ಕೇಂದ್ರದಿಂದ ಪಿ ಎಂ ಇಂಟರ್ನಶಿಪ್ ಯೋಜನೆ ಜಾರಿಗೆ ಅಸ್ತು! ತಿಂಗಳಿಗೆ ರೂ 5,000 ಭತ್ಯೆ PM Internship Yojana

ಕೇಂದ್ರ ಸರಕಾರದಿಂದ ಕಳೆದ ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ “ಪಿಎಂ ಇಂಟರ್ನ್‌ ಶಿಪ್”(PM Internship Yojana-2024) ಯೋಜನೆಯನ್ನು ಜಾರಿಗೆ ತರಲು ಅಧಿಕೃತವಾಗಿ ದಿನಾಂಕವನ್ನು ನಿಗದಿಪಡಿಸಲಾಗಿದೆ.



ಏನಿದು ಪಿಎಂ ಇಂಟರ್ನ್‌ ಶಿಪ್(PM Internship) ಯೋಜನೆ? ಯಾರೆಲ್ಲ ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರು? ನೋಂದಣಿ ಮಾಡಿಕೊಳ್ಳುವ ವಿಧಾನ ಹೇಗೆ? ಇತರೆ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಪಿಎಂ ಇಂಟರ್ನ್‌ ಶಿಪ್ ಯೋಜನೆಯಡಿ ಪ್ರಮುಖವಾಗಿ ದೇಶದ ಯುವಕ ಮತ್ತು ಯುವತಿಯರಿಗೆ ಉದ್ಯೋಗ ತರಬೇತಿಯನ್ನು ಹೊಂದಿ ಉದ್ಯೋಗವನ್ನು ಪಡೆಯಲು ಸೂಕ್ತ ತರಬೇತಿ ಮತ್ತು ಮಾರ್ಗದರ್ಶ ನೀಡುವ ಗುರಿಯನ್ನು ಹೊಂದಿದೆ. ಮುಂದಿನ ಐದು ವರ್ಷದಲ್ಲಿ ಈ ಯೋಜನೆಯಡಿ ದೇಶಾದ್ಯಂತ 1 ಕೋಟಿ ಜನರಿಗೆ ವಿವಿಧ ಕಂಪನಿಗಳ ಮೂಲಕ ಉದ್ಯೋಗ ತರಬೇತಿಯನ್ನು ಕೊಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

ಪಿಎಂ ಇಂಟರ್ನ್‌ ಶಿಪ್ ಯೋಜನೆಯಡಿ ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ ತರಬೇತಿಯನ್ನು ನೀಡುವುದರ ಜೊತೆಗೆ ಪ್ರತಿ ತಿಂಗಳು ತರಬೇತಿ ಭತ್ಯೆ ಮತ್ತು ಒಂದು ಬಾರಿಗೆ ವಾರ್ಷಿಕ ಧನ ಸಹಾಯವನ್ನು ಸಹ ನೀಡಲಾಗುತ್ತದೆ ಎಂದು ಯೋಜನೆಯ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

PM Internship scheme-ಏನಿದು ಪಿಎಂ ಇಂಟರ್ನ್‌ ಶಿಪ್ ಯೋಜನೆ?

ನೋಂದಣಿ ಮಾಡಿಕೊಂಡು ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ಯೋಜನೆಯ ಮೂಲಕ ವಿವಿಧ ವೃತ್ತಿಗಳಿಗೆ ಸಂಬಂದಪಟ್ಟಂತೆ ಯುವಜನರಿಗೆ ಉದ್ಯೋಗ ತರಬೇತಿಯನ್ನು ಆಯ್ದ ಉನ್ನತ ಮಟ್ಟದ ಕಂಪನಿಗಳಿಂದ 12 ತಿಂಗಳು ಉಚಿತ ಉದ್ಯೋಗ ತರಬೇತಿಯನ್ನು ನೀಡಲಾಗುತ್ತದೆ.

ತರಬೇತಿ ಸಮಯದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ 5,000 ತರಬೇತಿ ಭತ್ಯೆ ಅಂದರೆ ಒಟ್ಟು ಒಂದು ವರ್ಷಕ್ಕೆ 60,000 ಭತ್ಯೆಯನ್ನು ನೀಡಲಾಗುತ್ತದೆ. ಈ ಹಣವನ್ನು ಸರಕಾರದಿಂದ 4,500/- ಕಂಪನಿಗಳಿಂದ ರೂ 500/- ಭರಿಸಲಾಗುತ್ತದೆ.

ಇದರ ಜೊತೆಗೆ ಕೇಂದ್ರದ ಕಾರ್ಮಿಕ ಸಚಿವಾಲಯ/ಇಲಾಖೆಯಿಂದ ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ಬಾರಿಗೆ ರೂ 6,000 ಅರ್ಥಿಕ ನೆರವು ನೀಡಲಾಗುತ್ತದೆ.

Who Can apply for PM Internship- ಯಾರೆಲ್ಲ ನೋಂದಣಿ ಮಾಡಿಕೊಳ್ಳಬಹುದು?

1) ಪಿಎಂ ಇಂಟರ್ನ್‌ ಶಿಪ್ ಯೋಜನೆಯ ಸೌಲಭ್ಯ ಪಡೆಯಲು ಅರ್ಜಿದಾರರ ವಯಸ್ಸು 21 ವರ್ಷದಿಂದ 24 ವರ್ಷದ ಒಳಗಿನವರಾಗಿರಬೇಕು.

2) ಎಸ್ಸೆಸ್ಸೆಲ್ಸಿ, ಐಟಿಐ ಡಿಪ್ಲೊಮಾ ಕೋರ್ಸ್ ಮುಗಿಸಿದವರು. ಆನ್‌ಲೈನ್ ಅಥವಾ ದೂರ ಶಿಕ್ಷಣದ ಮೂಲಕ ಶಿಕ್ಷಣ. ಪಡೆದವರು ಸಹ ನೋಂದಣಿ ಮಾಡಿಕೊಳ್ಳಬಹುದು.

3) ವಿವಿಧ ಬಗ್ಗೆಯ ಪದವಿಗಳನ್ನು ಮುಗಿಸಿದವರು ಅಂದರೆ ಬಿಎ, ಬಿಎಸ್‌ಸಿ, ಬಿಕಾಂ, ಬಿಸಿಎ, ಬಿಬಿಎ ಮತ್ತು ಬಿ. ಫಾರ್ಮಾ ಇತ್ಯಾದಿ ಪದವಿ ಪಡೆದವರು ನೋಂದಣಿ ಮಾಡಿಕೊಳ್ಳಬಹುದು.

PM Internship training duration- ಪಿಎಂ ಇಂಟರ್ನ್‌ ಶಿಪ್ ತರಬೇತಿ ಅವಧಿ:

ಈ ತರಬೇತಿಯು 12 ಒಟ್ಟು ತಿಂಗಳು ನಡೆಯುತ್ತದೆ.

PM Internship Register link- ನೋಂದಣಿ ಪ್ರಾರಂಭ ಯಾವಾಗ?

ಪಿಎಂ ಇಂಟರ್ನ್‌ ಶಿಪ್ ಯೋಜನೆಯ ನೋಂದಣಿಯನ್ನು ಕೇಂದ್ರ ಸರಕಾರದಿಂದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಿಂದ ಅಭಿವೃದ್ಧಿಪಡಿಸಿರುವ ವೆಬ್ಸೈಟ್ ಮೂಲಕ 12 ಅಕ್ಟೋಬರ್ 2024 ರ ನಂತರದಿಂದ ಅವಕಾಶ ಕಲ್ಪಿಸುವ ಸಾಧ್ಯತೆಯಿದ್ದು ತದನಂತರ ಈ Register now ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ನೋಂದಣಿಯನ್ನು ಮಾಡಿಕೊಳ್ಳಬೇಕು.

ಪಿಎಂ ಇಂಟರ್ನ್‌ ಶಿಪ್ ನೋಂದಣಿ ಲಿಂಕ್: 

Register now

ಯಾವೆಲ್ಲ ಕಂಪನಿಗಳು ತರಬೇತಿ ನೀಡುತ್ತವೆ?

ಕೇಂದ್ರ ಸರಕಾರವು ಉದ್ಯೋಗ ತರಬೇತಿಯನ್ನು ನೀಡಲು ಒಟ್ಟು 500 ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದು ಕಂಪನಿಯ ಪಟ್ಟಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ: Click here

PM Internship-ತರಬೇತಿಯಲ್ಲಿ ಭಾವಹಿಸುವವರಿಗೆ ವಿಮಾ ಸೌಲಭ್ಯ:

ಪಿಎಂ ಇಂಟರ್ನ್‌ ಶಿಪ್ ಉದ್ಯೋಗ ತರಬೇತಿಯಲ್ಲಿ ಭಾಗವಹಿಸುವವರಿಗೆ ಪಿಎಂ ಜೀವನ್ ಜ್ಯೋತಿ ಮತ್ತು ಪಿಎಂ ಸುರಕ್ಷಾ ವಿಮಾ ಯೋಜನೆಯಡಿ ವಿಮೆ ಸೌಲಭ್ಯವನ್ನು ಸಹ ಒದಗಿಸಲಾಗುತ್ತದೆ.


Previous Post Next Post