ಮೊಬೈಲ್ ಫೋನ್ ನಿಧಾನಗೊಂಡಿದೆಯಾ? ವೇಗ ಹೆಚ್ಚಿಸುವ ಈ ತಂತ್ರಗಳನ್ನು ಬಳಸಿ ನೋಡಿ

ಮೊಬೈಲ್ ಫೋನ್ ನಿಧಾನಗೊಂಡಿದೆಯಾ? ವೇಗ ಹೆಚ್ಚಿಸುವ ಈ ತಂತ್ರಗಳನ್ನು ಬಳಸಿ ನೋಡಿ

Smartphone internet speed tricks: ನೀವು ಸ್ಮಾರ್ಟ್​ಫೋನ್ ಬಳಸುತ್ತಾ ಬಳಸುತ್ತಾ ಕಾಲಕ್ರಮೇಣ ಬೇರೆ ಬೇರೆ ಕಾರಣಗಳಿಂದ ನಿಧಾನಗೊಳ್ಳಬಹುದು. ಇಂಟರ್ನೆಟ್ ಸ್ಪೀಡ್ ಕೂಡ ಕಡಿಮೆ ಆಗಬಹುದು. ಕಳಪೆ ನೆಟ್ವರ್ಕ್ ಮಾತ್ರವಲ್ಲ, ಬ್ಯಾಕ್​ಗ್ರೌಂಡ್ ಆ್ಯಪ್​ಗಳಿಂದಲೂ ಇಂಟರ್ನೆಟ್ ನಿಧಾನಗೊಳ್ಳಬಹುದು. ಫೋನ್ ಇಂಟರ್ನೆಟ್ ಅನ್ನು ಸರಿಪಡಿಸಲು ಈ ಕೆಲ ಟ್ಟಿಕ್​ಗಳನ್ನು ಉಪಯೋಗಿಸಿ ನೋಡಿ.



  • ಈಗ ಸ್ಮಾರ್ಟ್‌ಫೋನ್‌ಗಳಲ್ಲಿ 5G ನೆಟ್‌ವರ್ಕ್‌ನ ಪ್ರಚಂಡ ವೇಗವನ್ನು ಆನಂದಿಸಬಹುದು. ಆದಾಗ್ಯೂ, ನಿಧಾನಗತಿಯ ಇಂಟರ್ನೆಟ್ ಸಮಸ್ಯೆಯಿರುವ ಹಲವು ಭಾಗಗಳು ನಮ್ಮ ದೇಶದಲ್ಲಿವೆ. ಹೆಚ್ಚಿನ ಬಾರಿ ನಿಧಾನಗತಿಯ ಇಂಟರ್ನೆಟ್​ಗೆ ಫೋನ್​ನದ್ದೇ ಸಮಸ್ಯೆ ಇರುತ್ತದೆ. ನೀವು ವೀಡಿಯೊಗಳನ್ನು ಸ್ಟ್ರೀಮಿಂಗ್ ಮಾಡಲು, ವಿವಿಧ ತಾಣಗಳ ಬ್ರೌಸ್ ಮಾಡಲು ಅಥವಾ ಪ್ರಯಾಣದಲ್ಲಿರುವಾಗ ಕೆಲಸ ಮಾಡಲು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
  • ಸ್ಮಾರ್ಟ್‌ಫೋನ್‌ನಲ್ಲಿ ನಿಧಾನಗತಿಯ ಇಂಟರ್ನೆಟ್‌ಗೆ ಹಲವು ಕಾರಣಗಳಿರಬಹುದು. ಹಳತಾದ ಸಾಫ್ಟ್‌ವೇರ್‌ನಿಂದ ಹಿಡಿದು ವೇಗವನ್ನು ನಿಧಾನಗೊಳಿಸುವ ಹಿನ್ನೆಲೆ ಅಪ್ಲಿಕೇಶನ್‌ಗಳವರೆಗೆ (Background apps) ಬೇರೆ ಬೇರೆ ಕಾರಣಗಳಿಗೆ ಇಂಟರ್ನೆಟ್ ನಿಧಾನಗೊಳ್ಳುತ್ತದೆ. ಆದಾಗ್ಯೂ, ನಿಮ್ಮ ಸ್ಮಾರ್ಟ್‌ಫೋನ್‌ನ ಇಂಟರ್ನೆಟ್ ಕಾರ್ಯಕ್ಷಮತೆಯನ್ನು ಸುಧಾರಿಸಲು ಹಲವಾರು ಮಾರ್ಗಗಳಿವೆ. ಇಲ್ಲಿರುವ ಕೆಲಸ ಟ್ರಿಕ್ಸ್​ಗಳು ನಿಮ್ಮ ಫೋನ್‌ನ ಇಂಟರ್ನೆಟ್ ವೇಗ ಹೆಚ್ಚಳಕ್ಕೆ ಸಹಾಯವಾಗಬಹುದು ನೋಡಿ. 

ಫೋನ್ ಮರುಪ್ರಾರಂಭಿಸಿ: 

  • ಕೆಲ ಕಾಲದ ನಿರಂತರ ಬಳಕೆಯಿಂದ ನಿಮ್ಮ ಫೋನ್​ನ ಸಾಫ್ಟ್‌ವೇರ್ ದೋಷ ತಲೆದೋರಿ, ಅದರಿಂದ ಫೋನ್ ನಿಧಾನಗೊಳ್ಳಬಹುದು. ಫೋನ್ ಅನ್ನು ರೀಸ್ಟಾರ್ಟ್ ಮಾಡಿದರೆ ಸಾಫ್ಟ್​ವೇರ್ ರೀಫ್ರೆಶ್ ಆಗಬಹುದು. ಹಾಗೆಯೇ, ಫೋನ್​ನ RAM ಮೆಮೊರಿಯೂ ರೀಫ್ರೆಶ್ ಆಗುತ್ತದೆ. ಫೋನ್ ಮಾತ್ರವಲ್ಲ, ಕಂಪ್ಯೂಟರ್​ನಲ್ಲೂ ಈ ರೀಸ್ಟಾರ್ಟ್ ಟ್ರಿಕ್ಸ್ ಅನ್ನು ಬಳಸಬಹುದು. 

ಬ್ಯಾಕ್​ಗ್ರೌಂಡ್ ಅಪ್ಲಿಕೇಶನ್‌ಗಳನ್ನು ಮುಚ್ಚಿ: 

  • ಬಹಳಷ್ಟು ಸಂದರ್ಭಗಳಲ್ಲಿ ನಾವು ತೆರೆಯುವ ಅಪ್ಲಿಕೇಶನ್​ಗಳನ್ನು ಸರಿಯಾದ ವಿಧಾನದಲ್ಲಿ ಮುಚ್ಚಿರುವುದಿಲ್ಲ. ಇವು ಬ್ಯಾಕ್​ಗ್ರೌಂಡ್​ನಲ್ಲಿ ಆ್ಯಕ್ಟಿವ್ ಆಗಿರುತ್ತವೆ. ನಿಮ್ಮ ಇಂಟರ್ನೆಟ್ ಅನ್ನು ಈ ಆ್ಯಪ್​ಗಳು ಬಳಸುತ್ತಿರಬಹುದು. ಹೀಗಾಗಿ, ಇಂಟರ್ನೆಟ್ ನಿಜಧಾನಗೊಳ್ಳುತ್ತದೆ. ಹೆಚ್ಚು ಡಾಟಾ ಖರ್ಚಾಗುತ್ತದೆ. ಹೀಗಾಗಿ, ನೀವು ಆಗಾಗ ಬ್ಯಾಕ್​ಗ್ರೌಂಡ್ ಆ್ಯಪ್​ಗಳನ್ನು ಮುಚ್ಚಬೇಕು. ಸಾಮಾನ್ಯವಾಗಿ ಫೋನ್ ಸ್ಕ್ರೀನ್​ನ ಕೆಳಗಿನ ಎಡಭಾಗದಲ್ಲಿ 3 ಅಡ್ಡಗೆರೆಗಳಿರುವ ಸಾಫ್ಟ್ ಬಟನ್ಸ್ ನೋಡಿರಬಹುದು. ಅದನ್ನು ಒತ್ತಿ ಎಲ್ಲಾ ಸಕ್ರಿಯ ಆ್ಯಪ್​ಗಳನ್ನು ಒಮ್ಮೆಗೇ ಕ್ಲೋಸ್ ಮಾಡಬಹುದು.

ಆ್ಯಡ್ ಬ್ಲಾಕರ್‌ನ ಬಳಕೆ: 

  • ಫೋಟೋ ಮತ್ತು ಲಿಂಕ್‌ಗಳಂತಹ ಹಲವು ವಿಧದ ಜಾಹೀರಾತು ಪಾಪ್-ಅಪ್‌ಗಳು ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತವೆ, ಇದರಿಂದಾಗಿ ನಿಮ್ಮ ಸ್ಮಾರ್ಟ್‌ಫೋನ್ ಡೇಟಾ ಬಳಕೆಯಾಗುತ್ತದೆ ಮತ್ತು ಇಂಟರ್ನೆಟ್ ವೇಗವು ಕಡಿಮೆಯಾಗುತ್ತದೆ. ಈ ಜಾಹೀರಾತುಗಳನ್ನು ನಿರ್ಬಂಧಿಸಲು ನೀವು ಆ್ಯಡ್ ಬ್ಲಾಕರ್ ಅಪ್ಲಿಕೇಶನ್‌ಗಳನ್ನು ಬಳಸಬಹುದು. ನೀವು Google Play Store ನಲ್ಲಿ ಹಲವಾರು ರೀತಿಯ ಆ್ಯಡ್ ಬ್ಲಾಕರ್ ಆ್ಯಪ್​ಗಳನ್ನು ಕಾಣಬಹುದು. ಅದರಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳಿ. 

ಸಾಫ್ಟ್‌ವೇರ್ ನವೀಕರಿಸಿ: 

  • ನಿಮ್ಮ ಸುತ್ತಲಿನ ನೆಟ್‌ವರ್ಕ್ ಪ್ರಬಲವಾಗಿದ್ದರೂ ಸಹ, ಹಳೆಯ ಸಾಫ್ಟ್‌ವೇರ್ ಕಳಪೆ ಇಂಟರ್ನೆಟ್​ಗೆ ಕಾರಣವಾಗಿರಬಹುದು. ಆದ್ದರಿಂದ, ಫೋನ್​ನಲ್ಲಿ ಸಾಫ್ಟ್​ವೇರ್ ಅಪ್​ಗ್ರೇಡ್ ಮಾಡಲು ಕೇಳಿದಾಗ ತಪ್ಪದೇ ಮಾಡುತ್ತಿರಿ. ಆ್ಯಪ್​ಗಳನ್ನೂ ಕೂಡ ಅಪ್​ಡೇಟ್ ಮಾಡುತ್ತಿರುವುದು ಉತ್ತಮ. 

ಬೇರೆ ನೆಟ್‌ವರ್ಕ್‌ಗೆ ಸಂಪರ್ಕಪಡಿಸಿ: 

  • ನಿಮ್ಮ ಪ್ರಸ್ತುತ ನೆಟ್‌ವರ್ಕ್ ನಿಧಾನಗತಿಯ ವೇಗವನ್ನು ಒದಗಿಸುತ್ತಿದ್ದರೆ, ಸಾರ್ವಜನಿಕ ವೈ-ಫೈ ಹಾಟ್‌ಸ್ಪಾಟ್ ಅಥವಾ ಸೆಲ್ಯುಲಾರ್ ನೆಟ್‌ವರ್ಕ್‌ನಂತಹ ಬೇರೆ ನೆಟ್‌ವರ್ಕ್‌ಗೆ ಸಂಪರ್ಕಿಸಲು ಪ್ರಯತ್ನಿಸಿ. ನಿಮ್ಮ ಫೋನ್ ಅಥವಾ ನಿಮ್ಮ ನೆಟ್‌ವರ್ಕ್‌ನಲ್ಲಿ ಸಮಸ್ಯೆ ಇದೆಯೇ ಎಂದು ಗುರುತಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

ನಿಮ್ಮ ಫೋನ್‌ನಲ್ಲಿ ಕ್ಯಾಷೆ ಮತ್ತು ಕುಕೀಗಳನ್ನು ತೆರವುಗೊಳಿಸಿ: 

  • ನಿಮ್ಮ ಫೋನ್ ಅಪ್ಲಿಕೇಶನ್‌ಗಳಿಂದ ಡೇಟಾವನ್ನು ಸಂಗ್ರಹಿಸುತ್ತಲೇ ಇರುತ್ತದೆ, ಇದು ನಿಮ್ಮ ನೆಟ್‌ವರ್ಕ್‌ನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇಂಟರ್ನೆಟ್ ವೇಗವನ್ನು ನಿಧಾನಗೊಳಿಸುತ್ತದೆ. ನಿಮ್ಮ ಕ್ಯಾಷೆ ಮೆಮೊರಿ ಮತ್ತು ಕುಕೀಗಳನ್ನು ತೆರವುಗೊಳಿಸುವುದರಿಂದ ಫೋನ್‌ನ ಇಂಟರ್ನೆಟ್ ಕಾರ್ಯಕ್ಷಮತೆಯನ್ನು ಸುಧಾರಿಸಬಹುದು.


Post a Comment

Previous Post Next Post
CLOSE ADS
CLOSE ADS
×