'ಕರ್ನಾಟಕ ಭಾರತ್ ಗೌರವ್' ಹೆಸರಿನಲ್ಲಿ ಇದೆ ಮೊದಲ ಬಾರಿಗೆ ಪುರಿ ಜಗನ್ನಾಥ, ದ್ವಾರಕ ಮತ್ತು ದಕ್ಷಿಣ ಕ್ಷೇತ್ರಗಳಿಗೆ ಯಾತ್ರೆ ಕೈಗೊಳ್ಳುವವರಿಗೆ ಸಹಾಯಧನ ಘೋಷಣೆ ಮಾಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯಿಂದ ಪುಣ್ಯ ಕ್ಷೇತ್ರಗಳ ದರ್ಶನ ಭಾಗ್ಯಕ್ಕೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿಕೊಟ್ಟಿದೆ.
ಹೊಸ ವರ್ಷಕ್ಕೆ ರಾಜ್ಯದ ಭಕ್ತಾದಿಗಳಿಗೆ ಕಾಂಗ್ರೆಸ್ ಸರ್ಕಾರ ಶುಭಸುದ್ದಿ ನೀಡಿದ್ದು, ಮೂರು ಟೂರ್ ಪ್ಯಾಕೇಜ್ಗಳಿಗೆ ಸಬ್ಸಿಡಿ ಘೋಷಣೆ ಮಾಡಿದೆ. 'ಕರ್ನಾಟಕ ಭಾರತ್ ಗೌರವ್' ಹೆಸರಿನಲ್ಲಿ ಇದೆ ಮೊದಲ ಬಾರಿಗೆ ಪುರಿ ಜಗನ್ನಾಥ, ದ್ವಾರಕ ಮತ್ತು ದಕ್ಷಿಣ ಕ್ಷೇತ್ರಗಳಿಗೆ ಯಾತ್ರೆ ಕೈಗೊಳ್ಳುವವರಿಗೆ ಸಹಾಯಧನ ಘೋಷಣೆ ಮಾಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯಿಂದ ಪುಣ್ಯ ಕ್ಷೇತ್ರಗಳ ದರ್ಶನ ಭಾಗ್ಯಕ್ಕೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿಕೊಟ್ಟಿದೆ.

ಸರ್ಕಾರದಿಂದ ದಕ್ಷಿಣಕ್ಷೇತ್ರಗಳ ಯಾತ್ರಾ, ದ್ವಾರಕಾ ಯಾತ್ರ, ಪುರಿಜಗನ್ನಾಥ ದರ್ಶನ ಒಟ್ಟು ಮೂರು ಟೂರ್ ಪ್ಯಾಕೇಜ್ಗಳಿಗೆ ಸರ್ಕಾರ ಸಹಾಯಧನ ನೀಡುವುದಾಗಿ ಮಾಹಿತಿ ನೀಡಿದೆ. ರಾಮೇಶ್ವರ, ಕನ್ಯಕುಮಾರಿ, ಮಧುರೈ ಸೇರಿದಂತೆ ತಿರುವನಂತಪುರಂಗೆ ಆರು ದಿನಗಳ ದಕ್ಷಿಣ ಕ್ಷೇತ್ರಗಳ ತೀರ್ಥಯಾತ್ರೆ ಪ್ಯಾಕೇಜ್ಗೆ ಒಟ್ಟು 25,000 ರೂಪಾಯಿ ವೆಚ್ಚವಾಗುತ್ತದೆ.

ಈ ಪೈಕಿ ಸರ್ಕಾರದಿಂದ ₹10,000 ರುಪಾಯಿ ಸಬ್ಸಿಡಿ, ₹5,000 ಸಹಾಯಧನ ಸೇರಿ ₹15000 ಸಾವಿರ ರುಪಾಯಿಯನ್ನು ಸರ್ಕಾರ ಭರಿಸುತ್ತದೆ. ಯಾತ್ರಾರ್ಥಿಗಳು ₹10,000 ಮಾತ್ರ ಪಾವತಿ ಮಾಡಲು ಸೂಚನೆ ನೀಡಿದೆ. ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು, ಬೆಂಗಳೂರಿನಿಂದ ರೈಲು ಹತ್ತಲು ಅವಕಾಶವಿದ್ದು, 2025ರ ಜನವರಿ 25 ರಂದು ಯಾತ್ರೆ ಆರಂಭವಾಗಲಿದ್ದು, 30 ರಂದು ಹಿಂದಿರುಗಲಾಗುತ್ತದೆ.
ದ್ವಾರಕ ಯಾತ್ರಾ: ದ್ವಾರಕ, ನಾಗೇಶ್ವರ, ಸೋಮನಾಥ್, ತ್ರಯಂಬಕೇಶ್ವರ 8 ದಿನಗಳ ಯಾತ್ರಾ ಪ್ಯಾಕೇಜ್ಗೆ ಒಟ್ಟು 32,500 ರೂ ವೆಚ್ಚವಾಗಲಿದೆ. ಈ ಪೈಕಿ 17,500 ರೂಪಾಯಿಯನ್ನು ರಾಜ್ಯ ಸರ್ಕಾರ ಸಬ್ಸಿಡಿ ರೂಪದಲ್ಲಿ ಭರಿಸಲಿದ್ದು, ಉಳಿದಂತೆ ಭಕ್ತಾದಿಗಳು 15,000 ರೂಪಾಯಿ ಪಾವತಿಸುವಂತೆ ಸೂಚನೆ ನೀಡಲಾಗಿದೆ. 2025ರ ಜನವರಿ 6 ರಂದು ಯಾತ್ರೆ ಆರಂಭವಾಗಲಿದ್ದು, ಜ.13ಕ್ಕೆ ಹಿಂದಿರುಗಲಾಗುತ್ತದೆ. ಇನ್ನು ಈ ಯಾತ್ರಗೆ ಹೋಗುವವರು ತುಮಕೂರು, ಬೆಂಗಳೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹಾವೇರಿ, ಬೆಳಗಾವಿಯಲ್ಲಿ ರೈಲು ಹತ್ತಬಹುದು.
ಪುರಿ ಜಗನ್ನಾಥ ದರ್ಶನ: ಪುರಿ, ಕೊನಾರಕ್, ಗಂಗಾಸಾಗರ್, ಕೊಲ್ಕತ್ತಾ ಒಳಗೊಂಡ 8 ದಿನಗಳ ಯಾತ್ರಾ ಪ್ಯಾಕೇಜ್ಗೆ ಒಟ್ಟು 32,500 ರೂ ವೆಚ್ಚವಾಗಲಿದೆ. ಈ ಪೈಕಿ 17,500 ರೂಪಾಯಿಯನ್ನು ರಾಜ್ಯ ಸರ್ಕಾರ ಸಬ್ಸಿಡಿ ರೂಪದಲ್ಲಿ ಭರಿಸಲಿದ್ದು, ಉಳಿದಂತೆ ಭಕ್ತಾದಿಗಳು 15,000 ರೂಪಾಯಿ ಪಾವತಿಸುವಂತೆ ಸೂಚನೆ ನೀಡಲಾಗಿದೆ. 2025ರ ಫೆಬ್ರವರಿ 3 ರಂದು ಯಾತ್ರೆ ಆರಂಭವಾಗಲಿದ್ದು, ಫೆ.10ಕ್ಕೆ ಹಿಂದಿರುಗಲಾಗುತ್ತದೆ. ಇನ್ನು ಈ ಯಾತ್ರಗೆ ಹೋಗುವವರು ತುಮಕೂರು, ಬೆಂಗಳೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹಾವೇರಿ, ಬೆಳಗಾವಿಯಲ್ಲಿ ರೈಲು ಹತ್ತಬಹುದು.
ಪ್ರಯಾಣಿಸುವಾಗ ಆಧುನಿಕ ಪ್ಯಾಂಟ್ರಿ ಕಾರಿನಲ್ಲಿ ತಯಾರಿಸಿದ ತಾಜಾ ಸ್ಥಳೀಯ ಆಹಾರವನ್ನು ನೀಡಲಾಗುತ್ತದೆ. ಈ ಪ್ಯಾಕೇಜ್‌ನಲ್ಲಿ 3 ಟೈರ್ ಎ.ಸಿ.ರೈಲಿನಲ್ಲಿ ಪ್ರಯಾಣ, ಊಟ, ವಸತಿ, ಸ್ಥಳೀಯ ಸಾರಿಗೆ ಮತ್ತು ದರ್ಶನದ ವ್ಯವಸ್ಥೆ ಇರುತ್ತದೆ. ಯಾತ್ರಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ವೈದ್ಯಕೀಯ ಸಹಾಯ ವ್ಯವಸ್ಥೆ ಕೂಡ ಇರುತ್ತದೆ ಎಂದು ಸರ್ಕಾರ ತಿಳಿಸಿದೆ.
ವರ್ಷದಲ್ಲಿ 1200 ಜನ ಅರ್ಚಕರು ಹಾಗೂ 1200 ಅರ್ಚಕರ ಕುಟುಂಬದ ಒಬ್ಬ ಸದಸ್ಯರು ಒಟ್ಟು 2400 ಜನರನ್ನು ಉಚಿತವಾಗಿ ಯಾತ್ರೆದೆ ಕಳುಹಿಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ. ಇನ್ನು ಯಾತ್ರೆಗೆ ಹೋಗಲು https://www.irctctourism.com ವೆಬ್ಸೈಟ್ನಲ್ಲಿ ಟಿಕೆಟ್ ಬುಕ್ ಮಾಡಬಹುದು ಎಂದು ಸರ್ಕಾರ ಮಾಹಿತಿ ನೀಡಿದೆ.