Gruha jyothi- ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪ್ರಯೋಜನ ಪಡೆಯಲು ಡಿ-ಲಿಂಕ್ ಮಾಡಬೇಕು

Gruha jyothi- ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪ್ರಯೋಜನ ಪಡೆಯಲು ಡಿ-ಲಿಂಕ್ ಮಾಡಬೇಕು

Gruha jyothi yojane:-ಗೃಹಜ್ಯೋತಿ(Gruha jyothi) ಯೋಜನೆಯಡಿ ಸೌಲಭ್ಯ ಪಡೆಯಲು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಮನೆ ಬದಲಾವಣೆ ಮಾಡಿಕೊಂಡ ಬಲಿಕವು ಹೊಸ ಮನೆಯ ಆರ್ ಆರ್ ಸಂಖ್ಯೆಯನ್ನು ಸೇರ್ಪಡೆ ಮಾಡಿಕೊಳ್ಳಲು ವೆಬ್ಸೈಟ್ ಲಿಂಕ್ ಬಿಡುಗಡೆ ಮಾಡಲಾಗಿದೆ.



ಇದರಂತೆ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪ್ರಯೋಜನ ಪಡೆಯಲು ಹಳೆಯ ಆರ್.ಆರ್ ಸಂಖ್ಯೆಗೆ ಲಿಂಕ್ ಅಗಿರುವ ಆಧಾರ್ ನಂಬರ್ ಅನ್ನು ಡಿ-ಲಿಂಕ್ ಮಾಡಬೇಕು ಇದನ್ನು ಹೇಗೆ ಮಾಡುವುದು? ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು/ಡಿ-ಲಿಂಕ್ ಮಾಡಲು ವೆಬ್ಸೈಟ್ ಲಿಂಕ್ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದು ಒಂದು ವರ್ಷವಾಗಿದ್ದು. ಇದೇ ಸಮಯದಲ್ಲಿ ಇಂಧನ ಇಲಾಖೆಯು ಗೃಹಜ್ಯೋತಿ ಗ್ರಾಹಕರಿಗಾಗಿ ಮನೆ ಬದಲಾಯಿಸಿದ ನಂತರವೂ ಉಚಿತ ವಿದ್ಯುತ್‌ ಸೌಲಭ್ಯ ಪಡೆಯಲು ಅನ್ಲೈನ್ ಮೂಲಕ ಅರ್ಜಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. 

RR number-ಹಳೆ ಮನೆಯ ಆರ್‌ಆರ್‌ ಸಂಖ್ಯೆಯನ್ನು ಡಿ-ಲಿಂಕ್‌ ಮಾಡಿ ಸೌಲಭ್ಯ ಪಡೆಯಿರಿ: ಇಂಧನ ಸಚಿವ ಕೆ.ಜೆ.ಜಾರ್ಜ್‌ 

ಹಳೆ ಮನೆಯ ಆರ್‌ಆರ್‌ ಸಂಖ್ಯೆಯನ್ನು ಡಿ-ಲಿಂಕ್‌ ಮಾಡಿ, ಹೊಸ ಮನೆಯ ಸಂಖ್ಯೆಯನ್ನು ಲಿಂಕ್‌ ಮಾಡುವ ಮೂಲಕ ಗೃಹಜ್ಯೋತಿ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಮಾಹಿತಿ ಹಂಚಿಕೊಂಡಿದ್ದಾರೆ. 

ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ನಾಗರಿಕರಿಗು ಈ ಯೋಜನೆಯಡಿ ಉಚಿತ ವಿದ್ಯುತ್ ಪಡೆಯಲು ಅವಕಾಶವಿದ್ದು, ಗ್ರಾಹಕರು ಮನೆ ಬದಲಾವಣೆ ಮಾಡಿಕೊಂಡ ಬಳಿಕ ಉಚಿತ ವಿದ್ಯುತ್ ವ್ಯವಸ್ಥೆ ಸ್ಥಗಿತವಾಗುವುದನ್ನು ತಡೆಯಲು ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಅನ್ನು ಭೇಟಿ ಮಾಡಿ ಹಳೆ ಮನೆಯ ಆರ್‌ಆರ್‌ ಸಂಖ್ಯೆಯನ್ನು ಡಿ-ಲಿಂಕ್‌ ಮಾಡಿ ಹೊಸ ಮನೆಯ ಆರ್‌ಆರ್‌ ಸಂಖ್ಯೆಯನ್ನು ಲಿಂಕ್‌ ಮಾಡಿದರೆ ಹೊಸ ಮನೆಯ ವಿದ್ಯುತ್ ಉಚಿತವಾಗುತ್ತದೆ.

Gruha jyothi D-link- ಸೇವಾ ಸಿಂಧು ಪೋರ್ಟಲ್‌ ಭೇಟಿ ಮಾಡಿ ಆರ್‌ಆರ್‌ ಸಂಖ್ಯೆಯನ್ನು ಡಿ-ಲಿಂಕ್‌ ಮಾಡುವ ವಿಧಾನ:

ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶ ಮಾಡಿ ಯಾವ ಕ್ರಮ ಅನುಸರಿಸಿ ಆರ್‌ಆರ್‌ ಸಂಖ್ಯೆಯನ್ನು ಡಿ-ಲಿಂಕ್‌ ಅನ್ನು ನಿಮ್ಮ ಮೊಬೈಲ್ ನಲ್ಲಿ ಮಾಡಬೇಕು ಎನ್ನುವ ವಿಧಾನವನ್ನು ಈ ಕೆಳಗೆ ತಿಳಿಸಲಾಗಿದೆ.

Step-1: ಮೊದಲಿಗೆ ಈ Gruha jyothi D-link ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಸೇವಾ ಸಿಂಧು ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ತದನಂತರ ಗೃಹಜ್ಯೋತಿ ಯೋಜನೆಯ ಡಿ-ಲಿಂಕ್ ಪುಟ ತೆರೆದುಕೊಳ್ಳುತ್ತದೆ ಇಲ್ಲಿ "ಆಧಾರ್ ಸಂಖ್ಯೆಯನ್ನು ನಮೂದಿಸಿ (ಗೃಹ ಜ್ಯೋತಿಯೊಂದಿಗೆ ನೋಂದಾಯಿತ ಆಧಾರ್) / Enter Aadhaar Number (Registered Aadhaar with Gruha Jyothi)" ಈ ರೀತಿ ತೋರಿಸುವ ಕಾಲಂ ನಲ್ಲಿ ಅರ್ಜಿದಾರರ ಆಧಾರ್ ಸಂಖ್ಯೆಯನ್ನು ಹಾಕಿ "Get details" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಮೇಲಿನ ಹಂತವನ್ನು ಪೂರ್ಣಗೊಳಿಸಿದ ಬಳಿಕ "ಇ-ಕೆವೈಸಿ ಸೇವೆ / e-KYC Service" ಪೇಜ್ ತೆರೆದುಕೊಳ್ಳುತ್ತದೆ ಇಲ್ಲಿದೆ "ಆಧಾರ್‌ ಸಂಖ್ಯೆ /Aadhaar Number" ಕಾಲಂ ನಲ್ಲಿ ಅರ್ಜಿದಾರರ ಆಧಾರ್ ಸಂಖ್ಯೆಯನ್ನು ಹಾಕಿ ಕೆಳಗೆ ಕಾಣುವ "OTP" ಮೇಲೆ ಟಿಕ್ ಮಾಡಿ "ಒಟಿಪಿ ಪಡೆಯಿರಿ/Generate OTP" ಬಟನ್ ಮೇಲೆ ಕ್ಲಿಕ್ ಮಾಡಿ ಒಟಿಪಿ ಸಲ್ಲಿಸಬೇಕು.

Step-4: ಕೊನೆಯಲ್ಲಿ ನಿಮ್ಮ ಹಳೆಯ ಆರ್ ಆರ್ ಸಂಖ್ಯೆಯನ್ನು ಡಿ-ಲಿಂಕ್ ಮಾಡಿ ಹೊಸ ಆರ್ ಆರ್ ಸಂಖ್ಯೆಯನ್ನು ಹಾಕಿ ಲಿಂಕ್ ಮಾಡಬೇಕು.

ವಿಶೇಷ ಸೂಚನೆ: ಒಂದೊಮ್ಮೆ ಈ ವೆಬ್ಸೈಟ್ ಒಪನ್ ಅಗದಿದ್ದರೆ ಮೊಬೈಲ್ ಕ್ರ‍ೊಮ್ ಅಪ್ಲಿಕೇಶನ್ ಅನ್ನು ತೆರೆದು Cache Memory Clear ಮಾಡಿ ನಂತರ ಪೋರ್ಟಲ್‌ ಲಿಂಕ್‌ ಮಾಡಿ ಸೇವೆ ಪಡೆಯಬಹುದು.

ಗ್ರಾಹಕರ ಮನವಿ ಮೇರೆಗೆ ಡಿ-ಲಿಂಕ್ ವ್ಯವಸ್ಥೆ ಜಾರಿ: ಸಚಿವ ಕೆ.ಜೆ.ಜಾರ್ಜ್‌ 

ರಾಜ್ಯದ 1.65 ಕೋಟಿ ಜನರು ಗೃಹಜ್ಯೋತಿ ಯೋಜನೆ ಲಾಭ ಪಡೆದಿದ್ದಾರೆ. ವಿಶೇಷವಾಗಿ ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಿದ್ದು ಹರ್ಷ ವ್ಯಕ್ತಪಡಿಸಿದ್ದಾರೆ. ವಿದ್ಯುತ್‌ ಬಿಲ್‌ನ ಹಣವನ್ನು ಮಕ್ಕಳ ಟ್ಯೂಷನ್‌ ಫೀಸ್‌, ಹಿರಿಯರ ಔಷಧೋಪಚಾರಕ್ಕೆ ಬಳಸಿರುವುದಾಗಿ ಹೇಳಿಕೊಂಡಿದ್ದಾರೆ. ನುಡಿದಂತೆ ನಡೆದಿದ್ದೇವೆ ಎಂಬ ಸಾರ್ಥಕ ಭಾವ ನಮ್ಮಲ್ಲಿದೆ. ಜೊತೆಗೆ ಡಿ-ಲಿಂಕ್‌ ಸೌಲಭ್ಯ ಬೇಕೆಂದು ಜನ ಕೋರಿದ್ದರು. ಈಗ ಈ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದ್ದಾರೆ.

ಗೃಹಜ್ಯೋತಿ ಡಿ-ಲಿಂಕ್: click here

Post a Comment

Previous Post Next Post
CLOSE ADS
CLOSE ADS
×