Uchita holige yantra-ಮಹಿಳೆಯರು ಕೇಂದ್ರ ಸರಕಾರದ ಯೋಜನೆಯಡಿ ಉಚಿತವಾಗಿ ಹೊಲಿಗೆ ಯಂತ್ರವನ್ನು ಪಡೆಯಲು ಅವಕಾಶವಿದ್ದು ಈ ಯೋಜನೆಯ(free sewing machine scheme) ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.
ಬಹುತೇಕ ಗೃಹಿಣಿಯರು ಹೊಲಿಗೆ ತರಬೇತಿಯನ್ನು ಪಡೆದು ತಮ್ಮ ಮನೆಯಲ್ಲೇ ಬಿಡುವಿನ ಸಮಯದಲ್ಲಿ ಟೈಲರಿಂಗ್ ಗೆ ಸಂಬಂಧಪಟ್ಟ ಕೆಲಸಗಳನ್ನು ಮಾಡಲು ಆಸಕ್ತಿ ಹೊಂದಿರುತ್ತಾರೆ ಇಂತಹ ಮಹಿಳೆಯರಿಗೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ಸೌಲಭ್ಯ ಪಡೆಯಲು ಅವಕಾಶವಿದೆ.
ಏನಿದು ಪ್ರಧಾನ ಮಂತ್ರಿ ವಿಶ್ವಕರ್ಮ(PM vishwakarma ) ಯೋಜನೆ? ಯಾರೆಲ್ಲ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅಗತ್ಯ ದಾಖಲೆಗಳೇನು? ಈ ಕುರಿತು ಒಂದಿಷ್ಟು ಮಾಹಿತಿ ಈ ಕೆಳಗೆ ತಿಳಿಸಲಾಗಿದೆ.
Tailoring business- ಟೈಲರಿಂಗ್ ನಲ್ಲಿ ಉತ್ತಮ ಆದಾಯ:
ಗೃಹಿಣಿಯರು ತಮ್ಮ ಮನೆಯಲ್ಲಿ ಬಿಡುವಿನ ಸಮಯದಲ್ಲಿ ಟೈಲರಿಂಗ್ ಕೆಲಸವನ್ನು ಮಾಡಿ ಉತ್ತಮ ಆದಾಯವನ್ನು ಪಡೆಯಲು ಸಾಧ್ಯವಿದ್ದು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ತರಬೇತಿಯನ್ನು ಸಹ ಪಡೆಯಬಹುದಾಗಿದೆ ಇದಲ್ಲದೇ ಹೊಲಿಗೆ ಯಂತದ ಕಿಟ್ ಅನ್ನು ಸಹ ಪಡೆಯಬಹುದು.
50,000ಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ:
ಪ್ರಸ್ತುತ ಈ ಯೋಜನೆಯಡಿ ನಮ್ಮ ರಾಜ್ಯದಲ್ಲಿ 50,000ಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರವನ್ನು ವಿತರಣೆ ಮಾಡುವ ಗುರಿಯನ್ನು ಈ ಯೋಜನೆಯಡಿ ಹಾಕಿಕೊಳ್ಳಲಾಗಿದೆ. ಆಸಕ್ತ ಮಹಿಳೆಯರು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಅರ್ಜಿ ಸಲ್ಲಿಸಬಹುದು.
Who can apply for PM-vishwakarma scheme-ಅರ್ಜಿ ಸಲ್ಲಿಸಲು ಅರ್ಹರು:
- ಅರ್ಜಿದಾರರ ಮಹಿಳೆಯ ವಯಸ್ಸು 18 ವರ್ಷ ತುಂಬಿರಬೇಕು.
- ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
- ಬಿಪಿಎಲ್ ರೇಶನ್ ಕಾರ್ಡ ಹೊಂದಿರಬೇಕು.
- ತರಬೇತಿ ಪಡೆದ ಬಳಿಕ ಟೈಲರಿಂಗ್ ಮಾಡಲು ಆಸಕ್ತಿ ಹೊಂದಿರಬೇಕು.
- ಸರಕಾರಿ ಉದ್ಯೋಗದಲ್ಲಿರುವ ಕುಟುಂಬದವರು ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
PM-vishwakarma application-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ಮಹಿಳೆಯರು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯತಿಯನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು. ಅಥವಾ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರವನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.
Documents-ಅಗತ್ಯ ದಾಖಲೆಗಳು:
1) ಅರ್ಜಿದಾರರ ಪೋಟೋ
2) ಅರ್ಜಿದಾರರ ಆಧಾರ್ ಕಾರ್ಡ
3) ರೇಶನ್ ಕಾರ್ಡ
4) ಬ್ಯಾಂಕ್ ಪಾಸ್ ಬುಕ್
5) ಜಾತಿ ಮತ್ತು ಆದಾಯ ಪ್ರಮಾಣ ಪತ್ರ
6) ಗ್ರಾಮ ಪಂಚಾಯತಿಯಿಂದ ದೃಡೀಕರಣ ಪ್ರಮಾಣ ಪತ್ರ
7) ಮೊಬೈಲ್ ನಂಬರ್
PM-vishwakarma application link-ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್:
Sewing machine subsidy-ಎಷ್ಟು ಸಹಾಯಧನ ನೀಡಲಾಗುತ್ತದೆ?
ಈ ಯೋಜನೆಯಡಿ ಹೊಲಿಗೆ ಯಂತ್ರ ಪಡೆಯಲು ರೂ 15000/- ಅರ್ಥಿಕ ನೆರವು ನೀಡಲಾಗುತ್ತದೆ.
PM-vishwakarma guidelines-ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಮಾರ್ಗಸೂಚಿ ಪ್ರತಿ:
PM-vishwakarma helpline-ಸಹಾಯವಾಣಿ:
080-22386794