Mahila nigama yojanegalu-ಮಹಿಳಾ ನಿಗಮದ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ

Mahila nigama yojanegalu-ಮಹಿಳಾ ನಿಗಮದ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ

mahila nigama yojane:-ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಜಾರಿಯಲ್ಲಿರುವ 05 ಯೋಜನೆಗಳಾದ ಉದ್ಯೋಗಿನಿ ಯೋಜನೆ, ಚೇತನ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ, ಧನಶ್ರೀ ಯೋಜನೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆಗಳನ್ನು ಸೇವಾಸಿಂಧು ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸುವ ಅವಧಿಯನ್ನು 30 ಸೆಪ್ಟೆಂಬರ್ 2024 ರವರೆಗೆ ಮುಂದೂಡಿಕೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಚಾಲ್ತಿಯಲ್ಲಿರುವ ಯೋಜನೆಯ ಪ್ರಯೋಜನವನ್ನು ಯಾರೆಲ್ಲ ಪಡೆಯಬಹುದು? ಅರ್ಜಿ ಸಲ್ಲಿಕೆ ವಿವರ ಇತರೆ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಯಾವೆಲ್ಲ ಯೋಜನೆಯ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ ಮಾಡಲಾಗಿದೆ?

A) ಉದ್ಯೋಗಿನಿ ಯೋಜನೆ.

B) ಚೇತನ ಯೋಜನೆ.

C) ಧನಶ್ರೀ ಯೋಜನೆ.

D) ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ.

E) ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ.

A) ಉದ್ಯೋಗಿನಿ ಯೋಜನೆ(udyogaini yojane).



ಆರ್ಥಿಕವಾಗಿ ಹಿಂದುಳಿದ ಮಹಿಳೆಯರನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಬಲೀಕರಣಗೊಳಿಸಲು ನೆರವಾಗುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ.

ಮಹಿಳೆಯರು ವ್ಯಾಪಾರ ಮತ್ತು ಸೇವಾ ಕ್ಷೇತ್ರಗಳಲ್ಲಿ ಸ್ವ-ಉದ್ಯೋಗ ಪ್ರಾರಂಭಿಸುವುದರ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದಲು ಅನುಕೂಲವಾಗುವಂತೆ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಇಚ್ಚಿಸುವ ಮಹಿಳೆಯರಿಗೆ ಬ್ಯಾಂಕುಗಳ ಮೂಲಕ ಸಾಲ ಮತ್ತು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಸಹಾಯಧನವನ್ನು (Backend Subsidy) ನೀಡುವ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.

ಸಹಾಯಧನ ವಿವರ:

ಉದ್ಯೋಗಿನಿ ಯೋಜನೆಯಡಿ ವಿಶೇಷ ವರ್ಗ ಹಾಗೂ ಸಾಮಾನ್ಯ ವರ್ಗದ ಮಹಿಳೆಯರಿಗೆ ಸಾಲದ ಗರಿಷ್ಠ ಮಿತಿಯನ್ನು ರೂ.1.00 ಲಕ್ಷದಿಂದ ರೂ.3.00 ಲಕ್ಷ ಗಳಿಗೆ ಸಹಾಯಧನದ ಮೊತ್ತವನ್ನು ಬ್ಯಾಂಕುಗಳು ಮಂಜೂರು ಮಾಡುವ ಸಾಲದ ಮೊತ್ತಕ್ಕೆ ಶೇ.30 ರಷ್ಟು ಸಹಾಯಧನ ನೀಡಲಾಗುತ್ತದೆ.

ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಯೋಜನಾ ವೆಚ್ಚ ಕನಿಷ್ಠ ರೂ.1.00 ಲಕ್ಷ ದಿಂದ ಗರಿಷ್ಠ ರೂ.3.00 ಲಕ್ಷಗಳಿಗೆ ಸಹಾಯಧನದ ಮೊತ್ತವನ್ನು ಬ್ಯಾಂಕುಗಳು ಮಂಜೂರು ಮಾಡುವ ಸಾಲದ ಮೊತ್ತಕ್ಕೆ ಶೇ.50 ರಷ್ಟು ಸಹಾಯಧನ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಅರ್ಹತೆಗಳು ಮತ್ತು ಒದಗಿಸಬೇಕಾದ ದಾಖಲೆಗಳು:-

1) ಕರ್ನಾಟಕ ರಾಜ್ಯದ ಖಾಯಂ ವಾಸಿಯಗಿರಬೇಕು.

2) ಅರ್ಜಿದಾರ ಮಹಿಳೆಯರಿಗೆ 18 ರಿಂದ 55 ವರ್ಷದ ಒಳಗಿರಾಬೇಕು.

3) ವಾಸ ಸ್ಥಳ ದೃಢೀಕರಣ ಪತ್ರ / ಮತದಾರರ ಗುರುತಿನ ಚೀಟಿ / ಪಡಿತರ ಚೀಟಿ

ಅರ್ಜಿದಾರ ಮಹಿಳೆಯರು ಕೈಗೊಳ್ಳಲು ಉದ್ದೇಶಿಸಿರುವ ಆದಾಯೋತ್ಪನ್ನ ಚಟುವಟಿಕೆಗೆ ಸಂಬಂಧಿಸಿದಂತೆ ಯೋಜನಾ ವರದಿ ಸಲ್ಲಿಸಬೇಕು.

4) ಅರ್ಜಿದಾರರ ಆಧಾರ್‍ ಲಿಂಕ್‍ ಆಗಿರುವ ಬ್ಯಾಂಕ್‍ ವಿವರ ಸಲ್ಲಿಸಬೇಕು.

5) ಆಧಾರ್ ಕಾರ್ಡ್ ಪ್ರತಿ.

6) ಸಂಬಂಧಪಟ್ಟ ತಹಸೀಲ್ದಾರರು ನೀಡಿರುವ ಆದಾಯ ದೃಢೀಕರಣ ಪ್ರಮಾಣ ಪತ್ರ (ವಾರ್ಷಿಕ ಆದಾಯದ ಮೀತಿ ಸಾಮಾನ್ಯ / ವಿಶೇಷ ವರ್ಗದವರಿಗೆ ರೂ.1.5 ಲಕ್ಷದ ಒಳಗೆ ಇರಬೇಕು, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರಿಗೆ ರೂ.2.00 ಲಕ್ಷದ ಒಳಗೆ ಇರಬೇಕು)

ಸಂಬಂಧಪಟ್ಟ ತಹಸೀಲ್ದಾರರು ನೀಡಿರುವ ಜಾತಿ ಪ್ರಮಾಣ ಪ್ರಮಾಣ ಪತ್ರ ಒದಗಿಸಬೇಕು.

B) ಚೇತನ ಯೋಜನೆ(Chetana yojane).

ಹೆಚ್.ಐ.ವಿ. ಸೋಂಕಿತ ಮತ್ತು ಬಾಧಿತ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಪ್ರೇರೇಪಿಸುವುದು ಮತ್ತು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಸದರಿಯವರು ಆದಾಯೋತ್ಪನ್ನಕರ ಚಟುವಟಿಕೆಗಳನ್ನು ಕೈಗೊಳ್ಳಲು ರೂ.30,000/-ಗಳನ್ನು ಪ್ರೋತ್ಸಾಹ ಧನವನ್ನು ಫಲಾನುಭವಿಗಳ ಬ್ಯಾಂಕ್‍ ಖಾತೆಗೆ ಮಂಜೂರು ಮಾಡಲಾಗುವುದು. ಫಲಾನುಭವಿಗಳನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಆಯ್ಕೆ ಸಮಿತಿಯಿಂದ ಆಯ್ಕೆ ಮಾಡಲಾಗುವುದು.

ಅರ್ಹತಾ ಮಾನದಂಡ ಹಾಗೂ ಅಗತ್ಯ ದಾಖಲೆಗಳು:-

1) ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು, ಮಾಜಿ ದೇವದಾಸಿ ಮಹಿಳೆಯಾಗಿರಬೇಕು.

2) ಅರ್ಜಿದಾರ ಮಹಿಳೆ ಹೆಚ್.ಐ.ವಿ., ಸೋಂಕಿತ / ಭಾದಿತ ರಾಗಿದ್ದರೆ ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರು.

3) ವಾಸ ಸ್ಥಳ ದೃಢೀಕರಣ ಪತ್ರ / ಮತದಾರರ ಗುರುತಿನ ಚೀಟಿ / ಪಡಿತರ ಚೀಟಿ.

4) ಕೈಗೊಳ್ಳಲು ಉದ್ದೇಶಿಸಿರುವ ಆದಾಯೋತ್ಪನ್ನ ಚಟುವಟಿಕೆಗೆ ಸಂಬಂಧಿಸಿದಂತೆ ಯೋಜನಾ ವರದಿ.

5) ಅರ್ಜಿದಾರರ ಬ್ಯಾಂಕ್‍ ಖಾತೆಗೆ ಆಧಾರ್‍ ಸೀಡಿಂಗ್‍ ಮಾಡಿಸಿರಬೇಕು

6) ಆಧಾರ್ ಕಾರ್ಡ್ ಪ್ರತಿ.

7) ಐ.ಸಿ.ಟಿ.ಸಿ., /ಎ.ಆರ್.ಟಿ. ಕೇಂದ್ರಗಳಲ್ಲಿ ವೈದ್ಯಕೀಯ ಪ್ರಮಾಣ ಪತ್ರ / ಕಾರ್ಡ್‍ ಹೊಂದಿರಬೇಕು.

ಈ ಯೋಜನೆಯಡಿ ದಮನಿತ ಮಹಿಳೆಯರು ತಮ್ಮ ವೃತ್ತಿ ಜೀವನದಿಂದ ಹೊರಬಂದು ಸ್ವಾವಲಂಬಿಗಳಾಗಿ ಜೀವನ ನಡೆಸಲು ಮತ್ತು ಆದಾಯ ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆರ್ಥಿಕ ಸ್ವಾವಲಂಬನೆ ಮೂಲಕ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಗೊಳ್ಳಲು ಅನುಕೂಲವಾಗುವಂತೆ ನಿಗಮದ ವತಿಯಿಂದ ಪ್ರೋತ್ಸಾಹಧನವಾಗಿ ರೂ.30,000/-ಗಳನ್ನು ಆದಾಯ ಉತ್ಪನ್ನಕರ ಚಟುವಟಿಕೆಗಳನ್ನು ಪ್ರಾರಂಭಿಸಲು ಫಲಾನುಭವಿಗಳ ಬ್ಯಾಂಕ್‍ ಖಾತೆಗೆ ಪ್ರೋತ್ಸಾಹಧನವನ್ನು ಮಂಜೂರು ಮಾಡಲಾಗುತ್ತದೆ. 

ಅರ್ಜಿ ಸಲ್ಲಿಸಲು ಅರ್ಹತೆಗಳು ಮತ್ತು ಒದಗಿಸಬೇಕಾದ ದಾಖಲೆಗಳು:-

1) ಅರ್ಜಿದಾರರ ವಯಸ್ಸು 18 ವರ್ಷ ಮೇಲ್ಪಿಟ್ಟಿರಬೇಕು.

2) ಅರ್ಜಿದಾರರು ರಾಜ್ಯದ ಖಾಯಂ ನಿವಾಸಿಯಾಗಿರಬೇಕು.

3) ಜಿಲ್ಲೆಯಲ್ಲಿ ದಮನಿತ ಮಹಿಳೆಯರ ಪುನರ್ವಸತಿಗಾಗಿ ಹಾಗೂ ಸರ್ಕಾರದಿಂದ ಅಧೀಕೃತವಾಗಿ ಗುರುತಿಸಲಾಗಿರುವ ಸಂಸ್ಥೆಯಿಂದ ಅಧೀಕೃತ ದೃಢೀಕರಣ ಪತ್ರ / ಗುರುತಿನ ಚೀಟಿ ಹೊಂದಿರಬೇಕು.

4) ಆಧಾರ್‍ ಕಾರ್ಡ್ ಪ್ರತಿ.

5) ವಾಸ ಸ್ಥಳ ದೃಢೀಕರಣ ಪತ್ರ / ಮತದಾರರ ಗುರುತಿನ ಚೀಟಿ / ಪಡಿತರ ಚೀಟಿ.

6) ಬ್ಯಾಂಕ್‍ ಅಕೌಂಟ್ ಗೆ ಆಧಾರ್‍ ಕಾರ್ಡ ಲಿಂಕ್ ಮಾಡಿಸಿರಬೇಕು.

7) ಅರ್ಜಿದಾರರು ಕೈಗೊಳ್ಳಲು ಉದ್ದೇಶಿಸಿರುವ ಆದಾಯೋತ್ಪನ್ನ ಚಟುವಟಿಕೆಗೆ ಸಂಬಂಧಿಸಿದಂತೆ ಯೋಜನಾ ವರದಿ ಸಲ್ಲಿಸಬೇಕು.

D) ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ:

ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಲಿಂಗತ್ವ ಅಲ್ಪಸಂಖ್ಯಾತರು ಆದಾಯ ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆರ್ಥಿಕ ಸ್ವಾವಲಂಬನೆ ಮೂಲಕ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಗೊಳ್ಳಲು ಅನುಕೂಲವಾಗುವಂತೆ ನಿಗಮದ ವತಿಯಿಂದ ಪ್ರೋತ್ಸಾಹಧನವಾಗಿ ರೂ.30,000/-ಗಳನ್ನು 

ಆದಾಯ ಉತ್ಪನ್ನಕರ ಚಟುವಟಿಕೆಗಳನ್ನು ಪ್ರಾರಂಭಿಸಲು ಫಲಾನುಭವಿಗಳ ಬ್ಯಾಂಕ್‍ ಖಾತೆಗೆ ಪ್ರೋತ್ಸಾಹಧನವನ್ನು ಮಂಜೂರು ಮಾಡಲಾಗುವುದು. ಫಲಾನುಭವಿಗಳನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಆಯ್ಕೆ ಸಮಿತಿಯಿಂದ ಆಯ್ಕೆ ಮಾಡಲಾಗುವುದು.

ಅರ್ಹತಾ ಮಾನದಂಡ ಹಾಗೂ ಅಗತ್ಯ ದಾಖಲೆಗಳು:-

1) ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

2) ಜಿಲ್ಲೆಯಲ್ಲಿ ನೋಂದಾಯಿತ ಸರ್ಕಾರೇತರ ಸಂಸ್ಥೆ (NGO) / ಜಿಲ್ಲೆಯಲ್ಲಿ ಗುರುತಿಸಿರುವ ಸಮುದಾಯ ಆಧಾರಿತ ಸಂಸ್ಥೆ / ಸ್ವಯಂ ಘೋಷಣೆ (ನೋಟರಿಯಿಂದ ದೃಢೀಕರಣ) / ಜಿಲ್ಲಾಧಿಕಾರಿಗಳಿಂದ ನೀಡಿದ ಟ್ರಾನ್ಸ್ ಜೆಂಡರ್ಸ್ ಗುರುತಿನ ಚೀಟಿ ಹೊಂದಿರಬೇಕು.

3) ಆಧಾರ್‍ ಕಾರ್ಡ್

4) ವಾಸ ಸ್ಥಳ ದೃಢೀಕರಣ ಪತ್ರ / ಮತದಾರರ ಗುರುತಿನ ಚೀಟಿ / ಪಡಿತರ ಚೀಟಿ.

5) ಅರ್ಜಿದಾರರ ಬ್ಯಾಂಕ್‍ ಖಾತೆಗೆ ಆಧಾರ್‍ ಸೀಡಿಂಗ್‍ ಮಾಡಿಸಿರಬೇಕು.

6) ಕೈಗೊಳ್ಳಲು ಉದ್ದೇಶಿಸಿರುವ ಆದಾಯೋತ್ಪನ್ನ ಚಟುವಟಿಕೆಗೆ ಸಂಬಂಧಿಸಿದಂತೆ ಯೋಜನಾ ವರದಿ.

E) ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ:

ದೇವದಾಸಿ ಪುನರ್ವಸತಿ ಯೋಜನೆಯಡಿ ದೇವದಾಸಿ ಮಹಿಳೆಯರನ್ನು ಸಂಪೂರ್ಣವಾಗಿ ಈ ಪದ್ಧತಿಯಿಂದ ವಿಮುಕ್ತಿಗೊಳಿಸಿ ಅವರ ಆರ್ಥಿಕ ಸಬಲತೆಯನ್ನು ಹೆಚ್ಚಿಸಲು ಆದಾಯ ಉತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ರಾಜ್ಯದ 15 (ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ರಾಯಚೂರು, ಕಲಬುರ್ಗಿ, ಯಾದಗಿರಿ, ಧಾರವಾಡ, ಹಾವೇರಿ, ಗದಗ, ಶಿವಮೊಗ್ಗ, ದಾವಣಗೆರೆ, ವಿಜಯನಗರ ಮತ್ತು ಚಿತ್ರದುರ್ಗ) 

ಜಿಲ್ಲೆಗಳಲ್ಲಿ ದೇವದಾಸಿ ಪುನರ್ವಸತಿ ಯೋಜನೆಯ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಗಳು, ಕಾನೂನು ಅರಿವು, ಜಾತ್ರಾ ಜಾಗೃತಿ ಕಾರ್ಯಕ್ರಮ, ಬೀದಿ ನಾಟಕ, ಗೋಡೆ ಬರಹ ಹಾಗೂ ಆರೋಗ್ಯ ಶಿಬಿರ ಮತ್ತು ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಮಾಜಿ ದೇವದಾಸಿ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯಲು, ಉದ್ಯಮ ಶೀಲತಾ ಅಭಿವೃದ್ಧಿಯಲ್ಲಿ ತೊಡಗಿಸಿ ಅಭಿವೃದ್ಧಿ ಹೊಂದಲು ಆದಾಯ ಉತ್ಪನ್ನಕರ ಚಟುವಟಿಕೆಯನ್ನು ಕೈಗೊಳ್ಳಲು ನಿಗಮದಿಂದ ರೂ.30,000/-ಗಳ ಪ್ರೋತ್ಸಾಹಧನವನ್ನು ಫಲಾನುಭವಿಗಳ ಬ್ಯಾಂಕ್‍ ಖಾತೆಗೆ ಮಂಜೂರು ಮಾಡಲಾಗುವುದು. ಫಲಾನುಭವಿಗಳನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಆಯ್ಕೆ ಸಮಿತಿಯಿಂದ ಆಯ್ಕೆ ಮಾಡಲಾಗುವುದು.

ಅರ್ಹತಾ ಮಾನದಂಡ ಹಾಗೂ ಅಗತ್ಯ ದಾಖಲೆಗಳು:-

1) ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು, ಮಾಜಿ ದೇವದಾಸಿ ಮಹಿಳೆಯಾಗಿರಬೇಕು.

2) 1993-94 ಮತ್ತು 2007-08 ನೇ ಸಾಲಿನ ಸರ್ಕಾರದಿಂದ ನಡೆಸಿದ ಸಮೀಕ್ಷಾ ಪಟ್ಟಿಯಲ್ಲಿ ಹೆಸರು ನೊಂದಾಯಿಸಿರಬೇಕು.

3) ವಾಸ ಸ್ಥಳ ದೃಢೀಕರಣ ಪತ್ರ / ಮತದಾರರ ಗುರುತಿನ ಚೀಟಿ / ಪಡಿತರ ಚೀಟಿ.

4) ಆಧಾರ್ ಕಾರ್ಡ್ ಪ್ರತಿ.

5) ಕೈಗೊಳ್ಳಲು ಉದ್ದೇಶಿಸಿರುವ ಆದಾಯೋತ್ಪನ್ನ ಚಟುವಟಿಕೆಗೆ ಸಂಬಂಧಿಸಿದಂತೆ ಯೋಜನಾ ವರದಿ.

6) ಅರ್ಜಿದಾರರ ಆಧಾರ್‍ ಲಿಂಕ್‍ ಆಗಿರುವ ಬ್ಯಾಂಕ್‍ ವಿವರ.

Online application link-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅರ್ಹ ಅರ್ಜಿದಾರರು ಅಗತ್ಯ ದಾಖಲೆಗಳ ಸಮೇತ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ನಿಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಅಥವಾ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

Post a Comment

Previous Post Next Post
CLOSE ADS
CLOSE ADS
×