ಕೃಷಿ ಇಲಾಖೆಯಲ್ಲಿ ಖಾಲಿ ಇರುವ ‘ಗ್ರೂಪ್– ಬಿ’ ವೃಂದದ 672 ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (KPSC) ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.‘ಕೃಷಿ ಅಧಿಕಾರಿ’ ಎಂಬ 86 ಹುದ್ದೆಗಳು ಹಾಗೂ ‘ಸಹಾಯಕ ಕೃಷಿ ಅಧಿಕಾರಿ’ ಎಂಬ 586 ಹುದ್ದೆಗಳಿವೆ.
ಅಕ್ಟೋಬರ್ 7ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು ನವೆಂಬರ್ 7 ಅರ್ಜಿ ಸಲ್ಲಿಸಲು ಕಡೆಯ ದಿನ.
Education Qualification
ಕೃಷಿ ಅಧಿಕಾರಿ / ಸಹಾಯಕ ಕೃಷಿ ಅಧಿಕಾರಿ ಎರಡು ಹುದ್ದೆಗಳಿಗೆ ಈ ಕೆಳಗಿನ ವಿದ್ಯಾರ್ಹತೆ ಪರಿಗಣಿಸಲಾಗುತ್ತದೆ.
ಶೇಕಡ.85 ರಷ್ಟು ಹುದ್ದೆಗಳಿಗೆ - ಬಿಎಸ್ಸಿ (ಕೃಷಿ) ಅಥವಾ ಬಿಎಸ್ಸಿ (ಆನರ್ಸ್) ಕೃಷಿ
ಶೇಕಡ.15 ರಷ್ಟು ಹುದ್ದೆಗಳಿಗೆ ಕೆಳಗಿನ ವಿದ್ಯಾರ್ಹತೆ ಪರಿಗಣಿಸಲಾಗುವುದು.
- ಬಿ.ಟೆಕ್ - ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಅಥವಾ
- ಬಿ.ಟೆಕ್ - ಆಹಾರ ತಂತ್ರಜ್ಞಾನ ಅಥವಾ
- ಬಿಎಸ್ಸಿ - ಕೃಷಿ ಮಾರುಕಟ್ಟೆ ಮತ್ತು ಸಹಕಾರ ಅಥವಾ
- ಬಿಎಸ್ಸಿ ಆನರ್ಸ್- ಕೃಷಿ ಮಾರಾಟ ಮತ್ತು ಸಹಕಾರ ಅಥವಾ
- ಬಿಎಸ್ಸಿ ಆನರ್ಸ್ - ಅಗ್ರಿ ಬಿಸಿನೆಸ್ ಮ್ಯಾನೇಜ್ಮೆಂಟ್ ಅಥವಾ
- ಬಿ.ಎಸ್ಸಿ - ಕೃಷಿ ಜೈವಿಕ ತಂತ್ರಜ್ಞಾನ ಅಥವಾ
- ಬಿ.ಟೆಕ್ - ಜೈವಿಕ ತಂತ್ರಜ್ಞಾನ ಅಥವಾ
- ಬಿಎಸ್ಸಿ - ಅಗ್ರಿಕಲ್ಚರ್ ಇಂಜಿನಿಯರಿಂಗ್ ಅಥವಾ
- ಬಿ.ಟೆಕ್ ಅಗ್ರಿಕಲ್ಚರ್ ಇಂಜಿನಿಯರಿಂಗ್
ಕೃಷಿ ಇಲಾಖೆ ಹುದ್ದೆಗಳಿಗೆ ವರ್ಗಾವಾರು ನಿಗದಿತ ಕನಿಷ್ಠ, ಗರಿಷ್ಠ ವಯಸ್ಸಿನ ಅರ್ಹತೆಗಳು
- ಅರ್ಜಿ ಸಲ್ಲಿಸಲು ಕನಿಷ್ಠ-18 ವರ್ಷಗಳು.
- ಅರ್ಜಿ ಸಲ್ಲಿಸಲು ಸಾಮಾನ್ಯ ಅರ್ಹತೆಯವರಿಗೆ ಗರಿಷ್ಠ 38 ವರ್ಷಗಳು.
- ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅರ್ಹತೆಯವರಿಗೆ ಗರಿಷ್ಠ 41 ವರ್ಷಗಳು.
- ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1- ಅರ್ಹತೆಯವರಿಗೆ ಗರಿಷ್ಠ 43 ವರ್ಷಗಳು.
ಶುಲ್ಕ
ಸಾಮಾನ್ಯ ವರ್ಗದವರಿಗೆ ₹600. 2ಎ, 2ಬಿ, 3ಎ, 3ಬಿ ಅವರಿಗೆ 300. ಎಸ್‌ಸಿ, ಎಸ್‌ಟಿ, ಪ್ರವರ್ಗ 1, ಮಾಜಿ ಸೈನಿಕರಿಗೆ ವಿನಾಯಿತಿ ಇದೆ.
ನೇಮಕಾತಿ ವಿಧಾನ
ಈ ಹುದ್ದೆಗಳಿಗೆ ನೇಮಕಾತಿ ವಿಧಾನದಲ್ಲಿ ಕೆಳಗಿನ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
- ಕನ್ನಡ ಭಾಷಾ ಪರೀಕ್ಷೆ - 150 ಅಂಕಗಳಿಗೆ
- ಸಾಮಾನ್ಯ ಪತ್ರಿಕೆ : 300 ಅಂಕಗಳಿಗೆ 01-30 ಗಂಟೆ.
- ನಿರ್ದಿಷ್ಟ ಪತ್ರಿಕೆ : 300 ಅಂಕಗಳಿಗೆ 2 ಗಂಟೆ.
ಕಡ್ಡಾಯ ಕನ್ನಡ ಭಾಷೆ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಆಯೋಗದ https://kpsc.kar.nic.in/ ಪರಿಶೀಲಿಸಬೇಕು.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು
- ಅಧಿಸೂಚನೆ ಬಿಡುಗಡೆ ಆದ ದಿನಾಂಕ:- 20-09-2024
- ಆನ್‌ಲೈನ್ ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ:- 07-10-2024
- ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ:- 07-11-2024
ಕೃಷಿ ಇಲಾಖೆ ಹುದ್ದೆಗಳಿಗೆ ಅರ್ಜಿ ಶುಲ್ಕ ವಿವರ
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.600.
- ಇತರೆ ಹಿಂದುಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ.300.
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50.
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.