KSRTC: ಶಿಷ್ಯ ವೇತನ ಸಹಿತ ಇಂಟರ್ನ್‌ಶಿಪ್, ಅರ್ಜಿ ಹಾಕಿ

KSRTC: ಶಿಷ್ಯ ವೇತನ ಸಹಿತ ಇಂಟರ್ನ್‌ಶಿಪ್, ಅರ್ಜಿ ಹಾಕಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಪುತ್ತೂರು ವಿಭಾಗ ಶಿಶಿಕ್ಷು ಅಧಿನಿಯಮ 1961ರ ಅನ್ವಯ ಪೂರ್ಣ ಅವಧಿಯ ತಾಂತ್ರಿಕ ವೃತ್ತಿಯಲ್ಲಿ ತರಬೇತಿ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಇದು ಶಿಷ್ಯ ವೇತನ ಸಹಿತ ಇಂಟರ್ನ್‌ಶಿಪ್ ಆಗಿದ್ದು, ಆಸಕ್ತರು, ಅರ್ಹರು ಆಗಸ್ಟ್ 25ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು.



ಕೆಎಸ್‌ಆರ್‌ಟಿಸಿಯ ಪುತ್ತೂರು ವಿಭಾಗದಿಂದ ಶಿಶಿಕ್ಷು ವೃತ್ತಿಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಐಟಿಐ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಮೆಕ್ಯಾನಿಕ್ ಡೀಸೆಲ್ (25 ಹುದ್ದೆ), ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಎಲೆಕ್ಟ್ರೀಷಿಯನ್, ಮೋಟಾರ್ ಮೆಕ್ಯಾನಿಕ್ ವೆಹಿಕಲ್, ವೆಲ್ಡರ್, ಫಿಟ್ಟರ್, ಮೋಟಾರ್ ವೆಹಿಕಲ್ ಬಾಡಿ ಬಿಲ್ಡರ್, ಮೆಕ್ಯಾನಿಕ್ ಆಟೋಮೊಬೈಲ್, ಪಾಸಾ ಹುದ್ದೆಗಳು ಖಾಲಿ ಇವೆ.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಮೆಕ್ಯಾನಿಕ್ ಡೀಸೆಲ್ (30) ಹುದ್ದೆ ಖಾಲಿ ಇದ್ದು, 2 ವರ್ಷದ ತರಬೇತಿ ಅವಧಿ ನಿಗದಿ ಮಾಡಲಾಗಿದೆ. ಅರ್ಜಿ ಸಲ್ಲಿಸುವಾಗ ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಎಸ್‌ಎಸ್‌ಎಲ್‌ಸಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 21 ವರ್ಷ ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸೈನಿಕರ ಮಕ್ಕಳಿಗೆ ನಿಯಮಾವಳಿಯನ್ವಯ ಮೀಸಲಾತಿ ನೀಡಲಾಗುವುದು.

ಶಿಷ್ಯ ವೇತನ ಎಷ್ಟು?

ತರಬೇತಿ ಭತ್ಯೆ ಐಟಿಐ ವಿದ್ಯಾರ್ಹತೆಗೆ ಒಂದು ವರ್ಷದ ಅವಧಿಯಲ್ಲಿ ಮಾಸಿಕ ರೂ.7708 ಮತ್ತು ಎಸ್ಎಸ್ಎಲ್‌ಸಿ ವಿದ್ಯಾರ್ಹತೆ ಹೊಂದಿದವರಿಗೆ ಮೊದಲನೇ ವರ್ಷದ ಅವಧಿಯಲ್ಲಿ ಮಾಸಿಕ ರೂ.7708 ಮತ್ತು ಎರಡನೇ ವರ್ಷದ ಅವಧಿಯಲ್ಲಿ ಮಾಸಿಕ ರೂ. 8809 ಆಗಿದೆ.

ಅರ್ಹ ಅಭ್ಯರ್ಥಿಗಳು ಆಗಸ್ಟ್, 25ರೊಳಗೆ ಬೆಳಗ್ಗೆ 10 ರಿಂದ ಸಂಜೆ 5.30 ಗಂಟೆಯೊಳಗೆ ಹಾಗೂ ಶನಿವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30ರೊಳಗೆ ವಿಭಾಗೀಯ ಕಚೇರಿ, ಕರಾರಸಾ ನಿಗಮ, ಮುಕ್ರಂಪಾಡಿ, ದರ್ಬೆ, ಪುತ್ತೂರು ಇಲ್ಲಿಗೆ ಅರ್ಜಿ ಸಲ್ಲಿಸಬೇಕು. ಆಗಸ್ಟ್, 30ರಂದು ಬೆಳಗ್ಗೆ 10 ಗಂಟೆಗೆ ಮೂಲ ದಾಖಲಾತಿಯೊಂದಿಗೆ ಶಿಶಿಕ್ಷು ಆಯ್ಕೆ ಸಮಿತಿಯ ಮುಂದೆ ನೇರ ಸಂದರ್ಶನಕ್ಕೆ ಹಾಜರಾಗಬೇಕಿದೆ.

ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ ಪ್ರತಿ-2, ಬ್ಯಾಂಕ್ ಪಾಸ್‍ಬುಕ್ ಪ್ರತಿ-2, ಆಧಾರ್ ನಂಬರ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಬಗ್ಗೆ ಸಂಬಂಧಿಸಿದ ಬ್ಯಾಂಕ್‍ನಿಂದ ದೃಢೀಕರಣ ಪತ್ರ, ಇ-ಮೇಲ್ ಐಡಿ, ವಿದ್ಯಾರ್ಹತೆಯ ಮೂಲ ದಾಖಲಾತಿ ಪ್ರತಿ ಮತ್ತು ಜಾತಿ ಪ್ರಮಾಣದ ಮೂಲ ಪ್ರತಿ ಸಲ್ಲಿಸಬೇಕು.

ಆಸಕ್ತರು, ಅರ್ಹರು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.

2020-21ರಲ್ಲಿ ಅಥವಾ ನಂತರ ಐಟಿಐ ಉತ್ತೀರ್ಣರಾಗಿರುವ, ತಾಂತ್ರಿಕ ಕೌಶಲ್ಯದ ಕೋರ್ಸ್‍ನಲ್ಲಿ ಪ್ರಮಾಣ ಪತ್ರ ಹೊಂದಿರುವ 18 ರಿಂದ 23 ವರ್ಷ ವಯೋಮಿತಿಯವರು ಅರ್ಜಿ ಹಾಕಿ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ತರಬೇತಿ, ಉಚಿತ ವಿಮಾನ ಟಿಕೆಟ್, ಉಚಿತ ವಸತಿ, ಆರೋಗ್ಯ ವಿಮೆ, ವಾರ್ಷಿಕ ರಜೆಗಳು ಹಾಗೂ ಹಿಂದಿರುಗುವ ಪ್ರಯಾಣದ ವಿಮಾನ ಟಿಕೆಟ್ ಸೌಲಭ್ಯಗಳಿವೆ.

ಆಸಕ್ತರು ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ ವಿಳಾಸ http://imck.kaushalkar.com/ ಹಾಗೂ ಮೊಬೈಲ್ ಸಂಖ್ಯೆ 9483223884 ಅನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು.

Post a Comment

Previous Post Next Post
CLOSE ADS
CLOSE ADS
×