ISRO ಸಂಸ್ಥೆಯಲ್ಲಿ ಹಲವು ಹುದ್ದೆಗಳ ನೇಮಕಾತಿ; ಸ್ಯಾಲರಿ ₹67,700.. ಇಂದೇ ಅಪ್ಲೇ ಮಾಡಿ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನ ಮಾಡಿದೆ. ಮೆಡಿಕಲ್ ಆಫೀಸರ್, ಸಹಾಯಕ ಸೈಂಟಿಸ್ಟ್, ಟೆಕ್ನಿಷಿಯನ್, ಡ್ರಾಟ್ಮ್ಯಾನ್, ಇಂಜಿನಿಯರ್, ರಾಜಭಾಷಾ ಸಹಾಯಕ ಸೇರಿ ವಿವಿಧ ಹುದ್ದೆಗಳನ್ನು ತುಂಬುತ್ತಿದೆ. ಆಸಕ್ತರು ಹಾಗೂ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು.



ಬಾಹ್ಯಾಕಾಶದ ಬಗ್ಗೆ ಆಸಕ್ತಿ ಇರುವ ಹಾಗೂ ಜ್ಞಾನ ಹೊಂದಿದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಟ್ರೈ ಮಾಡಬಹುದು. ಹುದ್ದೆಯ ಅವಶ್ಯಕತೆಗಳಿಗೆ ಅನುಗುಣವಾಗಿ ಎಲ್ಲ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಇಸ್ರೋದ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ ಆನ್‌ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಇನ್ನು ಈ ಹುದ್ದೆಗಳಿಗೆ ಬೇಕಾದ ವಿದ್ಯಾರ್ಹತೆ, ವಯೋಮಿತಿ ಇತ್ಯಾದಿಗಳನ್ನು ಈ ಕೆಳಗೆ ವಿವರಿಸಲಾಗಿದೆ. ಆಫ್ಲೈನ್ ಮೂಲಕ ಬರುವ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ತಿಳಿಸಲಾಗಿದೆ.

ಬೆಂಗಳೂರಿನಲ್ಲಿನ ಇಸ್ರೋದ ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್ (ಹೆಚ್‌ಎಸ್‌ಎಫ್‌ಸಿ)ಗಾಗಿ ಈ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಈ ಅಧಿಸೂಚನೆಯಿಂದ ಭರ್ತಿಯಾಗುತ್ತಿರುವ ಹುದ್ದೆಗಳು ಸದ್ಯಕ್ಕೆ ತಾತ್ಕಾಲಿಕವಾಗಿರುತ್ತವೆ. ಆದರೆ ಅಧಿಕೃತ ಅಧಿಸೂಚನೆಯ ಪ್ರಕಾರ ಅನಿರ್ದಿಷ್ಟವಾಗಿ ಮುಂದುವರಿಯಬಹುದು.

ಹುದ್ದೆಗಳ ಹೆಸರು, ಎಷ್ಟು ಹುದ್ದೆಗಳು ಇವೆ..?

  • ಮೆಡಿಕಲ್ ಆಫೀಸರ್- 3
  • ಸೈಂಟಿಸ್ಟ್/ ಇಂಜಿನಿಯರ್- 10
  • ಟೆಕ್ನಿಕಲ್ ಅಸಿಸ್ಟೆಂಟ್- 28
  • ಸೈಂಟಿಫಿಕ್ ಅಸಿಸ್ಟೆಂಟ್- 01
  • ಟಿಕ್ನಿಷಿಯನ್-ಬಿ- 43
  • ಡ್ರಾಟ್ಸ್ಮ್ಯಾನ್-ಬಿ- 13
  • ಅಸಿಸ್ಟೆಂಟ್ ರಾಜಭಾಷಾ- 01
  • ಒಟ್ಟು ಪೋಸ್ಟ್ಗಳು- 99

ಅರ್ಜಿ ಶುಲ್ಕ-

ಇಸ್ರೋ ಈ ಬಗ್ಗೆ ಮಾಹಿತಿ ನೀಡಿಲ್ಲ

ಸಂಬಳ-

  • ಹೆಚ್ಎಫ್ಎಸ್ಸಿ ನಿಯಮದಂತೆ ಹುದ್ದೆಗಳಿಗೆ ತಕ್ಕಂತೆ ಸ್ಯಾಲರಿ ಇದೆ
  • 25,500 ರೂಪಾಯಿಗಳಿಂದ 67,700 ರೂ.ಗಳು

ವಯೋಮಿತಿ-

  • ಸೈಂಟಿಸ್ಟ್/ಇಂಜಿನಿಯರ್- 18 ರಿಂದ 30 ವರ್ಷಗಳು
  • ಅಸಿಸ್ಟೆಂಟ್ ರಾಜಭಾಷಾ- 18 ರಿಂದ 28 ವರ್ಷಗಳು
  • ಉಳಿದಂತ ಎಲ್ಲ ಹುದ್ದೆಗೆ- 18 ರಿಂದ 35 ವರ್ಷಗಳು

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ?

  • ಲಿಖಿತ ಪರೀಕ್ಷೆ
  • ಸ್ಕಿಲ್ ಟೆಸ್ಟ್
  • ಮೆಡಿಕಲ್ ಪರೀಕ್ಷೆ
  • ದಾಖಲಾತಿ ಪರಿಶೀಲನೆ

ಶೈಕ್ಷಣಿಕ ಅರ್ಹತೆ-

  • ಟಿಕ್ನಿಷಿಯನ್-ಬಿ, ಡ್ರಾಟ್ಸ್ಮ್ಯಾನ್-ಬಿ= ಐಟಿಐ ಸಂಬಂಧಿತ ಕೋರ್ಸ್
  • ಟಿಕ್ನಿಷಿಯನ್ ಅಸಿಸ್ಟೆಂಟ್= ಡಿಪ್ಲೋಮಾ ಇನ್ ಇಂಜಿನಿಯರಿಂಗ್ (ಶೇ.60 ಅಂಕಗಳು)
  • ಸೈಂಟಿಸ್ಟ್/ ಇಂಜಿನಿಯರ್= ಎಂಇ/ಎಂಟೆಕ್, ಬಿಇ/ಬಿಟೆಕ್
  • ಅಸಿಸ್ಟೆಂಟ್ ರಾಜಭಾಷಾ= ಪದವಿ (ಶೇ.60 ಅಂಕಗಳು)
  • ಮೆಡಿಕಲ್ ಆಫೀಸರ್- ಎಂಬಿಬಿಎಸ್, ಎಂಡಿ
  • ಸೈಂಟಿಫಿಕ್ ಅಸಿಸ್ಟೆಂಟ್- ಬಿಎಸ್ಸಿ (ಶೇ.60 ಅಂಕಗಳು)

ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನಾಂಕ- 

ಅಕ್ಟೋಬರ್ 09, 2024

ಅಪ್ಲಿಕೇಶನ್ ಪ್ರಕ್ರಿಯೆ

1. http://www.isro.gov.in/CurrentOpportunities.html ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಹೋಗಿ

2. ಮುಖಪುಟದಲ್ಲಿ ISRO ನೇಮಕಾತಿ 2024 ಲಿಂಕ್ ಅನ್ನು ಆಯ್ಕೆ ಮಾಡಿ.

3. ಅರ್ಜಿ ನಮೂನೆಯನ್ನು ಭರ್ತಿ ಮಾಡಿ.

4. ಫಾರ್ಮ್ ಮತ್ತು ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಿ.

5. ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ನಿಮ್ಮೊಂದಿಗೆ ಪ್ರಿಂಟ್‌ಔಟ್ ಅನ್ನು ಇರಿಸಿಕೊಳ್ಳಿ.

ಗಮನಿಸಿ: ಆನ್‌ಲೈನ್‌ನಲ್ಲಿ ಸ್ವೀಕರಿಸಿದ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ

ಹೆಚ್ಚಿನ ಮಾಹಿತಿಗಾಗಿ, ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬೇಕು.


Previous Post Next Post