Free Sewing Machine Training: ಉಚಿತ ಹೊಲಿಗೆ ಯಂತ್ರ ತರಬೇತಿಗಾಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Free Sewing Machine Training: ಉಚಿತ ಹೊಲಿಗೆ ಯಂತ್ರ ತರಬೇತಿಗಾಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಎಲ್ಲರಿಗೂ ನಮಸ್ಕಾರ, ಉಚಿತ ಹೊಲಿಗೆ ಯಂತ್ರ ತರಬೇತಿ ಪಡೆಯಬೇಕೆ..? Free Sewing Machine Training ಯಾರು ಅರ್ಜಿ ಸಲ್ಲಿಸಬಹುದು.? ಎಷ್ಟು ದಿನಗಳಲ್ಲಿ ಕಾಲ ತರಬೇತಿ ನೀಡಲಾಗುತ್ತದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.



ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಕುಮಟಾ ವತಿಯಿಂದ ಉಚಿತ ಊಟ ಮತ್ತು ವಸತಿ ಸಹಿತ 30 ದಿನದ ಉಚಿತ ಹೊಲಿಗೆ ತರಬೇತಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಹತೆಗಳು:

  • ಅರ್ಜಿ ಸಲ್ಲಿಸುವವರು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 45 ವರ್ಷ ಮೀರಿರಬಾರದು.
  • ಕನ್ನಡ ಓದಲು ಮತ್ತು ಬರೆಯಲು ಬರಬೇಕು.
  • ಅರ್ಜಿದಾರು ಸಂಸ್ಥೆಯಿಂದ ತರಬೇತಿ ಪಡೆದ ನಂತರ ಸ್ವ-ಉದ್ಯೋಗ ಆರಂಭಿಸಲು ಆಸಕ್ತಿಯನ್ನು ಹೊಂದಿರಬೇಕು.
  • ಗ್ರಾಮೀಣ ಪ್ರದೇಶದ BPL ಕಾರ್ಡ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಅದ್ಯತೆ ನೀಡಲಾಗುತ್ತದೆ.

ತರಬೇತಿ ಅವಧಿ:

  • ಉಚಿತ ಹೊಲಿಗೆ ತರಬೇತಿಯನ್ನು 30 ದಿನಗಳವರೆಗೆ ಆಯೋಜನೆ ಮಾಡಲಾಗಿದ್ದು ತರಬೇತಿ ಕೇಂದ್ರದಿಂದ ತರಬೇತಿಗೆ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳಿಗೆ ಉಚಿತ ವಸತಿ ಹಾಗೂ ಊಟದ ವ್ಯವಸ್ಥೆ ಇರುತ್ತದೆ. ತರಬೇತಿಯು ಉಚಿತವಾಗಿದ್ದು ಯಾವುದೇ ಶುಲ್ಕ ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ.
  • ರಾಜ್ಯ ಮತ್ತು ಕೇಂದ್ರ ಸರಕಾರದ ಯಾವ ಯಾವ ಯೋಜನೆಯಡಿಯಲ್ಲಿ ಸ್ವ-ಉದ್ಯೋಗವನ್ನು ಆರಂಭಿಸಲು ಬ್ಯಾಂಕ್ ಮೂಲಕ ಸಾಲವನ್ನು ಹೇಗೆ ಪಡೆದುಕೊಳ್ಳಬಹುದು ಎಂಬ ಮಾಹಿತಿಯನ್ನು ನೀಡುತ್ತಾರೆ.

Free Sewing Machine Training ಅಗತ್ಯ ದಾಖಲೆಗಳು:

  • ಆಧಾರ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಪಡಿತರ ಚೀಟಿ
  • ಮೊಬೈಲ್ ನಂಬರ್

Free Sewing Machine Training ಅರ್ಜಿ ಸಲ್ಲಿಸುವ ವಿಧಾನ:

  • ಉಚಿತ ಹೊಲಿಗೆ ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನೇರವಾಗಿ ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ತರಬೇತಿ ಪ್ರಾರಂಭವಾಗುವ ದಿನ ಹಾಜರಾಗಬಹುದು ಅಥವಾ ಮುಂಚಿತವಾಗಿ ನಿಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು. ಈ ನಂಬರ್ ಗಳಿಗೆ 9449860007, 9538281989, 9916783825, 888044612
  • ಕರೆ ಮಾಡಿ ನಿಮ್ಮ ಹೆಸರನ್ನು ನೋಂದಣಿ ಮಾಡಿಸಬಹುದು.

ತರಬೇತಿ ದಿನಾಂಕ:

ಉಚಿತ ಹೋಲಿಗೆ ತರಬೇತಿ ದಿನಾಂಕ: 12-08-2024 ರಿಂದ ಆರಂಭವಾಗಿ 10-09-2024 ಕ್ಕೆ ಮುಕ್ತಾಯವಾಗಲಿದೆ.

ತರಬೇತಿ ನಡೆಯುವ ಸ್ಥಳ:

ಇಂಡಿಸ್ಟ್ರೀಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ, ಉತ್ತರ ಕನ್ನಡ ಜಿಲ್ಲೆ-581343


Post a Comment

Previous Post Next Post
CLOSE ADS
CLOSE ADS
×