65 ಸಾವಿರ ರೈತರಿಗೆ 45 ಕೋಟಿ ಬೆಳೆವಿಮೆ ಹಣ ಬಿಡುಗಡೆ, ನಿಮ್ಮ ಸ್ಟೇಟಸ್ ಹೀಗೆ ಚೆಕ್ ಮಾಡಿ-ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ(Pradan mantri fasal bheema yojane) 2023-24ನೇ ಸಾಲಿನಲ್ಲಿ ಖಾಸಗಿ ವಿಮೆ ಸಂಸ್ಥೆಯವರು ಮುಂಗಾರು ಹಂಗಾಮಿನಲ್ಲಿ ಹಾವೇರಿ ಜಿಲ್ಲೆಯ ಬೆಳೆ ಕಟಾವು ಪ್ರಯೋಗಗಳ(Crop cutting experiment)ಸಂಬಂಧ ರಾಜ್ಯ ಸರ್ಕಾರದ ಸಮಿತಿಯ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರದ ತಾಂತ್ರಿಕ ಸಲಹಾ ಸಮಿತಿಗೆ ಮೇಲ್ಮನವಿ ಸಲ್ಲಿಸಿದ್ದರು.
ರಾಜ್ಯದಿಂದ ಪ್ರಬಲವಾದ ವಾದವನ್ನು ಮಂಡಿಸಿದ್ದ ಫಲಶ್ರುತಿಯಾಗಿ ಆಕ್ಷೇಪಣೆಗೊಳಗಾಗಿದ್ದ ಸುಮಾರು 65000 ಅರ್ಹ ರೈತ ಫಲಾನುಭವಿಗಳಿಗೆ ರೂ. 45 ಕೋಟಿ ಬೆಳೆ ವಿಮಾ (crop insurance)ಪರಿಹಾರ ಮೊತ್ತವನ್ನು(Belevime hana bidugade) ಅಂದಾಜಿಸಲಾಗಿದೆ. ಇದನ್ನು ಸದ್ಯದಲ್ಲೇ ಇತ್ಯರ್ಥಪಡಿಸಲಾಗುವುದು ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ತಿಳಿಸಿದ್ದಾರೆ.