ಬಂದೇ ಬಿಡ್ತು Realme P2 Pro 5G ಫೋನ್: 5200mAh ಬ್ಯಾಟರಿ, 80W ಚಾರ್ಜಿಂಗ್.. ಕಡಿಮೆ ಬೆಲೆ

Realme P2 Pro 5G Launched: ರಿಯಲ್‌ಮಿ (Realme) ಭಾರತದಲ್ಲಿ ತನ್ನ ಹೊಸ 5G ಫೋನನ್ನು ಬಿಡುಗಡೆ ಮಾಡಲಿದೆ. ಅದುವೇ, ರಿಯಲ್‌ಮಿ P2 ಪ್ರೊ 5G (Realme P2 Pro 5G) ಸ್ಮಾರ್ಟ್‌ಫೋನ್ ಆಗಿದೆ. ಹೌದು, ರಿಯಲ್‌ಮಿ ಭಾರತೀಯ ಗ್ರಾಹಕರಿಗಾಗಿ ತನ್ನ 'P' ಸರಣಿಯಲ್ಲಿ ಸರಣಿಯಲ್ಲಿ ನೂತನ ರಿಯಲ್‌ಮಿ P2 ಪ್ರೊ 5G ಅನ್ನು ಲಾಂಚ್ ಮಾಡಿದೆ. ಕಂಪನಿಯು ಈ ಫೋನನ್ನು ಬಜೆಟ್‌ ಬೆಲೆಯಲ್ಲಿ ಪರಿಚಯಿಸಿದೆ. ಬನ್ನಿ, ಈ ಹೊಸ ಫೋನಿನ ಬೆಲೆ, ಆಫರ್‌ಗಳು ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.



ರಿಯಲ್‌ಮಿ ತನ್ನ ಅಭಿಮಾನಿಗಳಿಗಾಗಿ ಇಂದು ರಿಯಲ್‌ಮಿ P2 ಪ್ರೊ 5G ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಹೊಸ ಫೋನ್ Qualcomm Snapdragon 7s Gen 2 ಚಿಪ್‌ಸೆಟ್ ಹೊಂದಿದೆ. ಇದು 6.7 ಇಂಚಿನ ಕರ್ವ್ಡ್ AMOLED ಡಿಸ್ಪ್ಲೇ, GT ಮೋಡ್ ಗೇಮಿಂಗ್ ಅನುಭವ, IP65 ರೇಟಿಂಗ್, 50 ಮೆಗಾಪಿಕ್ಸೆಲ್ ಸೋನಿ LYT 600 ಪ್ರಾಥಮಿಕ ಕ್ಯಾಮೆರಾ ಮತ್ತು 80 ವ್ಯಾಟ್ ವೇಗದ ಚಾರ್ಜಿಂಗ್ ಬೆಂಬಲ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ರಿಯಲ್‌ಮಿ P2 ಪ್ರೊ 5G ಬೆಲೆ ಮತ್ತು ಲಭ್ಯತೆ

8GB + 128GB ಸ್ಟೋರೇಜ್‌ ಬೆಲೆ = 21,999 ರೂ.

ಆಫರ್ ಬೆಲೆ = 19,999 ರೂ.

12GB + 256GB ಸ್ಟೋರೇಜ್‌ ಬೆಲೆ = 24,999 ರೂ.

ಆಫರ್ ಬೆಲೆ = 21,999 ರೂ.

12GB + 512GB ಸ್ಟೋರೇಜ್‌ ಬೆಲೆ = 27,999 ರೂ.

ಆಫರ್ ಬೆಲೆ = 24,999 ರೂ.

ಕಂಪನಿಯು ನೂತನ ರಿಯಲ್‌ಮಿ P2 ಪ್ರೊ 5G ಫೋನನ್ನು ಭಾರತದಲ್ಲಿ ಮೂರು ಸ್ಟೋರೇಜ್‌ ಆಯ್ಕೆಗಳಲ್ಲಿ ಬಿಡುಗಡೆ ಮಾಡಿದೆ. 8GB + 128GB ರೂಪಾಂತರದ ಬೆಲೆ 21,999 ರೂ. ಇದೆ. 12GB + 256GB ರೂಪಾಂತರವು 24,999 ರೂ.ಗೆ ಬಿಡುಗಡೆಯಾಗಿದೆ. 12GB + 512GB ಸ್ಟೋರೇಜ್‌ ಬೆಲೆ 27,999 ರೂ.ಗೆ ಲಭ್ಯವಿರುತ್ತದೆ.

ಬಿಡುಗಡೆ ಆಫರ್‌ಗಳ ಭಾಗವಾಗಿ ಕಂಪನಿಯು 3,000 ರೂ. ರಿಯಾಯಿತಿಯನ್ನು ಘೋಷಿಸಿದೆ. ಈ ಸ್ಮಾರ್ಟ್‌ಫೋನಿನ ಮಾರಾಟವು ಸೆಪ್ಟೆಂಬರ್ 17 ರಿಂದ ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್, ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಇತರೆ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಪ್ರಾರಂಭವಾಗುತ್ತದೆ. ನೀವು, ಪ್ಯಾರಟ್ ಗ್ರೀನ್ ಮತ್ತು ಈಗಲ್ ಗ್ರೇ ಬಣ್ಣದ ಆಯ್ಕೆಗಳಲ್ಲಿ ಈ ಫೋನನ್ನು ಖರೀದಿಸಬಹುದು.

ರಿಯಲ್‌ಮಿ P1 ಪ್ರೊ 5G ಫೋನಿನ ವೈಶಿಷ್ಟ್ಯಗಳು

ಡಿಸ್ಲ್ಪೇ: ರಿಯಲ್‌ಮಿ P1 ಪ್ರೊ 5G ಫೋನ್ 6.7 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಕರ್ವ್ಡ್ ಸ್ಯಾಮ್‌ಸಂಗ್ ಅಮೋಲೆಡ್ ಡಿಸ್ಲ್ಪೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್, 2412 X 1080 ಪಿಕ್ಸೆಲ್‌ಗಳ ರೆಸಲ್ಯೂಶನ್, 1200 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಮತ್ತು 240Hz ಸ್ಪರ್ಶ ಮಾದರಿ ದರವನ್ನು ಹೊಂದಿದೆ.

ಪ್ರೊಸೆಸರ್: ರಿಯಲ್‌ಮಿ P1 ಪ್ರೊ 5G ಸ್ಮಾರ್ಟ್‌ಫೋನ್ Qualcomm Snapdragon 7s Gen 2 ಚಿಪ್‌ಸೆಟ್ ಅನ್ನು ಹೊಂದಿದೆ. ಗ್ರಾಫಿಕ್ಸ್‌ಗಾಗಿ ಅಡ್ರಿನೊ ಜಿಪಿಯು (Adreno 710 GPU) ಅನ್ನು ಬಳಸಲಾಗುತ್ತದೆ. ಈ ಫೋನ್ Android 14 ಆಧಾರಿತ Realme UI 5.0 ಕಸ್ಟಮ್ ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಸ್ಟೋರೇಜ್‌: ಈ ಹೊಸ ಮೊಬೈಲ್ 8GB + 128GB, 12GB + 256GB ಮತ್ತು 12GB + 512GB ಸ್ಟೋರೇಜ್‌ ಆಯ್ಕೆಯೊಂದಿಗೆ ಬರುತ್ತದೆ. LPDDR4x RAM ಮತ್ತು UFS 3.1 ಇಂಟರ್ನಲ್ ಸ್ಟೋರೇಜ್‌ ಸೌಲಭ್ಯ ಇದೆ.

Realme P2 Pro launch

ಕ್ಯಾಮೆರಾ: ರಿಯಲ್‌ಮಿ P1 ಪ್ರೊ 5G ಮೊಬೈಲ್ LED ಫ್ಲ್ಯಾಷ್‌ನೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಸೋನಿ LYTIA 600 ಪ್ರಾಥಮಿಕ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಹೊಂದಿದೆ. ಇದರಲ್ಲಿ ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ, 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಇದೆ.

ಬ್ಯಾಟರಿ: ನೂತನ ರಿಯಲ್‌ಮಿ P1 ಪ್ರೊ 5G ಫೋನ್ 5,200mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80 ವ್ಯಾಟ್ ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ. 49 ನಿಮಿಷಗಳಲ್ಲಿ 0 ರಿಂದ ಶೇ. 100 ರಷ್ಟು ಚಾರ್ಜ್ ಆಗುತ್ತದೆ ಎಂದು ಕಂಪನಿ ಹೇಳಿದೆ.

ಇತರೆ ವೈಶಿಷ್ಟ್ಯಗಳು: ಈ ಫೋನ್ ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP65 ರೇಟಿಂಗ್ ನೀಡಲಾಗಿದೆ. ಇದರೊಂದಿಗೆ ಡ್ಯುಯಲ್ ಸಿಮ್ 5G, ವೈ-ಫೈ, ಬ್ಲೂಟೂತ್, ರೈನ್‌ವಾಟರ್ ಸ್ಮಾರ್ಟ್ ಟಚ್ ವೈಶಿಷ್ಟ್ಯ, ಜಿಟಿ ಮೋಡ್, ಏರ್ ಗೆಸ್ಚರ್, ಡ್ಯುಯಲ್ ಸ್ಟುಡಿಯೋ ಸ್ಪೀಕರ್, ಎಐ ಹೈಪರ್‌ರಾ ಅಲ್ಗಾರಿದಮ್, ಎಐ ಪೋರ್ಟ್ರೇಟ್ ಎಐ ಅಲ್ಟ್ರಾ ಕ್ಲಾರಿಟಿ, ಎಐ ಗ್ರೂಪ್ ಫೋಟೋ ವರ್ಧನೆ ಸೇರಿದಂತೆ ಹಲವು ವೈಶಿಷ್ಟ್ಯಗಳು ಲಭ್ಯವಿದೆ.



Previous Post Next Post