ಕರ್ನಾಟಕದ ಇಂಧನ ಇಲಾಖೆ 10 ಹೆಚ್‌ಪಿ ವರೆಗಿನ ನೀರಾವರಿ ಪಂಪ್‌ಸೆಟ್ ಸ್ಥಾವರಗಳಿಗೆ ಆಧಾರ್ ನಂಬರ್ ಜೋಡಣೆ ಮಾಡಬೇಕು ಎಂದು ವಿದ್ಯುತ್ ಸರಬರಾಜು ಕಂಪನಿಗಳಿಗೆ ಸೂಚನೆ ನೀಡಿತ್ತು. ಈಗ ಈ ಕುರಿತು ವರದಿ ನೀಡುವಂತೆ ಸೂಚನೆ ನೀಡಿದೆ. ಇಂಧನ ಇಲಾಖೆಯ ಆದೇಶ ಗ್ರಾಮೀಣ ಭಾಗದ ರೈತರಲ್ಲಿ ಗೊಂದಲ ಮತ್ತು ಆತಂಕವನ್ನು ಮೂಡಿಸಿದೆ.
ವಿವಿಧ ಆದೇಶಗಳಲ್ಲಿ ಉಲ್ಲೇಖಿಸಿ ವಿನೋದ್ ಕುಮಾರ್ ಡಿ. ಎಂ. ಸರ್ಕಾರದ ಅಧೀನ ಕಾರ್ಯದರ್ಶಿ ಇಂಧನ ಇಲಾಖೆ ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ, ಮಂಗಳೂರು ವಿದ್ಯುತ್ ಸರಬರಾಜು ಕಂಪನಿ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ, ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ನಿಯಮಿತ ಇವರಿಗೆ ಈ ಕುರಿತು ಪತ್ರವನ್ನು ಬರೆದಿದ್ದಾರೆ.
ಕಾಫಿ ಬೆಳೆಗಾರರ ನೀರಾವರಿ ಪಂಪ್‌ಸೆಟ್ ಬಡ್ಡಿ ಬಾಕಿ ಮನ್ನಾ; ಇಲ್ಲಿದೆ ಮಹತ್ವದ ಮಾಹಿತಿ
ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ ಅಧ್ಯಕ್ಷತೆಯಲ್ಲಿ ದಿನಾಂಕ 20.07.2024 ರಂದು ನಡೆದ ಸಭೆಯಲ್ಲಿ 10 ಹೆಚ್‌ಪಿ ವರೆಗಿನ ನೀರಾವರಿ ಪಂಪ್‌ಸೆಟ್ ಸ್ಥಾವರಗಳಿಗೆ ಆಧಾರ್ ಜೋಡಣೆಯನ್ನು ಈಗಾಗಲೇ ದಿನಾಂಕ 31.07.2024 ರೊಳಗಾಗಿ ಪೂರ್ಣಗೊಳಿಸಲು ಹಾಗೂ ಪೂರ್ಣಗೊಳಿಸಲಾಗದಿರುವ ಸನ್ನಿವೇಶದಲ್ಲಿ ಹೆಚ್ಚುವರಿ ಕಾಲಾವಕಾಶ ಪ್ರಸ್ತಾವನೆಯನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ದಾಖಲಿಸಲು ತಿಳಿಸಲಾಗಿರುತ್ತದೆ ಎಂದು ಹೇಳಿದೆ.
ಐಪಿ ಸೆಟ್ ಆರ್‌ಆರ್ ನಂಬರ್‌ಗೆ ಆಧಾರ್ ಜೋಡಣೆ. ರೈತರಿಗೆ ಆತಂಕ ನಿವಾರಿಸಿದ ಸಚಿವರು
ಸೆಪ್ಟೆಂಬರ್-2024ರಂತೆ 10 ಹೆಚ್‌ಪಿ ವರೆಗಿನ ನೀರಾವರಿ ಪಂಪ್‌ಸೆಟ್‌ಗಳ ಸಹಾಯಧನ ಬಿಡುಗಡೆಯನ್ನು ವ್ಯವಸ್ಥಿತ ರೂಪದಲ್ಲಿ ಪಡೆಯಲು ಕೋರಿರುವಂತೆ, ಆಧಾರ್ ಜೋಡಣೆ ಪ್ರಕ್ರಿಯೆಯನ್ನು ಪೂರ್ಣವಾಗಿ ದಿನಾಂಕ 25.08.2024 ರೊಳಗಾಗಿ ಸಾಧಿಸುವುದು. ಈಗಾಗಲೇ ಆಧಾರ್ ಜೋಡಣೆಯಾಗಿರುವ ಸ್ಥಾವರಗಳ ಬಗ್ಗೆ ಮಾಲೀಕತ್ವ, ಭೂ ವಿಸ್ತೀರ್ಣ ಮತ್ತು ಇತರೆ ಅಂಶಗಳ ಬಗ್ಗೆ ವಿಶ್ಲೇಷಣೆಯ ವಿವರವನ್ನು ದಿನಾಂಕ 26.08.2024/ 06.09.2024 ರೊಳಗಾಗಿ ಸರ್ಕಾರಕ್ಕೆ ನೀಡಲು ಕೋರಲಾಗಿರುತ್ತದೆ.
ಆರ್‌ಟಿಸಿಗೆ ಆಧಾರ್ ಕಾರ್ಡ್ ಲಿಂಕ್, ರೈತರಿಗೆ ಮಾಹಿತಿ
ಎಷ್ಟು ಶೇ ಜೋಡಣೆಯಾಗಿದೆ?: ಆಧಾರ್ ಜೋಡಣೆ ಪ್ರಕ್ರಿಯೆ ಪೂರ್ಣಗೊಳಿಸಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಹಾಗೂ ಸರ್ಕಾರದಿಂದ ನಿರ್ದಿಷ್ಟಪಡಿಸಿರುವ ಸಮಯದಲ್ಲಿ ಸಾಧಿಸದಿರುವುದು ವಾಸ್ತವದ ಸಂಗತಿಯಾಗಿರುತ್ತದೆ. ದಿನಾಂಕ 17.09.2024ರ ಪ್ರಗತಿಯ ಅನುಸಾರ 10 ಹೆಚ್‌ಪಿ ವರೆಗಿನ ನೀರಾವರಿ ಪಂಪ್‌ಸೆಟ್ ಸ್ಥಾವರಗಳ ಆಧಾರ್ ಜೋಡಣೆಯ ಪ್ರಗತಿಯು ಶೇ. 94.30 ರಷ್ಟು ಮಾತ್ರ ಸಾಧಿಸಲಾಗಿದೆ. ಆರ್ಥಿಕ ಇಲಾಖೆಯು ಟಿಪ್ಪಣಿಯಲ್ಲಿ ಆಧಾರ್ ಜೋಡಣೆ ಪ್ರಕ್ರಿಯೆ ಸಂಪೂರ್ಣವಾಗಿ ಸಾಧಿಸದಿರುವುದರಿಂದ ಹಾಗೂ ಈಗಾಗಲೇ ಆಧಾರ್ ಜೋಡಣೆಯಾಗಿರುವ ನೀರಾವರಿ ಪಂಪ್‌ಸೆಟ್ ಸ್ಥಾವರಗಳ ಸಹಾಯಧನವನ್ನು ಪರಿಣಾಮಕಾರಿ ಮತ್ತು ಫಲಪ್ರದ ವಿತರಣೆಗಾಗಿ ಮಾಲೀಕತ್ವ, ಭೂಮಿಯ ವಿಸ್ತೀರ್ಣ ಮತ್ತು ಇತರೆ ಅಂಶಗಳ ಬಗ್ಗೆ ವರದಿಯನ್ನು ನೀಡದಿರುವುದರಿಂದ ಸೆಪ್ಟೆಂಬರ್-24ರ ಮಾಹೆಯ ಅನುದಾನವನ್ನು ಬಿಡುಗಡೆಗೊಳಿಸಲಾಗದಿರುವ ಬಗ್ಗೆ ಹಿಂಬರಹ ನೀಡಲಾಗಿರುತ್ತದೆ.
ಆಧಾರ್ ಜೋಡಣೆಯ ನೋಡಲ್ ಕಂಪನಿಯಾದ ಬೆ.ವಿ.ಕಂ ರವರು 1,92,861 ಸಂಖ್ಯೆ 10 ಹೆಚ್‌ಪಿ ವರೆಗಿನ ನೀರಾವರಿ ಪಂಪ್‌ಸೆಟ್‌ಗಳ ಸ್ಥಾವರಗಳ ಆಧಾರ್ ಜೋಡಣೆ ಪ್ರಕ್ರಿಯೆ ಬಾಕಿಯು ಮಾಲೀಕನ ನಿಧನ, ಮಾಲೀಕತ್ವದ ಬದಲಾವಣೆ ಇತರೆ ಕೌಟುಂಬಿಕ ಕಾರಣಗಳು, FRUITS ಮತ್ತು DATA BASE ನಲ್ಲಿ ಜೋಡಣೆಗೊಳಿಸಲು ಮೊಬೈಲ್ ಸಂಖ್ಯೆಗಳು ದಾಖಲಾಗದಿರುವುದು, ಅಮಾನ್ಯವಾಗಿರುವ ಆಧಾರ್ ಕಾರ್ಡ್‌ಗಳನ್ನು ಸಂಬಂಧಿಸಿದ ಮಾಲೀಕರಿಂದ ಮರುಪಡೆಯುವಿಕೆ ಮತ್ತು ಶಾಶ್ವತ ನಿಲುಗಡೆ ಹೊಂದಿದ ಸ್ಥಾವರಗಳ ಕಂದಾಯ ಖಾತೆಗಳನ್ನು ಮುಕ್ತಾಯಗೊಳಿಸುವ ಪ್ರಕ್ರಿಯೆ ಚಾಲ್ತಿಗೊಳಿಸಬೇಕಾಗಿರುವ ಹಿನ್ನೆಲೆಯಲ್ಲಿ 1 ಅಥವಾ 2 ತಿಂಗಳ ಸಮಯಾವಕಾಶ ಅಗತ್ಯವಿರುವುದಾಗಿ ಕೋರಿದ್ದಾರೆ.
ವಿದ್ಯುತ್ ಸರಬರಾಜು ಕಂಪನಿಗಳು ಆರ್ಥಿಕ ನಷ್ಟವನ್ನು ಅನುಭವಿಸುತ್ತಿರುವುದರಿಂದ ವಿದ್ಯುತ್ ಖರೀದಿ, ಅಲ್ಪಾವಧಿ ಮತ್ತು ದೀರ್ಘಾವರಿ ಸಾಲಗಳ ಮರುಪಾವತಿ ಮತ್ತು ಇತರೆ ವೆಚ್ಚಗಳನ್ನು ವ್ಯಯಿಸಲು ಸರ್ಕಾರದಿಂದ ಬಿಡುಗಡೆಗೊಳಿಸಲಾಗಿರುವ ಸಹಾಯಧನವನ್ನು ಅವಲಂಬಿಸಿರುವುದಾಗಿ ತಿಳಿಸಿ ಸೆಪ್ಟೆಂಬರ್-24ರ ಮಾಹೆಯ ಸಹಾಯಧನವನ್ನು ಬಿಡುಗಡೆಗೊಳಿಸಲು ಮತ್ತೊಮ್ಮೆ ಆರ್ಥಿಕ ಇಲಾಖೆಯನ್ನು ಕೋರಲಾಗಿರುತ್ತದೆ. ಇಲಾಖೆಯು ಸೆಪ್ಟೆಂಬರ್-24ರ ಮಾಹೆಯ ಸಹಾಯಧನವನ್ನು ಬಿಡುಗಡೆಗೊಳಿಸಲು ಸಹಮತಿಸಿ, ಅಕ್ಟೋಬರ್-24ರ ಮಾಹೆಯ ಸಹಾಯಧನ ಬೇಡಿಕೆಯನ್ನು ಆಧಾರ್ ಜೋಡಣೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಕೋರಲು ತಿಳಿಸಿರುತ್ತಾರೆ.
ಆದ್ದರಿಂದ, ಅಕ್ಟೋಬರ್-2024ರ ಮಾಹೆಯ 10 ಹೆಚ್‌ಪಿ ವರೆಗಿನ ನೀರಾವರಿ ಪಂಪ್‌ಸೆಟ್‌ಗಳ ಸಹಾಯಧನ ಬಿಡುಗಡೆಯನ್ನು ವ್ಯವಸ್ಥಿತ ರೂಪದಲ್ಲಿ ಪಡೆಯಲು ಆಧಾರ್ ಜೋಡಣೆ ಪ್ರಕ್ರಿಯೆಯನ್ನು ದಿನಾಂಕ 23.09.2024 ರೊಳಗಾಗಿ ಪೂರ್ಣಗೊಳಿಸಿ, ವರದಿಯನ್ನು ದಿನಾಂಕ 24.09.2024 ರೊಳಗಾಗಿ ಸರ್ಕಾರಕ್ಕೆ ನೀಡಲು ಹಾಗೂ ಆಧಾರ್ ಪ್ರಕ್ರಿಯೆ ಪೂರ್ಣಗೊಳ್ಳದ ಸನ್ನಿವೇಶದಲ್ಲಿ ಉಂಟಾಗುವ ಸಹಾಯಧನದ ಬಿಡುಗಡೆಯ ವ್ಯತಿರಿಕ್ತ ಪರಿಣಾಮಗಳಿಗೆ ಸಂಬಂಧಿಸಿದ ವಿದ್ಯುತ್ ಸರಬರಾಜು ಕಂಪನಿಗಳು ನೇರ ಹೊಣೆಯಾಗುವ ಬಗ್ಗೆ ತಿಳಿಸಲು ನಿರ್ದೇಶಿತನಾಗಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.