NWKRTC- Jog Falls: ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಜೋಗಕ್ಕೆ ಬಸ್‌ ಸೇವೆ, ವೇಳಾಪಟ್ಟಿ-ಟಿಕೆಟ್ ದರ?

NWKRTC- Jog Falls: ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಜೋಗಕ್ಕೆ ಬಸ್‌ ಸೇವೆ, ವೇಳಾಪಟ್ಟಿ-ಟಿಕೆಟ್ ದರ?

ಕರ್ನಾಟಕದಾದ್ಯಂತ ಮಳೆ ಅಬ್ಬರ ಜೋರಾಗಿದೆ. ಪಶ್ಚಿಮ ಘಟ್ಟಗಳು, ಮಲೆನಾಡು ಜಿಲ್ಲೆಗಳಲ್ಲಿ ನಿರಂತರ ಮಳೆ ಸುರಿಯುತ್ತಿದ್ದಂತೆ ವಿಶ್ವ ಪ್ರಸಿದ್ಧ ಜೋಗ ಜಲಪಾತ ತನ್ನ ಗತವೈಭವಕ್ಕೆ ಮರಳಿದೆ. ಹಾಲಿನಂತೆ ಹಚ್ಚ ಹಸಿರ ಪರಿಸರದ ಮಧ್ಯೆ ಭೋರ್ಗರೆಯುತ್ತಿದೆ. ಇದನ್ನು ನೋಡಲು ವಿವಿಧ ಜಿಲ್ಲೆಗಳಿಂದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಜೋಗದ ವೀಕ್ಷಣೆಗೆ ವಿಶೇಷ ಬಸ್‌ಗಳ ವ್ಯವಸ್ಥೇ ಮಾಡಿದೆ.



ರಾಜ್ಯದಲ್ಲಿ ಅದರಲ್ಲೂ ಪಶ್ಚಿಮ ಘಟ್ಟಗಳಲ್ಲಿ ಅತ್ಯಧಿಕ ಮಳೆ ದಾಖಲಾದ ಪರಿಣಾಮ ಜಲಾಶಯಗಳೆಲ್ಲವು ಭರ್ತಿಯಾಗಿವೆ. ಅದೇ ರೀತಿ ಭರ್ತಿಯಾಗಿರುವ ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯ ಲಿಂಗನಮಕ್ಕಿ ಜಲಾಶಯದ ಭಾರೀ ಪ್ರಮಾಣದ ನೀರನ್ನು ಶರಾವತಿ ನದಿಗ ಬಿಡುಗಡೆ ಮಾಡಲಾಗುತ್ತಿದೆ.

NWKRTC Run Special Buses to Jog Falls from Hubli Haveri and Gadag Timings Ticket price

ಹೀಗಾಗಿ ನದಿ, ಜಲಾಶಯದ ಹೊರ ಹರಿವು ಹೆಚ್ಚಾಗುತ್ತಿದೆ. ಇತ್ತ ಮಳೆ ಮುಂದುವರಿದ ಕಾರಣ, ಜೋಶ ಜಲಪಾತದ ನೀರು ಹಾಲಿನ ನೊರೆಯಂತೆ ಧುಮ್ಮುಕ್ಕಿತ್ತುದೆ. ಇಲ್ಲಿನ 'ರಾಜಾ, ರಾಣಿ, ರೋರರ್ ಹಾಗೂ ರಾಕೆಟ್' ಜಲಪಾತಗಳನ್ನು ನೋಡಲು ವೀಕ್ಷಕರು ಆಗಮಿಸುತ್ತಾರೆ. ಮುಂಗಾರು ಸಮಯದಲ್ಲಿ ಪ್ರವಾಸಗರ ದಂಡೇ ಇಲ್ಲಿ ಕಾಣಬಹುದಾಗಿದೆ.

KSRTC-Jog Falls: ಬೆಂಗಳೂರಿನಿಂದ ಜೋಗ ಜಲಪಾತಕ್ಕೆ ಊಟ ಸಹಿತ ಟೂರ್ ಪ್ಯಾಕೇಜ್: ಟಿಕೆಟ್ ದರ, ವೇಳಾಪಟ್ಟಿ

ಉತ್ತರ ಕರ್ನಾಟಕದ ಪ್ರವಾಸಿಗರಿಗೆ ಜೋಗ ಕಣ್ತುಂಬಿಕೊಳ್ಳಲು ಅನುಕೂಲವಾಗಲೆಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮೂರು ಜಿಲ್ಲೆಗಳಿಂದ ವಿಶೇಷ ಬಸ್ಗಳನ್ನು ಬಿಡಲಾಗಿದೆ ಎಂದು ನಿಗಮದ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

ಎಲ್ಲಿಂದ ಜೋಗ ಬಸ್ ಹೊರಡಲಿವೆ?

NWKRTC ಹುಬ್ಬಳ್ಳಿ ಗ್ರಾಮಾಂತರ, ಹಾವೇರಿ, ಗದಗ ವಿಭಾಗದಿಂದ ಜೋಗ ಜಲಪಾತಕ್ಕೆ ವಿಶೇಷಗಳನ್ನು ಬಿಡಲಾಗಿದೆ. ಈ ಬಸ್ಗಳು ಪ್ರತಿ ಎರಡನೇ ಮತ್ತು ನಾಲ್ಕನೇ ಶನಿವಾರ, ಭಾನುವಾರ ಹಾಗೂ ರಜೆ ದಿನಗಳಂದು ಘಟದಿಂದ ನೇರವಾಗಿ ಜೋಗ ಜಲಪಾತಕ್ಕೆ ಕಾರ್ಯಾಚರಣೆ ನಡೆಸಲಿವೆ.

NWKRTC Run Special Buses to Jog Falls from Hubli Haveri and Gadag Timings Ticket price

ಬಸ್ ವೇಳಾಪಟ್ಟಿಯನ್ನು ನೋಡುವುದದರೆ, ಶಿವಮೊಗ್ಗ ಜಿಲ್ಲೆಯ ಜೋಗಕ್ಕೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಐರಾವತ ಮಲ್ಟಿಅಕ್ಸೆಲ್ ವೋಲ್ವೋ ಬಸ್ ಹುಬ್ಬಳ್ಳಿಯಿಂದ ಆಯಾ ನಿಗದಿತ ದಿನದಂತ ಬೆಳಗ್ಗೆ 8 ಗಂಟೆಗೆ ಹೊರಡುತ್ತದೆ. ಈ ಬಸ್ನಲ್ಲಿ ಹೋಗಿ-ಬರಲು ಒಬ್ಬರಿಗೆ ಟಿಕೆಟ್ ದರ 600 ರೂ. ನಿಗದಿಪಡಿಸಲಾಗಿದೆ.

ಇದೇ ವಿಭಾಗದಿಂದ ಬೆಳಗ್ಗೆ 7:30 ರಾಜಹಂಸ ಬಸ್ ಪ್ರಯಾಣ ಬೆಳೆಸಲಿದೆ. ಈ ಬಸ್ನಲ್ಲಿ ಜೋಗ ನೋಡಿ ವಾಪಾಸ್ ಬರಲು ತಲಾ ಒಬ್ಬರಿಗೆ ರೂ.430 ಬಸ್ ಟಿಕೆಟ್ ಇರಲಿದೆ. ಮಧ್ಯಮ ಹಂತದಿಂದ ಕೆಳವರ್ಗದವರಿಗೂ ಅನುಕೂಲವಾಗುವಂತೆ ಇದೇ ವಿಭಾಗದಿಂದ ವಾಯುವ್ಯ ಕರ್ನಾಟಕ ಸಾರಿಗೆ ಬಸ್ (ಸಾಮಾನ್ಯ ಬಸ್) ಬೆಳಗ್ಗೆ 8:10ಕ್ಕೆ ಸಂಚಾರ ಆರಂಭಿಸಲಿದೆ. ಇದರಲ್ಲಿ ತೆರಳಲು ಇಚ್ಛಿವವರು ಕೇವಲ ತಲಾ 350 ರೂ. ಹಣ ಕೊಟ್ಟು ಜೋಗ ನೋಡಿ ಬರಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನೂ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕದ ಹೆಬ್ಬಾಗಿಲು ಜಿಲ್ಲೆ ಹಾವೇರಿ ವಿಭಾಗದ ವಾಯುವ್ಯ ಕರ್ನಾಟಕ ಸಾರಿಗೆ ಬಸ್ಗಳು (ಸಾಮಾನ್ಯ ಬಸ್) ಬೆಳಗ್ಗೆ 8 ಗಂಟೆಗೆ ಹಾವೇರಿ ಬಸ್ ನಿಲ್ದಾಣದಿಂದ ಪ್ರಯಾಣಿಸಲಿವೆ. ಇಲ್ಲಿ ಜೋಗಕ್ಕೆ ಹೋಗಿ ಬರಲು ಒಬ್ಬರಿಗೆ ತಲಾ 340 ರೂ. ದರ ಇದೆ.

ರಾಣಿಬೆನ್ನೂರಿನಿಂದಲೂ ಬಸ್ ಸಂಚಾರ

ಇದೇ NWKRTC ವಿಭಾಗದ ರಾಣೇಬೆನ್ನೂರು ಬಸ್ ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ ವಾಯುವ್ಯ ಕರ್ನಾಟಕ ಸಾರಿಗೆ ಬಸ್‌ಗಳು ಜೋಗಕ್ಕೆ ಹೋಗಿ ಬರಲಿವೆ. ತಲಾ ಒಬ್ಬರಿಗೆ ಬಸ್ 320 ರೂ. ಹಣ ನಿಗದಿಪಡಿಸಲಾಗಿದೆ. ಇನ್ನು ಇಲ್ಲಿಂದಲೇ ರಾಜಹಂಸ ಬಸ್ ಸಹ ಜೋಗಕ್ಕೆ ತೆರಳಲಿವೆ. ಅವುಗಳು ಬೆಳಗ್ಗೆ 8:30 ನಿಲ್ದಾಣದಿಂದ ಸಂಚರಿಸಲಿದ್ದು, ಎರಡು ಕಡೆಯ ಸಂಚಾರಕ್ಕೆ (ಹೋಗಿ-ಬರಲು) ತಲಾ ಒಬ್ಬರಿಗೆ 425 ರೂ. ಇದೆ.

ಇನ್ನು ಗದಗ ವಿಭಾಗದ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಬೆಳಗ್ಗೆ 7 ಗಂಟೆಗೆ ಗದಗ ಬಸ್ ನಿಲ್ದಾಣ ಜೋಗ ಜಲಪಾತಕ್ಕೆ ಸಂಚರಿಸಲಿವೆ. ಈ ಬಸ್ನಲ್ಲಿ ನೀವು ತೆರಳಲು ಬಯಸಿದರೆ ಒಬ್ಬರಿಗೆ ರೂ.500 ಟಿಕೆಟ್ ಚಾರ್ಜ್ ನಿಗದಿ ಮಾಡಲಾಗಿದೆ ಎಂದು NWKRTC ಪ್ರಕಟಣೆಯಲ್ಲಿ ತಿಳಿಸಿದೆ.

ಜೋಗ ನೋಡುವವರಿಗೆ ಇದೊಂದು ಸದವಕಾಶ

ಇದು ಒಂದು ದಿನದ ವಿಶೇಷ ಬಸ್‌ ಕಾರ್ಯಾಚರಣೆ ಆಗಿರುತ್ತದೆ. ಬೆಳಗ್ಗೆ ಹೋಗಿ, ಸಂಜೆ ಇಲ್ಲವೇ ರಾತ್ರಿ ನಿಮ್ಮ ನಿಮ್ಮ ನಿಲ್ದಾಣಕ್ಕೆ ಕರೆತಂದು ಬಿಡಲಾಗುತ್ತದೆ. ಶಿವಮೊಗ್ಗ ಕೆಲವೇ ಅಂತದಲ್ಲಿರುವ ಜಿಲ್ಲೆಗಳ ನಿವಾಸಿಗಳು ಹತ್ತಿರ ಜೋಗ ನೋಡದವರಿಗೆ ಇದೊಂದು ಅದ್ಭುತ ಅವಕಾಶವಾಗಿದೆ.

ಈ ಹಿಂದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬೆಂಗಳೂರಿನಿಂದ ಜೋಗ ಜಲಪಾತಕ್ಕೆ ವಿಶೇಷ ಬಸ್‌ಗಳನ್ನು ವ್ಯವಸ್ಥೆ ಮಾಡಿತ್ತು. ಏಕ ದಿನದ ಟೂರ್ ಪ್ಯಾಕೇಜ್ ಅನ್ನು ನಿಗಮ ಘೋಷಿಸಿತ್ತು. ಮಳೆಗಾದಲ್ಲಿ ಕೆಲಸ ಇನ್ನಿತರ ಕಾರ್ಯಕ್ರಮಗಳಿಗೆ ಹೋಗಲು ಆಗದೇ ಮನೆಯಲ್ಲಿಯೇ ಇದ್ದು ಬೇಜಾರಾಗಿದೆ ಎನ್ನುವರು ಈ ಅವಕಾಶ ಸದುಪಯೋಗಪಡಿಸಿಕೊಳ್ಳಬಹುದು.

Post a Comment

Previous Post Next Post
CLOSE ADS
CLOSE ADS
×