Free sheep goat poultry training-ಉಚಿತ ಊಟ ವಸತಿಯೊಂದಿಗೆ 2 ದಿನಗಳ ಆಡು ಕುರಿ ಸಾಕಾಣಿಕೆ ತರಬೇತಿ

Free sheep goat poultry training-ಉಚಿತ ಊಟ ವಸತಿಯೊಂದಿಗೆ 2 ದಿನಗಳ ಆಡು ಕುರಿ ಸಾಕಾಣಿಕೆ ತರಬೇತಿ

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ನಗರದ ಪಶು ಆಸ್ಪತ್ರೆ ಆವರಣದಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ಕುರಿ ಮತ್ತು ಮೇಕೆ ಸಾಕಾಣಿಕೆ(Free sheep and goat training) ತರಬೇತಿಯನ್ನು ಆಯೋಜಿಸಲಾಗಿದೆ.



ತರಬೇತಿಗೆ ಹಾಜರಾಗುವ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರ ಜೆರಾಕ್ಸ್ ತರಬೇಕು. ತರಬೇತಿಯಲ್ಲಿ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ ದೂ. 08192-233787 ಗೆ ಸಂಪರ್ಕಿಸಬಹುದೆಂದು ಮುಖ್ಯ ಪಶು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

Free sheep and goat farming training-ಉಚಿತ ಊಟ ವಸತಿಯೊಂದಿಗೆ 2 ದಿನಗಳ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

 ರೈತರುಗಳಿಗೆ ದಿನಾಂಕ 11-09-2024 ಮತ್ತು 12-09-2024 ರ ದಿನಾಂಕಗಳಂದು 2 ದಿವಸಗಳ ಕುರಿ(sheep) ಮತ್ತು ಮೇಕೆ(goat) ಸಾಕಾಣಿಕಾ (Free sheep and goat farming) ತರಬೇತಿಯನ್ನು ಆಯೋಜಿಸಲಾಗಿದೆ. ಆಸಕ್ತರು ಭಾಗವಹಿಸಲು ಕೋರಿದೆ.

1) ಭಾಗವಹಿಸುವ ಅಭ್ಯರ್ಥಿಗಳಿಗೆ ಊಟದ ವ್ಯವಸ್ಥೆ ಇರುತ್ತದೆ.

2) ವಸತಿ ವ್ಯವಸ್ಥೆ ಇರುವುದಿಲ್ಲ

3) ಅಭ್ಯರ್ಥಿಗಳು ಆಧಾರ್ ಪ್ರತಿ ಮತ್ತು 2 ಭಾವಚಿತ್ರಗಳನ್ನು ತರಲು ಸೂಚಿಸಿದೆ

4) ತರಬೇತಿ ಪ್ರಮಾಣ ಪತ್ರವನ್ನು ನೀಡಲಾಗುವುದು

5) ತರಬೇತಿಯನ್ನು ಪಶುಪಾಲನಾ ಉತ್ಕೃಷ್ಟತಾ ಕೇಂದ್ರ, ಹೆಸರಘಟ್ಟದ Regional fodder station ಮೇವು ಕೇಂದ್ರ [ಸೀಡ್ಸ್ ಫಾರಂ ಆವರಣ] ಬ್ಯಾತ ಮತ್ತು ಹೆಸರಘಟ್ಟ ರಸ್ತೆ ಇಲ್ಲಿ ನಡೆಸಲಾಗುವುದು.

ಸಂಪರ್ಕ ಮಾಹಿತಿ

1) 9060111680

2) 6363082440

Free dairy and vermicompost training-ಉಚಿತ ಊಟ ವಸತಿಯೊಂದಿಗೆ 10 ದಿನಗಳ ಹೈನುಗಾರಿಕೆ,ಎರೆಹುಳು ಗೊಬ್ಬರ ತಯಾರಿಕೆ ತರಬೇತಿ-Uchitha hainugarike tharabethi

ಬ್ಯಾಂಕ್ ಆಫ್ ಬರೋಡ ಸ್ವ ಉದ್ಯೋಗ ತರಬೇತಿ ಸಂಸ್ಥೆ ದೇವಗಿರಿ ಹಾವೇರಿಯಲ್ಲಿ18 - 45 ವಯೋಮಾನದವರಿಗೆ *ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ* (free dairy and Vermicompost training) ತರಬೇತಿಯನ್ನು ದಿನಾಂಕ *14.10.2024 ರಿಂದ 23.10.2024* ವರೆಗೆ 10 ದಿನಗಳ ಕಾಲ ಆಯೋಜಿಸಲಾಗಿದೆ.

ತರಬೇತಿಯಲ್ಲಿ ಕಲಿಸುವ ವಿಷಯಗಳು:: 

1. ಹೈನುರಾಸುಗಳ ತಳಿಗಳು (Dairy breeds)

2. ರೋಗಗಳು ಮತ್ತು ಅದರ ಲಕ್ಷಣಗಳು(Disease and their symptoms)

3. ರೋಗಗಳನ್ನು ತಡೆಗಟ್ಟುವ ಕ್ರಮಗಳು(controlling measures)

4. ಕೃತಕ ಗರ್ಭಧಾರಣೆ (Artificial Insemination)

5. ಮೇವಿನ ವಿಷಯಗಳು(Fodder)

6. ಎರೆಹುಳು ಗೊಬ್ಬರ ತಯಾರಿಕೆ (Vermicompost)

7. ಎರೆಹುಳು ನಿರ್ವಹಣೆ(Vermicompost management)

8. ಸಾವಯುವ ಕೃಷಿ ಪದ್ಧತಿಯ ಅರಿವು (Importantance of organic farming)

9. ಸಮಯದ ನಿರ್ವಹಣೆ, ಸ್ವ ಉದ್ಯೋಗದ ಮಹತ್ವ, ಸಂವಹನ ಕೌಶಲ್ಯ, ಬ್ಯಾಂಕಿಂಗ್ ವಿಷಯ ಮತ್ತು ಇನ್ನೂ ಇತರೆ ವಿಷಯಗಳ ಬಗ್ಗೆ ತಿಳುವಳಿಕೆ ನೀಡಲಾಗುವುದು.(Bank and subsidy schemes)

 *ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ.*

ಹೆಸರನ್ನು ನಮೂದಿಸಲು 9110865650 ಗೆ ಕರೆಮಾಡಿ

Free sheep farming training-ಉಚಿತ ಊಟ ವಸತಿಯೊಂದಿಗೆ 10 ದಿನಗಳ ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ-Uchitha Kuri sakanike tharabethi

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್

ಮತ್ತು ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆಸುತ್ತಿರುವ ರುಕ್ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ 10 ದಿನಗಳ ಕುರಿ ಸಾಕಾಣಿಕೆ(Sheep farming) ಉಚಿತ ತರಬೇತಿಯು ಬರುವ 9 ಸೆಪ್ಟಂಬರ್ 2024 ರಿಂದ ಆಯೋಜಿಸಲಾಗಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ, ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ.

ಆಸಕ್ತ 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಗ್ರಾಮೀಣ ಪ್ರದೇಶದ ಆಧಾ‌ರ್ ಕಾರ್ಡ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.

ತರಬೇತಿಯು ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು(Uchitha Kuri sakanike tharabethi) ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು. 

ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್ಲೆಟ್ ಸಂಸ್ಥೆ,ಯನ್ನು ಸಂಪರ್ಕಿಸಬಹುದಾಗಿದೆ ಎಂದು ರುಕ್ಸೆಟ್ ಸಂಸ್ಥೆಯ ಶಾಖೆಯ ನಿರ್ದೇಶಕರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://kswdcl.karnataka.gov.in/info-2/Scientific+Sheep+Rearing+Training/kn

Post a Comment

Previous Post Next Post
CLOSE ADS
CLOSE ADS
×