ಟೂರ್‌ ಮಾಡಿ, ಕಂತುಗಳಲ್ಲಿ ಹಣ ಪಾವತಿಸಿ!: ಹಿರಿಯ ನಾಗರಿಕರಿಗೆ ರಾಜ್ಯ ಸರ್ಕಾರದಿಂದ ಹೀಗೊಂದು ಪ್ರವಾಸ ಭಾಗ್ಯ!

ಟೂರ್‌ ಮಾಡಿ, ಕಂತುಗಳಲ್ಲಿ ಹಣ ಪಾವತಿಸಿ!: ಹಿರಿಯ ನಾಗರಿಕರಿಗೆ ರಾಜ್ಯ ಸರ್ಕಾರದಿಂದ ಹೀಗೊಂದು ಪ್ರವಾಸ ಭಾಗ್ಯ!

ಇಳಿ ವಯಸ್ಸಿನಲ್ಲಿ ಏಲ್ಲಾದರೂ ದೂರದೂರುಗಳಿಗೆ ಪ್ರವಾಸ ಹೋಗಬೇಕೆಂದರೆ ಹಿರಿಯ ನಾಗರಿಕರಿಗೆ ಹಣದ ಸಮಸ್ಯೆ ಕಾಡುವುದು ಸಹಜ. ಯಾರಲ್ಲಾದರೂ ಹಣ ಕೇಳೋಣ ಎಂದರೆ ಸರಿಯಾಗೊಲ್ಲ. ಸ್ವಾಭಿಮಾನ ಅಡ್ಡ ಬರುತ್ತದೆ. ಹೀಗಿರುವಾಗ ಹೇಗೆ ಪ್ರವಾಸಕ್ಕೆ ಹೋಗುವುದು ಎಂದು ಹಿರಿಯ ನಾಗರಿಕರು ಚಿಂತಿಸಬೇಕಿಲ್ಲ. ಇದಕ್ಕೆಂದೆ ರಾಜ್ಯ ಸರ್ಕಾರದ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ ನ್ಯಾಶನಲ್ ಲಿಮಿಟೆಡ್(MSIL) ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಇಧರ ಪ್ರಕಾರ ಹಿರಿಯ ನಾಗರಿಕರು ಮೊದಲು ಟೂರ್ ಮಾಡಿ ಬಳಿಕ ಕಂತುಗಳಲ್ಲಿ ಹಣ ಪಾವತಿ ಮಾಡಬಹುದು.



  • ಇಳಿ ವಯಸ್ಸಿನಲ್ಲಿ ದೇಶ ಸುತ್ತಬೇಕೆಂದು ಬಯಸುವ ಹಿರಿಯ ನಾಗರಿಕರು ಪ್ರವಾಸದ ಸುರಕ್ಷತೆ ಕುರಿತು ಚಿಂತಿಸಬೇಕಿಲ್ಲ. ಅಷ್ಟೇ ಅಲ್ಲ, ತಕ್ಷಣದಲ್ಲಿ ಪೂರ್ತಿ ಹಣ ಪಾವತಿಸುವ ಗೊಡವೆಯೂ ಇಲ್ಲ. ಮೊದಲು ಟೂರ್‌ ಮಾಡಿ, ಬಳಿಕ ಕಂತುಗಳಲ್ಲಿ ಹಣ ಪಾವತಿಸಬಹುದು!
  • ರಾಜ್ಯ ಸರಕಾರ ಸ್ವಾಮ್ಯದ 'ಎಂಎಸ್‌ಐಎಲ್‌' ಹಿರಿಯರಿಗೆಂದೇ ಇಂತಹ ವಿಶಿಷ್ಟ ಪ್ರವಾಸ ಯೋಜನೆಗಳನ್ನು ರೂಪಿಸಿದೆ. ಪ್ರವಾಸದ ಸಂದರ್ಭದಲ್ಲಿ ಮಕ್ಕಳಂತೆ ಮಮತೆಯಿಂದ ನೋಡಿಕೊಂಡು ಸುರಕ್ಷಿತವಾಗಿ ಮರಳಿ ಮನೆಗೆ ತಲುಪಿಸುವುದು ಎಂಎಸ್‌ಐಎಲ್‌ ಆದ್ಯತೆ.


  • ಹಿರಿಯರಿಗೆ ಬೇಕಾದ ಅವರಿಷ್ಟದ ಊಟ, ಇಚ್ಛೆಯ ತಾಣ, ಅನುಕೂಲಕರವಾದ ದಿನಾಂಕ, ಬಯಸಿದ ಸಾರಿಗೆಯಲ್ಲೇ (ವಿಮಾನ/ರೈಲು) ಪ್ರಯಾಣ ವ್ಯವಸ್ಥೆ ಮಾಡಲಾಗುತ್ತದೆ. ಸರಕಾರದ ಅಂಗ ಸಂಸ್ಥೆಯಾದ 'ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌'ನ(ಎಂಎಸ್‌ಐಎಲ್‌) ಟೂರ್ಸ್ ಆಂಡ್‌ ಟ್ರಾವೆಲ್ಸ್‌ ವಿಭಾಗವು ಈ ವಿನೂತನ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. 'ಕಿಚನ್‌ ವಿತ್‌ ಟ್ರಾವೆಲ್‌', 'ಡೋರ್‌ ಟು ಡೋರ್‌ ಟ್ರಾವೆಲ್‌', 'ಇಎಂಐ ವಿತ್‌ ಟ್ರಾವೆಲ್‌' ಸೌಲಭ್ಯಗಳೊಂದಿಗೆ ವಿಶಿಷ್ಟ ಪ್ರವಾಸ ಪ್ಯಾಕೇಜ್‌ಗಳನ್ನು ಪರಿಚಯಿಸುತ್ತಿದೆ. ಮೊದಲ ಹಂತದಲ್ಲಿ ಸೆಪ್ಟೆಂಬರ್‌ ತಿಂಗಳಲ್ಲಿಆದಿ ಕೈಲಾಶ್‌ ಮತ್ತು ವಾರಣಾಸಿಗೆ ಪ್ರವಾಸವನ್ನು ಆಯೋಜಿಸಲಾಗುತ್ತಿದ್ದು, ಇದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
  • ಇತ್ತೀಚೆಗೆ ಆನ್‌ಲೈನ್‌ ಬುಕ್ಕಿಂಗ್‌ನ ಪ್ರವಾಸಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಆದರೆ ಆನ್‌ಲೈನ್‌ನಲ್ಲಿ ಬುಕ್‌ ಮಾಡಿದ ನಂತರ ಹಲವರಿಗೆ ಎಲ್ಲಿ ಹತ್ತಬೇಕು, ಎಲ್ಲಿ ಇಳಿಯಬೇಕು, ತಮಗೆ ಬೇಕಾದ ವಸ್ತುಗಳನ್ನು ಎಲ್ಲಿಖರೀದಿಸಬೇಕು? ಪೂಜೆಗೆ ಹೇಗೆ ಎಲ್ಲಿ ಹೋಗಬೇಕು ಎಂಬ ಬಗ್ಗೆ ಮಾಹಿತಿ ಇರುವುದಿಲ್ಲ. ಆದರೆ ಎಂಎಸ್‌ಐಎಲ್‌ನ ಪ್ರವಾಸದಲ್ಲಿ ಇವರದ್ದೇ ಸಂಸ್ಥೆಯ ಸ್ವಯಂಸೇವಕರು ಜತೆಯಲ್ಲೇ ಇದ್ದು ನೆರವಾಗಲಿದ್ದಾರೆ.
  • ಒಟ್ಟಾಗಿ ಪ್ರವಾಸ ತೆರಳ ಬಯಸುವವರಿಗೆ ಪ್ರತಿ ಬ್ಯಾಚ್‌ನಲ್ಲಿ100 ಮಂದಿಯನ್ನು ಒಳಗೊಂಡ ಸಾಮೂಹಿಕ ಪ್ರವಾಸ ಇರಲಿದೆ. ವಯಸ್ಸಾದ ತಂದೆ-ತಾಯಿಯರಿಗೆ ನಿಗದಿತ ದಿನಾಂಕಗಳಂದು ಆರಾಮವಾಗಿ ಹೋಗಿ ಬರುವ ಪ್ರವಾಸ ವ್ಯವಸ್ಥೆ ಮಾಡಲಿದೆ.

ಇಎಂಐ ಮನ್ನಾಕ್ಕೆ ಲಕ್ಕಿ ಡಿಪ್‌

ಅನ್ಯ ರಾಜ್ಯಗಳಿಗೆ ಒಂದು ವಾರದ ಪ್ರವಾಸಕ್ಕೆ ವಿಮಾನದಲ್ಲಿ ಹೋಗುವುದಾದರೆ ಸುಮಾರು 30-40 ಸಾವಿರ ರೂಪಾಯಿ ಬೇಕಾಗುತ್ತದೆ. ಅಷ್ಟು ಹಣವನ್ನು ಒಮ್ಮೆಗೆ ಭರಿಸುವುದು ಕಷ್ಟ. ಇಂಥವರಿಗಾಗಿಯೇ ಇಎಂಐ ಸೇವೆಯನ್ನೂ ನೀಡಲಿದೆ. ಅಂದರೆ ಪ್ರತಿ ತಿಂಗಳು ಹಣ ಕಟ್ಟಿ ಪ್ರವಾಸ ಹೋಗಬಹುದು. ಅಷ್ಟು ಮಾತ್ರವಲ್ಲ, ಇದರಲ್ಲಿಲಕ್ಕಿ ಡಿಪ್‌ ಸ್ಕೀಂ ಕೂಡ ಇದೆ. ಇಎಂಐ ಸ್ಕೀಂನಲ್ಲಿಹಣ ಕಟ್ಟುವವರ ಹೆಸರುಗಳನ್ನು ಲಕ್ಕಿ ಡಿಪ್‌ ಮೂಲಕ ಎತ್ತಲಾಗುವುದು. ಇದರಲ್ಲಿ ನಾಲ್ಕೈದು ಮಂದಿಯ ಹೆಸರುಗಳನ್ನು ಆಯ್ಕೆ ಮಾಡಲಾಗುವುದು.

ಹೀಗೆ ಆಯ್ಕೆಯಾದವರು ಬಾಕಿಯಿರುವ ಇಎಂಐ ಕಂತುಗಳನ್ನು ಕಟ್ಟಬೇಕಿಲ್ಲ. ಹೀಗಾಗಿ ಇಎಂಐ ಮತ್ತು ಲಕ್ಕಿ ಡಿಪ್‌ ಸ್ಕೀಂಗಳನ್ನು ಕೂಡ ಪರಿಚಯಿಸಲಾಗುತ್ತಿದೆ. ಎಲ್ಲಾವರ್ಗದವರೂ ಇದನ್ನು ಬಳಸಿಕೊಳ್ಳಬಹುದು ಎಂದು ಎಂಎಸ್‌ಐಎಲ್‌ನ ಟೂರ್ಸ್ ಆಂಡ್‌ ಟ್ರಾವೆಲ್ಸ್‌ ವಿಭಾಗದ ಜನರಲ್‌ ಮ್ಯಾನೇಜರ್‌ ಕೆ. ರವಿಕುಮಾರ್‌ ಹೇಳುತ್ತಾರೆ.

ಪ್ರವಾಸಿಗರಿಗೆ 24/7 ದೂರವಾಣಿ ಸೇವೆ

ಪ್ರವಾಸಿಗರಿಗೆ ಪ್ರತ್ಯೇಕವಾದ ಹೆಲ್ಪ್‌ಲೈನ್‌ ಮತ್ತು ವಾಟ್ಸಪ್‌ ನಂಬರ್‌ಗಳನ್ನು (080-ಧಿ45888882, 9353645921) ಕೂಡ ವ್ಯವಸ್ಥೆ ಮಾಡಲಾಗಿದೆ. ಇದು ದಿನದ 24 ಗಂಟೆಯೂ ಅಂದರೆ ಭಾನುವಾರ ಸೇರಿದಂತೆ ವಾರದ ಎಲ್ಲಾದಿನಗಳಲ್ಲೂಕಾರ್ಯನಿರ್ವಹಿಸುತ್ತದೆ. ಇದರ ಪ್ರಕ್ರಿಯೆಗಾಗಿ ಪ್ರತ್ಯೇಕ ತಂಡವನ್ನೇ ನೇಮಿಸಲಾಗಿದೆ. ಒಂದು ನಂಬರ್‌ನಲ್ಲಿ ಯಾರಾದರೂ ಮಾತನಾಡುತ್ತಿದ್ದರೆ, ಅದು ತಾನಾಗಿಯೇ ಮತ್ತೊಂದು ಸಂಖ್ಯೆಗೆ ಸಂಪರ್ಕ ಕಲ್ಪಿಸುತ್ತದೆ. ಇದಕ್ಕಾಗಿ ಕ್ಲೌಡ್‌ ಬೇಸ್ಡ್‌ ಟೆಲಿಕಾಂ ಸಿಸ್ಟಂ ಅನ್ನು ವ್ಯವಸ್ಥೆ ಮಾಡಲಾಗಿದೆ.

Post a Comment

Previous Post Next Post
CLOSE ADS
CLOSE ADS
×