ಸಾರ್ವಜನಿಕರಿಗೆ ಕಂದಾಯ ಇಲಾಖೆಯಿಂದ(Karnataka Revenue Department) ಜನ ಸ್ನೇಹಿ ಯೋಜನೆಯನ್ನು ಜಾರಿಗೆ ತರಲಾಗಿದ್ದು ಜನರಿಗೆ ಇದರ ಕುರಿತು ಮಾಹಿತಿ ಇಲ್ಲದ ಕಾರಣ ಇಂದು ಈ ಲೇಖನದಲ್ಲಿ ಇದರ ಕುರಿತು ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
ತಮ್ಮ ಮೊಬೈಲ್ ನಲ್ಲಿ ಇಲಾಖೆಯ ಸ್ವಾವಲಂಭಿ ಅಪ್ಲಿಕೇಶನ್(Svavalambi App) ಮೂಲಕ ಜಮೀನಿನ ಸರ್ವೆ ಮಾಡಿ ಪೋಡಿಯನ್ನು(Tatkal phodi) ಸ್ವಂತ ತಾವೇ ಸಿದ್ದಡಿಸಿಕೊಳ್ಳಬಹುದು ಜೊತೆಗೆ ಭೂ ಪರಿವರ್ತನೆ, 11 ಇ ಸ್ಕೆಚ್ ಪಡೆಯಲು ಸಹ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಕಂದಾಯ ಇಲಾಖೆಯಿಂದ ಬಿಡುಗಡೆ ಮಾಡಿರುವ ಸ್ವಾವಲಂಭಿ ಮೊಬೈಲ್ ಅಪ್ಲಿಕೇಶನ್ ಮೂಲಕ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಿ ಪೋಡಿ, ಭೂ ಪರಿವರ್ತನೆ(Land Conversion), 11 ಇ ಸ್ಕೆಚ್(11 E sketch )ಪಡೆಯುವುದು ಹೇಗೆ ಎಂದು ಇಲ್ಲಿ ತಿಳಿಸಲಾಗಿದೆ.
ಬಹಳಷ್ಟು ಜನರಿಗೆ ಮಾಹಿತಿ ಕೊರತೆಯಿಂದ ಈ ಅಪ್ಲಿಕೇಶನ್ ಇರುವುದರ ಕುರಿತು ಹಾಗೂ ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿದಿರುವುದಿಲ್ಲ ಈ ಅಂಕಣವನ್ನು ಓದಿದವರು ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಈ ಯೋಜನೆಯ ಪ್ರಯೋಜನ ಪಡೆಯಲು ಸಾರ್ವಜನಿಕರಿಗೆ ಮಾಹಿತಿ ತಲುಪಿಸಲು ಸಹಕರಿಸಿ.
How to Apply Online For Tatkal phodi, Land Conversion, 11 E sketch -ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
ಕಂದಾಯ ಇಲಾಖೆಯ ಮೋಜಿನ/ಸ್ವಾವಲಂಭಿ ಅಪ್ಲಿಕೇಶನ್ ವೆಬ್ಸೈಟ್ ಅನ್ನು ಈ ಕೆಳಗೆ ವಿವರಿಸಿರುವ ಹಂತವನ್ನು ಅನುಸರಿಸಿ ನೇರವಾಗಿ ಭೇಟಿ ಮಾಡಿ ಅಗತ್ಯ ಹಂತಗಳನ್ನು ಅನುಸರಿಸಿ ಇಲ್ಲಿ ಕೇಳುವ ವಿವರವನ್ನು ಭರ್ತಿ ಮಾಡಿ ಸಾರ್ವಜನಿಕರು ತಮ್ಮ ಮನೆಯಲ್ಲಿ ಕುಳಿತ ಮೊಬೈಲ್ ಮೂಲಕ ಜಮೀನಿನ ಸರ್ವೆ/Land Survey, ಪೋಡಿ/Tatkal phodi, ಭೂ ಪರಿವರ್ತನೆ/Land Conversion, 11 ಇ ಸ್ಕೆಚ್/11 E sketch ಗಾಗಿ ಅರ್ಜಿ ಸಲ್ಲಿಸಿ ಆನ್ಲೈನ್ ಮೂಲಕವೇ ಪಡೆದುಕೊಳ್ಳಬಹುದಾಗಿದೆ.
Step-1: ಸಾರ್ವಜನಿಕರು ಮೊದಲು ಇಲ್ಲಿ ಕ್ಲಿಕ್ Phodi Online Application ಮಾಡಿ ಕಂದಾಯ ಇಲಾಕೆಯ ಅಧಿಕೃತ ಮೋಜಿನಿ ತಂತ್ರಾಂಶವನ್ನು ಪ್ರವೇಶ ಮಾಡಬೇಕು.
Step-2: ಬಳಿಕ ಇಲ್ಲಿ ಅರ್ಜಿದಾರರ ಮೊಬೈಲ್ ನಂಬರ್ ಮತ್ತು ಕೆಳಗೆ ಕಾಣಿಸುವ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ “Send OTP” ಬಟನ್ ಮೇಲೆ ಕ್ಲಿಕ್ ಮಾಡಿ ಒಟಿಪಿ ಪಡೆದು OTP ಅನ್ನು ನಮೂದಿಸಿ ಲಾಗಿನ್ ಅಗಬೇಕು.
Step-3: OTP ಹಾಕಿ ಲಾಗಿನ್ ಅದ ಬಳಿಕ ಇಲ್ಲಿ ಮುಖಪುಟದಲ್ಲಿ ಕಾಣುವ “ಹೊಸ ಅರ್ಜಿ/New Application” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-4: ನಂತರ ಇಲ್ಲಿ ಈ ರೀತಿಯ A) ನಾನೇ ಸ್ಕೆಚ್ ಸಿದ್ಧಪಡಿಸಿ ಅಪ್ಲೋಡ್ ಮಾಡುತ್ತೇನೆ./ I will prepare the sketch and upload on my own. B) ಭೂಮಾಪನ ಇಲಾಖೆಯಿಂದ ಸ್ಕೆಚ್ ಸಿದ್ಧಪಡಿಸಲು ನಾನು ಬಯಸುತ್ತೇನೆ./ I wish to get the sketch prepared by the Survey department. ಎರಡು ಆಯ್ಕೆಗಳು ಗೋಚರಿಸುತ್ತವೆ ಇದರಲ್ಲಿ ನಿಮ್ಮ ಆಯ್ಕೆಯ ಮೇಲೆ ಕ್ಲಿಕ್ ಮಾಡಿ “ಅರ್ಜಿಯ ವಿಧ/Type of Application ” ಕಾಲಂ ನಲ್ಲಿ
1) ತತ್ಕಾಲ್ ಪೋಡಿ/tatkal phodi,
2) ಭೂ ಪರಿವರ್ತನೆ/Land Conversion,
3) 11 ಇ ಸ್ಕೆಚ್ / 11 E sketch ಈ ಮೂರರಲ್ಲಿ ನಿಮ್ಮ ಅಯ್ಕೆಯ ಮೇಲೆ ಒತ್ತಿ ಮುಂದುವರೆಯಬೇಕು.
Step-5: ಮೇಲಿನ ಹಂತವನ್ನು ಪೂರ್ಣಗೊಳಿಸಿದ ಬಳಿಕ ಈ ಪೇಜ್ ನಲ್ಲೇ ಆಧಾರ್ ಪರೀಶಿಲನೆಯನ್ನು ಬಳಸಿಕೊಂಡು ಅರ್ಜಿದಾರರ ವಿವರಗಳನ್ನು ಭರ್ತಿ ಮಾಡಿ ಬಟನ್ ಮೇಲೆ ಒತ್ತಿ ಅರ್ಜಿದಾರರ ಆಧಾರ್ ಕಾರ್ಡ ನಂಬರ್ ಮತ್ತು OTP ಅನ್ನು ನಮೂದಿಸಿ ಅರ್ಜಿದಾರರ ವಿವರವನ್ನು ಭರ್ತಿ ಮಾಡಬೇಕು.
Step-6: ಬಳಿಕ ಇದೆ ಪೇಜ್ ನಲ್ಲಿ ಕೆಳಗೆ ಕಾಣುವ “Next Step” ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರವನ್ನು ಭರ್ತಿ ಮಾಡಿ ಅರ್ಜಿದಾರರ ಜಮೀನಿನ ವಿವರವನ್ನು ಮತ್ತು ಅರ್ಜಿ ಶುಲ್ಕವನ್ನು ಪಾವತಿ ಮಾಡಿ.
Step-7: ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಮೀನಿನ ತತ್ಕಾಲ್ ಪೋಡಿ/tatkal phodi, ಭೂ ಪರಿವರ್ತನೆ/Land Conversion, 11 ಇ ಸ್ಕೆಚ್ / 11 E sketch ಪಡೆಯಲು ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿಯನ್ನು ಸಲ್ಲಿಸಲು ಇನ್ನು ಅಧಿಕ ಮಾಹಿತಿಯನ್ನು ಪಡೆಯಲು ಬಳಕೆದಾರ ಕೈಪಿಡಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ವೆಬ್ಸೈಟ್ ಲಿಂಕ್- Download Now
Revenue Department- ಬಳಕೆದಾರರಿಗೆ ಇಲಾಖೆಯ ಪ್ರಮುಖ ಸೂಚನೆಗಳು:
Helpline Number-ಹೆಚ್ಚಿನ ಮಾಹಿತಿ ಪಡೆಯಲು ಸಹಾಯವಾಣಿ:
☎ +91 82 7786 4065{Mysore Division}
☎ +91 82 7786 4067{Banglore Division}
☎ +91 82 7786 4068{Kalaburagi Division}
☎ +91 82 7786 4086{Belagavi Division}
(Time : 10:00AM to 6:00 PM)