ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ (Lokayukta Recruitment) ಗ್ರೂಪ್-ಸಿ ವೃಂದದ 30 ಕ್ಲರ್ಕ್-ಕಂ-ಟೈಪಿಸ್ಟ್ (Clerk cum Typist) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಅ.30ರಿಂದ ಲೋಕಾಯುಕ್ತ ವೆಬ್‌ಸೈಟ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದೆ. ಉಳಿಕೆ ಮೂಲ ವೃಂದದ 16 ಹಾಗೂ ಕಲ್ಯಾಣ ಕರ್ನಾಟಕದ (ಹೈ.ಕ) ವೃಂದದ 14 ಹುದ್ದೆಗಳನ್ನು ನೇರ ನೇಮಕಾತಿಯಿಂದ ಆಯ್ಕೆ ಮಾಡಲು ಅಧಿಸೂಚನೆ ಹೊರಡಿಸಲಾಗಿದ್ದು, ವಿದ್ಯಾರ್ಹತೆ, ಶುಲ್ಕ ಹಾಗೂ ನೇಮಕಾತಿ ವಿಧಾನದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.
ನೇಮಕಾತಿ ವಿವರ:
ಹುದ್ದೆ ಹೆಸರು: ಕ್ಲರ್ಕ್-ಕಂ-ಟೈಪಿಸ್ಟ್ (ಗ್ರೂಪ್-ಸಿ)
ಹುದ್ದೆಗಳ ಸಂಖ್ಯೆ: ಉಳಿಕೆ ಮೂಲ ವೃಂದ 16 + ಹೈ.ಕ 14 ಸೇರಿ 30 ಹುದ್ದೆ
ವೇತನ: 34,100-67,600 ರೂ.
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ಅಕ್ಟೋಬರ್ 30
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ನವೆಂಬರ್ 29
ಅರ್ಜಿ ಶುಲ್ಕ:
ಸಾಮಾನ್ಯ ಅರ್ಹತೆ, ಒಬಿಸಿ 2ಎ, 2ಬಿ, 3ಎ, 3ಬಿ, ಮಾಜಿ ಸೈನಿಕರಿಗೆ: 250 ರೂ.
ಎಸ್‌ಸಿ-ಎಸ್‌ಟಿ, ಪ್ರವರ್ಗ-1, ವಿಶೇಷ ಚೇತನರಿಗೆ: ಶುಲ್ಕ ವಿನಾಯಿತಿ
ಶೈಕ್ಷಣಿಕ ವಿದ್ಯಾರ್ಹತೆ:
ಪದವಿ ಪೂರ್ವ ಶಿಕ್ಷಣ ಪರೀಕ್ಷೆ ಉತ್ತೀರ್ಣ ಅಥವಾ ತತ್ಸಮಾನ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಕಿರಿಯ ದರ್ಜೆ ಬೆರಳಚ್ಚು ಪರೀಕ್ಷೆ ಉತ್ತೀರ್ಣ ಅಥವಾ ತತ್ಸಮಾನ ಅರ್ಹತೆ ಹೊಂದಿರಬೇಕು.
ವಯೋಮಿತಿ:
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು ಎಲ್ಲಾ ಪ್ರವರ್ಗದವರಿಗೆ ಕನಿಷ್ಠ 18 ವರ್ಷಗಳು ತುಂಬಿರಬೇಕು ಹಾಗೂ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 03 ವರ್ಷಗಳ ಸಡಿಲಿಕೆಯನ್ನು ನೀಡಿ ಈ ಕೆಳಕಂಡಂತೆ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.
ಪ.ಜಾ/ಪ.ಪಂ/ಪ್ರ-1: 43 ವರ್ಷ
ಒಬಿಸಿ 2ಎ, 2ಬಿ, 3ಎ, 3ಬಿ: 41 ವರ್ಷ
ಸಾಮಾನ್ಯ ಅರ್ಹತೆ: 38
ನೇಮಕಾತಿ ಪ್ರಕ್ರಿಯೆ
i) ಕರ್ನಾಟಕ ಲೋಕಾಯುಕ್ತ (ವೃಂದ, ನೇಮಕಾತಿ ಮತ್ತು ಸಿಬ್ಬಂದಿ ಹಾಗೂ ಅಧಿಕಾರಿಗಳ ಸೇವಾ ಷರತ್ತು) (ತಿದ್ದುಪಡಿ) ನಿಯಮಗಳು 2005ರ ಅನುಬಂಧ-‘ಎ’ ರಲ್ಲಿ ತಿಳಿಸಿದಂತೆ ಕ್ಲರ್ಕ್-ಕಂ-ಟೈಪಿಸ್ಟ್ ಹುದ್ದೆಗೆ ನಿಗದಿಪಡಿಸಲಾದ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳ ಮತ್ತು ಮೀಸಲಾತಿ ಆಧಾರದ ಮೇರೆಗೆ ಶ್ರೇಯಾಂಕದಲ್ಲಿರುವ ಅಭ್ಯರ್ಥಿಗಳ ಪೈಕಿ 1:10 ಅನುಪಾತದಲ್ಲಿ ಅರ್ಹತಾ ಪಟ್ಟಿಯನ್ನು ತಯಾರಿಸಿ, ಈ ಪಟ್ಟಿಯಲ್ಲಿ ಇರುವಂತಹ ಅಭ್ಯರ್ಥಿಗಳಿಗೆ ಈ ಕಚೇರಿಯಿಂದ ಅರ್ಹತಾ ಪರೀಕ್ಷೆ ನಡೆಸಲಾಗುವುದು. ಅರ್ಹತಾ ಪರೀಕ್ಷೆಗೆ ನಿಗದಿಪಡಿಸಲಾದ ಗರಿಷ್ಠ 20 ಅಂಕಗಳಿಗೆ ಅಭ್ಯರ್ಥಿಯು ಕನಿಷ್ಠ ಶೇ.50 ರಷ್ಟು ಅಂಕಗಳನ್ನು ಪಡೆದಲ್ಲಿ ಮಾತ್ರ ಆಯ್ಕೆ ಪಟ್ಟಿಗೆ ಪರಿಗಣಿಸಲಾಗುವುದು.
ii) ಅರ್ಹತಾ ಪರೀಕ್ಷೆಯನ್ನು ಬೆರಳಚ್ಚು ಯಂತ್ರ / ಗಣಕಯಂತ್ರದ ಮೂಲಕ ಕೈಗೊಳ್ಳಲಾಗುವುದು
ನೇಮಕಾತಿ ಕುರಿತ ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಸಲು ಲೋಕಾಯುಕ್ತ ವೆಬ್‌ಸೈಟ್ https://lokayukta.kar.nic.in/ ಭೇಟಿ ನೀಡಿ