Free dairy vermicompost training-ಉಚಿತ ಊಟ ವಸತಿಯೊಂದಿಗೆ 10 ದಿನಗಳ ಹೈನುಗಾರಿಕೆ,ಎರೆಹುಳು ಗೊಬ್ಬರ ತಯಾರಿಕೆ ತರಬೇತಿ

Free dairy vermicompost training-ಉಚಿತ ಊಟ ವಸತಿಯೊಂದಿಗೆ 10 ದಿನಗಳ ಹೈನುಗಾರಿಕೆ,ಎರೆಹುಳು ಗೊಬ್ಬರ ತಯಾರಿಕೆ ತರಬೇತಿ

Free dairy vermicompost training-ಉಚಿತ ಊಟ ವಸತಿಯೊಂದಿಗೆ 10 ದಿನಗಳ ಹೈನುಗಾರಿಕೆ,ಎರೆಹುಳು ಗೊಬ್ಬರ ತಯಾರಿಕೆ ತರಬೇತಿ-ಬ್ಯಾಂಕ್ ಆಫ್ ಬರೋಡ ಸ್ವ ಉದ್ಯೋಗ ತರಬೇತಿ ಸಂಸ್ಥೆ ದೇವಗಿರಿ ಹಾವೇರಿಯಲ್ಲಿ18 - 45 ವಯೋಮಾನದವರಿಗೆ *ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ* ತರಬೇತಿಯನ್ನು ದಿನಾಂಕ *14.10.2024 ರಿಂದ 23.10.2024* ವರೆಗೆ 10 ದಿನಗಳ ಕಾಲ ಆಯೋಜಿಸಲಾಗಿದೆ.



ತರಬೇತಿಯಲ್ಲಿ ಕಲಿಸುವ ವಿಷಯಗಳು:

1. ಹೈನುರಾಸುಗಳ ತಳಿಗಳು 

2. ರೋಗಗಳು ಮತ್ತು ಅದರ ಲಕ್ಷಣಗಳು

3. ರೋಗಗಳನ್ನು ತಡೆಗಟ್ಟುವ ಕ್ರಮಗಳು

4. ಕೃತಕ ಗರ್ಭಧಾರಣೆ 

5. ಮೇವಿನ ವಿಷಯಗಳು

6. ಎರೆಹುಳು ಗೊಬ್ಬರ ತಯಾರಿಕೆ 

7. ಎರೆಹುಳು ನಿರ್ವಹಣೆ

8. ಸಾವಯುವ ಕೃಷಿ ಪದ್ಧತಿಯ ಅರಿವು 

9. ಸಮಯದ ನಿರ್ವಹಣೆ, ಸ್ವ ಉದ್ಯೋಗದ ಮಹತ್ವ, ಸಂವಹನ ಕೌಶಲ್ಯ, ಬ್ಯಾಂಕಿಂಗ್ ವಿಷಯ ಮತ್ತು ಇನ್ನೂ ಇತರೆ ವಿಷಯಗಳ ಬಗ್ಗೆ ತಿಳುವಳಿಕೆ ನೀಡಲಾಗುವುದು. 

  • ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ.
  • ಹೆಸರನ್ನು ನಮೂದಿಸಲು 9110865650 ಗೆ ಕರೆಮಾಡಿ

Free sheep and goat training-ಉಚಿತ ಊಟ ವಸತಿಯೊಂದಿಗೆ 3 ದಿನಗಳ ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ-Uchitha Kuri sakanike tharabethi

10 ದಿನಗಳ ಕುರಿ ಸಾಕಾಣಿಕೆ ಉಚಿತ ತರಬೇತಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆಸುತ್ತಿರುವ ರುಕ್ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ 10 ದಿನಗಳ ಕುರಿ ಸಾಕಾಣಿಕೆ ಉಚಿತ ತರಬೇತಿಯು ಬರುವ 9 ಸೆಪ್ಟಂಬರ್ 2024 ರಿಂದ ಆಯೋಜಿಸಲಾಗಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ, ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ.

ಆಸಕ್ತ 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಗ್ರಾಮೀಣ ಪ್ರದೇಶದ ಆಧಾ‌ರ್ ಕಾರ್ಡ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.

ತರಬೇತಿಯು ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು. ಅರ್ಜಿ ಸಲ್ಲಿಸಲು ಸೆಪ್ಟಂಬರ್ 5 ಕೊನೆಯ ದಿನವಾಗಿದೆ.

ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್ಲೆಟ್ ಸಂಸ್ಥೆ,ಯನ್ನು ಸಂಪರ್ಕಿಸಬಹುದಾಗಿದೆ ಎಂದು ರುಕ್ಸೆಟ್ ಸಂಸ್ಥೆಯ ಶಾಖೆಯ ನಿರ್ದೇಶಕರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂರು ದಿನಗಳ ವಸತಿ ಸಹಿತ ಕುರಿ ಮತ್ತು ಮೇಕೆ ಸಾಕಾಣಿಕೆ ಬಗ್ಗೆ ವೈಜ್ಞಾನಿಕ ತರಬೇತಿ

ಬಂಡೂರು ಕುರಿ ಸಂವರ್ಧನಾ ಕೇಂದ್ರ, ಧನಗೂರು ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆ-ಇಲ್ಲಿ ಕುರಿ-ಮೇಕೆ ಪಾಲಕರಿಗೆ ಮೂರು ದಿನಗಳ ವಸತಿ ಸಹಿತ ಕುರಿ ಮತ್ತು ಮೇಕೆ ಸಾಕಾಣಿಕೆ ಬಗ್ಗೆ ವೈಜ್ಞಾನಿಕ ತರಬೇತಿ ನೀಡಲಾಗುವುದು. ಅಲ್ಲದೆ ಸಹಕಾರ ಸಂಘಗಳ ಸ್ಥಾಪನೆ ಮತ್ತು ಅದರ ಮೂಲಕ ಕುರಿ ಮೇಕೆ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವ ಬಗ್ಗೆ ಸಹಕಾರ ಸಂಘಗಳ ಸದಸ್ಯರಿಗೆ ತರಬೇತಿ ನೀಡಲಾಗುವುದು. ಸಹಕಾರ ಸಂಘಗಳ ಸದಸ್ಯರಿಗೆ ತರಬೇತಿಯಲ್ಲಿ ಆದ್ಯತೆ ಇರುತ್ತದೆ.

ಕುರಿ ಮೇಕೆ ಪಾಲನೆಗೆ ಮೊದಲ ಸವಾಲಾಗಿ ಮೇವಿನ ಕೊರತೆ ಎದುರಾಗಿದೆ. ಇದನ್ನು ದೀರ್ಘಕಾಲೀನ ಮತ್ತು ಅಲ್ಪಕಾಲೀನ ಕಾರ್ಯಕ್ರಮಗಳ ಮೂಲಕ ಪರಿಹರಿಸಲಾಗುತ್ತಿದೆ. ಮೇವಿನ ಸಂಶೋಧನೆ ಮತ್ತು ವಿಸ್ತರಣೆಗೆ ಆದ್ಯತೆ ಕೊಟ್ಟು ನಿಗಮದ ಸಂವರ್ಧನಾ ಕೇಂದ್ರಗಳನ್ನು ರೂಪಿಸಲಾಗುತ್ತಿದೆ. ಮರ, ಮೇವುಗಳನ್ನು ಬೆಳೆಸಲು ಅರಣ್ಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆಗಳ ನಡುವೆ ಸಂಯೋಜಕನಂತೆ ನಿಗಮ ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ ಗೋಮಾಳ ಮುಂತಾದ ಸಾರ್ವಜನಿಕ ಸರ್ಕಾರಿ ಭೂಮಿಗಳಲ್ಲಿ ಮೇವಿನ ಉತ್ಪಾದನೆಗೆ ಸಹಕಾರಿ ಸಂಘಗಳ ಮೂಲಕ ಪ್ರೋತ್ಸಾಹ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಆರು ತಿಂಗಳುಗಳ ಉಣ್ಣೆ ಸಂಗ್ರಹಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಬಗ್ಗೆ ತರಬೇತಿ

ಕುರಿ ಮತ್ತು ಉಣ್ಣೆ ಅಭಿವೃದ್ಧಿ ಯೋಜನೆ ರಾಣೆಬೆನ್ನೂರು ಕೇಂದ್ರದಲ್ಲಿ 25 ಅಭ್ಯರ್ಥಿಗಳಿಗೆ ಪ್ರತಿವರ್ಷ ಆರು ತಿಂಗಳುಗಳ ಉಣ್ಣೆ ಸಂಗ್ರಹಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಬಗ್ಗೆ ತರಬೇತಿ ಕಾರ್ಯಕ್ರಮವಿರುತ್ತದೆ. ಅಲ್ಲದೆ ರಾಜ್ಯಾದ್ಯಾಂತ ತಾಲ್ಲೂಕು ಮಟ್ಟದಲ್ಲಿ ಕುರಿ/ಮೇಕೆ ಸಾಕಾಣಿಕೆ, ಸಹಕಾರ ಸಂಘಗಳ ಸ್ಥಾಪನೆ ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://kswdcl.karnataka.gov.in/info-2/Scientific+Sheep+Rearing+Training/kn

Post a Comment

Previous Post Next Post
CLOSE ADS
CLOSE ADS
×