ಕೃಷಿ ಸಿಂಚಾಯಿ ಯೋಜನೆಯಡಿ 90% ಸಬ್ಸಿಡಿಯಲ್ಲಿ ಹನಿ ನೀರಾವರಿ,ತುಂತುರು ನೀರಾವರಿ ಸೌಲಭ್ಯ,ನಿಮ್ಮ ಅರ್ಜಿ ಹೀಗೆ ಸಲ್ಲಿಸಿ-Krishi sinchayi yojane

ಕೃಷಿ ಸಿಂಚಾಯಿ ಯೋಜನೆಯಡಿ 90% ಸಬ್ಸಿಡಿಯಲ್ಲಿ ಹನಿ ನೀರಾವರಿ,ತುಂತುರು ನೀರಾವರಿ ಸೌಲಭ್ಯ,ನಿಮ್ಮ ಅರ್ಜಿ ಹೀಗೆ ಸಲ್ಲಿಸಿ-Krishi sinchayi yojane

ತೋಟಗಾರಿಕೆ ಇಲಾಖೆಯಿಂದ 2024-25 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಅರ್ಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗದ ರೈತರಿಂದ ಅರ್ಜಿ ಆಹ್ವಾನಿಸಿದೆ.



ತೋಟಗಾರಿಕೆ ಬೆಳೆಯನ್ನು ಬೆಳೆಯುತ್ತಿರುವ ಎಲ್ಲಾ ವರ್ಗದ ರೈತರಿಗೆ (ಕಾಫಿ.ಟೀ ಹಾಗೂ ರಬ್ಬರ್ ಬೆಳೆಗಳನ್ನು ಹೊರತುಪಡಿಸಿ) ಹನಿ ನೀರಾವರಿ ಅಳವಡಿಸಿದ ಪ್ರತಿ ಫಲಾನುಭವಿಗೆ ಗರಿಷ್ಟ 5 ಹೆಕ್ಟೇರ್ ಪ್ರದೇಶದವರೆಗೆ ಹಾಗೂ ತರಕಾರಿ ಮತ್ತು ಹೂ ಬೆಳೆಗಳಿಗೆ ಗರಿಷ್ಟ 2 ಹೆಕ್ಟೇ‌ರ್ ಪ್ರದೇಶಕ್ಕೆ ಸಹಾಯಧನವನ್ನು ನೀಡಲಾಗುವುದು.

ತೋಟಗಾರಿಕೆ ಇಲಾಖೆಯಿಂದ 2024-25 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಅರ್ಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗದ ರೈತರಿಂದ ಅರ್ಜಿ ಆಹ್ವಾನಿಸಿದೆ.

ತೋಟಗಾರಿಕೆ ಬೆಳೆಯನ್ನು ಬೆಳೆಯುತ್ತಿರುವ ಎಲ್ಲಾ ವರ್ಗದ ರೈತರಿಗೆ (ಕಾಫಿ.ಟೀ ಹಾಗೂ ರಬ್ಬರ್ ಬೆಳೆಗಳನ್ನು ಹೊರತುಪಡಿಸಿ) ಹನಿ ನೀರಾವರಿ ಅಳವಡಿಸಿದ ಪ್ರತಿ ಫಲಾನುಭವಿಗೆ ಗರಿಷ್ಟ 5 ಹೆಕ್ಟೇರ್ ಪ್ರದೇಶದವರೆಗೆ ಹಾಗೂ ತರಕಾರಿ ಮತ್ತು ಹೂ ಬೆಳೆಗಳಿಗೆ ಗರಿಷ್ಟ 2 ಹೆಕ್ಟೇ‌ರ್ ಪ್ರದೇಶಕ್ಕೆ ಸಹಾಯಧನವನ್ನು ನೀಡಲಾಗುವುದು.

ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ,ತೋಟಗಾರಿಕೆ ಇಲಾಖೆಯಲ್ಲಿರುವ ಸಬ್ಸಿಡಿ ಯೋಜನೆಗಳನ್ನು ಚೆಕ್ ಮಾಡಿ

https://horticulturedir.karnataka.gov.in/info-2/Facilities+available+to+farmers/kn

ಕೃಷಿ ಸಿಂಚಾಯಿ ಯೋಜನೆಯಡಿ ತುಂತುರು ನೀರಾವರಿ ಸೌಲಭ್ಯ

ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಕೃಷಿ ಸಿಂಚಯ ಯೋಜನೆ- ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಕಾರ್ಯಕ್ರಮದಡಿ ಹೆಚ್ಚುವರಿ ಸಬ್ಸಿಡಿ ಕಡಿತವಿಲ್ಲದೇ ಪೂರ್ಣ ಲಾಭ ರೈತರಿಗೆ ಸಿಗಲಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿ ಪ್ರಕಟನೆ ತಿಳಿಸಿದೆ.

ಪ್ರಸಕ್ತ ಸಾಲಿನಲ್ಲಿ ತುಂತುರು ಘಟಕಗಳ ವಿತರಣೆಗೆ ಈಗಾಗಲೇ ಇಲಾಖೆಗೆ ಕಾರ್ಯಕ್ರಮ ಬಂದಿದ್ದು, ರೈತರಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಶೀಘ್ರದಲ್ಲಿ ರೈತರಿಗೆ ಕಾರ್ಯಾದೇಶವನ್ನು ನೀಡಿ ಶೇ.90ರಷ್ಟು ಸಹಾಯಧನದಲ್ಲಿ 2 ಹೆಕ್ಟೇರ್‌ ವರೆಗಿನ ಎಲ್ಲ ರೈತರಿಗೆ ತುಂತುರು ನೀರಾವರಿ ಘಟಕಗಳನ್ನು ಒದಗಿಸಲಾಗುತ್ತದೆ.

ಕೃಷಿ ಮತ್ತು ತೋಟಗಾರಿಕೆ ಇಲಾಖೆ ಗಳ ಮೂಲಕ ರೈತರ ತೋಟಕ್ಕೆ ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಲು ಪೈಪ್ ಸೆಟ್ ಮತ್ತು ಅದಕ್ಕೆ ಪೂರಕವಾದ 8 ವಿಧದ ಸಾಮಗ್ರಿಗಳನ್ನು ಸಬ್ಸಿಡಿ ಆಧಾರದಲ್ಲಿ ಕೃಷಿ ಸಿಂಚಾಯಿ ಯೋಜನೆಯಡಿ ನೀಡಲಾಗುತ್ತದೆ

ಸಬ್ಸಿಡಿ ಲೆಕ್ಕಾಚಾರ

ಕೇಂದ್ರ ಸರಕಾರದ ಯೋಜನೆ ಇದಾಗಿರುವುದರಿಂದ ಅನುಷ್ಠಾನದಲ್ಲಿಯೇ ಕೇಂದ್ರ ಸರಕಾರ ಶೇ. 33ರಷ್ಟು ಸಬ್ಸಿಡಿ ನೀಡುತ್ತದೆ. ಇದಕ್ಕೆ ರಾಜ್ಯ ಸರಕಾರ ಶೇ. 22ರಷ್ಟು ಕಡ್ಡಾಯವಾಗಿ ಕನಿಷ್ಠ ಸಬ್ಸಿಡಿ ನೀಡಬೇಕು.

ಅದಕ್ಕಿಂತ ಹೆಚ್ಚು ಎಷ್ಟು ಬೇಕಾದರೂ ನೀಡಲು ಅವಕಾಶವಿದ್ದು, ಗರಿಷ್ಠ ಶೇ. 90ರಷ್ಟು ನೀಡಬಹುದು. ಉಳಿದ ಶೇ. 10ರಷ್ಟನ್ನು ರೈತರು ಅಥವಾ ಕೃಷಿಕರು ಭರಿಸಬೇಕು. ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ರಾಜ್ಯ ಸರಕಾರದ ಶೇ. 22ರಷ್ಟು ಕಡ್ಡಾಯ ಸಬ್ಸಿಡಿಯ ಜತೆಗೆ ಶೇ. 35ರಷ್ಟು ಹೆಚ್ಚುವರಿ ಸಬ್ಸಿಡಿ ಸೇರಿಸಿ, ಕೇಂದ್ರ ಸರಕಾರದ ಶೇ. 33ರಷ್ಟು ಒಳಗೊಂಡಂತೆ ಶೇ. 90ರಷ್ಟು ಸಬ್ಸಿಡಿ ದರಲ್ಲಿ ಯೋಜನೆಯನ್ನು ಅನುಷ್ಠಾನ ಮಾಡುತ್ತ ಬರಲಾಗಿತ್ತು. ಈಗ ಹೊಸ ಸರಕಾರ ಬಂದ ಬಳಿಕ ಎಲ್ಲವೂ ಬದಲಾಗಿದೆ.

ಅನುಷ್ಠಾನ ಹೇಗೆ?

ಈ ಯೋಜನೆಯಡಿ ರೈತರಿಗೆ ನೇರವಾಗಿ ಹಣ ನೀಡುವ ವ್ಯವಸ್ಥೆಯಿಲ್ಲ. ಬದಲಾಗಿ ಯೋಜನೆಗೆ ಅರ್ಜಿ ಸಲ್ಲಿಸಿದ ರೈತರ ಜಮೀನಿಗೆ ನಿರ್ದಿಷ್ಟ ಸಂಸ್ಥೆಯ ಮೂಲಕ ಹನಿ ನೀರಾವರಿಗೆ ಪೂರಕವಾದ ಪೈಪ್‌ಸೆಟ್‌ಗಳನ್ನು ಒದಗಿಸಿ, ಅಳವಡಿಸಲಾಗುತ್ತದೆ. ಶೇ. 90ರಷ್ಟು ಖರ್ಚನ್ನು ಸರಕಾರಗಳು ಭರಿಸಿದರೆ ಶೇ. 10ರಷ್ಟು ಖರ್ಚನ್ನು ರೈತರು ಅಥವಾ ಕೃಷಿಕರು ಭರಿಸಬೇಕು. ನಿರ್ದಿಷ್ಟ ಸಂಸ್ಥೆಯವರು ತೋಟಕ್ಕೆ ಆಗಮಿಸಿ ಪೈಪ್ ಅಳವಡಿಸಿ ಕೊಡುತ್ತಾರೆ.

ಏನೇನು ಸೌಲಭ್ಯ?

ಒಂದು ಎಕ್ರೆಗಿಂತ ಕಡಿಮೆ ಜಮೀನು ಇರುವ ರೈತರಿಗೆ 18 ಪೈಪ್, 3 ಪೈಪ್‌ಕ್ಯಾಪ್, 3 ಸ್ಪಿಂಕ್ಲರ್, 1 ಬೆಂಡ್, 1 ಎಂಡ್ ಪ್ಲಗ್ ಹೀಗೆ 8 ಸಾಮಗ್ರಿಗಳನ್ನು ನೀಡಲಾಗುತ್ತದೆ. ಒಂದು ಎಕ್ರೆ ಗಿಂತ ಹೆಚ್ಚು ಜಮೀನು ಇದ್ದಾಗ 30ರಿಂದ 41 ಪೈಪ್, ತಲಾ 5ರಿಂದ 9 ಕ್ಯಾಪ್, ಸ್ಪಿಂಕ್ಲರ್ ಸಹಿತ 8 ಸಾಮಗ್ರಿ ನೀಡಲಾಗುತ್ತದೆ.

ಎಷ್ಟು ಅನುದಾನ?

ಒಂದು ಎಕ್ರೆಗಿಂತ ಕಡಿಮೆ ಜಮೀನು ಇದ್ದಾಗ ಗರಿಷ್ಠ 13,211 ರೂ. ಖರ್ಚಾದರೆ 2,496 ರೂ. ರೈತರು ನೀಡಬೇಕಾಗಿತ್ತು. ಜಮೀನು ಒಂದು ಎಕ್ರೆಗಿಂತ ಹೆಚ್ಚಿದ್ದಾಗ 19,429 ರೂ.ಗಳಿಂದ 28,050 ರೂ.ಗಳ ವರೆಗೂ ಖರ್ಚಾದಾಗ ರೈತರು 4, 139ರಿಂದ 5,772 ರೂ.ಗಳ ವರೆಗೂ ಪಾವತಿ ಮಾಡಬೇಕಾಗಿ ಬರುತ್ತಿತ್ತು. ಇದು ಶೇ. 90ರ ಸಬ್ಸಿಡಿ ಲೆಕ್ಕಾಚಾರವಾಗಿದ್ದು. ಸಬ್ಸಿಡಿ ಕಡಿಮೆಯಾದಂತೆ ರೈತರಿಗೆ ಹೊರೆ ಜಾಸ್ತಿಯಾಗುತ್ತದೆ.

Post a Comment

Previous Post Next Post
CLOSE ADS
CLOSE ADS
×