Vivo V40:2 ಗಟ್ಟಿಮುಟ್ಟಾದ ಫೋನ್ ಲಾಂಚ್: 512GB ಸ್ಟೋರೇಜ್‌, 44W ಚಾರ್ಜಿಂಗ್ ಪಕ್ಕಾ

Vivo V40:2 ಗಟ್ಟಿಮುಟ್ಟಾದ ಫೋನ್ ಲಾಂಚ್: 512GB ಸ್ಟೋರೇಜ್‌, 44W ಚಾರ್ಜಿಂಗ್ ಪಕ್ಕಾ

ವಿವೋ ಪ್ರಿಯರಿಗೆ ಎರಡು ಸಿಹಿ ಸುದ್ದಿ ಇದೆ. ಇಂದು ವಿವೋನ ಎರಡು ಹೊಸ ಫೋನ್‌ಗಳು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಹೌದು, ವಿವೋ (Vivo) ಕಂಪನಿಯು ಭಾರತದಲ್ಲಿ ತನ್ನ 'V40' ಸರಣಿಯ ಎರಡು ನೂತನ ಮೊಬೈಲ್‌ಗಳನ್ನು ಇಂದು (ಆಗಸ್ಟ್ 7) ಅಧಿಕೃತವಾಗಿ ಬಿಡುಗಡೆ ಮಾಡಲಿದೆ. Vivo V40 ಮತ್ತು Vivo V40 Pro ಹೆಸರಿನೊಂದಿಗೆ ನೂತನ ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಲಿವೆ. ಈ ಹೊಸ ವಿವೋ ಫೋನ್‌ಗಳ ಬೆಲೆ ಎಷ್ಟು? ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿರಲಿವೆ? ಎನ್ನುವುದನ್ನು ತಿಳಿಯೋಣ ಬನ್ನಿ.



ಹೌದು, Vivo V40 ಸರಣಿಯ ವೆನಿಲ್ಲಾ ಮತ್ತು ಪ್ರೊ ಎರಡೂ ಸ್ಮಾರ್ಟ್‌ಫೋನ್‌ಗಳು ಇಂದು ಭಾರತದಲ್ಲಿ ಬಿಡುಗಡೆಯಾಗಲಿವೆ. ಕಳೆದ ಮಾರ್ಚ್‌ನಲ್ಲಿ ಬಿಡುಗಡೆಯಾದ Vivo V30 ಮತ್ತು Vivo V30 Proಗೆ ಉತ್ತರಾಧಿಕಾರಿಗಳಾಗಿ ಮೊಬೈಲ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ. ಜಾಗತಿಕ ಮಟ್ಟದಲ್ಲಿ ಈಗಾಗಲೇ ಕೆಲವು ಆಯ್ದ ದೇಶಗಳಲ್ಲಿ ಈ ಫೋನ್‌ಗಳನ್ನು ಅನಾವರಣಗೊಳಿಸಲಾಗಿದೆ. ಈ ಭಾರತೀಯ ಸರಣಿಯು ಝೈಸ್ (Zeiss) ಬೆಂಬಲಿತ ಕ್ಯಾಮೆರಾಗಳನ್ನು ಹೊಂದಿರುವ ಸಾಧ್ಯತೆಯಿದೆ. ಈ ಫೋನ್‌ಗಳು ಮಲ್ಟಿಫೋಕಲ್ ಪೋರ್ಟ್ರೇಟ್‌ಗಳಿಗೆ ಬೆಂಬಲ ನೀಡುತ್ತವೆ.

'V40' ಸರಣಿ ಬಿಡುಗಡೆ: ಲೈವ್‌ಸ್ಟ್ರೀಮ್ ವೀಕ್ಷಿಸುವುದು ಹೇಗೆ?

Vivo V40 ಸರಣಿಯನ್ನು ಈ ಹಿಂದೆ ಯುರೋಪ್‌ನಲ್ಲಿ ಪರಿಚಯಿಸಲಾಗಿತ್ತು. ಕಂಪನಿಯು ಇಂದು ಭಾರತದಲ್ಲಿ V40 ಸರಣಿಯನ್ನು ಪ್ರಾರಂಭಿಸುತ್ತಿದೆ. ಈ ಫೋನ್‌ಗಳು ಸುಧಾರಿತ ಕ್ಯಾಮೆರಾ ಸೆಟಪ್ ಮತ್ತು ಹೆಚ್ಚಿನ ಕಾರ್ಯಕ್ಷಮತೆಯ ವಿಶೇಷತೆಗಳನ್ನು ಒಳಗೊಂಡಿದೆ. Vivo 40 ಸರಣಿಯು ಭಾರತದಲ್ಲಿ ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ. ಈವೆಂಟ್ ಅನ್ನು ಕಂಪನಿಯ ಎಲ್ಲಾ ಸಾಮಾಜಿಕ ಮಾಧ್ಯಮ ಚಾನಲ್‌ಗಳಲ್ಲಿ ಲೈವ್-ಸ್ಟ್ರೀಮ್ ಮಾಡಲಾಗುತ್ತದೆ.

Vivo V40 ಸರಣಿಯ ನಿರೀಕ್ಷಿತ ಬೆಲೆ

ವರದಿಗಳ ಪ್ರಕಾರ, Vivo V40 ಬೆಲೆ 35,000 ರಿಂದ 40,000 ರೂ. ಇರಲಿದೆ. ಆದರೆ, Vivo V40 Pro ಬೆಲೆಯು 41,999 ರೂ.ಗಳಿಂದ ಪ್ರಾರಂಭವಾಗಬಹುದು. ಇದು 8GB RAM ಮತ್ತು 256GB ಸ್ಟೋರೇಜ್‌ ಹೊಂದಿರುತ್ತದೆ. ನೀವು ಈ ಫೋನ್‌ಗಳನ್ನು ಫ್ಲಿಪ್‌ಕಾರ್ಟ್ ಅಥವಾ ವಿವೋ ವೆಬ್‌ಸೈಟ್‌ನಿಂದ ಖರೀದಿಸಬಹುದು.

Vivo V40 ನಿರೀಕ್ಷಿತ ವಿಶೇಷತೆಗಳೇನು?

ಡಿಸ್ಪ್ಲೇ: Vivo V40 ಸರಣಿಯು 6.78 ಇಂಚಿನ FHD+120Hz AMOLED ಡಿಸ್ಪ್ಲೇಯನ್ನು ಹೊಂದಿರಲಿದೆ. 2800 x 1260 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರ ಪಡೆದಿರಲಿದೆ. 4500nits ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ, Vivo V40ನ ಡಿಸ್ಪ್ಲೇ ಅದ್ಭುತವಾದ ದೃಶ್ಯಗಳು ಮತ್ತು ತಲ್ಲೀನಗೊಳಿಸುವ ಗೇಮಿಂಗ್ ಅನುಭವಗಳನ್ನು ನೀಡುತ್ತದೆ.

ಪ್ರೊಸೆಸರ್: ಈ ಹೊಸ ಫೋನ್‌ಗಳು Adreno 720 GPU ನೊಂದಿಗೆ ಜೋಡಿಸಲಾದ Qualcomm Snapdragon 7 Gen 3 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಫೋನ್ ಆಂಡ್ರಾಯ್ಡ್ 14 ಆಧಾರಿತ FuntouchOS 14 ನೊಂದಿಗೆ ಬರುತ್ತದೆ. 12GBಯ LPDDR4X RAM ಮತ್ತು 512GB ವರೆಗಿನ UFS 2.2 ಆನ್‌ಬೋರ್ಡ್ ಸ್ಟೋರೇಜ್‌ ಹೊಂದಿರುವ ನಿರೀಕ್ಷೆಯಿದೆ.

vivo v40

ಕ್ಯಾಮೆರಾ: Vivo V40 ಸರಣಿಯು Zeiss ಆಪ್ಟಿಕ್ಸ್ ಜೊತೆಗೆ ಡ್ಯುಯಲ್ ಕ್ಯಾಮೆರಾ ರಚನೆಯೊಂದಿಗೆ ಬರುತ್ತದೆ. ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ನೊಂದಿಗೆ ಜೋಡಿಸಲಾದ ಮತ್ತೊಂದು 50 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿರಲಿದೆ. ಹಿಂಭಾಗದ ಕ್ಯಾಮೆರಾ ವ್ಯವಸ್ಥೆಯು ಔರಾ ಲೈಟ್ ಘಟಕದೊಂದಿಗೆ ಇರುತ್ತದೆ. ಸೆಲ್ಫಿಗಾಗಿ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇರಲಿದೆ.

ಬ್ಯಾಟರಿ: ಈ ಫೋನ್‌ಗಳು 5,500mAh ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿರಲಿದೆ. ಇದು 44W ವೈರ್ಡ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಇದು IP68 ರೇಟಿಂಗ್‌ನೊಂದಿಗೆ ನೀರು ಮತ್ತು ಧೂಳಿನ ನಿರೋಧಕವಾಗಿದೆ, ಹೆಚ್ಚುವರಿ ಬಾಳಿಕೆ ನೀಡುತ್ತದೆ.

ಇನ್ನೂ, 164.16 ಎಂಎಂ ಎತ್ತರ, 74.93 ಎಂಎಂ ಅಗಲ ಮತ್ತು 7.58 ಎಂಎಂ ದಪ್ಪ, 190 ಗ್ರಾಂ ತೂಕ ಹೊಂದಿರಲಿದೆ. ಫೋನ್ ಬಾಳಿಕೆ ಬರುವ ಮಿನರಲ್ ಗ್ಲಾಸ್ ಹೊಂದಿದೆ ಮತ್ತು ಇದು ಸ್ಟೆಲ್ಲಾರ್ ಸಿಲ್ವರ್ ಮತ್ತು ನೆಬ್ಯುಲಾ ಪರ್ಪಲ್ ಬಣ್ಣಗಳಲ್ಲಿ ಲಭ್ಯವಿದೆ.

ಇತರೆ ವೈಶಿಷ್ಟ್ಯಗಳು: ಈ ಸ್ಮಾರ್ಟ್‌ಫೋನ್‌ಗಳು ಆನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಡ್ಯುಯಲ್ ಸಿಮ್, 5ಜಿ, ವೈ-ಫೈ 6, ಬ್ಲೂಟೂತ್ 5.4, ಎನ್‌ಎಫ್‌ಸಿ, ಜಿಪಿಎಸ್ ಮತ್ತು ಯುಎಸ್‌ಬಿ ಟೈಪ್-ಸಿ ಕನೆಕ್ಟಿವಿಟಿಯನ್ನು ಸಹ ಹೊಂದಿರಲಿದೆ.

Post a Comment

Previous Post Next Post
CLOSE ADS
CLOSE ADS
×