಷ್ಠಾನ ಏಜೆನ್ಸಿಯು ಕೊರೆ ಬಾವಿ ಅಥವಾ ಬೋರ್ ವೆಲ್ ಅನ್ನು ಕೊರೆಸುವ ಪ್ರಥಮದಲ್ಲಿ ಕನಿಷ್ಟ 15 ದಿನ ಮೊದಲು ಸ್ಥಳೀಯ ಪ್ರಾಧಿಕಾರದ ಅಧಿಕಾರಿ ಅಥವಾ ನಗರ ಸ್ಥಳೀಯ ಸಂಸ್ಥೆಗೆ ಲಿಖಿತ ರೂಪದಲ್ಲಿ ಅರ್ಜಿಯನ್ನು ಸಲ್ಲಿಸಿ ಒಪ್ಪಿಗೆ ಪಡೆಯಲು ಪ್ರಾಧಿಕಾರಕ್ಕೆ ತಿಳಿಸಬೇಕು.
ಭೂಮಿ ಅಥವಾ ಆವರಣಗಳ ಮಾಲೀಕ(ರೈತರನ್ನು ಹೊರತುಪಡಿಸಿ) ಅಥವಾ ಅನುಷ್ಠಾನ ಏಜೆನ್ಸಿಯು ಕೊರೆ ಬಾವಿ ಅಥವಾ ಕೊಳವೆ ಬಾವಿಯನ್ನು ತೋಡುವ ಮೊದಲು ಕನಿಷ್ಟ 15 ದಿನ ಮುಂಚೆ ಸ್ಥಳೀಯ ಪ್ರಾಧಿಕಾರದ ಅಧಿಕಾರಿ ಅಥವಾ ನಗರ ಸ್ಥಳೀಯ ಸಂಸ್ಥೆಗೆ ಲಿಖಿತ ರೂಪದಲ್ಲಿ ತಿಳಿಸಬೇಕು.
ವಿಲಗೊಂಡ ಅಥವಾ ಬಿಟ್ಟುಬಿಡಲಾದ ಅಥವಾ ಅಪೂರ್ಣವಾಗಿ ಕೊರೆಸಲಾದ ಕೊರೆ ಭಾವಿ ಅಥವಾ ಕೊಳವೆ ಬಾವಿಯನ್ನು 24 ಗಂಟೆ ಒಳಗೆ ಸುರಕ್ಷಿತವಾಗಿ ಮುಚ್ಚಬೇಕು. ಮುಚ್ಚಿರುವ ಕುರಿತು ಛಾಯಾಚಿತ್ರದೊಂದಿಗೆ ಪ್ರಾಧಿಕಾರಕ್ಕೆ ತಿಳಿಸಬೇಕು.
ನಿಯಮಗಳನ್ನು ಯಾರೇ ವ್ಯಕ್ತಿ/ಏಜೆನ್ಸಿ ಉಲ್ಲಂಸಿದರೆ ಮೂರು ತಿಂಗಳ ಅವಧಿಗೆ ವಿಸ್ತರಿಸಬಹುದಾದ ಸಾದಾ ಕಾರವಾಸದೊಂದಿಗೆ ಅಥವಾ ಐದು ಸಾವಿರ ರೂ.ಗಳಿಗೆ ವಿಸ್ತರಿಸಬಹುದಾದ ಜುಲ್ಮಾನೆ ವಿಧಿಸಲಾಗುತ್ತದೆ.
ನಿಷ್ಕ್ರಿಯ ಕೊರೆಬಾವಿ ಅಥವಾ ಕೊಳವೆ ಬಾವಿಯ ತಪಾಸಣೆ ಮತ್ತು ಮೇಲ್ವಿಚಾರಣೆ ಮಾಡಲು ಪ್ರತಿಯೊಂದು ಸ್ಥಳೀಯ ಪ್ರಾಧಿಕಾರ ಅಥವಾ ನಗರ ಸ್ಥಳೀಯ ಸಂಸ್ಥೆಗಳ ಅಥವಾ ಮಂಡಳಿಗಳ ಒಬ್ಬ ಅಧಿಕಾರಿಯನ್ನು ಗೊತ್ತುಪಡಿಸಲು ಕೂಡ ಕಾಯ್ದೆಯಲ್ಲಿ ಸೂಚಿಸಲಾಗಿದೆ.
New Guidelines for drilling borewell-ಸ್ಥಳೀಯ ಪ್ರಾಧಿಕಾರಗಳ ಕರ್ತವ್ಯಗಳು.- (1) ಪಂಚಾಯತ್ ಅಭಿವೃದ್ಧಿ ಅಧಿಕಾರಿ
(1) ಗ್ರಾಮ ಪಂಚಾಯತಿ, ಗ್ರಾಮ ಆಡಳಿತಾಧಿಕಾರಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ನಗರ ಪಾಲಿಕೆಗಳು ಮತ್ತು ಸಂದರ್ಭಾನುಸಾರವಾಗಿ ಪುರಸಭೆಗಳಂತಹ ಸಂಬಂಧಪಟ್ಟ ನಗರ ಸ್ಥಳೀಯ ಪ್ರಾಧಿಕಾರಗಳು ಮತ್ತು ಮಂಡಳಿಗಳ ಕಿರಿಯ ಎಂಜಿನಿಯರುಗಳು ಕೊರಸಲಾದ ಕೊರ ಬಾವಿ ಅಥವಾ ಕೊಳವೆ ಬಾವಿಗಳ ಮೇಲೆ ನಿಗಾ ಇಡತಕ್ಕದ್ದು ಮತ್ತು ವಿಫಲಗೊಂಡ ಅಥವಾ ಬಿಟ್ಟುಬಿಟ್ಟ ಅಥವಾ ನಿಷ್ಕ್ರಿಯಗೊಂಡ ಕೊರೆ ಬಾವಿಗಳು ಅಥವಾ ಕೊಳವೆ ಬಾವಿಗಳನ್ನು ಮಾನವ ಸಾವು-ನೋವುಗಳನ್ನು ಖಚಿತಪಡಿಸಿಕೊಳ್ಳತಕ್ಕದ್ದು.
(2) ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ ಆಡಳಿತಾಧಿಕಾರಿ, ಸಂಬಂಧಪಟ್ಟ ನಗರ ಸ್ಥಳೀಯ ಪ್ರಾಧಿಕಾರಗಳ ಕಿರಿಯ ಎಂಜಿನಿಯರುಗಳು ಅಥವಾ ಆಯುಕ್ತರು ಅಥವಾ ಮುಖ್ಯಾಧಿಕಾರಿಗಳು ಕೊರೆ ಬಾವಿಗಳು ಅಥವಾ ಕೊಳವೆ ಬಾವಿಗಳ ಸಂಬಂಧದಲ್ಲಿ ನಿರ್ದಿಷ್ಟಪಡಿಸಿದ ನಮೂನೆಯ ಅನುಸಾರವಾಗಿ ಒಂದು ವಹಿಯನ್ನು ನಿರ್ವಹಿಸತಕ್ಕದ್ದು ಮತ್ತು ಅಂತರ್ಜಲ ಪ್ರಾಧಿಕಾರ ಅಥವಾ 21ಎ ಪ್ರಕರಣದಡಿ ಈ ಕುರಿತು ಪ್ರಾಧೀಕರಿಸಿದ ಯಾರೇ ಅಧಿಕಾರಿಗೆ ತ್ರೈಮಾಸಿಕ ವರದಿಯನ್ನು ಸಲ್ಲಿಸತಕ್ಕದ್ದು.
(3) ಕುಡಿಯುವ ನೀರು ಅಥವಾ ನೀರಾವರಿ ಅಥವಾ ವಾಣಿಜ್ಯ ಸೋಮುಗಳ ಅನುಷ್ಠಾನ ಏಜೆನ್ಸಿಯ ಪ್ರಭಾರೆಯಲ್ಲಿರುವ ಅಧಿಕಾರಿಯು, ಕಾರ್ಯಾಚರಣೆಯಲ್ಲಿರುವ ಕೊರೆ ಬಾವಿಗಳು ಅಥವಾ ಕೊಳವೆ ಬಾವಿಗಳನ್ನು ಸುರಕ್ಷಿತವಾಗಿ ಮುಚ್ಚಲಾಗಿದೆ ಎಂಬುದನ್ನು ಖಚಿತಪಡಿಕೊಳ್ಳತಕ್ಕದ್ದು.
(4) ಸಂಬಂಧಪಟ್ಟ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಯು ಪಂಚಾಯತಿ ಕಛೇರಿಯ ಆವರಣಗಳಲ್ಲಿ ಯಶಸ್ವಿಯಾದ ಅಥವಾ ವಿಫಲವಾದ ಅಥವಾ ಬಿಟ್ಟುಬಿಟ್ಟ ಅಥವಾ ನಿಷ್ಕ್ರಿಯಗೊಂಡ ಅಥವಾ ಅಪೂರ್ಣವಾಗಿ ಕೊರೆಯಲಾದ ಕೊರೆ ಬಾವಿ ಅಥವಾ ಕೊಳವ ಬಾವಿಯ ಸಂಬಂಧದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕನ್ನಡ ಭಾಷೆಯಲ್ಲಿ ಫಲಕವನ್ನು ಪ್ರದರ್ಶಿಸತಕ್ಕದ್ದು.
ಅಧಿಕೃತ ತಿದ್ದುಪಡಿ ಪ್ರತಿಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ: Download Now