KEA: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ವು ಕಳೆದ ಅಕ್ಟೋಬರ್ 27 ಗ್ರಾಮ ಆಡಳಿತ ಅಧಿಕಾರಿ (VAO) ನೇಮಕಾತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಪರೀಕ್ಷಾ ಫಲಿತಾಂಶದ ಬಗ್ಗೆ ಎದುರು ನೋಡುತ್ತಿದ್ದಾರೆ. ಶೀಘ್ರವೇ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಮಧ್ಯೆ ಕಟ್ ಆಫ್ ಅಂಕಗಳು ಎಷ್ಟಿರಲಿವೆ?, ಫಲಿತಾಂಶ ಪರಿಶೀಲನೆ ಹೇಗೆ ಎಂಬುದರ ಅಪ್ಡೇಟ್ ಇಲ್ಲಿದೆ.
ವಿಲೇಜ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ (VAO) ಲಿಖಿತ ಪರೀಕ್ಷೆಗೆ ಸಾವಿರಾರು ಅಭ್ಯರ್ಥಿಗಳು ಹಾಜರಾಗಿದ್ದರು. ಗ್ರಾಮ ಆಡಳಿತ ಹುದ್ದೆಗಳಿಗೆ ಆಸೆ ಪಟ್ಟು ಪರೀಕ್ಷೆ ಬರೆದವರು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ಕಟಾಪ್ ಅಂಕಗಳ ಮಾಹಿತಿ ಒದಗಿಸಲಾಗಿದೆ.9
ಆದಷ್ಟು ಶೀಘ್ರವೇ VAO ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಫಲಿತಾಂಶವನ್ನು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್cetonline.karnataka.gov.in/kea ನಲ್ಲಿ ಪ್ರಕಟಗೊಳ್ಳಲಿದೆ.
ನಂತರ ಫಲಿತಾಂಶವು ಅಭ್ಯರ್ಥಿಗಳ ಅಂಕಗಳು ಮತ್ತು ದಾಖಲಾತಿ ಪರಿಶೀಲನೆ (ಕೌನ್ಸೆಲಿಂಗ್)ಯಂತಹ ಮುಂದಿನ ಸುತ್ತುಗಳನ್ನು ಒಳಗೊಂಡಿರುತ್ತದೆ. ಬಿಡುಗಡೆಯ ದಿನಾಂಕ ಗೊತ್ತಾಗಬೇಕಿದೆ.
ವಿವಿಧ ವರ್ಗಗಳಿಗೆ ನಿರೀಕ್ಷಿತ ಕಟ್-ಆಫ್ ಸ್ಕೋರ್ ವಿವರ
ಸಾಮಾನ್ಯ ವರ್ಗದವರಿಗೆ 70 ರಿಂದ 75 ಅಂಕಗಳು
ಪರಿಶಿಷ್ಟ ಜಾತಿ: 55 ರಿಂದ 60
ಪರಿಶಿಷ್ಟ ಪಂಗಡ: 50 ರಿಂದ 55
ಓಬಿಸಿ : 65 ರಿಂದ 70
ಈ ವರ್ಷ ನಡೆದ ಗ್ರಾಮ ಆಡಳಿತ ಅಧಿಕಾರಿ (VAO) ಲಿಖಿತ ಪರೀಕ್ಷೆಗಳು ಎರಡು ಪತ್ರಿಕೆ ಹೊಂದಿತ್ತು. ಎರಡು ಪರೀಕ್ಷೆಗಳನ್ನು ಒಂದೇ ದಿನದ ನಡೆಸಲಾಗಿತ್ತು. ತಲಾ ಒಂದು ಪರೀಕ್ಷೆ 100 ಅಂಕಗಳ ಬಹು ಆಯ್ಕೆಯ ಪ್ರಶ್ನೆಗಳನ್ನು ಹೊಂದಿತ್ತು. ಪ್ರತಿ ಸರಿಯಾದ ಉತ್ತರಕ್ಕೆ ಒಂದು ಅಂಕದಂತೆ ನೂರು ಅಂಕಗಳು ನೀಡಲಾಗುತ್ತದೆ ಎಂದು ಕೆಇಎ ತಿಳಿಸಿದೆ.
ಅದಷ್ಟಲ್ಲೇ ನಕಾರಾತ್ಮಕ/ ತಪ್ಪು ಉತ್ತರ ಹಾಕಿದವರೆಗೆ ಪ್ರತಿ ತಪ್ಪಾದ ಉತ್ತರಕ್ಕೆ 0.25 ಅಂಕಗಳನ್ನು ಕಡಿತಗೊಳಿಸಲಾಗುವುದು.
ಈ ಪರೀಕ್ಷೆಯನ್ನು ಅಭ್ಯರ್ಥಿಗಳ ಕಂಪ್ಯೂಟರ್ ಜ್ಞಾನ, ಕೌಶಲ್ಯ, ಸಾಮಾನ್ಯ ಇಂಗ್ಲಿಷ್ ಮತ್ತು ಕನ್ನಡ ಭಾಷೆಯ ಜ್ಞಾನ ಸಹಿತ ಮೌಲ್ಯಮಾಪನ ಮಾಡಲಾಗಿದೆ.
ಕಟ್-ಆಫ್ ಅಂಕಗಳ ಹೊರತಾಗಿಯು ಅಭ್ಯರ್ಥಿಗಳು ಅಗತ್ಯಕ್ಕೆ ತಕ್ಕ ಅಂಕಗಳನ್ನು ಗಳಿಸಿರಬೇಕು. ಅಧಿಕ ಅಂಕ ಪಡೆದರೆ ನೀವು ನೇಮಕಾತಿಯ ಮುಂದಿನ ಹಂತಕ್ಕೆ ತೆರಳಲು ಸಾಧ್ಯವಾಗುತ್ತದೆ. ಪರೀಕ್ಷ ಬರೆದ ಅಭ್ಯರ್ಥಿಗಳ ಒಟ್ಟು ಸಂಖ್ಯೆ, ಪ್ರಶ್ನೆ ಪತ್ರಿಕೆಯಲ್ಲಿ ತೋರಿದ ನಕಾರತ್ಮಕ ಮಟ್ಟ ಹಾಗೂ ಒಟ್ಟು ಖಾಲಿ ಹುದ್ದೆಗಳು ಕಟ್-ಆಫ್ ಸ್ಕೋರ್ ಮೇಲೆ ಪ್ರಭಾವ ಬೀರುತ್ತದೆ ಎಂದು ಕೆಇಎ ತಿಳಿಸಿದೆ.
ಕಟ್ ಆಫ್ ಅಂಕ ಪರಿಗಣಿಸಿ, ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಅದರ ಆಧಾರದಲ್ಲಿ ಮುಂದಿನ ನೇಮಕಾತಿ ಪ್ರಕ್ರಿಯೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಮೆರಿಟ್ ಲಿಸ್ಟ್ ಅನ್ನು ಬಿಡುಗಡೆ ಬಳಿಕ ಗಮನಿಸಬೇಕು.
ಅಗತ್ಯದಷ್ಟು ಅಂಕ, ಅರ್ಹತೆ, ದಾಖಲಾತಿ ಪರಿಶೀಲನೆಯು ಹಾಘೂ ಅಭ್ಯರ್ಥಿಗಳ ಪರೀಕ್ಷೆಯ ಕಾರ್ಯಕ್ಷಮತೆಯ ಆಧಾರದ ಮೇಲೆ ಶ್ರೇಯಾಂಕ ನೀಡಲಾಗುತ್ತದೆ. ನೇಮಕಾತಿ ಪೂರ್ಣ ಮಾಹಿತಿಯು ನ್ಯಾಯಯುತ ಮತ್ತು ಪಾರದರ್ಶಕದಿಂದ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರೀಕ್ಷಾ ಫಲಿತಾಂಶ ತಿಳಿಯುವ ವಿಧಾನ
* ಅಭ್ಯರ್ಥಿಗಳು ಪರೀಕ್ಷಾ ಫಲಿತಾಂಶ ನೋಡಲು ಅಧಿಕೃತ KEA ವೆಬ್‌ಸೈಟ್‌ಗೆ (cetonline.karnataka.gov.in.) ಭೇಟಿ ನೀಡಬೇಕು.
* ಫಲಿತಾಂಶ ಬಿಡುಗಡೆ ನಂತರ KEA VAO ಲಿಖಿತ ಪರೀಕ್ಷೆ 2024 ಫಲಿತಾಂಶದ ಲಿಂಕ್ ಮೇಲೆ ಲಿಂಕ್ ಮಾಡಿ.
* ನೀಡಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ಹಾಕಿ ಲಾಗಿನ್ ಆಗಬೇಕು.
* ನಂತರ ಪರದೆ ಮೇಲೆ ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ ಫಲಿತಾಂಶ PDF ಪರದೆಯ ಮೇಲೆ ಕ್ಲಿಕ್ ಮಾಡಬೇಕು.
* ಮುಂದಿನ ಪ್ರಕ್ರಿಯೆಗಾಗಿ ಆ ಫಲಿತಾಂಶದ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.