VAO Exam 2024:-ಒಂದು ತಿಂಗಳ ಹಿಂದೆ ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಗ್ರಾಮ ಆಡಳಿತಾಧಿಕಾರಿ (VAO Recruitment 2024) ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( KEA exam) ನಡೆಸಿತ್ತು. ಇದೀಗ ಕಟ್ ಆಫ್ ಅಂಕಗಳನ್ನು (Cut off marks) ಬಿಡುಗಡೆ ಮಾಡಿದೆ.
ನೇಮಕಾತಿ ಪ್ರಕ್ರಿಯೆ ಭಾಗವಾಗಿ ಜಾತಿವಾರು ಕಟ್ ಆಫ್ ಅಂಕಪಟ್ಟಿಯನ್ನು ಪ್ರಾಧಿಕಾರ ಬಿಡುಗಡೆ ಮಾಡಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಅರ್ಹತಾ ಅಂಕಗಳನ್ನು ಗಮನಿಸುವಂತೆ ಪ್ರಾಧಿಕಾರವು ತಿಳಿಸಿದೆ. ಗ್ರಾಮ ಆಡಳಿತ ಅಧಿಕಾರ ನೇಮಕಾತಿಗಾಗಿ ಕೆಇಎ ಲಿಖಿತ (ಆಫ್‌ಲೈನ್) ನಡೆಸಿತ್ತು. ನೇಮಕಾತಿ ಮುಂದುವರೆಸಲು ಹಾಗೂ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತನ್ನ ವೆಬ್‌ಸೈಟ್‌ನಲ್ಲಿ VAO ಪರೀಕ್ಷೆ ಕಟ್ ಆಫ್ ಅಂಕಗಳನ್ನು ಬಿಡುಗಡೆ ಮಾಡಿದೆ.
ಉದ್ಯೋಗಾಕಾಂಕ್ಷಿಗಳು ಕನಿಷ್ಠ ಅರ್ಹತಾ ಅಂಕಗಳನ್ನು ಕೂಡಲೇ ಪರಿಶೀಲಿಸಿಕೊಳ್ಳಬೇಕು. ಇದರಿಂದ ಮುಂದಿನ ಮೌಲ್ಯಮಾಪನ ಹಂತಗಳಲ್ಲಿ ಪಾಲ್ಗೊಳ್ಳಲು ಅನುಕೂಲವಾಗುತ್ತದೆ. ಪರೀಕ್ಷೆಯಲ್ಲಿ ಶಾರ್ಟ್ ಲಿಸ್ಟ್ ಆದವರಿಗೆ ಅಂದರೆ, ಕನಿಷ್ಠ ಅರ್ಹತಾ ಅಂಕಗಳನ್ನು ಪಡೆದವರು ಮಾತ್ರ ಪ್ರಕ್ರಿಯೆಯಲ್ಲಿ ಮುಂದುವರಿಯುತ್ತಾರೆ. ಲಭ್ಯ ಇರುವ ಒಟ್ಟು ಗ್ರಾಮ ಆಡಳಿತ ಅಧಿಕಾರ ಖಾಲಿ ಹುದ್ದೆಗಳ ಸಂಖ್ಯೆಯು ಈ ಬಿಡುಗಡೆ ಆದ ಕಟ್ ಆಫ್ ಅಂಕಗಳ ಮೇಲೆ ಪರಿಣಾಮ ಬೀರುತ್ತದೆ.
ಯಾವೆಲ್ಲ ಜಾತಿ ವರ್ಗದವರಿಗೆ ಎಷ್ಟೆಷ್ಟು ಕಟ್ ಆಫ್ ಅಂಕಗಳಿವೆ. ಅದರ ಪಟ್ಟಿ ಇಲ್ಲಿ ನೀಡಲಾಗಿದೆ. ನಿರ್ದಿಷ್ಟ ವರ್ಗ ಅಭ್ಯರ್ಥಿಗಳು ತಮಗೆ ನೀಡಿರುವ ಕನಿಷ್ಠ ಅಂಕ ಪೂರೈಸಬೇಕಿದೆ. ಇದನ್ನು KEA VAO ಅರ್ಹತಾ ಸ್ಕೋರ್ ಎಂದು ಕರೆಯಲಾಗುತ್ತದೆ. ಹೆಚ್ಚು ಅಂಕ ಪಡೆದರು ಶಾರ್ಟ್‌ಲಿಸ್ಟ್ ಸೇರುತ್ತಾರೆ. ಅಭ್ಯರ್ಥಿಗಳ ಮೆರಿಟ್ ಪಟ್ಟಿ ಮತ್ತು ಆಯ್ಕೆ ಪ್ರಕ್ರಿಯೆಯು ಅಂತಿಮ ಫಲಿತಾಂಶವನ್ನು ನಿರ್ಧರಿಸುತ್ತವೆ.
ಕಟ್-ಆಫ್ ಅಂಕಗಳು (ಒಟ್ಟು 200 ಅಂಕ)
ಓಬಿಸಿ : 130-135
ಎಸ್‌ಸಿ : 110-115
ಎಸ್‌ಟಿ: 105-110
ಅಂಡರ್ ರಿಸರ್ವ್ಡ್: 135-145
ಇಡಬ್ಲುಎಸ್: 125-135
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಶೀಘ್ರವೇ ವಿಎಒ ಅಂತಿಮ ಫಲಿತಾಂಶವನ್ನು (ಮೆರಿಟ್ ಪಟ್ಟಿ 2024) ಪ್ರಕಟಿಸಲಿದೆ. ಈ ಪಟ್ಟಿ ಕನ್ನಡ ಭಾಷಾ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆಯ ಅಂಕಗಳ ಆಧಾರದಲ್ಲಿ ತೀರ್ಮಾನಿಸಲಾಗುತ್ತದೆ. ಈ ಲಿಸ್ಟ್‌ನಲ್ಲಿ ಇರುವ ಅಭ್ಯರ್ಥಿಗಳು ಮುಂದಿನ ಪ್ರಕ್ರಿಯೆಗೆ ಒಳಪಡುತ್ತಾರೆ. ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) VAO ನೇಮಕಾತಿಗೆ ಸಂಬಂಧಿಸಿದಂತೆ ಜಿಟಿಟಿಸಿ ಕಡ್ಡಾಯ ಕನ್ನಡ ಪರೀಕ್ಷೆ ಬರೆದವರ ತಾತ್ಕಾಲಿಕ ಅಂಕ ಪಟ್ಟಿ ಜಾಲತಾಣದಲ್ಲಿ (https://cetonline.karnataka.gov.in/kea/) ಲಭ್ಯ ಇದೆ. ತಾಂತ್ರಿಕ ಕಾರಣಗಳಿಂದ ಇಂತಹ 375 ಅಭ್ಯರ್ಥಿಗಳ ಫಲಿತಾಂಶ ತಡ ಆಗಿತ್ತು. ಅಂತಿಮ ಫಲಿತಾಂಶ ಪ್ರಕಟಿಸಿದ್ದು, ಜಿಲ್ಲಾವರು ಪಟ್ಟಿ ಮಾಹಿತಿ ಇಲ್ಲಿದೆ ಎಂದು ತಿಳಿಸಿದೆ.