ಜನರಿಗೆ ಸಹಾಯವಾಗುವಂತಹ ಅನೇಕ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿವೆ. ಇವುಗಳಲ್ಲಿ ಉಚಿತ ಎಲ್.ಪಿ.ಜಿ ಸಂಪರ್ಕವೂ ಒಂದು. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಈಗಾಗಲೇ ಬಡತನ ರೇಖೆಗಿಂತ ಕೆಳಗಿರುವ ಲಕ್ಷಾಂತರ ಮಹಿಳೆಯರಿಗೆ ಉಚಿತ ಗ್ಯಾಸ್ ಕನೆಕ್ಷನ್ ಅನ್ನು ಒದಗಿಸಲಾಗಿದೆ. ಇದೀಗ ಈ ಯೋಜನೆಯನ್ನು ಮತ್ತೆ ವಿಸ್ತರಿಸಲಾಗಿದ್ದು, ಯಾರೆಲ್ಲಾ ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದು, ಬೇಕಾಗಿರುವ ದಾಖಲೆಗಳು, ಅರ್ಜಿ ಸಲ್ಲಿಸುವುದು ಹೇಗೆ? ಈ ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾಮಾನ್ಯ ಜನರ ಅನುಕೂಲಕ್ಕಾಗಿ ದೇಶದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಅವುಗಳಲ್ಲಿ 2016 ರಲ್ಲಿ ಗ್ರಾಮೀಣ ಮಹಿಳೆಯರ ಅಭ್ಯುದಯಕ್ಕಾಗಿ ಪ್ರಾರಂಭಿಸಲಾದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯೂ ಒಂದು. ಈ ಯೋಜನೆಯಡಿಯಲ್ಲಿ ಮೊದಲ ಹಂತದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಐದು ಕೋಟಿ ಮಹಿಳಾ ಸದಸ್ಯರಿಗೆ ಉಚಿತ ಎಲ್.ಪಿ.ಜಿ ಸಂಪರ್ಕವನ್ನು ಒದಗಿಸಲಾಗಿತ್ತು. ಇದೀಗ ಈ ಯೋಜನೆಯನ್ನು ಮತ್ತೆ ವಿಸ್ತರಿಸಲಾಗಿದ್ದು, ಯಾರೆಲ್ಲಾ ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದು, ಬೇಕಾಗಿರುವ ದಾಖಲೆಗಳು, ಅರ್ಜಿ ಸಲ್ಲಿಸುವುದು ಹೇಗೆ? ಈ ಎಲ್ಲದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0:
ಕೆಲವು ವರ್ಷಗಳ ಹಿಂದೆ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಅಡುಗೆಗಾಗಿ ಮಹಿಳೆಯರು ಕಟ್ಟಿಗೆ ಒಲೆಯನ್ನೇ ಬಳಕೆ ಮಾಡುತ್ತಿದ್ದರು, ನಿರಂತರ ಕಟ್ಟಿಗೆ ಬಳಕೆ ಮಾಡುವುದರಿಂದ ಅದರಿಂದ ಬರುವ ಹೊಗೆಯು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎನ್ನುವ ಕಾರಣಕ್ಕೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ಸಂಪರ್ಕವನ್ನು ಒದಗಿಸುವ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಬಡತನ ರೇಖೆಗಿಂತ ಕೆಳಗಿರುವ ಲಕ್ಷಾಂತರ ಮಹಿಳೆಯರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿದ್ದರು. ಇದೀಗ ಈ ಯೋಜನೆಯನ್ನು ಮತ್ತೆ ವಿಸ್ತರಿಸಲಾಗಿದೆ.
ಯೋಜನೆಯ ಪ್ರಯೋಜನವನ್ನು ಪಡೆಯಲು ಬೇಕಾಗಿರುವ ಅರ್ಹತೆಗಳು:
• ಅರ್ಜಿದಾರ ಮಹಿಳೆ ಭಾರತೀಯ ಪ್ರಜೆಯಾಗಿರಬೇಕು.
• ಅರ್ಜಿದಾರರು ಈಗಾಗಲೇ ಯಾವುದೇ ಇತರ LPG ಸಂಪರ್ಕವನ್ನು ಹೊಂದಿರಬಾರದು.
• 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಅರ್ಜಿ ಸಲ್ಲಿಸಲು ಅರ್ಹರು.
• ಅರ್ಜಿದಾರರು BPL ಕಾರ್ಡ್ ಹೊಂದಿರಬೇಕು ಅಥವಾ ಅವರ ಹೆಸರು ಅಂತ್ಯೋದಯ ಅನ್ನ ಯೋಜನೆ (AAY) ಯಲ್ಲಿ ಇರಬೇಕು.
• ಈ ಕೆಳಗಿನ ವರ್ಗಗಳ ಮಹಿಳೆಯರು ಅರ್ಹರು:
• ಪರಿಶಿಷ್ಟ ಜಾತಿ/ಪಂಗಡ
• ಆರ್ಥಿಕವಾಗಿ ಹಿಂದುಳಿದ ವರ್ಗ (EBC)
• ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಫಲಾನುಭವಿಗಳು
ಅಗತ್ಯವಿರುವ ದಾಖಲೆಗಳು:
• ಆಧಾರ್ ಕಾರ್ಡ್
• ಪಡಿತರ ಚೀಟಿ
• ಬಿಪಿಎಲ್ ಕಾರ್ಡ್
• ಬ್ಯಾಂಕ್ ಪಾಸ್ಬುಕ್
• ಮೊಬೈಲ್ ನಂಬರ್
• ವಾಸಸ್ಥಳ ದೃಢೀಕರಣ ಪತ್ರ
• ಪಾಸ್ಪೋರ್ಟ್ ಸೈಜ್ ಫೋಟೋ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ:
• ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು, ಮೊದಲು ನೀವು ಅದರ ಅಧಿಕೃತ ವೆಬ್‌ಸೈಟ್ https://pmuy.gov.in/ ಗೆ ಭೇಟಿ ನೀಡಬೇಕು . ವೆಬ್‌ಸೈಟ್ ತೆರೆದ ನಂತರ, ಅಪ್ಲೈ ಫಾರ್ ನ್ಯೂ ಉಜ್ವಲ 2.0 ಕನೆಕ್ಷನ್ ಆಯ್ಕೆಯನ್ನು ಕ್ಲಿಕ್ ಮಾಡಿ.
• ನಂತರ ಗ್ಯಾಸ್ ಡಿಸ್ಟ್ರಿಬ್ಯೂಟರ್ ಆಯ್ಕೆಮಾಡಿ, ಇಲ್ಲಿ ನೀವು HP ಗ್ಯಾಸ್, ಭಾರತ್ ಗ್ಯಾಸ್, ಅಥವಾ ಇಂಡೇನ್ ಗ್ಯಾಸ್ ಈ ಮೂರಲ್ಲಿ ಒಂದನ್ನು ಆಯ್ಕೆ ಆಯ್ಕೆ ಮಾಡಬೇಕಾಗುತ್ತದೆ.
• ಬಳಿಕ ನಿಮ್ಮ ಸ್ಥಳಕ್ಕೆ ಹತ್ತಿರಲ್ಲಿ ಲಭ್ಯವಿರುವ ಗ್ಯಾಸ್ ವಿತರಕರನ್ನು ಆಯ್ಕೆಮಾಡಿ.
• ಅರ್ಜಿ ನಮೂನೆಯನ್ನು ಭರ್ತಿ ಮಾಡಿ:
ಗ್ಯಾಸ್ ವಿತರಕರನ್ನು ಆಯ್ಕೆ ಮಾಡಿದ ನಂತರ, ಈ ಕೆಳಗೆ ನೀಡಿರುವ ವಿವರಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ:
I. ಹೆಸರು: ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ಪ್ರಕಾರ.
II. ಆಧಾರ್ ಸಂಖ್ಯೆ: ನಿಮ್ಮ 12-ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ.
III. ವಿಳಾಸ: ಪ್ರಸ್ತುತ ಮತ್ತು ಶಾಶ್ವತ ವಿಳಾಸ ಎರಡನ್ನು ಬರೆಯಬಹುದು.
IV. ಮಾನ್ಯವಾದ ಮೊಬೈಲ್ ಸಂಖ್ಯೆಯನ್ನು ಒದಗಿಸಿ.
V. ಇಮೇಲ್ ಐಡಿ: ಐಚ್ಛಿಕ.
• ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ:
ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸ್ಕ್ಯಾನ್ ಮಾಡಿ ಮತ್ತು ಅಪ್‌ಲೋಡ್ ಮಾಡಿ, ಅವುಗಳೆಂದರೆ; ಆಧಾರ್ ಕಾರ್ಡ್, ಪಡಿತರ ಚೀಟಿ, ಬ್ಯಾಂಕ್ ಖಾತೆ ವಿವರಗಳು, ಪಾಸ್‌ಪೋರ್ಟ್ ಸೈಜ್ ಫೋಟೋ.
•ಅರ್ಜಿ ನಮೂನೆಯನ್ನು ಸಲ್ಲಿಸಿ:
ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿದ ನಂತರ, “ಸಲ್ಲಿಸು” ಬಟನ್ ಕ್ಲಿಕ್ ಮಾಡಿ. ಒಮ್ಮೆ ಸಲ್ಲಿಸಿ ಆಯ್ಕೆ ಕ್ಲಿಕ್ ಮಾಡಿದ ನಂತರ ನೀವು ಅರ್ಜಿ ಸಂಖ್ಯೆಯೊಂದಿಗೆ ಸ್ವೀಕೃತಿ ರಶೀದಿಯನ್ನು ಸ್ವೀಕರಿಸುತ್ತೀರಿ.
• ಅರ್ಜಿ ಸಲ್ಲಿಸಿದ ನಂತರ, ನಿಮ್ಮ ವಿವರಗಳು ಮತ್ತು ದಾಖಲೆಗಳನ್ನು ಗ್ಯಾಸ್ ಏಜೆನ್ಸಿ ಪರಿಶೀಲಿಸುತ್ತೆ ಮತ್ತು ನಿಮ್ಮ ಅರ್ಹತಾ ಮಾನದಂಡಗಳನ್ನು ಸರಿಯಾಗಿದ್ದರೆ ನಿಮಗೆ LPG ಗ್ಯಾಸ್ ಸಂಪರ್ಕವನ್ನು ಒದಗಿಸಲಾಗುತ್ತದೆ.
ಸಹಾಯವಾಣಿ ಮತ್ತು ಸಹಾಯ:
• ಅಪ್ಲಿಕೇಶನ್ ಸಲ್ಲಿಸುವ ಪ್ರಕ್ರಿಯೆಯಲ್ಲಿ ನೀವು ಯಾವುದೇ ಸಮಸ್ಯೆಗಳನ್ನು ಎದುರಿಸಿದರೆ, ನೀವು ಉಜ್ವಲ ಯೋಜನೆ ಸಹಾಯವಾಣಿಯನ್ನು ಸಂಪರ್ಕಿಸಬಹುದು:
-ಸಹಾಯವಾಣಿ ಸಂಖ್ಯೆ: 1800-266-6696
-LPG ತುರ್ತು ಸಹಾಯವಾಣಿ: 1906