PGCIL Recruitment 2024 : ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್​​​ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

PGCIL Recruitment 2024 : ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್​​​ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪದವಿ ಹಾಗೂ ಡಿಪ್ಲೊಮಾವನ್ನು ಪೂರ್ಣಗೊಳಿಸಿದವರು ಉದ್ಯೋಗದ ಹುಡುಕಾಟದಲ್ಲಿದ್ದರೆ ಅಂತಹವರಿಗಾಗಿ, ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ವಿವಿಧ ಹುದ್ದೆಗಳು ಖಾಲಿಯಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ, ವೇತನ ಹಾಗೂ ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಸೇರಿದಂತೆ ವಿವಿಧ ಮಾಹಿತಿಯೂ ಇಲ್ಲಿದೆ.



ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (PGCIL) ಡಿಪ್ಲೊಮಾ ಟ್ರೈನಿ ಮತ್ತು ಜೂನಿಯರ್ ಆಫೀಸರ್ ಟ್ರೈನಿ ಮತ್ತು ಅಸಿಸ್ಟೆಂಟ್ ಟ್ರೈನಿ ಸೇರಿದಂತೆ ಖಾಲಿಯಿರುವ 802 ಹುದ್ದೆಗಳ ಭರ್ತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತಿ ಹೊಂದಿರುವ ಹಾಗೂ ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://www.powergrid.in/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ

* ಡಿಪ್ಲೊಮಾ ಟ್ರೈನಿ (ಎಲೆಕ್ಟ್ರಿಕಲ್) : 600

* ಡಿಪ್ಲೊಮಾ ಟ್ರೈನಿ (ಸಿವಿಲ್) : 66

* ಜೂನಿಯರ್ ಆಫೀಸರ್ ಟ್ರೈನಿ (ಹೆಚ್ ಆರ್ ) : 79

* ಜೂನಿಯರ್ ಆಫೀಸರ್ ಟ್ರೈನಿ (ಎಫ್& ಎ): 35

* ಸಹಾಯಕ ಟ್ರೇನಿ (ಎಫ್ & ಎ ) : 22

* ಒಟ್ಟು ಹುದ್ದೆಗಳು : 802

ಅರ್ಜಿ ಶುಲ್ಕ

* ಡಿಪ್ಲೊಮಾ ಟ್ರೈನಿ ಮತ್ತು ಜೂನಿಯರ್ ಆಫೀಸರ್ ಟ್ರೈನಿ ಹುದ್ದೆಗಳಿಗೆ ರೂ 300.

* ಅಸಿಸ್ಟೆಂಟ್ ಟ್ರೈನಿ (ಎಫ್&ಎ) ಹುದ್ದೆಗಳಿಗೆ ರೂ 200.

* ಎಸ್ ಸಿ /ಎಸ್ ಟಿ / ವಿಕಲಚೇತನ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕಗಳು ಇರುವುದಿಲ್ಲ.

ಆಯ್ಕೆ ಪ್ರಕ್ರಿಯೆಗಳು
* ಲಿಖಿತ ಪರೀಕ್ಷೆ / ಕಂಪ್ಯೂಟರ್ ಆಧಾರಿತ ಪರೀಕ್ಷೆ

* ಕಂಪ್ಯೂಟರ್ ಕೌಶಲ್ಯ ಪರೀಕ್ಷೆ (ಜೂನಿಯರ್ ಆಫೀಸರ್ ಟ್ರೈನಿ ಮತ್ತು ಅಸಿಸ್ಟೆಂಟ್ ಟ್ರೈನಿಗಳ ಆಯ್ಕೆಗಾಗಿ).

ಅಭ್ಯರ್ಥಿಗೆ ಇರಬೇಕಾದ ಅರ್ಹತೆಗಳು

* ಡಿಪ್ಲೊಮಾ ಟ್ರೈನಿ (ಎಲೆಕ್ಟ್ರಿಕಲ್/ಸಿವಿಲ್) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಡಿಪ್ಲೊಮಾ (ಸಂಬಂಧಿತ ಎಂಜಿನಿಯರಿಂಗ್) ಪದವಿ ಹೊಂದಿರಬೇಕು.

* ಜೂನಿಯರ್ ಆಫೀಸರ್ ಟ್ರೈನಿ (ಹೆಚ್ ಆರ್ ) ಹುದ್ದೆಗಳಿಗೆ ಪದವಿ (ಬಿಬಿಎ/ ಬಿಬಿಎಂ / ಬಿಬಿಎಸ್ ) ಪಡೆದಿರಬೇಕು.

* ಜೂನಿಯರ್ ಆಫೀಸರ್ ಟ್ರೈನಿ (ಎಫ್&ಎ) ಹುದ್ದೆಗಳಿಗೆ ಅಭ್ಯರ್ಥಿಗಳು ಇಂಟರ್ ಸಿಎ/ಇಂಟರ್ ಸಿಎಂಎ ವಿದ್ಯಾರ್ಹತೆಯನ್ನು ಹೊಂದಿರಬೇಕು.

* ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕನಿಷ್ಠ ವಯಸ್ಸಿನ ಮಿತಿ 18 ವರ್ಷ ಹಾಗೂ ಗರಿಷ್ಠ ಮಿತಿ 27 ವರ್ಷ ವಯಸ್ಸು ಮೀರಿರಬಾರದು.

ಪ್ರಮುಖ ದಿನಾಂಕಗಳು

* ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಮತ್ತು ಶುಲ್ಕ ಪಾವತಿ: 22-10-2024

* ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಗೆ ಕೊನೆಯ ದಿನಾಂಕ: 12-11-2024

* ಪರೀಕ್ಷೆಯ ದಿನಾಂಕ:- ಜನವರಿ/ಫೆಬ್ರವರಿ 2025 ಆಗಿದ್ದು, ನಿಖರವಾದ ದಿನಾಂಕವನ್ನು ವೆಬ್‌ಸೈಟ್‌ನಲ್ಲಿ ಪ್ರತ್ಯೇಕವಾಗಿ ತಿಳಿಸಲಾಗುವುದು.

Post a Comment

Previous Post Next Post

Top Post Ad

CLOSE ADS
CLOSE ADS
×