ಜಿಯೋದಿಂದ ಮಹತ್ವದ ಘೋಷಣೆ: 3 ತಿಂಗಳು ಅನ್‌ಲಿಮಿಟೆಡ್‌ ಕಾಲ್ ಜೊತೆ ಡೇಟಾ ಪ್ಲಾನ್ Reliance Jio Big Announcement Three Month Unlimited Call 1000 SMS 6 gb Data 479 Rupees Recharge Plan

ಕೇವಲ ಕಾಲ್ ಮಾಡಲು ಮೊಬೈಲ್ ಬಳಕೆ ಮಾಡುವ ಜನರು ನಿಮ್ಮ ಮನೆಯಲ್ಲಿದ್ದಾರಾ? ಹಾಗಾದ್ರೆ ಜಿಯೋ ಈ ವರ್ಗದ ಜನತೆಗಾಗಿ ಜಿಯೋ ಹೊಸ ಪ್ಲಾನ್ ಘೋಷಣೆ ಮಾಡಿದೆ.



ಮುಂಬೈ: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಹಲವು ಪ್ಲಾನ್‌ಗಳನ್ನು ಘೋಷಣೆ ಮಾಡುತ್ತಿವೆ. ಪ್ರಿಪೇಯ್ಡ್ ಪ್ಲಾನ್‌ಗಳಲ್ಲಿ ಹೊಸ ಬೆಲೆಯ ರೀಚಾರ್ಜ್ ಆಯ್ಕೆಗಳು ಗ್ರಾಹಕರಿಗೆ ಸಿಗುತ್ತಿವೆ. ಹಾಗಾಗಿ ಯಾವ ಪ್ಲಾನ್ ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲ ಗ್ರಾಹಕರಲ್ಲಿ ಉಂಟಾಗುತ್ತಿದೆ. ಪ್ರೀಪೇಯ್ಡ್ ಗ್ರಾಹಕರು ತಮ್ಮ ಬಳಕೆ ಅನುಸಾರವಾಗಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇಂದು ನಾವು ಹೇಳುತ್ತಿರುವ 84 ದಿನ ವ್ಯಾಲಿಡಿಟಿಯ 479 ರೂಪಾಯಿ ರೀಚಾರ್ಜ್ ಬಗ್ಗೆ ಹೇಳುತ್ತಿದ್ದೇವೆ. ಈ ಯೋಜನೆ ಬಗ್ಗೆ ಬಹುತೇಕ ಜಿಯೋ ಬಳಕೆದಾರರಿಗೆ ಗೊತ್ತಿಲ್ಲ. ಪೇಟಿಎಂ ಮತ್ತು ಫೋನ್ ಪೇಗಳಲ್ಲಿ ಈ ಪ್ಲಾನ್‌ ಕಾಣಿಸುವುದಿಲ್ಲ. 

497 ರೂಪಾಯಿ ರೀಚಾರ್ಜ್ ಪ್ಲಾನ್!

ಈ ಜಿಯೋ ರೀಚಾರ್ಜ್ ಪ್ಲಾನ್‌ನಡಿ ಗ್ರಾಹಕರಿಗೆ ಒಟ್ಟು 6 ಜಿಬಿ ಇಂಟರ್‌ನೆಟ್ ಡೇಟಾ ಸಿಗುತ್ತದೆ. ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳುವ ಗ್ರಾಹಕರಿಗೆ 1,000 ಎಸ್ಎಂಎಸ್ ಲಭ್ಯವಾಗುತ್ತವೆ. ಇದರ ಜೊತೆಗೆ ಬಳಕೆದಾರರು ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಆಕ್ಸೆಸ್ ಲಭ್ಯವಾಗುತ್ತದೆ. ಈ ಎಲ್ಲಾ ಆಫರ್‌ಗಳ ಜೊತೆಯಲ್ಲಿ ಜಿಯೋ ಸಿನಿಮಾ ಪ್ರೀಮಿಯರ್ ಸಬ್‌ಸ್ಕ್ರಿಪ್ಷನ್ ಉಚಿತವಾಗಿ ಸಿಗಲಿದೆ. ಕೇವಲ ಕಾಲ್ ಮಾಡಲು ಮೊಬೈಲ್ ಫೋನ್ ಬಳಕೆ ಮಾಡುವ ಗ್ರಾಹಕರಿಗೆ ಇದು ಉತ್ತಮ ಆಯ್ಕೆಯಾಗಿದೆ. 497 ರೂಪಾಯಿ ರೀಚಾರ್ಜ್ ಪ್ಲಾನ್ ನ್ನು ಮೈ ಜಿಯೋ ಆಪ್ ಮೂಲಕ ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ. ಈ ರೀಚಾರ್ಜ್ ಪ್ಲಾನ್‌ ನಿಮಗೆ ಇಂಟರ್‌ನೆಟ್ ಸೇರಿದಂತೆ ಎಲ್ಲಾ ಸೇರಿಸಿದರೆ ದಿನಕ್ಕೆ ನಿಮಗೆ 1 ರೂಪಾಯಿ ಆಗುತ್ತದೆ. 

ಜಿಯೋ ಮತ್ತೆರಡು ಹೊಸ ಆಪ್‌ಗಳನ್ನು ಲಾಂಚ್ ಮಾಡಲು ಮುಂದಾಗಿದೆ. ಇನ್ಮುಂದೆ ಬಳಕೆದಾರರು ಜಿಯೋ ಟ್ರಾನ್ಸಲೇಟ್ ಮತ್ತು ಜಿಯೋ ಸೇಫ್ ಎಂಬ ಈ ಎರಡು ಆಫ್‌ ಗಳನ್ನು ಉಚಿತವಾಗಿ ಬಳಸಬಹುದು. ಒಂದು ವೇಳೆ ಈ ಎರಡು ಆಪ್‌ಗಳು ಸೇರ್ಪಡೆಯಾಗುವ ಪ್ಲಾನ್‌ ಬೆಲೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗುತ್ತಿದೆ. ಈಗಾಗಲೇ ಜಿಯೋ ತನ್ನ ಎಲ್ಲಾ ಬಳಕೆದಾರರಿಗೆ ಜಿಯೋ ಟಿವಿ, ಜಿಯೋ ಸಿನಿಮಾ ಆಕ್ಸೆಸ್‌ ಉಚಿತವಾಗಿ ನೀಡುತ್ತಿದೆ. 

799 ರೂಪಾಯಿ ರೀಚಾರ್ಜ್ ಪ್ಲಾನ್!

84 ದಿನ ವ್ಯಾಲಿಡಿಟಿಯ 799 ರೂಪಾಯಿ ರೀಚಾರ್ಜ್ ಜಿಯೋ ನೀಡುತ್ತಿರುವ ಜನಪ್ರಿಯ ಪ್ಲಾನ್ ಆಗಿದೆ. ಈ ಪ್ಲಾನ್‌ನಲ್ಲಿ ನಿಮಗೆ ಅನ್‌ಲಿಮಿಟೆಡ್ ಕಾಲ್, ಪ್ರತಿದಿನ 1.5 ಜಿಬಿ ಹಾಗೂ 100 ಎಸ್‌ಎಂಎಸ್ ಸಿಗುತ್ತದೆ. ಇದೆಲ್ಲದರೊಂದಿಗೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಆಕ್ಸೆಸ್ ಲಭ್ಯವಾಗುತ್ತದೆ. 666 ರೂಪಾಯಿಯ 70 ದಿನ ವ್ಯಾಲಿಡಿಯ ಪ್ಲಾನ್ ಸಹ ಜಿಯೋದಲ್ಲಿದೆ. 

Previous Post Next Post