ಡಿಜಿಟಲ್ ಯುಗದಲ್ಲಿ ಹಣ, ಮಾಹಿತಿ ಮುಂತಾದ ವಿಷಯಗಳನ್ನು ಸುರಕ್ಷಿತವಾಗಿಡಬೇಕಾದುದು ಅತಿ ಮುಖ್ಯವಾಗಿದೆ. ತುಸು ಮೈ ಮರೆತರೂ ನಮ್ಮ ಹಣ, ದಾಖಲೆಗಳನ್ನು ಸೈಬರ್ ವಂಚಕರು ಕ್ಷಣಾರ್ಧದಲ್ಲಿ ಮಾಯ ಮಾಡಿಬಿಡುತ್ತಾರೆ. ಇಂತಹವುಗಳನ್ನು ರಕ್ಷಿಸಲು ಬ್ಯಾಂಕ್‌ಗಳು, ಜಿಮೇಲ್ ಹಾಗೂ ವೆಬ್‌ಸೈಟ್ ಮಾಹಿತಿಗಳನ್ನು ರಕ್ಷಿಸಲು ಒಟಿಪಿಯ ಮೂಲಕ ಎರಡು ರೀತಿಯ ರಕ್ಷಣಾ ವಿಧಾನಕ್ಕೆ ಮುಂದಾಗುತ್ತವೆ. ಸುರಕ್ಷತೆಗೆ ಒಟಿಪಿ ಅತ್ಯಗತ್ಯವಾಗಿರುವ ಕಾರಣ ಎಲ್ಲ ಸಂಸ್ಥೆಗಳು ನಮ್ಮ ಮೊಬೈಲ್‌ಗಳಿಗೆ ಒಟಿಪಿಯನ್ನು ರವಾನಿಸುತ್ತವೆ.
ಹಲವು ಒಟಿಪಿಗಳು ನಮ್ಮ ಮೊಬೈಲ್‌ಗೆ ಬರುವ ಕಾರಣ ಬ್ಯಾಂಕಿಂಗ್, ಪ್ರಮುಖವಾದ ದಾಖಲೆಗಳ ನೂತನ ಒಟಿಪಿಗಳನ್ನು ಹುಡುಕುವುದು ಕಷ್ಟವಾಗುತ್ತದೆ. ಒಮ್ಮೆಮ್ಮೆ ನಿಗದಿಪಡಿಸಿದ ಅವಧಿಗಿಂತಲೂ ತುಂಬ ಸಮಯ ತೆಗೆದುಕೊಳ್ಳುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಗೂಗಲ್ ಬಳಕೆದಾರರಿಗೆ 24 ಗಂಟೆಗಳ ನಂತರ ಒಟಿಪಿ ಸಂದೇಶಗಳನ್ನು ಸ್ವಯಂಚಾಲಿತವಾಗಿ ಅಳಿಸುವ ಫೀಚರ್ ನೀಡುತ್ತಿದೆ
ಇದನ್ನು ಸಕ್ರಿಯಗೊಳಿಸಲು ಈ ವಿಧಾನವನ್ನು ಅನುಸರಿಸಿ. ಸಾಮಾನ್ಯವಾಗಿ ಅಧಿಕವಾಗಿ ಆಂಡ್ರಾಯ್ಡ್ ಡಿವೈಸ್‌ಗಳು ಈಗ ಡೀಫಾಲ್ಟ್ ಮೆಸೇಜಿಂಗ್ ಅಪ್ಲಿಕೇಶನ್‌ನಂತೆ ಇರುತ್ತವೆ. ಈ ವಿಧಾನವನ್ನು ಸಕ್ರಿಯಗೊಳಿಸಲು ಗೂಗಲ್ ಸಂದೇಶಗಳು ನಿಮ್ಮ ಡೀಫಾಲ್ಟ್ ಸಂದೇಶ ಕಳುಹಿಸುವಿಕೆಯ ಅಪ್ಲಿಕೇಶನ್ ಆಗಿರಬೇಕು.
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ
ಮೊದಲಿಗೆ ನಿಮ್ಮ ಗೂಗಲ್ ಸಂದೇಶಗಳ ಅಪ್ಲಿಕೇಶನ್ ತೆರೆಯಿರಿ ಮತ್ತು ಸಂದೇಶ ಸೆಟ್ಟಿಂಗ್‌ಗಳಿಗೆ ನ್ಯಾವಿಗೇಟ್ ಮಾಡಲು ಮೇಲ್ಭಾಗದಲ್ಲಿರುವ ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡಿ ಮತ್ತು ಸಂದೇಶಗಳನ್ನು ಸಂಘಟಿಸಿ ಟ್ಯಾಪ್ ಮಾಡಿ. ನಂತರ ಅಂತಿಮವಾಗಿ 24 ಗಂಟೆಗಳ ನಂತರ ಒಂದು-ಬಾರಿ ಪಾಸ್‌ವರ್ಡ್‌ಗಳನ್ನು ಸ್ವಯಂಚಾಲಿತವಾಗಿ ತೆಗೆದುಹಾಕಿ ಆಯ್ಕೆಯನ್ನು ಸಕ್ರಿಯಗೊಳಿಸಿ. ಆ ನಂತರದಲ್ಲಿ 24 ಗಂಟೆಗಳ ನಂತರ ನಿಮ್ಮ ಫೋನ್‌ನಲ್ಲಿ ನೀವು ಒಟಿಪಿ ಸಂದೇಶವನ್ನು ಸ್ವೀಕರಿಸುತ್ತೀರಿ. ಮುಂದಿನ ದಿನಗಳಿಂದ ನಿಮ್ಮ ಒಟಿಪಿ ಸಂದೇಶಗಳು 24 ಗಂಟೆಗಳ ನಂತರ ಸ್ವಯಂಚಾಲಿತವಾಗಿ ಅಳಿಸಲಾಗುತ್ತದೆ.
ಆನ್‌ಲೈನ್ ಮೂಲಕ ಹೊಸ ಪಾಸ್‌ಪೋರ್ಟ್ ಪಡೆಯಲು ಸುಲಭ ವಿಧಾನ
ಶಿಕ್ಷಣ, ಉದ್ಯೋಗ ಯಾವುದೇ ಕಾರಣಕ್ಕಾಗಿ ವಿದೇಶಗಳಿಗೆ ತೆರಳಲು ಪಾಸ್‌ಪೋರ್ಟ್ ಅತ್ಯಗತ್ಯವಾಗಿದೆ. ಕೇಂದ್ರ ಸರ್ಕಾರವು ವಿದೇಶಾಂಗ ವ್ಯವಹಾರಗಳ ಸಚಿವಾಲಯದಡಿ ಪಾಸ್‌ಪೋರ್ಟ್ ದಾಖಲೆಯನ್ನು ನೀಡುತ್ತದೆ. ಒಂದು ರಾಷ್ಟ್ರ ತನ್ನ ದೇಶದ ನಾಗರಿಕನಿಗೆ ಇನ್ನೊಂದು ದೇಶಕ್ಕೆ ಪ್ರವಾಸ ಮಾಡಲು ಮತ್ತು ಈ ವ್ಯಕ್ತಿಯ ಗುರುತು ಮತ್ತು ರಾಷ್ಟ್ರೀಯತೆಯನ್ನು ಗುರುತಿಸಲು ನೀಡಲಾಗುವ ಅತಿ ಮುಖ್ಯ ದಾಖಲೆಯಾಗಿದೆ. ಈಗ ಪಾಸ್‌ಪೋರ್ಟ್ ಪಡೆಯಲು ಕಚೇರಿಗಳು ಅಥವಾ ಮಧ್ಯಸ್ಥಗಾರರ ಬಳಿ ಅಲೆಯಬೇಕಾಗಿಲ್ಲ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ನಿಮ್ಮ ಮನೆಗೆ ಬಂದು ತಲುಪುತ್ತದೆ. ಪಾಸ್‌ಪೋರ್ಟ್‌ನಲ್ಲಿ ಹೆಸರು, ಹುಟ್ಟಿದ ದಿನಾಂಕ, ಲಿಂಗ ಮತ್ತು ಹುಟ್ಟಿದ ಸ್ಥಳಗಳು ಆ ವ್ಯಕ್ತಿ ಗುರುತಿನ ಅಂಶಗಳನ್ನು ಹೊಂದಿರುತ್ತದೆ.
ಪಾಸ್‌ಪೋರ್ಟ್ ಪಡೆಯಲು ಅರ್ಜಿದಾರರು ಭಾರತದ ಪ್ರಜೆಯಾಗಿರಬೇಕು. ಇದರೊಂದಿಗೆ ಈ ಅರ್ಜಿ ಸಲ್ಲಿಸುವ ಸಮಯದಲ್ಲಿ ನೀವು ಕನಿಷ್ಠ 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಜನನ ಪ್ರಮಾಣಪತ್ರ ಅಥವಾ ನಿಮ್ಮ ಮತದಾರರ ಕಾರ್ಡ್ ಐಡಿಯನ್ನು ನೀಡಬಹುದು. ಇದರ ಕ್ರಮವಾಗಿ ವಿಳಾಸ ಪುರಾವೆಯಡಿಯಲ್ಲಿ ನೀವು ವಿದ್ಯುತ್ ಬಿಲ್, ಆಧಾರ್ ಕಾರ್ಡ್ ಅಥವಾ ಬಾಡಿಗೆ ಒಪ್ಪಂದ ಪತ್ರ, ಆದಾಯ ತೆರಿಗೆ ಮೌಲ್ಯಮಾಪನ ಆದೇಶ, ಚುನಾವಣಾ ಆಯೋಗದ ಫೋಟೋ ಐಡಿಯನ್ನು ಹೊಂದಿರಬೇಕು.
ಆನ್‌ಲೈನ್ ಮೂಲಕ ಪಾಸ್‌ಪೋರ್ಟ್ ಪಡೆಯುವ ಬಗೆ
- ಮೊದಲಿಗೆ ನೀವು ಪಾಸ್‌ಪೋರ್ಟ್ ಸೇವಾ ಆನ್‌ಲೈನ್ ಪೋರ್ಟಲ್‌ಗೆ (Passport Seva Online Portal) ಭೇಟಿ ನೀಡಿ
- ಈಗ ನೋಂದಾಯಿಸಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನೋಂದಾಯಿತ ಲಾಗಿನ್ ಐಡಿಯನ್ನು ಬಳಸಿಕೊಂಡು ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
- ತಾಜಾ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿ/ಪಾಸ್‌ಪೋರ್ಟ್‌ನ ಮರು-ಸಂಚಿಕೆ ಕ್ಲಿಕ್ಕಿಸಿ.
- ನಮೂನೆಯಲ್ಲಿ ತಿಳಿಸಿದಂತೆ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಭರ್ತಿ ಮಾಡಿದ ನಂತರ ಫಾರ್ಮ್ ಅನ್ನು ಸಲ್ಲಿಸಿ.
- View ಉಳಿಸಿದ/ಸಲ್ಲಿಸಲಾದ ಅಪ್ಲಿಕೇಶನ್‌ಗಳು ಸ್ಕ್ರೀನ್ ಅಪಾಯಿಂಟ್‌ಮೆಂಟ್ ಅನ್ನು ನಿಗದಿಪಡಿಸಲು ಪಾವತಿ ಮತ್ತು ವೇಳಾಪಟ್ಟಿ ನೇಮಕಾತಿ ಲಿಂಕ್‌ಅನ್ನು ಕ್ಲಿಕ್ಕಿಸಿ.
- ಎಲ್ಲ PSK/POPSK/PO ನಲ್ಲಿ ಅಪಾಯಿಂಟ್‌ಮೆಂಟ್‌ಗಳನ್ನು ಬುಕಿಂಗ್ ಮಾಡಲು ಅಪಾಯಿಂಟ್‌ಮೆಂಟ್‌ಗಳನ್ನು ಬುಕಿಂಗ್ ಮಾಡಲು ಆನ್‌ಲೈನ್ ಪಾವತಿ ಕಡ್ಡಾಯವಾಗಿದೆ.
- ಈಗ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್, ಎಸ್‌ಬಿಐ ಬ್ಯಾಂಕ್ ಚಲನ್, ಇಂಟರ್‌ನೆಟ್ ಬ್ಯಾಂಕಿಂಗ್ ಬಳಸಿಕೊಂಡು ಪಾವತಿಸಬಹುದು.
- ಇದರ ನಂತರ ಅಪ್ಲಿಕೇಶನ್ ರೆಫರೆನ್ಸ್ ಸಂಖ್ಯೆ (ARN) ಅಥವಾ ನೇಮಕಾತಿ ಸಂಖ್ಯೆಯನ್ನು ಹೊಂದಿರುವ ಅಪ್ಲಿಕೇಶನ್ ರಶೀದಿಯನ್ನು ಮುದ್ರಿಸಲು ‘ಅರ್ಜಿ ರಶೀದಿ’ಯನ್ನು ಮುದ್ರಿಸುವ ಆಯ್ಕೆಯ ಕ್ಲಿಕ್ ಮಾಡಿ.
ಸೂಚನೆ:
ನಿಮ್ಮ ಪಾಸ್‌ಪೋರ್ಟ್ ಕಚೇರಿಗೆ ಭೇಟಿ ನೀಡಿದಾಗ ಮೊಬೈಲ್ ಸಂಖ್ಯೆಗೆ ಸ್ವೀಕರಿಸಿದ ಎಸ್‌ಎಂಎಸ್ ಅಪಾಯಿಂಟ್‌ಮೆಂಟ್ ವಿವರಗಳನ್ನು ಒಳಗೊಂಡಿರುವುದರಿಂದ ಅರ್ಜಿದಾರರು ಅರ್ಜಿಯ ರಸೀದಿಯ ಪ್ರಿಂಟ್‌ಔಟ್ ಅನ್ನು ತೆಗೆದುಕೊಂಡು ಹೋಗಬೇಕಾಗಿಲ್ಲ. ಅಲ್ಲದೆ ಅರ್ಜಿದಾರರು ತಮ್ಮ ಎಲ್ಲ ಮೂಲ ದಾಖಲೆಗಳನ್ನು ಪಾಸ್‌ಪೋರ್ಟ್ ಸೇವಾ ಕೇಂದ್ರ (ಪಿಎಸ್‌ಕೆ)/ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ (ಆರ್‌ಪಿಒ)ಗೆ ಒಯ್ಯಬೇಕಾಗುತ್ತದೆ.