Ration card sit at home: ಹೊಸ, ಹಳೆಯ ರೇಷನ್ ಕಾರ್ಡ್ ಪಡೆಯಲು ಕ್ಯೂ ನಿಲ್ಲಬೇಕಿಲ್ಲ: ಮನೆಯಲ್ಲಿಯೇ ಕುಳಿತು ಹೀಗೆ ಮಾಡಿ

Ration card sit at home: ಹೊಸ, ಹಳೆಯ ರೇಷನ್ ಕಾರ್ಡ್ ಪಡೆಯಲು ಕ್ಯೂ ನಿಲ್ಲಬೇಕಿಲ್ಲ: ಮನೆಯಲ್ಲಿಯೇ ಕುಳಿತು ಹೀಗೆ ಮಾಡಿ

ಹೊಸ, ಹಳೆಯ ರೇಷನ್ ಕಾರ್ಡ್ ಪಡೆಯಲು ಕ್ಯೂ ನಿಲ್ಲಬೇಕಿಲ್ಲ: ಮನೆಯಲ್ಲಿಯೇ ಕುಳಿತು ಹೀಗೆ ಮಾಡಿ:-ರೇಷನ್ ಕಾರ್ಡ್ ಇಂದು ಅಗತ್ಯವಾಗಿ ಎಲ್ಲರಿಗೂ ಬೇಕಾದ ದಾಖಲೆಯಾಗಿದೆ. ಇನ್ನು ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ರೇಷನ್ ಕಾರ್ಡ್ ಪಡೆಯಬಹುದಾಗಿದೆ. ಅವುಗಳ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.



ಸರ್ಕಾರದ ಸೌಲಭ್ಯಗಳಿಗೆ ಇಂದು ರೇಷನ್ ಕಾರ್ಡ್ ಅಗತ್ಯವಾಗಿ ಬೇಕಾಗುತ್ತದೆ. ರೇಷನ್ ಕಾರ್ಡ್ ಇಲ್ಲದ ಕಾರಣ, ಹಲವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹಾಗಿದ್ದರೆ ಹೊಸ ರೇಷನ್ ಕಾರ್ಡ್ಗೆ ಮನೆಯಲ್ಲಿಯೇ ಕುಳಿತು ಅರ್ಜಿ ಹಾಕುವುದು ಹೇಗೆ ಮತ್ತು ಇದಾಗಲೇ ಅರ್ಜಿ ಸಲ್ಲಿಸಿದ್ದರೆ ಆನ್ಲೈನ್ ಮೂಲಕವೇ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಹೊಸದಾಗಿ ಅರ್ಜಿ ಸಲ್ಲಿಸಲು ಈ ಕ್ರಮ ಕೈಗೊಳ್ಳಿ.  

 ಕರ್ನಾಟಕದ ಕಾಯಂ ನಿವಾಸಿಯಾಗಬೇಕಿದ್ದು, ಕರ್ನಾಟಕದಲ್ಲಿ ವಾಸಿಸುತ್ತಿದ್ದರೆ ಮಾತ್ರ ಹೊಸ ಪಡಿತರ ಚೀಟಿಗೆ ಅರ್ಜಿ ಹಾಕಲು ಅವಕಾಶ ಇರಲಿದೆ. ಅದೇ ರೀತಿ‌ ಪಡಿತರ ಚೀಟಿ ಹೊಂದಿಲ್ಲದವರು, ಹೊಸದಾಗಿ ವಿವಾಹವಾದ ದಂಪತಿ, ಹೊಸ ಮನೆ ಮಾಡಿದವರು ಅರ್ಜಿ ಸಲ್ಲಿಸಲು ಅವಕಾಶ ಇದೆ.

ಕರ್ನಾಟಕದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಅಧಿಕೃತ ವೆಬ್ಸೈಟ್ https://ahara.kar.nic.in/Home/EServices ಈ ವೆಬ್ಸೈಟ್ನಲ್ಲಿ ನಿಮಗೆ ಕನ್ನಡದಲ್ಲಿಯೇ ಮಾಹಿತಿ ಲಭ್ಯವೂ ಇದೆ. ಹೊಸ ಕಾರ್ಡ್ ಬೇಕಿದ್ದಲ್ಲಿ ಮೊದಲಿಗೆ ಒಂದಿಷ್ಟು ದಾಖಲೆಗಳನ್ನು ನೀವು ತೆಗೆದಿಟ್ಟುಕೊಳ್ಳಬೇಕು. ಅವುಗಳೆಂದರೆ, ಗುರುತೀನ ಚೀಟಿ, ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಡ್ರೈವಿಂಗ್ ಲೈಸೆನ್ಸ್, ಪೋಟೋ ಹಾಗೂ ಮೊಬೈಲ್ ಸಂಖ್ಯೆ. ಈ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿದಾಗ ಹೊಸ ಪಡಿತರ ಚೀಟಿಯ ವಿತರಣೆ ಸಮಯದಲ್ಲಿ ಅದರ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಮೇಲೆ ತಿಳಿಸಿದ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಹೊಸ ಪಡಿತರ ಚೀಟಿಯನ್ನು ಪಡೆಯಬಹುದು.

ಒಂದು ವೇಳೆ ಇದಾಗಲೇ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದರೆ, ಅದು ಬಂದಿದೆಯೋ ಇಲ್ಲವೋ ಎಂಬ ಸ್ಟೇಟಸ್ ಅನ್ನು ಕೂಡ ಇದರಲ್ಲಿಯೇ ನೋಡಬಹುದು. ಆರಂಭದಲ್ಲಿ ಎಡ ಭಾಗದಲ್ಲಿ ಮೇಲುಗಡೆ ಇರುವ ಮೂರು ಲೈನ್ ಮೇಲೆ ಕ್ಲಿಕ್ ಮಾಡಬೇಕು. ಅದರಲ್ಲಿರುವ ಸೇವೆ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ಸ್ಟೇಟಸ್ ಅಂದ್ರೆ ಸ್ಥಿತಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆ ಬಳಿಕ ವಾಸ್ತವ ಅಥವಾ ಅಸ್ತಿತ್ವದಲ್ಲಿರುವ ವಿನಂತಿ ಸ್ಥಿತಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಪುರಸಭೆಯನ್ನು ಆಯ್ಕೆ ಮಾಡಬೇಕು. ಇದಾದ ಬಳಿ, ನಿಮ್ಮ ಜಿಲ್ಲೆ ತಾಲೂಕು ಗ್ರಾಮ ಆಯ್ಕೆ ಮಾಡಿ ನಿಮ್ಮ ಸಂಖ್ಯೆಯನ್ನು ನಮೂದಿಸಿದರೆ ಸಾಕು. 

ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಿದ್ದರೆ ಅದನ್ನು ಡೌನ್ಲೋಡ್ ಮಾಡಿಕೊಳ್ಳುವ ಬಗೆ ಹೀಗೆ...

ಕರ್ನಾಟಕದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಅಧಿಕೃತ ವೆಬ್ಸೈಟ್ https://ahara.kar.nic.in/Home/EServices ನಿಮಗೆ ಕನ್ನಡದಲ್ಲಿಯೇ ಮಾಹಿತಿ ಲಭ್ಯವೂ ಇದೆ. 

 ನಂತರ ಇ- ರೇಷನ್ ಕಾರ್ಡ್ (E-Ration Card) ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ರೇಷನ್ ಕಾರ್ಡ್ ನ RC ಸಂಖ್ಯೆಯನ್ನು ನಮೂದಿಸಿ ಗೋ (Go) ಬಟನ್ ಮೇಲೆ ಕ್ಲಿಕ್ ಮಾಡಿ. ಬಳಿಕ, ರೇಷನ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಲು ನಿಮ್ಮ ಕುಟುಂಬದ ಸದಸ್ಯರು ಯಾರು ಎಂಬ ಬಗ್ಗೆ ಇರುವ ಆಪ್ಷನ್ನಲ್ಲಿ ನಮೂದು ಮಾಡಿ. ಇಷ್ಟಾದ ಬಳಿಕ, ಡೌನ್ಲೋಡ್ ಮಾಡಿಕೊಳ್ಳಲು ರೇಷನ್ ಕಾರ್ಡ್ ಗೆ ನೀಡಿರುವ ನೋಂದಾಯಿತ ಮೊಬೈಲ್ ನಂಬರ್ ಗೆ ಒಟಿಪಿ ಕಳಿಸಲಾಗುತ್ತದೆ. ಒಟಿಪಿ ಅನ್ನೋ ನಮೂದಿಸಿದರೆ ಆಯಿತು. ನಂತರ ರೇಷನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು.  

Post a Comment

Previous Post Next Post
CLOSE ADS
CLOSE ADS
×