PMMY Loan Scheme : ಕೇಂದ್ರದ ಹೊಸ ಯೋಜನೆಯಡಿ ಸಿಗಲಿದೆ ಬರೋಬ್ಬರಿ 20 ಲಕ್ಷ ಸಾಲ

PMMY Loan Scheme : ಕೇಂದ್ರದ ಹೊಸ ಯೋಜನೆಯಡಿ ಸಿಗಲಿದೆ ಬರೋಬ್ಬರಿ 20 ಲಕ್ಷ ಸಾಲ

ಕೇಂದ್ರ ಸರ್ಕಾರದಿಂದ ಮುದ್ರಾ ಯೋಜನೆ ಇಂದ ಗುಡ್ ನ್ಯೂಸ್, ಇನ್ನು ಮುಂದೆ ದೊರೆಯಲಿದೆ ರೂ.20 ಲಕ್ಷ ಸಾಲ, ಇಲ್ಲಿದೆ ಸಂಪೂರ್ಣ ಮಾಹಿತಿ



ಇಂದು ಪ್ರತಿಯೊಬ್ಬರು ಸ್ವಂತ ಉದ್ಯಮವನ್ನು ಮಾಡಲು ಬಯಸುತ್ತಾರೆ. ಅದಕ್ಕಾಗಿ ಮೊದಲು ಆರ್ಥಿಕವಾಗಿ ಸದೃಢರಾಗಿರಬೇಕು. ಏಕೆಂದರೆ ಯಾವುದೇ ಒಂದು ಉದ್ಯೋಗ ಅಥವಾ ಇನ್ನಾವುದೇ ಕೆಲಸಕ್ಕೆ ಆರ್ಥಿಕತೆ (Economic condition) ಬಹಳ ಅವಶ್ಯಕವಾಗಿರುತ್ತದೆ. ಆದರೆ ಅಷ್ಟೊಂದು ದೊಡ್ಡ ಮೊತ್ತವನ್ನು ಹೊಂದಿಸಲು ಬಹಳ ಕಷ್ಟವಾಗುತ್ತದೆ. ಆದರೆ ಇದೀಗ ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಹೌದು ಏಕೆಂದರೆ, ಕೇಂದ್ರ ಸರ್ಕಾರವು (Central government) ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ (Prime Minister Mudra Yojana) ನೀಡುವ ಸಾಲ(loan)ದ ಮಿತಿಯನ್ನು ರೂ. 20 ಲಕ್ಷಕ್ಕೆ ಹೆಚ್ಚಿಸಿದೆ. ದೇಶದಾದ್ಯಂತ ಉದ್ಯಮಶೀಲತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಇದೊಂದು ಉತ್ತಮ ಯೋಜನೆಯಾಗಿದ್ದು ಹಲವರಿಗೆ ಬಹಳ ಸಹಾಯವಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಏನಿದು ಪ್ರಧಾನ ಮಂತ್ರಿ ಮುದ್ರಾ ಯೋಜನೆ ?

ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಕಾರ್ಪೊರೇಟ್‌ ಅಲ್ಲದ ಕೃಷಿಯೇತರ ಸಣ್ಣ ಮತ್ತು ಅತಿಸಣ್ಣ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡುವುದು ಈ ಯೋಜನೆಯ ಮೂಲ ಉದ್ದೇಶವಾಗಿದ್ದು, ಉದ್ಯಮಗಳಿಗೆ 10 ಲಕ್ಷ ರೂ. ಸಾಲ ನೀಡಲಾಗುತ್ತದೆ. ಈ ಸಾಲಗಳನ್ನು PMMY ಅಡಿಯಲ್ಲಿ ಮುದ್ರಾ ಸಾಲಗಳೆಂದು ವರ್ಗೀಕರಿಸಲಾಗಿದೆ. ಈ ಸಾಲಗಳನ್ನು ವಾಣಿಜ್ಯ ಬ್ಯಾಂಕುಗಳು, RRB ಗಳು, ಸಣ್ಣ ಹಣಕಾಸು ಬ್ಯಾಂಕುಗಳು, MFI ಗಳು ಮತ್ತು NBFC ಗಳು ನೀಡುತ್ತವೆ.

ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಸಾಲದ ಮೊತ್ತ ಹೆಚ್ಚಳ (Increased loan rate) :

ಆದರೆ ಇದೀಗ ಈ ಯೋಜನೆಯಲ್ಲಿ ದೊರೆಯುವ ಸಾಲದ ಮೊತ್ತವನ್ನು ಮತ್ತಷ್ಟು ಹೆಚ್ಚಿಸಲಾಗಿದ್ದು ಪ್ರಧಾನ ಮಂತ್ರಿ ಮುದ್ರಾ ಯೋಜನೆಯಲ್ಲಿ ಸಾಲ ಪಡೆಯುವವರಿಗೆ ಸಹಾಯವಾಗಲಿದೆ. ಜುಲೈನಲ್ಲಿ ಮಂಡನೆಯಾಗಿದ್ದ 2024-25ನೇ ಸಾಲಿನ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Finance Minister Nirmala Sitharaman) ಅವರು, ಸಾಲದ ಮಿತಿ ಏರಿಕೆ ಬಗ್ಗೆ ಪ್ರಸ್ತಾಪಿಸಿದ್ದರು. ತರುಣ್‌ ವಿಭಾಗದಲ್ಲಿ ರೂ. 10 ಲಕ್ಷ ಸಾಲ ಪಡೆದಿದ್ದು, ಸಕಾಲದಲ್ಲಿ ಮರುಪಾವತಿ ಮಾಡಿದವರಿಗಷ್ಟೇ ಈ ಸೌಲಭ್ಯ ಸಿಗಲಿದೆ ಎಂದು ತಿಳಿಸಲಾಗಿದೆ.

ತರುಣ್‌ ಪ್ಲಸ್‌ (Tharun Plus) ವಿಭಾಗದಲ್ಲಿ ರೂ. 10 ಲಕ್ಷದಿಂದ ರೂ. 20 ಲಕ್ಷದವರೆಗೆ ಸಾಲ ಸೌಲಭ್ಯ ಸಿಗಲಿದೆ :

ಹೌದು, ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ತರುಣ್‌ ಪ್ಲಸ್‌ ವಿಭಾಗದಲ್ಲಿ ₹10 ಲಕ್ಷದಿಂದ ₹20 ಲಕ್ಷದವರೆಗೆ ಸಾಲ ಸೌಲಭ್ಯ ಸಿಗಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಸರ್ಕಾರಿ ಬ್ಯಾಂಕ್‌ಗಳು, ಬ್ಯಾಂಕೇತರ ಹಣಕಾಸು ಕಂಪನಿಗಳು, ಕಿರು ಹಣಕಾಸು ಸಂಸ್ಥೆಗಳ ಮೂಲಕ ಅರ್ಹರಿಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತದೆ. ಹಾಗು ಯಾವುದೇ ಆಧಾರ ಇಲ್ಲದೆ ಸಾಲ ಸೌಲಭ್ಯ ಸಿಗಲಿದೆ. ಶಿಶು (₹50 ಸಾವಿರದವರೆಗೆ), ಕಿಶೋರ್‌ (₹50 ಸಾವಿರದಿಂದ ₹5 ಲಕ್ಷ) ಹಾಗೂ ತರುಣ್‌ (₹10 ಲಕ್ಷ) ವಿಭಾಗದಲ್ಲಿ ಸಾಲ ನೀಡಲಾಗುತ್ತದೆ.

ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಅಗತ್ಯವಿರುವ ದಾಖಲೆಗಳು (Documents) :

  • ಅಭ್ಯರ್ಥಿಯ ಭಾವಚಿತ್ರ
  • ಅರ್ಜಿ ನಮೂನೆ (ಸರಿಯಾಗಿ ಭರ್ತಿ ಮಾಡಿರಬೇಕು)
  • ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ ಹೊಂದಿರಬೇಕು.
  • SC/ST/OBC ವರ್ಗಕ್ಕೆ ಸೇರಿದವರ ಪುರಾವೆ.
  • ಉದ್ಯೋಗದ ವಿಳಾಸ ಹಾಗೂ ಗುರುತಿನ ಪುರಾವೆ.
  • ಅರ್ಜಿದಾರನ ಪ್ಯಾನ್ ಕಾರ್ಡ್.
  • 6 ತಿಂಗಳ ಬ್ಯಾಂಕ್ ಖಾತೆ ಹೇಳಿಕೆ
  • ಕಳೆದ 2 ವರ್ಷಗಳ ಬ್ಯಾಲೆನ್ಸ್ ಶೀಟ್, ಆದಾಯ ತೆರಿಗೆ ರಿಟರ್ನ್(ಸಾಲದ ಮೊತ್ತವು 2 ಲಕ್ಷಕ್ಕಿಂತ ಹೆಚ್ಚಿದ್ದರೆ ಇದು ಅನ್ವಯಿಸುತ್ತದೆ.)

ಮುದ್ರಾ ಸಾಲದ ಅರ್ಜಿ ನಮೂನೆಯನ್ನು ಹೇಗೆ ಭರ್ತಿ ಮಾಡುವುದು ಹೇಗೆ (How to fill form) ?

ಶಿಶು ವರ್ಗಕ್ಕೆ ಮುದ್ರಾ ಸಾಲದ ಅರ್ಜಿ ನಮೂನೆಯು ಪ್ರತ್ಯೇಕವಾಗಿದೆ, ಆದರೆ ಕಿಶೋರ್ ಮತ್ತು ತರುಣ್ ವರ್ಗಕ್ಕೆ ಸಾಲದ ನಮೂನೆಯು ಸಾಮಾನ್ಯವಾಗಿದೆ.

ಮುದ್ರಾ ಲೋನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಲು, ಅರ್ಜಿದಾರರು ಲೋನ್ ಫಾರ್ಮ್‌ನಲ್ಲಿ ವಿನಂತಿಸಿದಂತೆ ಈ ಕೆಳಗಿನ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ.

  • ಅರ್ಜಿದಾರರ ಹೆಸರು, ವಿಳಾಸ, ಜನ್ಮ ದಿನಾಂಕ, ಶೈಕ್ಷಣಿಕ ಅರ್ಹತೆಗಳು
  • ತಂದೆಯ/ಗಂಡನ ಹೆಸರು
  • ವ್ಯಾಪಾರ ವಿಳಾಸ
  • ಅರ್ಜಿದಾರರು, ಸಹ-ಅರ್ಜಿದಾರರು ಮತ್ತು ಪಾಲುದಾರರ KYC ದಾಖಲೆಗಳು
  • ವ್ಯಾಪಾರದ ಸಂವಿಧಾನ: ವೈಯಕ್ತಿಕ, ಜಂಟಿ, ಸ್ವಾಮ್ಯದ, ಪಾಲುದಾರಿಕೆ, ಅಥವಾ ಯಾವುದೇ ಇತರ
  • ವ್ಯಾಪಾರ ಚಟುವಟಿಕೆಯ ಸಾಲು
  • ವಾರ್ಷಿಕ ಮಾರಾಟ
  • ಕೌಶಲ್ಯ ಪ್ರಮಾಣಪತ್ರದ ವಿವರಗಳು, ಯಾವುದಾದರೂ ಇದ್ದರೆ
  • ಸಾಮಾಜಿಕ ವರ್ಗ: ಧರ್ಮ
  • ವರ್ಗ: ಸಾಮಾನ್ಯ, SC/ST/OBC, ಯಾವುದೇ ಇತರೆ
  • ಅಸ್ತಿತ್ವದಲ್ಲಿರುವ ಖಾತೆಯ ವಿವರಗಳು: A/C ಸಂಖ್ಯೆ ಮತ್ತು ಬ್ಯಾಂಕ್ ಶಾಖೆ.

ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, ಅಗತ್ಯದಾಖಲೆಗಳನ್ನು ನಮೂನೆಯೊಂದಿಗೆ ಲಗತ್ತಿಸಬೇಕು. ಅಥವಾ ಅರ್ಜಿದಾರರು ಸಾಲದ ಅರ್ಜಿ ನಮೂನೆಯನ್ನು ಸಲ್ಲಿಸಲು ಬ್ಯಾಂಕ್‌ನ ಪ್ರತಿನಿಧಿಯೊಂದಿಗೆ ಸಾಲದ ವಿಧಿವಿಧಾನಗಳೊಂದಿಗೆ ಮುಂದುವರಿಯಲು ಮುದ್ರಾ ಸಾಲವನ್ನು ನೀಡುವ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕು.

Post a Comment

Previous Post Next Post
CLOSE ADS
CLOSE ADS
×