ದನದ ಶೆಡ್,ಕುರಿ ಶೆಡ್,ಕೋಳಿ ಶೆಡ್ ನಿರ್ಮಾಣಕ್ಕೆ ಎಲ್ಲಾ ವರ್ಗಗಳಿಗೂ 57,000 ರೂಪಾಯಿ ಸಹಾಯಧನ,ನಿಮ್ಮ ಅರ್ಜಿ ಹೀಗೆ ಸಲ್ಲಿಸಿ

ದನದ ಶೆಡ್,ಕುರಿ ಶೆಡ್,ಕೋಳಿ ಶೆಡ್ ನಿರ್ಮಾಣಕ್ಕೆ ಎಲ್ಲಾ ವರ್ಗಗಳಿಗೂ 57,000 ರೂಪಾಯಿ ಸಹಾಯಧನ,ನಿಮ್ಮ ಅರ್ಜಿ ಹೀಗೆ ಸಲ್ಲಿಸಿ

Cattle shed subsidy 2024:-ದನದ ಶೆಡ್,ಕುರಿ ಶೆಡ್,ಕೋಳಿ ಶೆಡ್ ನಿರ್ಮಾಣಕ್ಕೆ ಎಲ್ಲಾ ವರ್ಗಗಳಿಗೂ 57,000 ರೂಪಾಯಿ ಸಹಾಯಧನ,ನಿಮ್ಮ ಅರ್ಜಿ ಹೀಗೆ ಸಲ್ಲಿಸಿ-Cattle shed subsidy 2024



ರಾಜ್ಯ ಸರ್ಕಾರವು ಸಾಮಾನ್ಯ ಜನರ ಮತ್ತು ಕೂಲಿ ಕಾರ್ಮಿಕರ ಏಳಿಗೆಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿ ವೈಯಕ್ತಿಕ ಸೌಲಭ್ಯಗಳನ್ನು ಪಡೆಯಲು ಫಲಾನುಭವಿಯ ಈ ಕೆಳಕಂಡ ವರ್ಗಗಳಲ್ಲಿ ಯಾವುದಾದರೂ ಒಂದು ವರ್ಗದಲ್ಲಿ ಅರ್ಹರಾಗಿರತಕ್ಕದ್ದು

  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ
  • ಅಲೆಮಾರಿ ಬುಡಕಟ್ಟುಗಳು
  • ಅಧಿಸೂಚನೆಯಿಂದ ಕೈಬಿಟ್ಟ ಬುಡಕಟ್ಟುಗಳು
  • ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು
  • ಮಹಿಳಾ ಪ್ರಧಾನ ಕುಟುಂಬಗಳು
  • ವಿಕಲಚೇತನ ಕುಟುಂಬಗಳು
  • ಭೂ ಸುಧಾರಣಾ ಫಲಾನುಭವಿಗಳು
  • ವಸತಿ ಯೋಜನೆಗಳ ಫಲಾನುಭವಿಗಳು
  • ಅರಣ್ಯ ಹಕ್ಕು ಕಾಯಿದೆ 2006ರ ಫಲಾನುಭವಿಗಳು
  • ಸಣ್ಣ ಮತ್ತು ಅತಿ ಸಣ್ಣ ರೈತರು

ಫಲಾನುಭವಿಯು ವೈಯಕ್ತಿಕ ಸೌಲಭ್ಯ ಪಡೆಯಲು

  • ಫಲಾನುಭವಿಯು ಕಡ್ಡಾಯವಾಗಿ ನರೇಗಾ ಯೋಜನೆಯ ಜಾಬ್ ಕಾರ್ಡ್ ಹೊಂದಿರಬೇಕು
  • ಫಲಾನುಭವಿಗೆ ನೀಡಲಾದ ವೈಯಕ್ತಿಕ ಕಾಮಗಾರಿಯಲ್ಲಿ ಆತನ ಕುಟುಂಬದ ಕನಿಷ್ಠ ಒಬ್ಬ ಸದಸ್ಯರಾದರು ಕೆಲಸ ನಿರ್ವಹಿಸಬೇಕು
  • ನರೇಗಾ ಯೋಜನೆಯಡಿ ಫಲಾನುಭವಿಕೆ ನೀಡಬಹುದಾದ ವಯಕ್ತಿಕ ಕಾಮಗಾರಿಗಳ ಗರಿಷ್ಠ ಮಟ್ಟದ ಮಿತಿಯನ್ನು 2 ಲಕ್ಷಗಳಿಗೆ ನಿಗದಿಪಡಿಸಿ ಸದರಿ ಗರಿಷ್ಠ ಮೊತ್ತದ ಮಿತಿಯನ್ನು ಹೆಚ್ಚಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿರುತ್ತದೆ
  • ಯೋಜನೆ ಅಡಿ ನೊಂದಾಯಿತವಾದ ಒಂದು ವರ್ಷ ಕುಟುಂಬವು ತನ್ನ ಜೀವಿತಾವಧಿಯಲ್ಲಿ ಗರಿಷ್ಠ ಎರಡು ವರೆ ಲಕ್ಷದ ಗಳವರೆಗೆ ಯೋಜನೆ ಅಡಿ ನೀಡಲಾಗುವ ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಳ್ಳಬಹುದಾಗಿದೆ

ನರೇಗಾ ಯೋಜನೆಯಡಿ ಕೃಷಿಹೊಂಡ ನಿರ್ಮಾಣ

  • ನರೇಗಾ ಯೋಜನೆ ಅಡಿ ಅರ್ಹ ಫಲಾನುಭವಿಯು ಯೋಜನೆ ಅಡಿ ನಿರ್ಮಿಸಿಕೊಂಡ ಕೃಷಿಹೊಂಡ ಕಾಮಗಾರಿಯನ್ನು ಮುಂದಿನ ಐದು ವರ್ಷಗಳವರೆಗೆ ಮುಚ್ಚತಕ್ಕದ್ದಲ್ಲ.
  • ಒಂದು ವೇಳೆ ಫಲಾನುಭವಿಯು ಕೃಷಿ ಹೊಂಡವನ್ನು ಮುಚ್ಚಿದ್ದಲ್ಲಿ ಕೃಷಿಹೊಂಡ ನಿರ್ಮಾಣಕ್ಕಾಗಿ ತಗಲಿದ ವೆಚ್ಚ ಹಾಗೂ ಶೇಕಡ 18ರಷ್ಟು ಬಡ್ಡಿ ಸೇರಿ ಸರ್ಕಾರಕ್ಕೆ ಬರಣ ಮಾಡತಕ್ಕದ್ದು
  • ಕೃಷಿ ಹೊಂಡ ನಿರ್ಮಾಣ ಕಾಮಗಾರಿಯನ್ನು ಅನುಷ್ಠಾನಗೊಳಿಸುವ ಮುಂಚೆ ಫಲಾನುಭವಿಗಳಿಂದ ಮುಚ್ಚಳಿಕೆ ಪತ್ರವನ್ನು ಕಡ್ಡಾಯವಾಗಿ ಪಡೆಯತಕ್ಕದ್ದು
  • ಕೃಷಿ ಹೊಂಡ ಕಾಮಗಾರಿಗಳ ಕ್ರಿಯಾಯೋಜನೆಯನ್ನು ಅನುಮೋದನೆಗಾಗಿ ಜಿಲ್ಲಾ ಪಂಚಾಯಿತಿಗೆ ಸಲ್ಲಿಸುವಾಗ ಮುತ್ತಳಿಕೆ ಪತ್ರದ ಪ್ರತಿಯನ್ನು ಲಗತ್ತಿಸುವುದು
  • ಕಾಮಗಾರಿಗಳ ಆಯ್ಕೆ ಮಾಡುವಾಗ ತಾಂತ್ರಿಕವಾಗಿ ಸೈಟ್ ಫೀಸಿಬಿಲಿಟಿ ಇರುವುದನ್ನ ಖಚಿತಪಡಿಸಿಕೊಳ್ಳುವುದು
  • ಕೃಷಿಹೊಂಡ ಕಾಮಗಾರಿಯ ಅನುಮೋದನೆಯಾದ ಆರ್ಥಿಕ ವರ್ಷದಲ್ಲಿಯೇ ಕಡ್ಡಾಯವಾಗಿ ಪೂರ್ಣಗೊಳಿಸುವುದು
  • ಅನುಷ್ಠಾನಗೊಳಿಸುವಾಗ ಮೂರು ಹಂತದ Geo Tag ಮಾಡುವ ಪ್ರಕ್ರಿಯೆಯನ್ನು ನಿಗದಿ ಅವಧಿಯೊಳಗೆ ಪೂರ್ಣಗೊಳಿಸುವುದು ಕಡ್ಡಾಯವಾಗಿರುತ್ತದೆ
  • ಕಾಮಗಾರಿ ಸ್ಥಳದಲ್ಲಿ ಕಡ್ಡಾಯವಾಗಿ ಸಿಟಿಜನ್ ಇನ್ಫಾರ್ಮಶನ್ ಬೋರ್ಡ್ ಅಳವಡಿಸತಕ್ಕದ್ದು.

ದನದ ಶೆಡ್ ನಿರ್ಮಾಣಕ್ಕೆ 57,000 ಸಹಾಯಧನ

  • ಈ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ದನಗಳ ಕೊಟ್ಟಿಗೆ ಅಥವಾ ಶೆಡ್ ನಿರ್ಮಾಣ ಮಾಡಲು ಗ್ರಾಮೀಣ ಅಭಿವೃದ್ಧಿ ಇಲಾಖೆ ಮತ್ತು ಪಂಚಾಯತ್ ರಾಜ್ಯ ಇಲಾಖೆಗಳು ಮೊದಲು ನೀಡುತ್ತಿರುವ ಸಹಾಯಧನವನ್ನು ಹೆಚ್ಚಳ ಮಾಡಿ, ರಾಜ್ಯದ ರೈತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಸಿಹಿ ಸುದ್ದಿಯನ್ನು ನೀಡಲಾಗಿದೆ.
  • ಪ್ರಸಕ್ತ ಸಾಲಿನಲ್ಲಿ ಅಂದರೆ 2022ರ ಸಾಲಿನ ಏಪ್ರಿಲ್ 1 ರಿಂದ ನರೇಗಾ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಕೂಲಿ ಕಾರ್ಮಿಕರ ಮೊತ್ತವನ್ನು ರೂಪಾಯಿ 289ರೂ.ನಿಂದ ರೂಪಾಯಿ 309ರೂ.ವರೆಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಮಿಕರ ಕೂಲಿ ಮೊತ್ತವನ್ನು ಹೆಚ್ಚಿಸಿ ಕೂಲಿಕಾರರಿಗೆ ಸಿಹಿಸುದ್ದಿ ನೀಡಿದೆ.
  • ರೈತರಿಗೆ ದನದ ಕೊಟ್ಟಿಗೆ ಅಥವಾ ಶೆಡ್ ನಿರ್ಮಾಣದ ಬಗ್ಗೆ ಅಂದರೆ ಯಾರು ಹಸುಗಳು ಅಥವಾ ಎಮ್ಮೆಗಳನ್ನು ಸಾಕಿದ್ದಾರೋ ಅಥವಾ ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಮನೆ ಹಿಂದೆ ಇರುವ ಜಾಗದಲ್ಲಿ ಅಥವಾ ಎಲ್ಲಿ ನಿಮಗೆ ಸಂತ ಜಾಗವಿದೆಯೋ ಅಲ್ಲಿ ನೀವು ದನದ ಕೊಟ್ಟಿಗೆ ಅಥವಾ ದನದ ಶೆಡ್ ಅನ್ನು ನಿರ್ಮಾಣ ಮಾಡಲು ಪಂಚಾಯಿತಿ ವತಿಯಿಂದ ರೈತರಿಗೆ ಮತ್ತು ಆಸಕ್ತರಿಗೆ ಸಹಾಯಧನ ನೀಡಲಾಗುತ್ತದೆ.
  • ಸಾಮಾನ್ಯ ವರ್ಗದ ಜನರಿಗೆ ಸರಿ ಸುಮಾರು ರೂಪಾಯಿ 20,000 ರೂಗಳ ಸಹಾಯಧನವನ್ನು ಈ ನರೇಗಾ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಪಂಚಾಯಿತಿ ವತಿಯಿಂದ ಅದನ್ನು ನೀಡಲಾಗುತ್ತಿತ್ತು. ಹಾಗೂ ಅದೇ ರೀತಿಯಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸುಮಾರು 43,000ರೂಗಳ ಸಹಾಯಧನವನ್ನು ಈ ರಾಜ್ಯ ಸರ್ಕಾರದ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಪಂಚಾಯಿತಿ ಕಡೆಯಿಂದ ನೀಡಲಾಗುತ್ತಿತ್ತು.
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಪಂಚಾಯಿತಿ ಕಡೆಯಿಂದ ನೀಡುವ ಈ ಒಟ್ಟು ಮೊತ್ತದಲ್ಲಿ ಅಂದರೆ ಈ 43,000ರೂ.ಗಳಲ್ಲಿ, ಫಲಾನುಭವಿ ರೈತರಿಗೆ ಸುಮಾರು 8,996ರೂ.ಗಳನ್ನು ಅವರ ಕೂಲಿ ಮೊತ್ತವಾಗಿ ಪಂಚಾಯಿತಿ ಕಡೆಯಿಂದ ನೀಡಲಾಗುತ್ತಿತ್ತು.
  • ಈ ಸಹಾಯಧನವನ್ನು ನರೇಗಾ ಕಾರ್ಡ್ ಹೊಂದಿರುವ ರೈತರಿಗೆ ಅಥವಾ ಅರ್ಜಿದಾರರಿಗೆ ಮಾತ್ರ ನೀಡಲಾಗುತ್ತದೆ. ಹಾಗೂ ಅದೇ ರೀತಿಯಾಗಿ ಶೆಡ್ ಅಥವಾ ದನದ ಕೊಟ್ಟಿಗೆ ನಿರ್ಮಾಣ ಮಾಡಲಿಕ್ಕೆ ಬೇಕಾಗುವ ಸಾಮಗ್ರಿಗಳನ್ನು ಕೊಂಡುಕೊಳ್ಳಲು ಉಳಿದ ಮೊತ್ತವನ್ನು ಅಂದರೆ ಉಳಿದ 34,000ರೂ.ಗಳನ್ನು ಪಂಚಾಯಿತಿ ಕಡೆಯಿಂದ ನೀಡಲಾಗುತ್ತಿತ್ತು.
  • ಈ ನರೇಗಾ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಸಾಮಾನ್ಯ ವರ್ಗದವರಿಗೆ ಅಂದರೆ ಜನರಲ್ ಕೆಟಗರಿ ಅವರಿಗೆ ಇದರ ಅರ್ಧ ಮೊತ್ತ ಸಿಗುತ್ತಿತ್ತು. ಅಂದರೆ ಈ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ರೂಪಾಯಿ 8,996ರೂ.ಗಳ ಕೂಲಿಯನ್ನು ಎಲ್ಲಾ ಸಾಮಾನ್ಯ ವರ್ಗದವರಿಗೂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಎಲ್ಲರಿಗೂ ಸಮಾನವಾದ ಕೂಲಿಯನ್ನು ನೀಡಲಾಗುತ್ತದೆ.
  • ಆದರೆ ಈ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಸಿಗುವ ಉಳಿದ 34,000ರೂ.ಗಳ ಹಣದಲ್ಲಿ ಸಾಮಾನ್ಯ್ ವರ್ಗದವರಿಗೆ ಅಂದರೆ ಜನರಲ್ ಕೆಟಗರಿ ಅವರಿಗೆ ಈ 34,000ರೂ.ಗಳಲ್ಲಿ ಕೇವಲ ಅರ್ಧ ಮೊತ್ತವನ್ನು ನೀಡಲಾಗುತ್ತಿತ್ತು.
  • ಅಂದರೆ ಸರಿಸುಮಾರು 20,000ರೂ.ಗಳನ್ನು ಸಾಮಾನ್ಯ ವರ್ಗದವರಿಗೆ ಅಥವಾ ಜನರಲ್ ಕೆಟಗರಿಯವರಿಗೆ ಈ ಯೋಜನೆಯ ಅಡಿಯಲ್ಲಿ ಪಂಚಾಯಿತಿಯ ಕಡೆಯಿಂದ ನೀಡಲಾಗುತ್ತಿತ್ತು. ಹಾಗೂ ಅದೇ ರೀತಿಯಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭ್ಯರ್ಥಿಗಳಿಗೆ ರೂಪಾಯಿ 43,000ರೂ.ಗಳ ಸಹಾಯಧನವನ್ನು ಈ ನರೇಗಾ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ.

ರೈತರು ಈ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆಯಲು ದನದ ಕೊಟ್ಟಿಗೆ ಅಥವಾ ಶೆಡ್ ನ ಅಳತೆ ಎಷ್ಟಿರಬೇಕು?

• ರೈತರು ಈ ಯೋಜಯಡಿ ಸಹಾಯಧನವನ್ನು ಪಡೆದುಕೊಳ್ಳಲು ನೀವು ಕಟ್ಟುವ ದನದ ಕೊಟ್ಟಿಗೆ ಅಥವಾ ಶೆಡ್ 5 ಫೀಟ್ ಎತ್ತರದ ಗೋಡೆಯನ್ನು ಹೊಂದಿರಬೇಕು.

• ಹಸುಗಳಿಗೆ ಮೇವು ಹಾಗೂ ನೀರಿನ ವ್ಯವಸ್ಥೆಗಾಗಿ ಗೋದಲಿಯನ್ನು ನಿರ್ಮಾಣ ಮಾಡಿರಬೇಕು.

• ಜಾನುವಾರುಗಳಿಗೆ ಶೆಡ್ ನಲ್ಲಿ ಗಾಳಿ ಮತ್ತು ಬೆಳಕು ಆಡಲು ಕೊಟ್ಟಿಗೆಗೆ ಶೆಡ್ ಶೀಟ್ಗಳನ್ನು ಹಾಕಬೇಕು.

•ಇವೆಲ್ಲವುದರ ಜೊತೆಗೆ ನೀವು ಈ ಯೋಜನೆಯಡಿಯಲ್ಲಿ ಸಹಾಯಧನವನ್ನು ಪಡೆದುಕೊಳ್ಳಲು ನರೇಗಾ ನಾಮಫಲಕವನ್ನು ಕಡ್ಡಾಯವಾಗಿ ಹಾಕಬೇಕಾಗಿರುತ್ತದೆ.

• ದನದ ಕೊಟ್ಟಿಗೆ ಅಥವಾ ಶೆಡ್ ನಿರ್ಮಾಣ ಮಾಡಿಕೊಳ್ಳಲು ರೈತರು ಮೊದಲನೆಯದಾಗಿ ತಮಗೆ ಸಂಬಂಧಪಟ್ಟ ಪಂಚಾಯಿತಿಗೆ ಭೇಟಿ ನೀಡಿ ಅಲ್ಲಿ ನಿಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ. ಅಂದರೆ ಈ ಯೋಜನೆಯಡಿಯಲ್ಲಿ ಯಾರ್ಯಾರು ಸಹಾಯ ಧನವನ್ನು ಪಡೆಯಬೇಕೆಂದು ಕೊಂಡಿದ್ದರೋ ಅಥವಾ ಈ ಯೋಜನೆಯ ಫಲಾನುಭವಿಯಾಗಲು ಬಯಸುವಂತಹ ಅರ್ಜಿದಾರರು ತಮ್ಮ ಹೆಸರನ್ನು ನಿಮಗೆ ಹತ್ತಿರವಿರುವ ಅಥವಾ ನಿಮಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯಲ್ಲಿ ನಿಮ್ಮ ಹೆಸರನ್ನು ನೋಂದಣಿ ಮಾಡಬೇಕಾಗಿರುತ್ತದೆ. 

• ಪ್ರತಿವರ್ಷ ಜಾರಿಗೊಳಿಸುವ ಈ ಯೋಜನೆಯಲ್ಲಿ ನಿಮ್ಮ ಹೆಸರನ್ನು ಸೇರಿಸಬೇಕು. ಅಂದಾಗ ಮಾತ್ರ ನೀವು ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.

• ಇದಾದನಂತರ ಸಂಬಂಧಪಟ್ಟ ಪಂಚಾಯಿತಿಯ ಅಧಿಕಾರಿಗಳು ಬಂದು ನೀವು ದನದ ಕೊಟ್ಟಿಗೆ ಅಥವಾ ಶೆಡ್ಕಟ್ಟಬೇಕೆಂದು ಕೊಂಡಿರುವ ಖಾಲಿ ಜಾಗಕ್ಕೆ ಬಂದು ಭೇಟಿ ನೀಡಿ, ಆ ಜಾಗದ GPS ಅನ್ನು ಮಾಡಿ, ಆ ಜಾಗದ ಸರ್ವೆ ಮಾಡಿ ನಿಮಗೆ ದನದ ಕೊಟ್ಟಿಗೆ ಅಥವಾ ಶೆಡ್ ನಿರ್ಮಾಣ ಮಾಡಲು ಅನುಮತಿಯನ್ನು ನೀಡುತ್ತಾರೆ.

 • ಅದಾದ ನಂತರ ನೀವು ಕೊಟ್ಟಿಗೆ ಕಟ್ಟಲು ಬೇಕಾಗುವ ಸಾಮಗ್ರಿಗಳನ್ನು ಪಂಚಾಯಿತಿ ನೀಡುವ ಸಹಾಯಧನದಲ್ಲಿ ತಂದು ನಿಮ್ಮ ಕೊಟ್ಟಿಗೆ ಕಟ್ಟುವ ಕೆಲಸವನ್ನು ಪ್ರಾರಂಭಿಸಬಹುದು. 

• ನೀವು ಕೊಟ್ಟಿಗೆ ಕಟ್ಟುವ ಕೆಲಸವನ್ನು ಶುರು ಮಾಡುವ ಮೊದಲು ಒಂದು ಕಲ್ಲಿನ ಬೋರ್ಡನ್ನು ಅಂದರೆ ನರೇಗಾ ನಾಮಫಲಕವನ್ನು ಬರೆಸಬೇಕಾಗಿರುತ್ತದೆ.

• ಈ ಬೋರ್ಡ್ ನೀವು ಯಾವ ಯೋಜನೆಯಡಿ ಈ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದೀರಿ.ಎಂಬುದನ್ನು ಸೂಚಿಸುತ್ತದೆ.

• ಇದರಲ್ಲಿ ನೀವು ಯೋಜನೆ ಪಡೆಯುತ್ತಿರುವ ವರ್ಷ, ಗ್ರಾಮ ಪಂಚಾಯಿತಿ ಹೆಸರು, ತಾಲೂಕು ಮತ್ತು ಜಿಲ್ಲೆಯನ್ನು ಒಳಗೊಂಡಿರುತ್ತದೆ.

• ಈ ನರೇಗಾ ನಾಮಫಲಕಾದಲ್ಲಿ ಫಲಾನುಭವಿಯ ಹೆಸರು ನಮೂದಿಸಲಾಗಿರುತ್ತದೆ.

• ಹಾಗೂ ಅದೇ ರೀತಿ ಫಲಾನುಭವಿಯು ಈ ನರೇಗಾ ಉದ್ಯೋಗ ಖಾತರಿ ಯೋಜನೆಯನ್ನು ಪಡೆದುಕೊಳ್ಳುತ್ತಿರುವ ಕಾಮಗಾರಿ ಸಂಕೇತವನ್ನು ಒಳಗೊಂಡಿರುತ್ತದೆ.

• ಈ ನರೇಗಾ ನಾಮಫಕದಲ್ಲಿ ಈ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಒಟ್ಟು ಬಿಡುಗಡೆಯಾದ ಮೊತ್ತ, ಎಷ್ಟು ಬಿಡುಗಡೆಯಾಗಿದೆ? ಯಾವುದಕ್ಕೆಲ್ಲ ಬಿಡುಗಡೆಯಾಗಿದೆ? ಖರ್ಚಾದ ಮೊತ್ತ ಮತ್ತು ಕೊಟ್ಟಿಗೆ ನಿರ್ಮಾಣ ಮಾಡಲು ಬೇಕಾಗುವ ಸಾಮಗ್ರಿಗಳ ಮೊತ್ತ, ಎಲ್ಲವನ್ನು ಒಳಗೊಂಡಿರುತ್ತದೆ.

ನರೇಗಾ ಯೋಜನೆಯ ಅಡಿಯಲ್ಲಿ ಸಹಾಯಧನ ಪಡೆದುಕೊಳ್ಳಲು ದನದ ಕೊಟ್ಟಿಗೆ ಹೇಗಿರಬೇಕು? ಅದರ ಉದ್ದ ಮತ್ತು ಅಳತೆಗಳು ಎಷ್ಟಿರಬೇಕು? 

* ದನದ ಕೊಟ್ಟಿಗೆಯ ಅಗಲವು ಸುಮಾರು ನಾಲ್ಕು ಮೀಟರುಗಳಷ್ಟು ಇರಬೇಕು.

* ದನದ ಕೊಟ್ಟಿಗೆ ಅಥವಾ ಶೆಡ್ನ ಉದ್ದವು ಏಳು ಮೀಟರ್ಗಳಷ್ಟು ಇರಬೇಕು.

*ಅಂದರೆ ಸಾಮಾನ್ಯವಾಗಿ 22 ಅಡಿ ಉದ್ದ ಮತ್ತು13 ಅಡಿ ಅಗಲವನ್ನು ಹೊಂದಿರಬೇಕಾಗುತ್ತದೆ.

* ದನದ ಕೊಟ್ಟಿಗೆಯು ಕನಿಷ್ಠ ಅಗಲ ಮತ್ತು ಉದ್ದವಗಳನ್ನು ಹೊಂದಿರಬೇಕಾಗುತ್ತದೆ.

* ಇದಕ್ಕಿಂತ ಕಡಿಮೆ ಉದ್ದ ಮತ್ತು ಅಗಲಗಳ ಅಳತೆಗಳನ್ನು ಹೊಂದಿದ್ದರೆ ನಿಮಗೆ ಸಿಗುವ ಸಹಾಯಧನದಲ್ಲಿ ಮೊತ್ತವು ಕಡಿಮೆಯಾಗುತ್ತದೆ. ಅಂದರೆ ನಿಮಗೆ ಸಿಗುತ್ತಿರುವ ಸಾಮಗ್ರಿ ಮೊತ್ತದಲ್ಲಿ ಸಹಾಯಧನ ಕಡಿಮೆಯಾಗುತ್ತದೆ.

* ಇದಕ್ಕಿಂತ ಜಾಸ್ತಿ ಉದ್ದ ಮತ್ತು ಅಗಲಗಳನ್ನು ಹೊಂದಿರಬಹುದು. ಆದರೆ ಈ ಕನಿಷ್ಠ ಅಳತೆಗಳ ಕೆಳಗೆ ಅಳತೆಗಳನ್ನು ಹೊಂದಿರಬಾರದು.

* ದನದ ಕೊಟ್ಟಿಗೆ ನಿರ್ಮಾಣದ ಸಮಯದಲ್ಲಿ ದನಗಳನ್ನು ಕಟ್ಟುವ ಜಾಗದಲ್ಲಿ ನೆಲವನ್ನು ಕಾಂಕ್ರೀಟ್ ನಿಂದ ಮಾಡಿರಬೇಕಾಗಿರುತ್ತದೆ. ಯಾವುದೇ ತರದ ಚಪ್ಪಡಿ ಕಲ್ಲುಗಳನ್ನು ಮತ್ತು ಇನ್ನಿತರೆ ರಬ್ಬರ್ ಮ್ಯಾಟ್ ಅಥವಾ ನೆಲಹಾಸುಗಳನ್ನು ಬಳಸುವಂತಿಲ್ಲ. ನೀವು ನೆಲವನ್ನು ಕಾಂಕ್ರಿಟ್ ನಿಂದ ಮಾಡಿರದಿದ್ದರೆ ನಿಮಗೆ ಸಹಾಯಧನವನ್ನು ನೀಡಲು ಬರುವುದಿಲ್ಲ.

* ಮೊದಲು ನೀವು ದನದ ಕೊಟ್ಟಿಗೆ ನಿರ್ಮಾಣ ಮಾಡಬೇಕೆಂದುಕೊಳ್ಳುವ ಖಾಲಿ ಜಾಗದಲ್ಲಿ ಫೋಟೋ ತೆಗೆಯಬೇಕು. ನಂತರ 40MM ಜೆಲ್ಲಿ ಕಲ್ಲು ಅಂದರೆ(ಕಡಿಗಳು) ಗಳನ್ನು ಹಾಕಿ ಸಮತಟ್ಟು ಮಾಡಬೇಕಾಗಿರುತ್ತದೆ. ಇದಾದ ನಂತರ ಅದರ ಮೇಲೆ ಕಾಂಕ್ರೆಟ್ ನಿಂದ ನೆಲವನ್ನು ಮುಚ್ಚಬೇಕಾಗುತ್ತದೆ.

* ದನಗಳ ಕೊಟ್ಟಿಗೆಯಲ್ಲಿ ಮೇವು ಅಥವಾ ನೀರಿನ ಸೌಲಭ್ಯಕ್ಕಾಗಿ ಗೋದಲಿಯನ್ನು ಇಟ್ಟಿಗೆಯನ್ನು ಬಳಸಿ ಕಟ್ಟಬೇಕು. ಕಟ್ಟಿದ ನಂತರ ಇಟ್ಟಿಗೆಗಳನ್ನು ಪ್ಲಾಸ್ಟರ್ ನಿಂದ ಮುಚ್ಚಬೇಕು.

* ಹಾಗೆಯೇ ದನಗಳನ್ನು ಗೋದಲಿಗೆ ಕಟ್ಟಲು ಕಬ್ಬಿಣದ ಬಳೆಗಳನ್ನು ಸಹ ಬಳಸಬಹುದು.

* ದನಗಳ ಮೂತ್ರ ಮತ್ತು ಕೊಟ್ಟಿಗೆ ತೊಳೆದ ನಂತರ ಅದರ ನೀರು ಸುಲಭವಾಗಿ ಹೋಗಲು ಒಂದು ಗುಂಡಿ ಅಥವಾ ಒಂದು ಚರಂಡಿ ವ್ಯವಸ್ಥೆಯನ್ನು ಮಾಡಬೇಕಾಗಿರುತ್ತದೆ. ಅಥವಾ ನಿಮಗೆ ಚರಂಡಿ ವ್ಯವಸ್ಥೆ ಇಲ್ಲದಿದ್ದಲ್ಲಿ ನೀರನ್ನು ಇಂಗು ಗುಂಡಿಗೆ ಬಿಡಬಹುದು.

* ಈ ನರೇಗಾ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆದುಕೊಳ್ಳಲು ನೀವು ದನದ ಕೊಟ್ಟಿಗೆಯ ಸುತ್ತಲೂ ಗೋಡೆಯನ್ನು ಕಟ್ಟಬೇಕಾಗುತ್ತದೆ.

* ಈ ಕೊಟ್ಟಿಗೆಯನ್ನ ನಿರ್ಮಾಣ ಮಾಡಲು ಸಾಮಾನ್ಯವಾಗಿ 22,000ರೂ.ಗಳ ಖರ್ಚು ಬರುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಒಟ್ಟು ಸಹಾಯಧನ 43,000ರೂ.ಗಳು ಬರುತ್ತದೆ.

ಈ ನರೇಗಾ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಸಹಾಯಧನ ಹೆಚ್ಚಳ ಮಾಡಿದ ನಂತರ ಒಟ್ಟು ಸಹಾಯಧನವಾಗಿ 57,000 ರೂ ಸಿಗುತ್ತದೆ. ಈ ಮೊತ್ತವನ್ನು ಎಲ್ಲಾ ಸಾಮಾನ್ಯ ವರ್ಗದವರಿಗೂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೂ ಸಮವಾಗಿ ನೀಡಲಾಗುತ್ತದೆ. ಈ ಮೊತ್ತದಲ್ಲಿ ಅಂದರೆ ಒಟ್ಟಾರೆ 57,000ರೂ.ಗಳಲ್ಲಿ ಸರಿ ಸುಮಾರು 10,556ರೂ.ಗಳನ್ನು ಕೂಲಿ ಮೊತ್ತವಾಗಿ ಈ ಯೋಜನೆಯಡಿ ನೀಡಲಾಗುತ್ತದೆ. ಹಾಗೂ ಅದೇ ರೀತಿಯಾಗಿ ಸುಮಾರು 46,644ರೂ.ಗಳನ್ನು ಈ ಯೋಜನೆಯಡಿಯಲ್ಲಿ ದನದ ಕೊಟ್ಟಿಗೆ ಅಥವಾ ದನದಶೆಡ್ ನಿರ್ಮಾಣ ಮಾಡಲು ಬೇಕಾಗುವ ಸಾಮಗ್ರಿಗಳನ್ನು ಕೊಂಡುಕೊಳ್ಳಲು ಈ ಯೋಜನೆಯ ಅಡಿಯಲ್ಲಿ ಸಹಾಯಧನ ನೀಡಲಾಗುತ್ತದೆ.

ಫಲಾನುಭವಿಗಳು ಜಾನುವಾರು ಶೆಡ್ ಅಥವಾ ಕೊಟ್ಟಿಗೆಯನ್ನು ನಿರ್ಮಿಸಿಕೊಳ್ಳಲು

  • ಕನಿಷ್ಠ 4 ಜಾನುವಾರುಗಳನ್ನು ಹೊಂದಿರಬೇಕು.
  • ಸಂಬಂಧಪಟ್ಟ ಪಶುವೈದ್ಯಾಧಿಕಾರಿಗಳಿಂದ ಜಾನುವಾರು ಇರುವ ಕುರಿತ ದೃಢೀಕರಣ ಪತ್ರವನ್ನು ಪಡೆಯಬೇಕು.
  • ಈ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆಯಲು ಉದ್ಯೋಗ ಖಾತರಿ ಚೀಟಿ ಪುಸ್ತಕವನ್ನು ಹೊಂದಿರಬೇಕು.
  • ಈ ಮೇಲಿನ ಉಲ್ಲೇಕಿಸಿದ ದಾಖಲಾತಿಗಳೊಂದಿಗೆ ಸ್ಥಳೀಯ ಗ್ರಾಮ ಪಂಚಾಯತಿಗೆ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
  • ಗ್ರಾಮ ಪಂಚಾಯಿತಿಯವರ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಫಲಾನುಭವಿಯ ಹೆಸರು ಸೇರಿಸಿಕೊಂಡು ಮೇಲಾಧಿಕಾರಿಗಳಿಂದ ಅನುಮೋದನೆ ಪಡೆದ ನಂತರ ರೈತರು ಅವರ ದನದ ಕೊಟ್ಟಿಗೆಯ ಕಾಮಗಾರಿಯನ್ನು ಪ್ರಾರಂಭಿಸಬೇಕು.
  • ಈ ಹಿಂದೆ ಉದ್ಯೋಗ ಖಾತರಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 43,000ರೂ.ಗಳ ಸಹಾಯಧನ ಹಾಗೂ ಸಾಮಾನ್ಯ ವರ್ಗದವರಿಗೆ 19,000 ರೂ.ಗಳ ಸಹಾಯಧನವನ್ನು ಈ ನರೇಗಾ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನೀಡಲಾಗುತ್ತಿತ್ತು.

ಈ ಗ್ರಾಮೀಣ ಅಭಿವೃದ್ಧಿ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆ ಹೆಚ್ಚಿಸಿದ ಸಹಾಯಧನದ ಬಗ್ಗೆ ತಿಳಿಯಬೇಕೆಂದರೆ,

  • ಸಾಮಾನ್ಯ ವರ್ಗದವರಿಗೂ ಸಹ 57,000ರೂ.ಗಳ ಸಹಾಯಧನ ಈ ಯೋಜನೆ ಅಡಿಯಲ್ಲಿ ನೀಡಲಾಗುವುದು. ಸಾಮಾನ್ಯವಾಗಿ 4 ಕ್ಕಿಂತ ಹೆಚ್ಚು ಜಾನುವಾರು ಸಾಕಣೆ ಮಾಡುವವರು ಈ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.
  • ನರೇಗಾ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಜಾನುವಾರು ಸೆಡ್ ನಿರ್ಮಾಣಕ್ಕೆ ಸಹಾಯಧನದ ಸೌಲಭ್ಯವನ್ನು ರಾಜ್ಯ ಸರ್ಕಾರ ಕಲ್ಪಿಸಿದೆ. ರಾಜ್ಯದಲ್ಲಿ ಈ ಯೋಜನೆಯ ಲಾಭವನ್ನು ಪಡೆದುಕೊಂಡು ಸಹಸ್ರಾರು ಕುಟುಂಬಗಳು ಶೆಡ್ ದನದ ಕೊಟ್ಟಿಗೆ ನಿರ್ಮಾಣ ಮಾಡಿಕೊಂಡು ಜಾನುವಾರು ಸಾಕಣೆಯೊಂದಿಗೆ ಉತ್ತಮ ಆದಾಯ ಮಾಡಿಕೊಳ್ಳುತ್ತಿದ್ದಾರೆ.
  • ಇದೀಗ ದನದ ಶೆಡ್ ನಿರ್ಮಾಣ ಮಾಡಿಕೊಳ್ಳಲು ಸಹಾಯ ಧನ ಹೆಚ್ಚಿಸಿದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಅಥವಾ ಸಂಬಂಧಪಟ್ಟ ಪಂಚಾಯಿತಿಯನ್ನು ಸಂಪರ್ಕಿಸಿರಿ.

Post a Comment

Previous Post Next Post
CLOSE ADS
CLOSE ADS
×