3317 ಹುದ್ದೆಗೆ ರೈಲ್ವೆ ಇಲಾಖೆ ಹೊಸ ನೇಮಕ ಅಧಿಸೂಚನೆ: 10th, ITI ಪಾಸಾದವರು ಅರ್ಜಿ ಹಾಕಿ

3317 ಹುದ್ದೆಗೆ ರೈಲ್ವೆ ಇಲಾಖೆ ಹೊಸ ನೇಮಕ ಅಧಿಸೂಚನೆ: 10th, ITI ಪಾಸಾದವರು ಅರ್ಜಿ ಹಾಕಿ

Railway Jobs 2024 : ವೆಸ್ಟ್‌ ಸೆಂಟ್ರಲ್‌ ರೈಲ್ವೆಯ, ರೈಲ್ವೆ ನೇಮಕಾತಿ ಮಂಡಳಿಯು ಆಕ್ಟ್‌ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಹತ್ತನೇ ತರಗತಿ ಹಾಗೂ ಐಟಿಐ ಪಾಸಾದವರು ಅರ್ಜಿ ಸಲ್ಲಿಸಬಹುದು.



ಎಸ್‌ಎಸ್‌ಎಲ್‌ಸಿ, ಐಟಿಐ ಪಾಸಾಗಿದ್ದು ನೀವು ಸರ್ಕಾರಿ ಉದ್ಯೋಗಕ್ಕೆ ಸೇರಬೇಕು ಎಂದುಕೊಂಡಿದ್ದೀರಾ.. ಉದ್ಯೋಗಗಳಿಗಾಗಿ ಮುನ್ನೋಡುತ್ತಿದ್ದೀರಾ.. ಹಾಗಿದ್ರೆ ನಿಮಗಿದೋ ಇಲ್ಲಿದೆ ಭರ್ಜರಿ ಜಾಬ್ ಆಫರ್. ರೈಲ್ವೆ ಇಲಾಖೆ ಈಗಾಗಲೇ ಕಳೆದ ನಾಲ್ಕೈದು ತಿಂಗಳಿಂದ 25 ಸಾವಿರಕ್ಕೂ ಹೆಚ್ಚು ಹುದ್ದೆಗೆ ಅಧಿಸೂಚನೆ ಬಿಡುಗಡೆ ಮಾಡಿತ್ತು. ಇದೀಗ ಮತ್ತೊಂದು ಹೊಸ ನೇಮಕ ಪ್ರಕಟಣೆ ಹೊರಡಿಸಿದೆ. ಅದು ಸಹ ಪಶ್ಚಿಮ ಕೇಂದ್ರ ರೈಲ್ವೆಯ ಆಕ್ಟ್‌ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಈ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು, ಇತರೆ ವಿವರಗಳ ಬಗ್ಗೆ ಮಾಹಿತಿಯನ್ನು ಕೆಳಗಿನಂತೆ ಓದಿಕೊಳ್ಳಿ.

ಪಶ್ಚಿಮ ಕೇಂದ್ರ ರೈಲ್ವೆಯ ಆಕ್ಟ್‌ ಅಪ್ರೆಂಟಿಸ್ ಪೋಸ್ಟ್‌ಗಳನ್ನು 2024-25ನೇ ಸಾಲಿನ ಅವಧಿಗೆ ತರಬೇತುದಾರ ಹುದ್ದೆಗಳಾಗಿ ನೇಮಕ ಮಾಡಲಾಗುತ್ತದೆ.

Railway Jobs 2024

  • ನೇಮಕ ಪ್ರಾಧಿಕಾರ:- ವೆಸ್ಟ್‌ ಸೆಂಟ್ರಲ್‌ ರೈಲ್ವೆ, ಆರ್‌ಆರ್‌ಸಿ
  • ಹುದ್ದೆ ಹೆಸರು:- ಅಪ್ರೆಂಟಿಸ್ ತರಬೇತುದಾರರು
  • ಹುದ್ದೆಗಳ ಸಂಖ್ಯೆ:- 3317
  • ಹುದ್ದೆ ಅವಧಿ:- 1 ವರ್ಷ
  • ವಿದ್ಯಾರ್ಹತೆ:- ಎಸ್‌ಎಸ್‌ಎಲ್‌ಸಿ, ಐಟಿಐ ಪಾಸ್

ಪಶ್ಚಿಮ ಕೇಂದ್ರ ರೈಲ್ವೆಯ ಅಪ್ರೆಂಟಿಸ್ ಹುದ್ದೆಗಳ ವಿವರ

  • ಜಬಲ್‌ಪುರ್ ಡಿವಿಷನ್ 1262
  • ಭೂಪಾಲ್ ಡಿವಿಷನ್ 824
  • ಕೊಟಾ ಡಿವಿಷನ್ 832
  • ಕೋಟಾ ವರ್ಕ್‌ಶಾಪ್‌ ಡಿವಿಷನ್ 196
  • ಸಿಆರ್‌ಡಬ್ಲ್ಯೂಎಸ್‌ ಬಿಪಿಎಲ್ ಡಿವಿಷನ್ 175
  • ಹೆಚ್‌ಕ್ಯೂ / ಜಬಲ್‌ಪುರ್ ಡಿವಿಷನ್ 28

ಪಶ್ಚಿಮ ಕೇಂದ್ರ ರೈಲ್ವೆಯ ಅಪ್ರೆಂಟಿಸ್ ಹುದ್ದೆಗಳಿಗೆ ವಿದ್ಯಾರ್ಹತೆ

ಮೆಟ್ರಿಕ್ಯೂಲೇಷನ್‌/ ಎಸ್‌ಎಸ್‌ಎಲ್‌ಸಿ ಪಾಸ್ ಜತೆಗೆ ವಿವಿಧ ಟ್ರೇಡ್‌ಗಳಲ್ಲಿ ಐಟಿಐ ಶಿಕ್ಷಣ ಉತ್ತೀರ್ಣರಾಗಿರಬೇಕು. ಐಟಿಐ ಶಿಕ್ಷಣದ ಎನ್‌ಸಿವಿಟಿ / ಎಸ್‌ಸಿವಿಟಿ ಐಟಿಐ ಸರ್ಟಿಫಿಕೇಟ್ ಹೊಂದಿರಬೇಕು.

ಪಶ್ಚಿಮ ಕೇಂದ್ರ ರೈಲ್ವೆಯ ಅಪ್ರೆಂಟಿಸ್ ಹುದ್ದೆಗಳಿಗೆ ವಯಸ್ಸಿನ ಅರ್ಹತೆ

ಪಶ್ಚಿಮ ಕೇಂದ್ರ ರೈಲ್ವೆಯ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವವರಿಗೆ ಕನಿಷ್ಠ 15 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು. ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅರ್ಜಿ ಸಲ್ಲಿಸಲು ಅನ್ವಯವಾಗಲಿವೆ.

ಪಶ್ಚಿಮ ಕೇಂದ್ರ ರೈಲ್ವೆಯ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ದಿನಾಂಕಗಳು

  • ಆನ್‌ಲೈನ್‌ ಅಪ್ಲಿಕೇಶನ್ ಸಲ್ಲಿಸಲು ಪ್ರಾರಂಭಿಕ ದಿನಾಂಕ : 05-08-2024
  • ಆನ್‌ಲೈನ್ ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ : 04-09-2024 ರ ರಾತ್ರಿ 11-59 ಗಂಟೆವರೆಗೆ.
  • ಪಶ್ಚಿಮ ಕೇಂದ್ರ ರೈಲ್ವೆಯ ಅಪ್ರೆಂಟಿಸ್ ಹುದ್ದೆಗಳಿಗೆ ಅಪ್ಲಿಕೇಶನ್‌ ಶುಲ್ಕ ಮಾಹಿತಿ
  • ಸಾಮಾನ್ಯ ವರ್ಗ, ಒಬಿಸಿ ವರ್ಗದ ಅಭ್ಯರ್ಥಿಗಳಿಗೆ ರೂ.100.
  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪಿಡಬ್ಲ್ಯೂಡಿ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಹುದ್ದೆಗಳ ಕುರಿತ ಕಂಪ್ಲೀಟ್‌ ಡೀಟೇಲ್ಸ್‌ ಅನ್ನು ಚೆಕ್‌ ಮಾಡಲು, ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಅಧಿಸೂಚನೆ ಲಿಂಕ್ https://nitplrrc.com/RRC_JBP_ACT2024/ ಕ್ಲಿಕ್ ಮಾಡಿ. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ತೆರೆದ ಸದರಿ ವೆಬ್‌ಪೇಜ್‌ನಲ್ಲಿ 'New Registration' ಎಂದಿರುವಲ್ಲಿ ಕ್ಲಿಕ್ ಮಾಡಿ. ಅಗತ್ಯ ಮಾಹಿತಿಗಳನ್ನು ನೀಡಿ ಮೊದಲಿಗೆ ರಿಜಿಸ್ಟ್ರೇಷನ್‌ ಪಡೆಯಿರಿ. ನಂತರ ಲಾಗಿನ್‌ ಆಗುವ ಮೂಲಕ ಅರ್ಜಿ ಸಲ್ಲಿಸಿ.

ಪಶ್ವಿಮ ಕೇಂದ್ರ ರೈಲ್ವೆಯ ಅಧಿಕೃತ ವೆಬ್‌ಸೈಟ್‌ ವಿಳಾಸ:

  https://nitplrrc.com

ಅರ್ಜಿ ಸಲ್ಲಿಸಲು ಬೇಕಾದ ದಾಖಲೆ / ಮಾಹಿತಿಗಳು

  • ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
  • ಜನ್ಮ ದಿನಾಂಕ ದಾಖಲೆ
  • ಐಟಿಐ ಪಾಸ್ ಅಂಕಪಟ್ಟಿ (ಎನ್‌ಸಿವಿಟಿ / ಎಸ್‌ಸಿವಿಟಿ) / ದಾಖಲೆಗಳು
  • ಜಾತಿ ಪ್ರಮಾಣ ಪತ್ರ

ಇತರೆ ಅಗತ್ಯ ದಾಖಲೆಗಳು

ಪಶ್ಚಿಮ ಕೇಂದ್ರ ರೈಲ್ವೆಯ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಹೇಗಿರುತ್ತದೆ? 

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಎಸ್ಎಸ್‌ಎಲ್‌ಸಿ ಪರೀಕ್ಷೆಯ ಒಟ್ಟು ಅಂಕಗಳ ಶೇಕಡ.50 ಅಂಕ ಮತ್ತು ಐಟಿಐ ಅರ್ಹತೆಯ ಶೇಕಡ.50 ಅಂಕ ಪರಿಗಣಿಸಿ, ಅರ್ಹತಾ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ನಂತರ ಮೂಲ ದಾಖಲೆಗಳ ಪರಿಶೀಲನೆ, ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.



Post a Comment

Previous Post Next Post
CLOSE ADS
CLOSE ADS
×