Ten Rupee Coin: 10 ರೂಪಾಯಿ ನಾಣ್ಯ ಚಲಾವಣೆಯಲ್ಲಿಲ್ವಾ? ಕಠಿಣ ಸೂಚನೆ ರವಾನಿಸಿದ RBI

ಭಾರತೀಯ ರಿಸರ್ವ್ ಬ್ಯಾಂಕ್ 2 ರಿಂದ 10,000 ರೂಪಾಯಿಗಳ ನೋಟುಗಳನ್ನು ಮುದ್ರಿಸಲು ಅಧಿಕಾರ ಹೊಂದಿದೆ. ಒಂದು ರೂಪಾಯಿ ನೋಟನ್ನು ಆರ್‌ಬಿಐ ಬದಲಿಗೆ ಹಣಕಾಸು ಸಚಿವಾಲಯ ಮುದ್ರಿಸಿದೆ.



ಹಲವು ಅಂಗಡಿಗಳಲ್ಲಿ 10 ರೂ. ನಾಣ್ಯವನ್ನು ಸ್ವೀಕರಿಸುತ್ತಿಲ್ಲ. ಈ ಕುರಿತು ನಾಗರಿಕರು ಆಗಾಗ ದೂರುಗಳನ್ನು ನೀಡುತ್ತಲೇ ಇರುವುದು ಸುದ್ದಿಯಾಗುತ್ತಿದೆ. ಕೆಲವೆಡೆ 10 ರೂ. ನಾಣ್ಯವನ್ನು ಸ್ವೀಕರಿಸಲು ನಿರಾಕರಿಸಿದ ಕಾರಣ ಜಗಳ-ವಾಗ್ವಾದಗಳೂ ಉಂಟಾಗುತ್ತಿವೆ.

ಇತ್ತೀಚಿಗೆ ಹೈದರಾಬಾದ್ ಸೇರಿ ಹಲವು ನಗರಗಳ ಮಾಲ್‌ಗಳು ರೂ.10 ನಾಣ್ಯವನ್ನು ಸ್ವೀಕರಿಸುತ್ತಿಲ್ಲ. ಇತ್ತೀಚೆಗೆ ಹೈದರಾಬಾದ್‌ನ ನಿಲೋಫರ್ ಕೆಫೆಯಲ್ಲಿಯೂ ರೂ.10 ನಾಣ್ಯ ನೀಡಲು ನಿರಾಕರಿಸಿದ್ದಾರೆ. ಯಾಕೆ ಎಂದು ಕೇಳಿದರೆ “ನಮ್ಮಿಂದ ಈ ನಾಣ್ಯವನ್ನು ಯಾರೂ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ನಾವು ಯಾಕೆ ತೆಗೆದುಕೊಳ್ಳಬೇಕು” ಎಂದು ಜಗಳವಾಡುತ್ತಿದ್ದಾರೆ.

ಬಹಳಷ್ಟು ಜನರಿಗೆ ಇದರ ಅರಿವಿಲ್ಲ. ಹೀಗೆ 10 ರೂ. ನಾಣ್ಯವನ್ನು ತೆಗೆದುಕೊಳ್ಳಲು ನಿರಾಕರಿಸಿದರೆ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ. ಹೀಗೆ ಮಾಡಿದರೆ ಏನಾದರೂ ದಂಡವಿದೆಯೇ? 10 ರೂಪಾಯಿ ನಾಣ್ಯ ನಕಲಿ ಅಥವಾ 1 ರೂಪಾಯಿ ನಾಣ್ಯ ಚಲಾವಣೆಯಲ್ಲಿಲ್ಲ ಎಂದು ಹಲವರು ಹೇಳುತ್ತಾರೆ. ಹಾಗೆ ಮಾಡುವುದು ಕಾನೂನಾತ್ಮಕ ಅಪರಾಧ ಎಂಬ ವಿಷಯ ಇನ್ನೂ ಪ್ರಚಲಿತದಲ್ಲಿಲ್ಲ.

ನಿಮಗೂ ಸಹ 10ರೂಪಾಯಿ ನಾಣ್ಯ ಸ್ವೀಕರಿಸದ ಪ್ರಸಂಗ ಎದುರಾದರೆ ಹೇಗೆ ದೂರು ನೀಡಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ನಾಣ್ಯಗಳಿಗೆ ಸಂಬಂಧಿಸಿದ ನಿಯಮಗಳೇನು ಮತ್ತು ನಾಣ್ಯವನ್ನು ತೆಗೆದುಕೊಳ್ಳಲು ನಿರಾಕರಿಸಿದರೆ ಅವರು ಯಾವ ರೀತಿಯ ಶಿಕ್ಷೆಯನ್ನು ಎದುರಿಸಬಹುದು ಎಂಬುದನ್ನು ಇಲ್ಲಿ ನೀವು ತಿಳಿಯಬಹುದು.

ಚಲಾವಣೆಯಲ್ಲಿರುವ ನಾಣ್ಯಗಳನ್ನು ಸ್ವೀಕರಿಸಲು ನಿರಾಕರಿಸುವ ಅಂಗಡಿ ಅಥವಾ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಬಹುದು. ಅವರ ವಿರುದ್ಧ ಭಾರತೀಯ ಕರೆನ್ಸಿ ಕಾಯ್ದೆ ಮತ್ತು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ರಿಸರ್ವ್ ಬ್ಯಾಂಕ್‌ಗೂ ದೂರು ನೀಡಬಹುದು. ಹೀಗೆ ಅಂಗಡಿಯವರ ಅಥವಾ ನಾಣ್ಯಗಳನ್ನು ಸ್ವೀಕರಿಸಲು ನಿರಾಕರಿಸುವವರ ವಿರುದ್ಧ ಕ್ರಮ ಕೈಗೊಳ್ಳಬಹುದು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 489A ನಿಂದ 489E, ನೋಟು ಅಥವಾ ನಾಣ್ಯಗಳ ನಕಲಿ ಮುದ್ರಣ, ನಕಲಿ ನೋಟು ಅಥವಾ ನಾಣ್ಯಗಳ ಚಲಾವಣೆ, ಅಸಲಿ ನಾಣ್ಯಗಳನ್ನು ಸ್ವೀಕರಿಸಲು ನಿರಾಕರಿಸುವುದು ಅಪರಾಧವಾಗಿವೆ. ಈ ಸೆಕ್ಷನ್‌ಗಳ ಅಡಿಯಲ್ಲಿ ದಂಡ, ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಯಾರಾದರೂ ನಿಮ್ಮಿಂದ ನಾಣ್ಯವನ್ನು ತೆಗೆದುಕೊಳ್ಳಲು ನಿರಾಕರಿಸಿದರೆ ನೀವು ಅವರ ವಿರುದ್ಧ ಅಗತ್ಯ ಪುರಾವೆಗಳೊಂದಿಗೆ ಕ್ರಮ ತೆಗೆದುಕೊಳ್ಳಲು ದೂರು ನೀಡಬಹುದಾಗಿದೆ.

ಜೊತೆಗೆ ನಾಣ್ಯಗಳಿಗೆ ಸಂಬಂಧಿಸಿದ ಮಾಹಿತಿಯನ್ನೂ ಆರ್ ಬಿಐ ಹಂಚಿಕೊಂಡಿದೆ. ಅವುಗಳಲ್ಲಿ ಯಾವುದೂ ನಕಲಿ ಅಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ರೂ.10 ನಾಣ್ಯ ಕುರಿತ ವದಂತಿಗಳು ಸುಳ್ಳು ಎಂದು ಆರ್‌ಬಿಐ ಹೇಳಿದೆ.

ವಹಿವಾಟಿಗೆ ನೀವು ಯಾವುದೇ 10 ರೂಪಾಯಿ ನಾಣ್ಯವನ್ನು ಬಳಸಬಹುದು. ಭಾರತೀಯ ರಿಸರ್ವ್ ಬ್ಯಾಂಕ್ 2 ರಿಂದ 10,000 ರೂಪಾಯಿಗಳ ನೋಟುಗಳನ್ನು ಮುದ್ರಿಸಲು ಅಧಿಕಾರ ಹೊಂದಿದೆ. ಒಂದು ರೂಪಾಯಿ ನೋಟನ್ನು ಆರ್‌ಬಿಐ ಬದಲಿಗೆ ಹಣಕಾಸು ಸಚಿವಾಲಯ ಮುದ್ರಿಸಿದೆ. ಇದಕ್ಕೆ ಹಣಕಾಸು ಕಾರ್ಯದರ್ಶಿ ಸಹಿ ಹಾಕಿದ್ದಾರೆ.


Previous Post Next Post