KSSFCL Recruitment 2024: ಜೂನಿಯರ್ ಅಸಿಸ್ಟೆಂಟ್, ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

KSSFCL Recruitment 2024: ಜೂನಿಯರ್ ಅಸಿಸ್ಟೆಂಟ್, ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ವರದಿಯಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಸಹಕಾರಿ ಲಿಮಿಟೆಡ್ (KSSFCL) Recruitment 2024 ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ



ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಸಹಕಾರಿ ಲಿಮಿಟೆಡ್ (KSSFCL) Recruitment 2024ಅವಲೋಕನ:

  • ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಸಹಕಾರಿ ಲಿಮಿಟೆಡ್ (KSSFCL) ಹೊಸ ನೇಮಕಾತಿ ಅಧಿಸೂಚನೆಯ ಪ್ರಕಟಣೆಹೊರಡಿಸಿದೆ,
  • ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಸಹಕಾರಿ ಲಿಮಿಟೆಡ್ (KSSFCL) ಈ ಬಾರಿ 39 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ.ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಸಹಕಾರಿ ಲಿಮಿಟೆಡ್ (KSSFCL)
  • 2024 ಮೂಲಕ ಜೂನಿಯರ್ ಅಸಿಸ್ಟೆಂಟ್(Junior Assistant), ಡ್ರೈವರ್ (Driver) ಪೋಸ್ಟ್‌ಗಳ ನೇಮಕಾತಿಗಾಗಿ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು 09-Sep-2024 ರಂದು ಅಥವಾ ಮೊದಲು ಆಫ್‌ಲೈನ್‌ನಲ್ಲಿ(Offline) ಅನ್ವಯಿಸಬಹುದು. ಹುದ್ದೆಗಳ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಕೆಳಗೆ ನೀಡಲಾದ ಮಾಹಿತಿಯನ್ನು ಕೊನೆವರೆಗೂ ಓದಿ.

ಹುದ್ದೆಗಳ ಸಂಪೂರ್ಣ ವಿವರ ಕೆಳಗಿನಂತಿದೆ :

  • ಇಲಾಖೆ ಹೆಸರು – ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಸಹಕಾರಿ ಲಿಮಿಟೆಡ್ (KSSFCL)
  • ಹುದ್ದೆಗಳ ಹೆಸರು – ಜೂನಿಯರ್ ಅಸಿಸ್ಟೆಂಟ್, ಡ್ರೈವರ್
  • ಒಟ್ಟು ಹುದ್ದೆಗಳು 39
  • ಸಂಬಳ: ರೂ.13000-70000/- ಪ್ರತಿ ತಿಂಗಳು
  • ಅರ್ಜಿ ಸಲ್ಲಿಸುವ ಬಗೆ ಆಫ್ಲೈನ್ (Offline)
  • ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ

ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಸಹಕಾರಿ ಲಿಮಿಟೆಡ್ (KSSFCL) ಖಾಲಿ ಹುದ್ದೆಗಳ ವಿವರ:

  • ಚಾರ್ಟರ್ಡ್ ಅಕೌಂಟೆಂಟ್-1
  • ಕಾನೂನು ಅಧಿಕಾರಿ-2
  • ಮಾನವ ಸಂಪನ್ಮೂಲ ಅಧಿಕಾರಿ-1
  • ತರಬೇತಿ ಅಧಿಕಾರಿ-1
  • ಸೌಹಾರ್ದ ಅಭಿವೃದ್ಧಿ ಅಧಿಕಾರಿ-11
  • ಸಹಾಯಕರು-8
  • ಟೈಪಿಸ್ಟ್ ಮತ್ತು ಸ್ಟೆನೋ-2
  • ಕಿರಿಯ ಸಹಾಯಕ-11
  • ಉಪ ಸಿಬ್ಬಂದಿ ಮತ್ತು ವಾಹನ ಚಾಲಕ-2
  • ಒಟ್ಟು ಹುದ್ದೆಗಳು 39

ವಿದ್ಯಾರ್ಹತೆ :

  • ಚಾರ್ಟರ್ಡ್ ಅಕೌಂಟೆಂಟ್ – CA, CS, ICWA
  • ಕಾನೂನು ಅಧಿಕಾರಿ – ಕಾನೂನಿನಲ್ಲಿ ಪದವಿ, LLB
  • ಮಾನವ ಸಂಪನ್ಮೂಲ ಅಧಿಕಾರಿ – HR ನಲ್ಲಿ MBA
  • ತರಬೇತಿ ಅಧಿಕಾರಿ – MA, MSW
  • ಸೌಹಾರ್ದ ಅಭಿವೃದ್ಧಿ ಅಧಿಕಾರಿ – ಪದವಿ
  • ಸಹಾಯಕರು – ಪದವಿ
  • ಟೈಪಿಸ್ಟ್ ಮತ್ತು ಸ್ಟೆನೋ – ಪದವಿ
  • ಕಿರಿಯ ಸಹಾಯಕ – 12 ನೇ ತರಗತಿ
  • ಉಪ ಸಿಬ್ಬಂದಿ ಮತ್ತು ವಾಹನ ಚಾಲಕ – 10 ನೇತರಗತಿ

ವಯೋಮಿತಿ :

  • ಚಾರ್ಟರ್ಡ್ ಅಕೌಂಟೆಂಟ್ ಹುದ್ದೆಗೆ,ಮಾನವ ಸಂಪನ್ಮೂಲ ಅಧಿಕಾರಿ,ತರಬೇತಿ ಅಧಿಕಾರಿ ಹುದ್ದೆಗೆ,ಸೌಹಾರ್ದ ಅಭಿವೃದ್ಧಿ ಅಧಿಕಾರಿ ಹುದ್ದೆಗೆ 35 ವರ್ಷ ನಿಗದಿ ಮಾಡಲಾಗಿದೆ.
  • ಸಹಾಯಕರು ಹುದ್ದೆಗೆ, ಟೈಪಿಸ್ಟ್ ಮತ್ತು ಸ್ಟೆನೋ ಹುದ್ದೆಗೆ, ಕಿರಿಯ ಸಹಾಯಕ ಉಪ ಸಿಬ್ಬಂದಿ ಮತ್ತು ವಾಹನ ಚಾಲಕ ಹುದ್ದಗೆ 30 ವರ್ಷ ನಿಗದಿ ಮಾಡಲಾಗಿದೆ.

ವಯೋಮಿತಿ ಸಡಿಲಿಕೆ:

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಾವಳಿಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ.

ಸಂಬಳದ ಪ್ಯಾಕೆಜ್ ಎಷ್ಟು?

  • ಚಾರ್ಟರ್ಡ್ ಅಕೌಂಟೆಂಟ್ ಹುದ್ದೆಗೆ 60,000-70,000 ರೂ.ಗಳು, ಕಾನೂನು ಅಧಿಕಾರಿ, ಮಾನವ ಸಂಪನ್ಮೂಲ ಅಧಿಕಾರಿ , ತರಬೇತಿ ಅಧಿಕಾರಿ ಹುದ್ದೆಗೆ 35,000-38,000ರೂ.ಗಳು, ಸೌಹಾರ್ದ ಅಭಿವೃದ್ಧಿ ಅಧಿಕಾರಿ ಹುದ್ದೆಗೆ 28,000-30,000ರೂ.ಗಳು,
  • ಸಹಾಯಕರು ಹುದ್ದೆಗೆ 20,000-22,000ರೂ.ಗಳು, ಟೈಪಿಸ್ಟ್ ಮತ್ತು ಸ್ಟೆನೋ, ಕಿರಿಯ ಸಹಾಯಕ ಹುದ್ದೆ, ಉಪ ಸಿಬ್ಬಂದಿ ಮತ್ತು ವಾಹನ ಚಾಲಕ ಹುದ್ದೆಗೆ 13,000-15,000 ರೂ.ಗಳನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ :

ಚಾರ್ಟರ್ಡ್ ಅಕೌಂಟೆಂಟ್, ಕಾನೂನು ಅಧಿಕಾರಿ, ಮಾನವ ಸಂಪನ್ಮೂಲ ಅಧಿಕಾರಿ, ತರಬೇತಿ ಅಧಿಕಾರಿ, ಸೌಹಾರ್ದ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ:

ಎಲ್ಲಾ ಅಭ್ಯರ್ಥಿಗಳು: ರೂ.500/-

ಸಹಾಯಕರು, ಟೈಪಿಸ್ಟ್ ಮತ್ತು ಸ್ಟೆನೋ, ಜೂನಿಯರ್ ಅಸಿಸ್ಟೆಂಟ್, ಡೆಪ್ಯುಟಿ ಸ್ಟಾಫ್ ಮತ್ತು ವೆಹಿಕಲ್ ಡ್ರೈವರ್ ಹುದ್ದೆಗಳಿಗೆ:

ಎಲ್ಲಾ ಅಭ್ಯರ್ಥಿಗಳು: ರೂ.300/-

ಪಾವತಿ ವಿಧಾನ: 

ಡಿಮ್ಯಾಂಡ್ ಡ್ರಾಫ್ಟ್(Demand Draft)

ಆಯ್ಕೆ ಪ್ರಕ್ರಿಯೆ :

  • ಲಿಖಿತ ಪರೀಕ್ಷೆ (Written test)
  • ಸಂದರ್ಶನ (Interview.)

ಆಫ್‌ಲೈನ್ ಅರ್ಜಿ ಸಲ್ಲಿಕೆಗೆ ಹೇಗೆ?

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ “ಸೌಹಾರ್ದ ಸಹಕಾರಿ ಸೌಧ”, #68, ಮೊದಲ ಮಹಡಿ, 18ನೇ ಅಡ್ಡರಸ್ತೆ, ಮಾರ್ಗೋಸಾ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-560055 ಗೆ 09-Sep-2024 ಅಥವಾ ಮೊದಲು ಕಳುಹಿಸಬೇಕಾಗುತ್ತದೆ .

ಪ್ರಮುಖ ದಿನಾಂಕಗಳು:

  • ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 29 ಆಗಸ್ಟ್‌ 2024
  • ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09 ಸೆಪ್ಟೆಂಬರ್‌ 2024

ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ವರದಿಯನ್ನು ಎಲ್ಲರಿಗೂ ಶೇರ್ ಮಾಡಿ.


Post a Comment

Previous Post Next Post
CLOSE ADS
CLOSE ADS
×