ಅಲ್ಪಸಂಖ್ಯಾತ ಅಭಿವೃದಿ ನಿಗಮದಿಂದ ಉಚಿತವಾಗಿ 15 ದಿನದ ಡ್ರೋನ್ ಆಪರೇಟರ್ ತರಬೇತಿ(Drone operator training) ಪಡೆಯಲು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಲು ಅವಕಾಶ ನೀಡಲಾಗಿದೆ.
ಅರ್ಹ ನಿರುದ್ಯೋಗಿ ಯುವಕ/ಯುವತಿಯರು ಕೊನೆಯ ದಿನಾಂಕದ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ತರಬೇತಿಯನ್ನು ಪಡೆಯಬಹುದು. ಅಲ್ಪಸಂಖ್ಯಾತ ಅಭಿವೃದಿ ನಿಗಮದಿಂದ ಡ್ರೋನ್ ಆಪರೇಟರ್ ತರಬೇತಿ ಜೊತೆಗೆ ಇತರೆ ತರಬೇತಿಯನ್ನು ಪಡೆಯಬಹುದಾಗಿದೆ.
ಈ ತರಬೇತಿಗಳನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ತರಬೇತಿಯ ಕುರಿತು ಮಾಹಿತಿ ಮತ್ತು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ದಾಖಲೆಗಳು ಸೇರಿದಂತೆ ಸಂಪೂರ್ಣ ವಿವರವನ್ನು ಅಂಕಣದಲ್ಲಿ ತಿಳಿಸಲಾಗಿದೆ.
Drone Operator Training Details- ಯಾವೆಲ್ಲ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ?
1) ಹೆವಿ ವೆಹಿಕಲ್ ಡ್ರೈವಿಂಗ್
2) ಬ್ಯೂಟಿ ಪಾರ್ಲರ್ ಕೋರ್ಸ್ (ಪುರುಷ ಮತ್ತು ಮಹಿಳೆಯರಿಗೆ)
3) ಡ್ರೋನ್ ಚಾಲನ ತರಬೇತಿ
Documents- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ದಾಖಲೆಗಳು:
1) ಆಧಾರ್ ಕಾರ್ಡ್ ಪ್ರತಿ (ನಿವಾಸದ ಪುರಾವೆ)
2) ಬ್ಯಾಂಕ್ ಪಾಸ್ ಬುಕ್
3) ಎಸ್ ಎಸ್ ಎಲ್ ಸಿ/ಪಿಯುಸಿ/ಡಿಪ್ಲೋಮಾ/ಡಿಗ್ರಿ ಅಂಕಪಟ್ಟಿ
4) ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ/ಅಲ್ಪಸಂಖ್ಯಾತ ಪ್ರಮಾಣಪತ್ರ
5) ಆದಾಯ ಪ್ರಮಾಣಪತ್ರ
6) ಸ್ವಯಂ ಘೋಷಣೆ ಪತ್ರ(Download form)
Who can apply- ತರಬೇತಿಯನ್ನು ಪಡೆಯಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು?
- ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ವರ್ಗಕ್ಕೆ ಸೇರಿದ ಯುವಕ/ಯುವತಿಯರು ಅರ್ಜಿ ಸಲ್ಲಿಸಬಹುದು.
- ಅರ್ಜಿದಾರರ ವಯಸ್ಸು 18 ರಿಂದ 45 ವರ್ಷದ ಒಳಗಿರಬೇಕು.
- ಅರ್ಜಿದಾರರು ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
- ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ಎಲ್ಲಾ ಮೂಲಗಳಿಂದ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 6,00,000/- ಗಿಂತ ಕಡಿಮೆಯಿರಬೇಕು.
- ಆಯ್ಕೆಯಾದ ಅರ್ಜಿದಾರರು ಕಡ್ಡಾಯವಾಗಿ ತರಬೇತಿಯನ್ನು ಪೂರ್ಣಗೊಳಿಸಬೇಕು.
- ಅರ್ಜಿದಾರರು ಈ ಹಿಂದೆ ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವುದೇ ಯೋಜನೆಗಳಲ್ಲಿ ತರಬೇತಿ ಪಡೆದಿರಬಾರದು.
Application last date- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 05 ಡಿಸೆಂಬರ್ 2024 ಕೊನೆಯ ದಿನಾಂಕವಾಗಿರುತ್ತದೆ.
Drone operator Online application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಆಸಕ್ತ ಅಭ್ಯರ್ಥಿಗಳು ಕೆಳಗಿನ ವಿಧಾನವನ್ನು ಅನುಸರಿಸಿ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ತಮ್ಮ ಮೊಬೈಲ್ ನಲ್ಲೇ ಅರ್ಜಿಯನ್ನು ಸಲ್ಲಿಸಬೇಕು.
Step-1: ಮೊದಲಿಗೆ Drone operator training ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.
Step-2: ಇದಾದ ನಂತರ ಇಲ್ಲಿ ನಿಮ್ಮ 10 ಅಂಕಿಯ ಮೊಬೈಲ್ ನಂಬರ್ ಅನ್ನು ಹಾಕಿ “ಸಲ್ಲಿಸಿ” ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅಗಬೇಕು.
Step-3: ಲಾಗಿನ್ ಅಗಿ ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.