ಕೇಂದ್ರ ರೇಷ್ಮೆ ಮಂಡಳಿಯಲ್ಲಿ ಭರ್ಜರಿ ವೇತನದ ನೇಮಕಾತಿ ಪ್ರಕಟ, ಅಪ್ಲೈ ಮಾಡಿ

ಕೇಂದ್ರ ರೇಷ್ಮೆ ಮಂಡಳಿಯಲ್ಲಿ ಭರ್ಜರಿ ವೇತನದ ನೇಮಕಾತಿ ಪ್ರಕಟ, ಅಪ್ಲೈ ಮಾಡಿ

ಈ ವರದಿಯಲ್ಲಿ ಕೇಂದ್ರ ರೇಷ್ಮೆ ಮಂಡಳಿ (CSB) ನೇಮಕಾತಿ (Central Silk Board Recruitment) 2024 ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ



ಕೇಂದ್ರ ರೇಷ್ಮೆ ಮಂಡಳಿ (CSB) ನೇಮಕಾತಿ (Central Silk Board Recruitment) 2024 ಅವಲೋಕನ:

ಕೇಂದ್ರ ರೇಷ್ಮೆ ಮಂಡಳಿ (CSB) ಈ ವರ್ಷವೂ ಹೊಸ ನೇಮಕಾತಿ ಅಧಿಸೂಚನೆಯ ಪ್ರಕಟಣೆಹೊರಡಿಸಿದೆ,

  • ಕೇಂದ್ರ ರೇಷ್ಮೆ ಮಂಡಳಿ (Central Silk Board)
  • ಈ ಬಾರಿ 122 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ.
  • ಕೇಂದ್ರ ರೇಷ್ಮೆ ಮಂಡಳಿ (Central Silk Board) 2024 ಮೂಲಕ ಸೈಂಟಿಸ್ಟ್-ಬಿ(Scientist – B)
  • ಪೋಸ್ಟ್‌ಗಳನ್ನು ನೇಮಕಾತಿಗಾಗಿ ಆನ್‌ಲೈನ್ ನೋಂದಣಿ (Online registration) 22 ಆಗಸ್ಟ್ 2024 ರಂದು ಪ್ರಾರಂಭವಾಗಿದೆ ಮತ್ತು 05 ಸೆಪ್ಟೆಂಬರ್ 2024 ರಂದು ಕೊನೆಗೊಳ್ಳುತ್ತದೆ. ಹುದ್ದೆಗಳ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಕೆಳಗೆ ನೀಡಲಾದ ಮಾಹಿತಿಯನ್ನು ಕೊನೆವರೆಗೂ ಓದಿ.

ಹುದ್ದೆಗಳ ಸಂಪೂರ್ಣ ವಿವರ ಕೆಳಗಿನಂತಿದೆ :

  • ಇಲಾಖೆ ಹೆಸರು – ಕೇಂದ್ರ ರೇಷ್ಮೆ ಮಂಡಳಿ (Central Silk Board)
  • ಹುದ್ದೆಗಳ ಹೆಸರು – ವಿಜ್ಞಾನಿ-ಬಿ (Scientist – B)(ಪೂರ್ವ ಕೋಕೂನ್ ವಲಯ)
  • ಒಟ್ಟು ಹುದ್ದೆಗಳು --122
  • ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ -- (Online)
  • ಉದ್ಯೋಗ ಸ್ಥಳ – ಭಾರತ

ವಿದ್ಯಾರ್ಹತೆ :

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ವಿಜ್ಞಾನ ಅಥವಾ ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು ಮತ್ತು ಮಾನ್ಯವಾದ ICAR AICE-JRF/SRF (Ph.D.)-2024 ಅಂಕಪಟ್ಟಿಯನ್ನು ಹೊಂದಿರಬೇಕು.

ವಯೋಮಿತಿ :

ಅರ್ಜಿದಾರರ ಗರಿಷ್ಠ ವಯಸ್ಸಿನ ಮಿತಿಯು ಅರ್ಜಿಯ ಅಂತಿಮ ದಿನಾಂಕದಂದು ಅಂದರೆ 05/09/2024 ರಂತೆ 35 ವರ್ಷಗಳಿಗಿಂತ ಹೆಚ್ಚಿರಬಾರದು . ಸರ್ಕಾರದ ನಿಯಮಗಳ ಪ್ರಕಾರ ಗರಿಷ್ಠ ವಯಸ್ಸಿನ ಮಿತಿಗೆ ವಯೋಮಿತಿ ಸಡಿಲಿಕೆಯನ್ನು ಒದಗಿಸಲಾಗುವುದು.

ಸಂಬಳದ ಪ್ಯಾಕೆಜ್ ಎಷ್ಟು?

ಸೆಂಟ್ರಲ್ ಸಿಲ್ಕ್ ಬೋರ್ಡ್‌ನಲ್ಲಿ(CSB) ಸೈಂಟಿಸ್ಟ್-ಬಿ(Scientist – B) ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಗಳು 7 ನೇ ಸಿಪಿಸಿ ಪ್ರಕಾರ 10 ನೇ ಹಂತದ ವೇತನ ರಚನೆಯನ್ನು ಪಡೆಯುತ್ತಾರೆ. CSB ಸೈಂಟಿಸ್ಟ್-ಬಿ ಹುದ್ದೆಗೆ ಮಾಸಿಕ ವೇತನ ಶ್ರೇಣಿ ರೂ. 56,100-1,77,500/- . ನಿಗದಿತ ವೇತನಕ್ಕೆ ಹೆಚ್ಚುವರಿಯಾಗಿ, ಆಯ್ಕೆಮಾಡಿದ ಅಭ್ಯರ್ಥಿಗಳು ಇಲಾಖೆಯ ಮಾರ್ಗಸೂಚಿಗಳ ಪ್ರಕಾರ ಹಲವಾರು ಸವಲತ್ತುಗಳು ಮತ್ತು ಪ್ರಯೋಜನಗಳನ್ನು ಗಳಿಸುತ್ತಾರೆ.

ಅರ್ಜಿ ಶುಲ್ಕ :

  • UR/OBC/EWS/ಮಾಜಿ ಸೈನಿಕರುರೂ. 100/-
  • SC/ST/PwBD/ಮಹಿಳಾ ಅಭ್ಯರ್ಥಿಗಳುಶೂನ್ಯ

ಆಯ್ಕೆ ಪ್ರಕ್ರಿಯೆ :

  • ICAR AICE-JRF/SRF (Ph.D.)-2024 ಸ್ಕೋರ್ ಮೂಲಕ ಶಾರ್ಟ್‌ಲಿಸ್ಟ್(Shortlist) ಮಾಡುವುದು
  • ವೈಯಕ್ತಿಕ ಸಂದರ್ಶನ (Personal Interview)
  • ಡಾಕ್ಯುಮೆಂಟ್ ಪರಿಶೀಲನೆ(Document Verification)

ಅರ್ಜಿಯನ್ನು ಹೀಗೆ ಸಲ್ಲಿಸಿ :

ಹಂತ 1: ಮೊದಲು, ಅಧಿಕೃತ ವೆಬ್‌ಸೈಟ್ ಗೆ (Official Website) ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

https://csb.gov.in/

ಹಂತ 2: ನಂತರ ನೋಂದಣಿಯನ್ನು ಮಾಡಿಕೊಳ್ಳಿ. ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.

ಹಂತ 3: ಅಭ್ಯರ್ಥಿಗಳು ಫೋಟೋ, ಸಹಿ, ಹುಟ್ಟಿದ ದಿನಾಂಕದ ದಾಖಲೆ, ಗುರುತಿನ ಪುರಾವೆ, ಅಗತ್ಯ ಅರ್ಹತೆಯ ಮಾರ್ಕ್‌ಶೀಟ್, ವರ್ಗ ಪ್ರಮಾಣಪತ್ರ (ಅನ್ವಯಿಸಿದರೆ). ಹೀಗೆ ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು

ಹಂತ 4: ಅರ್ಜಿ ಶುಲ್ಕವನ್ನು ಪಾವತಿಸಿ.

ಹಂತ 5: ಸಂಪೂರ್ಣ ಅರ್ಜಿ ನಮೂನೆಯನ್ನು ಪೂರ್ವವೀಕ್ಷಿಸಲು ಮತ್ತು ಪರಿಶೀಲಿಸಲು ಪೂರ್ವವೀಕ್ಷಣೆ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಹಂತ 6: ಅಂತಿಮ ಸಲ್ಲಿಕೆ ಮೊದಲು, ಅಗತ್ಯವಿದ್ದಲ್ಲಿ ವಿವರಗಳನ್ನು ಮಾರ್ಪಡಿಸಿ ಮತ್ತು ನೀವು ಭರ್ತಿ ಮಾಡಿದ ಫೋಟೋ, ಸಹಿ ಮತ್ತು ಇತರ ವಿವರಗಳನ್ನು ಪರಿಶೀಲಿಸಿದ ನಂತರ ಮತ್ತು ಖಚಿತಪಡಿಸಿದ ನಂತರವೇ ಅಂತಿಮ ಸಲ್ಲಿಕೆ ಮಾಡಿ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 22.08.2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05.09.2024

ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ವರದಿಯನ್ನು ಎಲ್ಲರಿಗೂ ಶೇರ್ ಮಾಡಿ.

Post a Comment

Previous Post Next Post
CLOSE ADS
CLOSE ADS
×